IPL-2022 ನಡೆಯುತ್ತಿದ್ದಾಗ ಟಿವಿಯಲ್ಲಿ ವಿಶೇಷ ರೀತಿಯ ಜಾಹೀರಾತು ಬರುತ್ತಿತ್ತು. ಈ ಜಾಹೀರಾತು ಪಂದ್ಯ ನಡೆಯುವಂತೆ ಮೈದಾನವನ್ನು ಸಿದ್ಧಪಡಿಸಲು ಶ್ರಮಿಸುವ ಗ್ರೌಂಡ್ಸ್‌ಮನ್‌ಗಳ ಬಗೆಗಿತ್ತು. ಇದರೊಂದಿಗೆ ಅನೇಕ ಆಟಗಾರರು ಗ್ರೌಂಡ್ಸ್‌ಮನ್‌ನನ್ನು ಹೊಗಳುವುದನ್ನು ಅನೇಕ ಬಾರಿ ನೋಡಿದ್ದೇವೆ. ಆದರೆ ಒಂದೆಡೆ ಐಪಿಎಲ್‌ನಲ್ಲಿ ಚಪ್ಪಾಳೆ ಗಿಟ್ಟಿಸಿಕೊಳ್ಳುತ್ತಿರುವಾಗಲೇ ಐಪಿಎಲ್ ಬಳಿಕ ಭಾರತೀಯ ಆಟಗಾರನೊಬ್ಬ ಮೈದಾನದಲ್ಲಿ ಗ್ರೌಂಡ್ಸ್‌ಮನ್ ಜೊತೆ ಅನುಚಿತ ವರ್ತನೆ ತೋರಿರುವುದು ಬಯಲಿಗೆ ಬಂದಿದೆ. ಬೆಂಗಳೂರಿನ ಎಂ. ಚಿನ್ನಸ್ವಾಮಿ ಸ್ಟೇಡಿಯಂ (M. Chinnaswamy Stadium in Bangalore)ನಲ್ಲಿ ಭಾರತ ಮತ್ತು ದಕ್ಷಿಣ ಆಫ್ರಿಕಾ (IND vs SA) ನಡುವೆ ಐದು ಪಂದ್ಯಗಳ ಸರಣಿಯ ನಿರ್ಣಾಯಕ ಪಂದ್ಯ ನಡೆಯುತ್ತಿತ್ತು. ಈ ಪಂದ್ಯದಲ್ಲಿ ಭಾರತ ಗೆಲುವು ಸಾಧಿಸಿದರೆ ಸರಣಿಯಲ್ಲಿ ಗೆಲುವು ಸಾಧಿಸಿದಂತಾಗುತ್ತದೆ. ಆದರೆ ಪಂದ್ಯ ಆರಂಭವಾಗುವ ವೇಳೆಗೆ ಮಳೆ ಬಂದು ಆಟಗಾರರು ಮೈದಾನದಿಂದ ಹೊರ ಹೋಗಬೇಕಾಯಿತು. ಏತನ್ಮಧ್ಯೆ, ಭಾರತದ ಆರಂಭಿಕ ಬ್ಯಾಟ್ಸ್‌ಮನ್ ರುತುರಾಜ್ ಗಾಯಕ್ವಾಡ್ (Ruturaj Gaikwad) ಕೂಡ ಡಗೌಟ್ಗೆ ತೆರಳಿದರು. ಆದರೆ ರುತುರಾಜ್ ನಡೆದುಕೊಂಡ ರೀತಿಗೆ ಈಗ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಟೀಕೆ ವ್ಯಕ್ತವಾಗುತ್ತಿದೆ.
