ಪ್ರಸ್ತುತ ವೆಸ್ಟ್ ಇಂಡೀಸ್ ಪ್ರವಾಸದಲ್ಲಿರುವ ಟೀಂ ಇಂಡಿಯಾ (India vs West Indies) ಈ ಪ್ರವಾಸದಲ್ಲಿ ಮೂರು ಮಾದರಿಯ ಕ್ರಿಕೆಟ್ ಸರಣಿ ಆಡಲಿದೆ. ಆ ಬಳಿಕ ಭಾರತದಲ್ಲಿ ನಡೆಯಲ್ಲಿರುವ ವಿಶ್ವಕಪ್ (World Cup 2023) ಮುಗಿಯುವವರೆಗೆ ಟೀಂ ಇಂಡಿಯಾ (Team India) ಮೂರು ಮಾದರಿಯ ಕ್ರಿಕೆಟ್ಗೆ ಯಾವುದೇ ದೇಶದ ಪ್ರವಾಸ ಮಾಡುವುದಿಲ್ಲ. ಸದ್ಯದ ವೇಳಾಪಟ್ಟಿ ಪ್ರಕಾರ, ವೆಸ್ಟ್ ಇಂಡೀಸ್ ಪ್ರವಾಸ ಮುಗಿಸಿದ ಬಳಿಕ ಟಿ20 ಸರಣಿಗಾಗಿ ಐರ್ಲೆಂಡ್ ಪ್ರವಾಸ ಮಾಡಲ್ಲಿರುವ ಭಾರತ ಆ ಬಳಿಕ ಏಷ್ಯಾಕಪ್ (Asia Cup), ವಿಶ್ವಕಪ್ನಲ್ಲಿ ಬ್ಯುಸಿಯಾಗಲಿದೆ. ಆ ಬಳಿಕ ರೋಹಿತ್ ಪಡೆಗೆ ನಿಜವಾದ ಸವಾಲು ಆರಂಭವಾಗಲಿದ್ದು, ವರ್ಷಾಂತ್ಯದಲ್ಲಿ ನಡೆಯಲ್ಲಿರುವ ದಕ್ಷಿಣ ಆಫ್ರಿಕಾ ಪ್ರವಾಸದ ಮೂಲಕ ಮೊದಲ ಸವಾಲು ಎದುರಾಗಲಿದೆ. ವೆಸ್ಟ್ ಇಂಡೀಸ್ ನಂತರ ಡಿಸೆಂಬರ್‌ನಲ್ಲಿ ದ್ವಿಪಕ್ಷೀಯ ಸರಣಿಗಾಗಿ ಟೀಂ ಇಂಡಿಯಾ ದಕ್ಷಿಣ ಆಫ್ರಿಕಾ ಪ್ರವಾಸ (India’s tour of South Africa) ಮಾಡಲಿದ್ದು, ಇದೀಗ ಆ ಪ್ರವಾಸದ ವೇಳಾಪಟ್ಟಿಯನ್ನು ಪ್ರಕಟಿಸಲಾಗಿದೆ.
ಒಂದೂವರೆ ವರ್ಷದ ಹಿಂದೆಯೂ ಟೀಂ ಇಂಡಿಯಾ ದಕ್ಷಿಣ ಆಫ್ರಿಕಾಕ್ಕೆ ಭೇಟಿ ನೀಡಿದ್ದು, ಅಲ್ಲಿ ಟೆಸ್ಟ್ ಮತ್ತು ಏಕದಿನ ಸರಣಿ ಆಡಿತ್ತು. ಆಗ ಭಾರತ ತಂಡ ಎರಡೂ ಸರಣಿಗಳಲ್ಲಿ ಸೋಲು ಎದುರಿಸಬೇಕಾಯಿತು. ಟೆಸ್ಟ್ ಸರಣಿಯಲ್ಲಿನ ಸೋಲಿನೊಂದಿಗೆ ವಿರಾಟ್ ಕೊಹ್ಲಿ ತಮ್ಮ ನಾಯಕತ್ವಕ್ಕೆ ವಿದಾಯ ಹೇಳಿದರೆ, ಏಕದಿನ ಸರಣಿ ಆರಂಭಕ್ಕೂ ಮೊದಲೇ ಕೊಹ್ಲಿಯನ್ನು ನಾಯಕತ್ವದಿಂದ ಕೆಳಗಿಳಿಸಲಾಯಿತು.
BCCI and @ProteasMenCSA announce fixtures for India’s Tour of South Africa 2023-24.
