IND vs SA: ವಿಶ್ವ ಕಿರೀಟ ತೊಡಲು ಬಾರ್ಬಡೋಸ್​ಗೆ ಬಂದಿಳಿದ ರೋಹಿತ್ ಪಡೆ; ವಿಡಿಯೋ ನೋಡಿ

|

Updated on: Jun 28, 2024 | 2:55 PM

IND vs SA, T20 World Cup 2024: ನಿನ್ನೆ ನಡೆದ ಸೆಮಿಫೈನಲ್‌ನ ಎರಡನೇ ಪಂದ್ಯದಲ್ಲಿ ಟೀಂ ಇಂಡಿಯಾ ಹಾಲಿ ಚಾಂಪಿಯನ್ ಇಂಗ್ಲೆಂಡ್ ತಂಡವನ್ನು ಸೋಲಿಸಿ ಫೈನಲ್‌ಗೆ ಲಗ್ಗೆ ಇಟ್ಟಿತ್ತು. ಅದರ ನಂತರ ಇದೀಗ ಟೀಂ ಇಂಡಿಯಾ ದಕ್ಷಿಣ ಆಫ್ರಿಕಾದ ಸವಾಲನ್ನು ಎದುರಿಸಲಿದೆ. ಅಂತಿಮ ಪಂದ್ಯಕ್ಕಾಗಿ ಟೀಂ ಇಂಡಿಯಾ ಬಾರ್ಬಡೋಸ್ ತಲುಪಿದೆ.

IND vs SA: ವಿಶ್ವ ಕಿರೀಟ ತೊಡಲು ಬಾರ್ಬಡೋಸ್​ಗೆ ಬಂದಿಳಿದ ರೋಹಿತ್ ಪಡೆ; ವಿಡಿಯೋ ನೋಡಿ
ಟೀಂ ಇಂಡಿಯಾ
Follow us on

ಗಯಾನಾದಲ್ಲಿ ನಡೆದ ಟಿ20 ವಿಶ್ವಕಪ್​ನ ಸೆಮಿಫೈನಲ್‌ ಪಂದ್ಯದಲ್ಲಿ ಇಂಗ್ಲೆಂಡ್ ತಂಡವನ್ನು 68 ರನ್​ಗಳಿಂದ ಸೋಲಿಸಿದ ಟೀಂ ಇಂಡಿಯಾ, ಮೂರನೇ ಬಾರಿಗೆ ವಿಶ್ವಕಪ್ ಫೈನಲ್​ಗೇರಿದೆ. ಇದೀಗ ರೋಹಿತ್ ಪಡೆ ನಾಳೆ ನಡೆಯಲ್ಲಿರುವ ಫೈನಲ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡವನ್ನು ಎದುರಿಸುತ್ತಿದೆ. ಈ ಮಹತ್ವದ ಪಂದ್ಯಕ್ಕೆ ಬಾರ್ಬಡೋಸ್‌ನಲ್ಲಿರುವ ಕೆನ್ಸಿಂಗ್ಟನ್ ಓವಲ್ ಮೈದಾನ ಆತಿಥ್ಯವಹಿಸುತ್ತಿದೆ. ಹೀಗಾಗಿ ಆಂಗ್ಲರನ್ನು ಮಣಿಸಿದ ಕೂಡಲೇ ಬಾರ್ಬಡೋಸ್​ಗೆ ಪ್ರಯಾಣ ಬೆಳೆಸಿದೆ. ಇದೇ ವೇಳೆ ಭಾರತ ತಂಡದ ನಾಯಕ ರೋಹಿತ್ ಶರ್ಮಾ ಕೂಡ ದಕ್ಷಿಣ ಆಫ್ರಿಕಾ ವಿರುದ್ಧದ ಅಂತಿಮ ಪಂದ್ಯಕ್ಕೆ ಸಂಬಂಧಿಸಿದಂತೆ ಹೇಳಿಕೆ ನೀಡಿದ್ದು ಪಂದ್ಯದ ರೋಚಕತೆಯನ್ನು ಹೆಚ್ಚಿಸಿದೆ.

ದಕ್ಷಿಣ ಆಫ್ರಿಕಾ ವಿರುದ್ಧದ ಫೈನಲ್‌ ಪಂದ್ಯದ ಬಗ್ಗೆ ಬಾರ್ಬಡೋಸ್‌ಗೆ ತಲುಪುವ ಮೊದಲೇ ಗಯಾನಾದಲ್ಲಿ ಹೇಳಿಕೆ ನೀಡಿರುವ ರೋಹಿತ್ ಶರ್ಮಾ ವಿಶ್ವಕಪ್ ಗೆಲ್ಲುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಸೆಮಿಫೈನಲ್‌ನ ನಂತರದ ಪಂದ್ಯದ ಪ್ರಸ್ತುತಿಯಲ್ಲಿ, 2013 ರಿಂದ ನಡೆಯುತ್ತಿರುವ ಕಾಯುವಿಕೆಯನ್ನು ಈ ಬಾರಿ ಕೊನೆಗೊಳಿಸುವತ್ತ ನೋಡುತ್ತಿದ್ದೀರಾ ಎಂದು ಕೇಳಿದ ಪ್ರಶ್ನೆಗೆ ಉತ್ತರವಾಗಿ ರೋಹಿತ್, ‘ನಮ್ಮ ಅತ್ಯುತ್ತಮ ಕೊಡುಗೆ ನೀಡಲು ನಾವು ಪ್ರಯತ್ನಿಸುತ್ತೇವೆ. ತಂಡ ಉತ್ತಮ ಲಯದಲ್ಲಿದೆ. ಇಂತಹ ಪರಿಸ್ಥಿತಿಯಲ್ಲಿ ಇಲ್ಲಿಯವರೆಗೂ ತೋರಿದ ಪ್ರದರ್ಶನವನ್ನೇ ಫೈನಲ್‌ನಲ್ಲಿಯೂ ಕಾಯ್ದುಕೊಳ್ಳುವ ಭರವಸೆ ಮೂಡಿದೆ. ಫೈನಲ್‌ಗೂ ಮುನ್ನ ದಕ್ಷಿಣ ಆಫ್ರಿಕಾ ಪಾಳಯದಲ್ಲಿ ತಲ್ಲಣ ಮೂಡಿಸಿದ್ದ ಈ ಹೇಳಿಕೆ ನೀಡಿದ ರೋಹಿತ್ ಶರ್ಮಾ ಇಡೀ ತಂಡದೊಂದಿಗೆ ಗಯಾನಾದಿಂದ ಬಾರ್ಬಡೋಸ್ ತಲುಪಿದ್ದಾರೆ.