ಈ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡಿತ್ತು. ಭಾರತದ ಆರಂಭಿಕ ಜೋಡಿ ಇಶಾನ್ ಕಿಶನ್ ಮತ್ತು ರಿತುರಾಜ್ ಗಾಯಕ್ವಾಡ್ ಬ್ಯಾಟಿಂಗ್ಗಾಗಿ ಅಖಾಡಕ್ಕಿಳಿದಿದ್ದರು. ಜೊತೆಗೆ ದಕ್ಷಿಣ ಆಫ್ರಿಕಾ ಕೂಡ ಫೀಲ್ಡಿಂಗ್ಗಾಗಿ ಮೈದಾನಕ್ಕಿಳಿದಿತ್ತು. ಪಂದ್ಯ ಆರಂಭವಾಗುವುದರಲ್ಲಿತ್ತು, ಆದರೆ ಅಷ್ಟರಲ್ಲಿ ಮಳೆ ಬಂದಿದ್ದರಿಂದ ಆಟಗಾರರು ಡಗ್-ಔಟ್‌ಗೆ ಮರಳಬೇಕಾಯಿತು.
ಇದನ್ನೂ ಓದಿ:T20 World Cup: ಟಿ20 ವಿಶ್ವಕಪ್ಗೆ ಟೀಂ ಇಂಡಿಯಾದ ಆಯ್ಕೆ ಪ್ರಕ್ರಿಯೆ ಯಾವಾಗ? ಗಂಗೂಲಿ ನೀಡಿದ್ರು ಬಿಗ್ ಅಪ್ಡೇಟ್
ಸೆಲ್ಫಿ ತೆಗೆದುಕೊಳ್ಳಲು ನಿರಾಕರಣೆ
ಹೀಗಿರುವಾಗ ರಿತುರಾಜ್ ಡಗೌಟ್‌ನಲ್ಲಿ ಕುಳಿತಿದ್ದಾಗ ಗ್ರೌಂಡ್ಸ್‌ಮನ್‌ಯೊಬ್ಬರು ಅವರ ಬಳಿಗೆ ಬಂದು ಸೆಲ್ಫಿಗೆ ಪೋಸ್ ಕೊಡುವಂತೆ ರುತುರಾಜ್ ಬಳಿ ಮನವಿ ಮಾಡಿದರು. ಆದರೆ ಭಾರತದ ಈ ಯುವ ಬ್ಯಾಟ್ಸ್‌ಮನ್, ಗ್ರೌಂಡ್ಸ್‌ಮನ್ ಜೊತೆ ಯಾರು ನೀರಿಕ್ಷಿಸದ ರೀತಿಯ ವರ್ತನೆ ತೋರಿದರು. ಸೆಲ್ಫಿ ತೆಗೆಯಲು ಗಾಯಕ್ವಾಡ್ ಹತ್ತಿರಕ್ಕೆ ಬಂದ ಗ್ರೌಂಡ್ಸ್‌ಮನ್‌ನನ್ನು ದೂರ ಹೋಗುವಂತೆ ದೂಕಿದ ರುತುರಾಜ್, ನಂತರ ಸೆಲ್ಫಿ ತೆಗೆದುಕೊಳ್ಳಲು ನಿರಾಕರಿಸಿದರು. ಬಳಿಕ ಆ ಗ್ರೌಂಡ್ಸ್‌ಮನ್ ಸೆಲ್ಫಿ ತೆಗೆದುಕೊಳ್ಳಲು ಯತ್ನಿಸುತ್ತಿದ್ದರೆ, ಗಾಯಕ್ವಾಡ್ ಮಾತ್ರ ಅದರ ಪರಿವೇ ಇಲ್ಲದವರಂತೆ ಸಹ ಆಟಗಾರನೊಂದಿಗೆ ಮಾತಿನಲ್ಲಿ ತೊಡಗಿದರು.