For more details – https://t.co/PU1LPAz49I #SAvIND
A look at the fixtures below ?? pic.twitter.com/ubtB4CxXYX
— BCCI (@BCCI) July 14, 2023
Asian Games 2023: ಆರ್ಸಿಬಿ ಆಟಗಾರ್ತಿಗೆ ಅವಕಾಶ! ಏಷ್ಯನ್ ಗೇಮ್ಸ್ಗೆ ಭಾರತ ಮಹಿಳಾ ತಂಡ ಹೀಗಿದೆ
ಇದೀಗ ಮತ್ತೊಮ್ಮೆ ದಕ್ಷಿಣ ಆಫ್ರಿಕಾದಲ್ಲಿ ಮೊದಲ ಟೆಸ್ಟ್ ಸರಣಿ ಗೆಲ್ಲುವ ಉದ್ದೇಶದಿಂದ ಟೀಂ ಇಂಡಿಯಾ ಡಿಸೆಂಬರ್ ಅಂತ್ಯದಲ್ಲಿ ಪ್ರವಾಸ ಕೈಗೊಳ್ಳಲಿದೆ. ಬಿಸಿಸಿಐ ಈ ಪ್ರವಾಸದ ವೇಳಾಪಟ್ಟಿಯನ್ನು ಜುಲೈ 14 ಶುಕ್ರವಾರ ಪ್ರಕಟಿಸಿದೆ. ಭಾರತ ತಂಡ ಸುಮಾರು ಒಂದು ತಿಂಗಳ ಕಾಲ ದಕ್ಷಿಣ ಆಫ್ರಿಕಾದಲ್ಲಿದ್ದು, ಅಲ್ಲಿ ಟಿ20, ಏಕದಿನ ಮತ್ತು ಟೆಸ್ಟ್ ಸರಣಿಗಳನ್ನು ಆಡಲಿದೆ. ಈ ಪ್ರವಾಸ ಡಿಸೆಂಬರ್ 10 ರಿಂದ ಟಿ20 ಸರಣಿಯೊಂದಿಗೆ ಆರಂಭವಾಗಲಿದೆ.
ಟಿ20 ಸರಣಿ ಹಾಗೂ ಏಕದಿನ ಸರಣಿಯಲ್ಲಿ ತಲಾ ಮೂರು ಪಂದ್ಯಗಳು ನಡೆಯಲಿವೆ. ಟಿ20 ಸರಣಿಯ ನಂತರ, ಏಕದಿನ ಸರಣಿಯು ಡಿಸೆಂಬರ್ 17 ರಿಂದ ಪ್ರಾರಂಭವಾಗಲಿದೆ. ಆ ಬಳಿಕ ಎರಡು ಪಂದ್ಯಗಳ ಟೆಸ್ಟ್ ಸರಣಿಯು ಡಿಸೆಂಬರ್ 26 ರಿಂದ ಅಂದರೆ ಬಾಕ್ಸಿಂಗ್ ಡೇ ಇಂದ ಪ್ರಾರಂಭವಾಗಲಿದೆ. ಸರಣಿಯ ಮೊದಲ ಪಂದ್ಯ ಸೆಂಚೂರಿಯನ್‌ನಲ್ಲಿ ನಡೆಯಲಿದ್ದು, ಎರಡನೇ ಟೆಸ್ಟ್ ಜನವರಿ 3 ರಿಂದ ಕೇಪ್‌ಟೌನ್‌ನಲ್ಲಿ ನಡೆಯಲಿದೆ.
ಟಿ20 ಸರಣಿ
ಡಿಸೆಂಬರ್ 10 – ಮೊದಲ ಟಿ20, ಡರ್ಬನ್
ಡಿಸೆಂಬರ್ 12 – ಎರಡನೇ ಟಿ20, ಗ್ಕೆಬರ್ಹಾ
ಡಿಸೆಂಬರ್ 14 – 3ನೇ ಟಿ20, ಜೋಹಾನ್ಸ್‌ಬರ್ಗ್
ಏಕದಿನ ಸರಣಿ
ಡಿಸೆಂಬರ್ 17 – ಮೊದಲನೇ ಏಕದಿನ ಪಂದ್ಯ, ಜೋಹಾನ್ಸ್‌ಬರ್ಗ್
ಡಿಸೆಂಬರ್ 19 – ಎರಡನೇ ಏಕದಿನ ಪಂದ್ಯ, ಗ್ಕೆಬರ್ಹಾ
ಡಿಸೆಂಬರ್ 21- ಮೂರನೇ ಏಕದಿನ ಪಂದ್ಯ, ಪಾರ್ಲ್
ಟೆಸ್ಟ್ ಸರಣಿ
26-30 ಡಿಸೆಂಬರ್ – ಮೊದಲನೇ ಟೆಸ್ಟ್, ಸೆಂಚುರಿಯನ್
3 – 7 ಜನವರಿ – ಎರಡನೇ ಟೆಸ್ಟ್, ಕೇಪ್ ಟೌನ್.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 7:20 am, Sat, 15 July 23