India vs South Africa 5th T20 Highlights: ಭಾರತದ ಸರಣಿ ಗೆಲುವಿನ ಆಸೆಗೆ ವರುಣನ ಅಡ್ಡಿ; ಸರಣಿ ಸಮ
India vs South Africa 5th T20 Live Score: ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಐದು ಪಂದ್ಯಗಳ ಟಿ20 ಸರಣಿಯ ನಿರ್ಣಾಯಕ ಪಂದ್ಯ ಇಂದು ಬೆಂಗಳೂರಿನಲ್ಲಿ ನಡೆಯುತ್ತಿದೆ. ಸರಣಿಯ ಮೊದಲ ಎರಡು ಪಂದ್ಯಗಳನ್ನು ದಕ್ಷಿಣ ಆಫ್ರಿಕಾ ಗೆದ್ದಿದ್ದರೆ, ನಂತರದ ಎರಡು ಪಂದ್ಯಗಳನ್ನು ಭಾರತ ಗೆದ್ದಿದ್ದರಿಂದ, ನಂತರ ಸರಣಿ 2-2 ರಲ್ಲಿ ಸಮಬಲಗೊಂಡಿತು.
ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯಬೇಕಿದ್ದ ಭಾರತ-ಸೌತ್ ಆಫ್ರಿಕಾ ನಡುವಣ ಪಂದ್ಯವು ಮಳೆಯ ಕಾರಣ ರದ್ದಾಗಿದೆ. ಟಾಸ್ಗೂ ಮುನ್ನ ಮಳೆಯಾಗಿದ್ದರಿಂದ ಪಂದ್ಯವು ವಿಳಂಬವಾಗಿ ಶುರು ಮಾಡಲಾಗಿತ್ತು. ಅದರಂತೆ ಟಾಸ್ ಗೆದ್ದ ಸೌತ್ ಆಫ್ರಿಕಾ ತಂಡವು ಬೌಲಿಂಗ್ ಆಯ್ದುಕೊಂಡಿತು. ಇನಿಂಗ್ಸ್ ಆರಂಭಿಸಿದ ಟೀಮ್ ಇಂಡಿಯಾ ಆರಂಭದಲ್ಲೇ 2 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಲುಂಗಿ ಎನ್‌ಗಿಡಿ ಎಸೆದ 2ನೇ ಓವರ್‌ನ ಕೊನೆಯ ಎಸೆತದಲ್ಲಿ ಇಶಾನ್ ಕಿಶನ್ (15) ಕ್ಲೀನ್ ಬೌಲ್ಡ್ ಆಗಿ ಹೊರನಡೆದರೆ, ಎನ್‌ಗಿಡಿ ಎಸೆದ 4ನೇ ಓವರ್‌ನ 2ನೇ ಎಸೆತದಲ್ಲಿ ರುತುರಾಜ್ ಗಾಯಕ್ವಾಡ್ (10) ಕ್ಯಾಚ್ ನೀಡಿ ನಿರ್ಗಮಿಸಿದರು. ಈ ವೇಳೆ ಮತ್ತೆ ಮಳೆ ಸುರಿಯಲಾರಂಭಿಸಿದ ಕಾರಣ ಪಂದ್ಯವನ್ನು ಸ್ಥಗಿತಗೊಳಿಸಲಾಗಿತ್ತು.
LIVE NEWS & UPDATES
-
ಪಂದ್ಯವನ್ನು ರದ್ದುಗೊಳಿಸಿದ ಬಿಸಿಸಿಐ
ಮಳೆ ನಿಲ್ಲದ ಕಾರಣ ಬಿಸಿಸಿಐ ಅಧಿಕಾರಿಗಳು ಪಂದ್ಯ ರದ್ದುಪಡಿಸಲು ನಿರ್ಧರಿಸಿದ್ದಾರೆ. ಸರಣಿಯು 2-2ರಲ್ಲಿ ಸಮಬಲವಾಯಿತು. ರೋಚಕ ಸರಣಿಯು ನಿರಾಶಾದಾಯಕ ಅಂತ್ಯ ಕಂಡಿತು.
-
ಪಂದ್ಯ ರದ್ದಾಗುವ ಸಾಧ್ಯತೆ ಇದೆ
10 ಗಂಟೆಯ ನಂತರವೂ ಮಳೆ ನಿಲ್ಲದಿದ್ದರೆ ಪಂದ್ಯ ರದ್ದಾಗಲಿದೆ. ಮಳೆ ಇನ್ನೂ ಮುಂದುವರಿದಿದೆ.