ಸೋಷಿಯಲ್ ಮೀಡಿಯಾದಲ್ಲಿ ಛೀಮಾರಿ
ಗಾಯಕ್ವಾಡ್ ಅವರ ಈ ವೀಡಿಯೊ ಸೋಷಿಯಲ್ ಮೀಡಿಯಾದಲ್ಲಿ ಈಗ ಸಾಕಷ್ಟು ವೈರಲ್ ಆಗುತ್ತಿದೆ. ಅವರ ಈ ಕೆಟ್ಟ ನಡವಳಿಕೆಗಾಗಿ ಸಾಕಷ್ಟು ಟೀಕೆಗಳು ವ್ಯಕ್ತವಾಗುತ್ತಿವೆ. ಈ ವಿಡಿಯೋವನ್ನು ಟ್ವೀಟ್ ಮಾಡಿರುವ ನೆಟ್ಟಿಗರೊಬ್ಬರು, “ಗ್ರೌಂಡ್ಸ್‌ಮನ್ ಜೊತೆ ಹೀಗಾ ನಡೆದುಕೊಳ್ಳುವುದು. ರಿತುರಾಜ್ ಗಾಯಕ್ವಾಡ್ ನೀವು ಮಾಡಿದ್ದು ಸರಿ ಇಲ್ಲ. ಗ್ರೌಂಡ್ಸ್ಮನ್ಗೆ ಈ ರೀತಿ ಆಗಿದ್ದನ್ನು ನೋಡುವುದಕ್ಕೆ ತುಂಬಾ ದುಃಖವಾಗಿದೆ. ಅದಕ್ಕಿಂತ ಇದೆಲ್ಲವನ್ನೂ ಟಿವಿಯಲ್ಲಿ ನೋಡುತ್ತಿರುವುದಕ್ಕೆ ಇನ್ನೂ ದುಃಖವಾಗುತ್ತಿದೆ ಎಂದು ಬರೆದುಕೊಂಡಿದ್ದಾರೆ.
Is this the way how you behave to elder person #RuturajGaikwad this is Very bad and disrespectful gesture. Sad to see these groundsmen getting treated like this? and even more sad is that we have to see this on NTV. @BCCI #INDvSA
pic.twitter.com/IjfLZRnMnl— Roshmi ➐ (@CricCrazyRoshmi) June 19, 2022
ಪಂದ್ಯ ರದ್ದು
ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯಬೇಕಿದ್ದ ಭಾರತ-ಸೌತ್ ಆಫ್ರಿಕಾ ನಡುವಣ ಪಂದ್ಯವು ಮಳೆಯ ಕಾರಣ ರದ್ದಾಗಿದೆ. ಟಾಸ್ಗೂ ಮುನ್ನ ಮಳೆಯಾಗಿದ್ದರಿಂದ ಪಂದ್ಯವು ವಿಳಂಬವಾಗಿ ಶುರು ಮಾಡಲಾಗಿತ್ತು. ಅದರಂತೆ ಟಾಸ್ ಗೆದ್ದ ಸೌತ್ ಆಫ್ರಿಕಾ ತಂಡವು ಬೌಲಿಂಗ್ ಆಯ್ದುಕೊಂಡಿತು. ಇನಿಂಗ್ಸ್ ಆರಂಭಿಸಿದ ಟೀಮ್ ಇಂಡಿಯಾ ಆರಂಭದಲ್ಲೇ 2 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಲುಂಗಿ ಎನ್ಗಿಡಿ ಎಸೆದ 2ನೇ ಓವರ್ನ ಕೊನೆಯ ಎಸೆತದಲ್ಲಿ ಇಶಾನ್ ಕಿಶನ್ (15) ಕ್ಲೀನ್ ಬೌಲ್ಡ್ ಆಗಿ ಹೊರನಡೆದರೆ, ಎನ್ಗಿಡಿ ಎಸೆದ 4ನೇ ಓವರ್ನ 2ನೇ ಎಸೆತದಲ್ಲಿ ರುತುರಾಜ್ ಗಾಯಕ್ವಾಡ್ (10) ಕ್ಯಾಚ್ ನೀಡಿ ನಿರ್ಗಮಿಸಿದರು. ಈ ವೇಳೆ ಮತ್ತೆ ಮಳೆ ಸುರಿಯಲಾರಂಭಿಸಿದ ಕಾರಣ ಪಂದ್ಯವನ್ನು ಸ್ಥಗಿತಗೊಳಿಸಲಾಗಿತ್ತು.
Published On - 7:03 am, Mon, 20 June 22