IND vs ENG: ಸೇಡಿನ ಸಮರದಲ್ಲಿ ಆಂಗ್ಲರನ್ನು ಬಗ್ಗುಬಡಿದು ಫೈನಲ್​ಗೇರಿದ ಭಾರತ..!

ಬಾರ್ಬಡೋಸ್ ತಲುಪಿದ ಭಾರತ

ಟೀಂ ಇಂಡಿಯಾ ಬಾರ್ಬಡೋಸ್‌ಗೆ ಆಗಮಿಸಿದ ವಿಡಿಯೋ ಕೂಡ ಹೊರಬಿದ್ದಿದ್ದು, ಏರ್‌ಪೋರ್ಟ್‌ನಿಂದ ಹೊರಬಂದು ಟೀಂ ಬಸ್ ಹತ್ತಿದ ಆಟಗಾರರಲ್ಲಿ ಹಾರ್ದಿಕ್ ಪಾಂಡ್ಯ, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್ ಸೇರಿದಂತೆ ಎಲ್ಲಾ ಆಟಗಾರರು ಕಾಣಿಸಿಕೊಂಡಿದ್ದಾರೆ. ಭಾರತದ ಆಟಗಾರರು ವಿಮಾನ ನಿಲ್ದಾಣದಿಂದ ತಂಡದ ಬಸ್ ಹತ್ತಿ ಹೋಟೆಲ್‌ಗೆ ತೆರಳಿದ್ದಾರೆ.

ಬಾರ್ಬಡೋಸ್‌ನಲ್ಲಿ ಭಾರತ- ಆಫ್ರಿಕಾ ದಾಖಲೆ

T20 ವಿಶ್ವಕಪ್ 2024 ರ ಫೈನಲ್ ನೆಪದಲ್ಲಿ ಬಾರ್ಬಡೋಸ್‌ನಲ್ಲಿ ಭಾರತ ಮತ್ತು ದಕ್ಷಿಣ ಆಫ್ರಿಕಾ ಮೊದಲ ಬಾರಿಗೆ ಟಿ20 ಕ್ರಿಕೆಟ್‌ನಲ್ಲಿ ಮುಖಾಮುಖಿಯಾಗಲಿವೆ. ಇದಕ್ಕೂ ಮುನ್ನ ಇಲ್ಲಿ ಕೇವಲ 3 ಪಂದ್ಯಗಳನ್ನು ಆಡಿದ ಅನುಭವ ಹೊಂದಿರುವ ಟೀಂ ಇಂಡಿಯಾ ಈ ಪೈಕಿ 1ರಲ್ಲಿ ಮಾತ್ರ ಗೆದ್ದಿದೆ. ಉಳಿದ ಎರಡು ಪಂದ್ಯಗಳನ್ನು ಸೋತಿರುವ ಭಾರತ 2010 ರ ಟಿ20 ವಿಶ್ವಕಪ್‌ನಲ್ಲಿ ಆಸ್ಟ್ರೇಲಿಯಾ ಮತ್ತು ವೆಸ್ಟ್ ಇಂಡೀಸ್ ವಿರುದ್ಧ ಮುಗ್ಗರಿಸಿತ್ತು.

ಇನ್ನು ದಕ್ಷಿಣ ಆಫ್ರಿಕಾದ ಬಗ್ಗೆ ಹೇಳುವುದಾದರೆ.. ಇಲ್ಲಿ ಆಡಿರುವ 3 ಟಿ20 ಪಂದ್ಯಗಳಲ್ಲಿ ಹರಿಣಗಳು 2ರಲ್ಲಿ ಗೆದ್ದಿದ್ದಾರೆ. 2010ರಲ್ಲಿ ಬಾರ್ಬಡೋಸ್‌ನಲ್ಲಿ ನಡೆದ ಟಿ20 ವಿಶ್ವಕಪ್‌ನಲ್ಲಿ ದಕ್ಷಿಣ ಆಫ್ರಿಕಾ ಈ ಮೂರು ಪಂದ್ಯಗಳನ್ನು ಆಡಿತ್ತು. ಅಂದರೆ 2024 ರಲ್ಲಿ ದಕ್ಷಿಣ ಆಫ್ರಿಕಾ ತಂಡ ಬಾರ್ಬಡೋಸ್‌ನಲ್ಲಿ ಪಂದ್ಯವನ್ನು ಆಡುತ್ತಿರುವುದು ಇದೇ ಮೊದಲು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