-
ಮಳೆ ನಿಲ್ಲುತ್ತಿಲ್ಲ
ಮಳೆ ಇನ್ನೂ ಮುಂದುವರಿದಿದ್ದು, ಸದ್ಯಕ್ಕೆ ನಿಲ್ಲುವ ಮುನ್ಸೂಚನೆ ಕಾಣುತ್ತಿಲ್ಲ. ಇದೇ ರೀತಿ ಮುಂದುವರಿದರೆ ಪಂದ್ಯದಲ್ಲಿ ಹೆಚ್ಚಿನ ಓವರ್‌ಗಳನ್ನು ಕಡಿತಗೊಳಿಸಬಹುದು.
ಮತ್ತೆ ಮಳೆ
21 ಎಸೆತಗಳ ಬಳಿಕ ಒಮ್ಮೆಲೆ ಮಳೆ ಸುರಿಯಲಾರಂಭಿಸಿದೆ. ಪಂದ್ಯವನ್ನು ನಿಲ್ಲಿಸಲಾಗಿದೆ, ಕವರ್‌ಗಳು ಪಿಚ್‌ಗೆ ಬಂದಿವೆ.
ರಿತುರಾಜ್ ಗಾಯಕ್ವಾಡ್ ಔಟ್
ಎನ್‌ಗಿಡಿ ತಮ್ಮ ಎರಡನೇ ಓವರ್ನಲ್ಲಿ ಈ ಬಾರಿ ರಿತುರಾಜ್ ಗಾಯಕ್ವಾಡ್ ಅವರನ್ನು ಔಟ್ ಮಾಡಿದರು. ಓವರ್‌ನ ಎರಡನೇ ಎಸೆತದಲ್ಲಿ ಗಾಯಕ್ವಾಡ್ ಅವರು ಮಿಡ್ ಆನ್‌ನಲ್ಲಿ ಚೆಂಡನ್ನು ಆಡಿದರು ಆದರೆ ಈ ಬಾರಿ ಬೌಂಡರಿ ಹೊಡೆಯಲು ಸಾಧ್ಯವಾಗಲಿಲ್ಲ ಮತ್ತು ಪ್ರಿಟೋರಿಯಸ್‌ಗೆ ಕ್ಯಾಚ್ ನೀಡಿದರು. ಅವರು 12 ಎಸೆತಗಳಲ್ಲಿ 10 ರನ್ ಗಳಿಸಿದ ನಂತರ ಮರಳಿದರು. ಅವರು ತಮ್ಮ ಇನ್ನಿಂಗ್ಸ್‌ನಲ್ಲಿ ಬೌಂಡರಿ ಬಾರಿಸಿದರು.
ಕಗಿಸೊ ರಬಾಡ ಉತ್ತಮ ಓವರ್
ಕಗಿಸೊ ರಬಾಡ ಮೂರನೇ ಓವರ್ನಲ್ಲಿ ಕೇವಲ ಐದು ರನ್ ನೀಡಿದರು. ಓವರ್‌ನ ನಾಲ್ಕನೇ ಎಸೆತದಲ್ಲಿ ಗಾಯಕ್ವಾಡ್ ಮಿಡ್ ವಿಕೆಟ್‌ನಲ್ಲಿ ಬೌಂಡರಿ ಬಾರಿಸಿದರು. ಇಶಾನ್ ನಂತರ ಬ್ಯಾಟಿಂಗ್ ಗೆ ಬಂದ ಶ್ರೇಯಸ್ ಅಯ್ಯರ್ ಗೆ ಈ ಓವರ್ ನಲ್ಲಿ ಒಂದೇ ಒಂದು ಎಸೆತವನ್ನು ಆಡುವ ಅವಕಾಶ ಸಿಕ್ಕಿತು.
ಇಶಾನ್ ಕಿಶನ್ ಔಟ್
ಲುಂಗಿ ಎನ್‌ಗಿಡಿ ಎರಡನೇ ಓವರ್‌ನಲ್ಲಿಯೇ ಇಶಾನ್ ಕಿಶನ್ ಅವರನ್ನು ಬೌಲ್ಡ್ ಮಾಡಿದರು. ಓವರ್‌ನ ಕೊನೆಯಲ್ಲಿ, ಚೆಂಡು ಇಶಾನ್ ಅವರ ಮುಂದೆ ಬಿದ್ದು, ಬ್ಯಾಟ್‌ಗೆ ತಾಕದೆ ಆಫ್-ಸ್ಟಂಪ್‌ಗೆ ಬಡಿಯಿತು. ಕಿಶನ್ 7 ಎಸೆತಗಳಲ್ಲಿ 15 ರನ್ ಗಳಿಸಿ ಪೆವಿಲಿಯನ್‌ಗೆ ಮರಳಿದರು.
ಕೇಶವ ಮಹಾರಾಜ್ ದುಬಾರಿ ಓವರ್
ಕೇಶವ್ ಮಹಾರಾಜ್ ಮೊದಲ ಓವರ್‌ನಲ್ಲಿ 16 ರನ್ ನೀಡಿದರು. ಓವರ್‌ನ ಎರಡನೇ ಎಸೆತದಲ್ಲಿ ಇಶಾನ್ ಮಿಡ್ ವಿಕೆಟ್ ಮೇಲೆ ಸಿಕ್ಸರ್ ಬಾರಿಸಿದರು. ಮುಂದಿನ ಎಸೆತದಲ್ಲೂ ಅದೇ ಸಿಕ್ಸರ್ ಬಾರಿಸಿದರು. ನಾಯಕನ ಈ ಓವರ್ ಅತ್ಯಂತ ದುಬಾರಿ ಎನಿಸಿದೆ.
ಭಾರತದ ಬ್ಯಾಟಿಂಗ್ ಆರಂಭವಾಗಿದೆ
ದಕ್ಷಿಣ ಆಫ್ರಿಕಾ ಪರ, ಅದರ ನಾಯಕ ಕೇಶವ್ ಮಹಾರಾಜ್ ಬೌಲಿಂಗ್ ಆರಂಭಿಸಿದ್ದಾರೆ ಮತ್ತು ಇಶಾನ್ ಕಿಶನ್ ಮತ್ತು ರಿತುರಾಜ್ ಗಾಯಕ್ವಾಡ್ ಭಾರತದ ಪರ ಆರಂಭಿಕರಾಗಿ ಬಂದಿದ್ದಾರೆ.
19 ಓವರ್‌ಗಳ ಇನ್ನಿಂಗ್ಸ್
ಪಂದ್ಯ ರಾತ್ರಿ 7.50ಕ್ಕೆ ಆರಂಭವಾಗಲಿದೆ. ಈಗ ಪಂದ್ಯ 40 ಅಲ್ಲ 38 ಓವರ್‌ಗಳಾಗಿರುತ್ತದೆ. ಉಭಯ ತಂಡಗಳ ಇನಿಂಗ್ಸ್‌ನಲ್ಲಿ 1-1 ಓವರ್‌ಗಳನ್ನು ಕಡಿತಗೊಳಿಸಲಾಗಿದೆ.
ಬೆಂಗಳೂರಿನಲ್ಲಿ ನಿಂತ ಮಳೆ
ಸದ್ಯಕ್ಕೆ ಮಳೆ ನಿಂತಿದ್ದು, ಅಂಪೈರ್ ಮೈದಾನದವರೊಂದಿಗೆ ಮಾತುಕತೆ ನಡೆಸುತ್ತಿದ್ದಾರೆ. ಸ್ವಲ್ಪ ಸಮಯದ ನಂತರ ಮೈದಾನದಿಂದ ನೀರನ್ನು ಹೊರತೆಗೆಯುವ ಕೆಲಸ ಪ್ರಾರಂಭವಾಗಲಿದೆ ಮತ್ತು ನಂತರ ಪಂದ್ಯವು ಪ್ರಾರಂಭವಾಗುತ್ತದೆ.
ಮಳೆಯಿಂದಾಗಿ ನಿಗದಿತ ಸಮಯಕ್ಕೆ ಪಂದ್ಯ ಆರಂಭವಾಗಲಿಲ್ಲ
ಬೆಂಗಳೂರಿನಲ್ಲಿ ಮಳೆ ಆರಂಭವಾಗಿದ್ದು, ಬಳಿಕ ಇಡೀ ಪಿಚ್ ಅನ್ನು ಹೊದಿಕೆಯಿಂದ ಮುಚ್ಚಲಾಗಿದೆ. ಆಟಗಾರರು ಕೂಡ ಮೈದಾನದಿಂದ ಹೊರ ಬಂದಿದ್ದಾರೆ. ಹವಾಮಾನ ಇಲಾಖೆ ಮಳೆಯ ಮುನ್ಸೂಚನೆ ನೀಡಿತ್ತು
ದಕ್ಷಿಣ ಆಫ್ರಿಕಾ
ಕೇಶವ್ ಮಹಾರಾಜ್ (ಕ್ಯಾಪ್ಟನ್.), ಕ್ವಿಂಟನ್ ಡಿ ಕಾಕ್, ಆರ್. ಹೆಂಡ್ರಿಕ್ಸ್, ವ್ಯಾನ್ ಡೆರ್ ಡಸ್ಸೆ, ಎಚ್. ಕ್ಲಾಸೆನ್, ಡೇವಿಡ್ ಮಿಲ್ಲರ್, ಟ್ರಿಸ್ಟಾನ್ ಸ್ಟಬ್ಸ್, ಡ್ವೇನ್ ಪ್ರಿಟೋರಿಯಸ್, ಕಗಿಸೊ ರಬಾಡ, ಎನ್ರಿಕ್ ನೋಕಿಯಾ, ಲುಂಗಿ ಎಂಗಿಡಿ,
ಟೀಮ್ ಇಂಡಿಯಾ
ರಿಷಬ್ ಪಂತ್ (ನಾಯಕ), ಇಶಾನ್ ಕಿಶನ್, ರಿತುರಾಜ್ ಗಾಯಕ್ವಾಡ್, ಶ್ರೇಯಸ್ ಅಯ್ಯರ್, ಹಾರ್ದಿಕ್ ಪಾಂಡ್ಯ, ದಿನೇಶ್ ಕಾರ್ತಿಕ್, ಅಕ್ಷರ್ ಪಟೇಲ್, ಭುವನೇಶ್ವರ್ ಕುಮಾರ್, ಹರ್ಷಲ್ ಪಟೇಲ್, ಆವೇಶ್ ಖಾನ್ ಮತ್ತು ಯುಜುವೇಂದ್ರ ಚಾಹಲ್
ಟಾಸ್ ಗೆದ್ದ ಆಫ್ರಿಕಾ ಬೌಲಿಂಗ್ ಆಯ್ಕೆ
ಟಾಸ್ ಗೆದ್ದ ಆಫ್ರಿಕಾ ಬೌಲಿಂಗ್ ಆಯ್ಕೆ ಮಾಡಿಕೊಂಡಿದೆ. ಎಂಟು ದಿನಗಳಲ್ಲಿ ಭಾರತ ನಾಲ್ಕು ಪಂದ್ಯಗಳನ್ನು ಆಡಿದ್ದು, ಆಡುವ XI ನಲ್ಲಿ ಹೆಚ್ಚಿನ ಬದಲಾವಣೆ ಮಾಡಲಾಗಿಲ್ಲ. ಭಾರತ ಹಳೆಯ ತಂಡವನ್ನೇ ಆಡಿಸಿದೆ
ಭಾರತಕ್ಕೆ ಇತಿಹಾಸ ಸೃಷ್ಟಿಸುವ ಅವಕಾಶ
ಭಾರತ ತಂಡ ಇಲ್ಲಿಯವರೆಗೆ ದಕ್ಷಿಣ ಆಫ್ರಿಕಾ ವಿರುದ್ಧ ತಮ್ಮ ದೇಶದಲ್ಲಿ ಯಾವುದೇ ಸರಣಿಯನ್ನು ಗೆದ್ದಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಇಂದು ಟೀಂ ಇಂಡಿಯಾ ಈ ಟಿ20 ಗೆದ್ದು ಇತಿಹಾಸ ಸೃಷ್ಟಿಸುವ ಅವಕಾಶ ಪಡೆದಿದೆ.
ಭಾರತ- ದಕ್ಷಿಣ ಆಫ್ರಿಕಾ ಮುಖಾಮುಖಿ
ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಐದು ಪಂದ್ಯಗಳ ಟಿ20 ಸರಣಿಯ ಕೊನೆಯ ಪಂದ್ಯ ಇಂದು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿದೆ. ಸದ್ಯ ಎರಡೂ ತಂಡಗಳು ಸರಣಿಯಲ್ಲಿ 2-2ರಲ್ಲಿ ಸಮಬಲ ಸಾಧಿಸಿವೆ.
Published On - Jun 19,2022 6:13 PM