ಟೀಂ ಇಂಡಿಯಾದ ಬ್ಯಾಟಿಂಗ್, ಫೀಲ್ಡಿಂಗ್, ಬೌಲಿಂಗ್ ಕೋಚ್ ಯಾರು? ಇವರ ಆಯ್ಕೆ ಖಚಿತ

|

Updated on: Jul 20, 2024 | 3:45 PM

Team India: ಟೀಂ ಇಂಡಿಯಾದ ಮುಖ್ಯ ಕೋಚ್ ಜೊತೆಗೆ ಬ್ಯಾಟಿಂಗ್, ಬೌಲಿಂಗ್ ಮತ್ತು ಫೀಲ್ಡಿಂಗ್ ಕೋಚ್ ಅವಧಿಯೂ ಕೊನೆಗೊಂಡಿತ್ತು. ಹೀಗಿರುವಾಗ ಗೌತಮ್ ಗಂಭೀರ್ ಅವರ ಕೋಚಿಂಗ್ ಸ್ಟಾಫ್ ನಲ್ಲಿ ಯಾರೆಲ್ಲಾ ಇರುತ್ತಾರೆ ಎಂಬ ಚರ್ಚೆ ಕಳೆದ ಹಲವು ದಿನಗಳಿಂದ ನಡೆಯುತ್ತಿದ್ದು, ಅದರ ಚಿತ್ರಣ ಈಗ ಬಹುತೇಕ ನಿಚ್ಚಳವಾಗಿದೆ.

ಟೀಂ ಇಂಡಿಯಾದ ಬ್ಯಾಟಿಂಗ್, ಫೀಲ್ಡಿಂಗ್, ಬೌಲಿಂಗ್ ಕೋಚ್ ಯಾರು? ಇವರ ಆಯ್ಕೆ ಖಚಿತ
ಟೀಂ ಇಂಡಿಯಾ
Follow us on

ಭಾರತ ಮತ್ತು ಶ್ರೀಲಂಕಾ ನಡುವಿನ 3 ಟಿ20 ಮತ್ತು 3 ಏಕದಿನ ಪಂದ್ಯಗಳ ಕ್ರಿಕೆಟ್ ಸರಣಿಯು ಜುಲೈ 27 ರಿಂದ ಪ್ರಾರಂಭವಾಗಲಿದೆ. ಈ ಸರಣಿಯಲ್ಲಿ ಟೀಂ ಇಂಡಿಯಾ ತನ್ನ ನೂತನ ಮುಖ್ಯ ಕೋಚ್ ಗೌತಮ್ ಗಂಭೀರ್ ನೇತೃತ್ವದಲ್ಲಿ ಆಡಲಿದೆ. 2024ರ ಟಿ20 ವಿಶ್ವಕಪ್‌ ಫೈನಲ್ ಪಂದ್ಯದೊಂದಿಗೆ ರಾಹುಲ್ ದ್ರಾವಿಡ್ ಅಧಿಕಾರಾವಧಿ ಕೊನೆಗೊಂಡಿತು. ಇದಾದ ನಂತರ ಬಿಸಿಸಿಐ ಸಂದರ್ಶನ ನಡೆಸಿ ಗೌತಮ್ ಗಂಭೀರ್ ಅವರಿಗೆ ಈ ಹುದ್ದೆಯ ಜವಾಬ್ದಾರಿಯನ್ನು ಹಸ್ತಾಂತರಿಸಿದೆ. ಟೀಂ ಇಂಡಿಯಾದ ಮುಖ್ಯ ಕೋಚ್ ಜೊತೆಗೆ ಬ್ಯಾಟಿಂಗ್, ಬೌಲಿಂಗ್ ಮತ್ತು ಫೀಲ್ಡಿಂಗ್ ಕೋಚ್ ಅವಧಿಯೂ ಕೊನೆಗೊಂಡಿತ್ತು. ಹೀಗಿರುವಾಗ ಗೌತಮ್ ಗಂಭೀರ್ ಅವರ ಕೋಚಿಂಗ್ ಸ್ಟಾಫ್ ನಲ್ಲಿ ಯಾರೆಲ್ಲಾ ಇರುತ್ತಾರೆ ಎಂಬ ಚರ್ಚೆ ಕಳೆದ ಹಲವು ದಿನಗಳಿಂದ ನಡೆಯುತ್ತಿದ್ದು, ಅದರ ಚಿತ್ರಣ ಈಗ ಬಹುತೇಕ ನಿಚ್ಚಳವಾಗಿದೆ.

ಸೋಮವಾರ ಲಂಕಾಗೆ ಹಾರಲಿದೆ

ಸೋಮವಾರ ಮಧ್ಯಾಹ್ನ 1 ಗಂಟೆಗೆ ಚಾರ್ಟರ್ ಪ್ಲೇನ್ ಮೂಲಕ ಭಾರತ ತಂಡ ಮುಂಬೈನಿಂದ ಕೊಲಂಬೊಗೆ ತೆರಳಲಿದೆ. ಈ ನಿರ್ಗಮನಕ್ಕೂ ಮುಂಚೆಯೇ, ಬಿಸಿಸಿಐ ಗೌತಮ್ ಗಂಭೀರ್ ಅವರನ್ನು ಹೊಸ ಮುಖ್ಯ ಕೋಚ್ ಎಂದು ಔಪಚಾರಿಕವಾಗಿ ಘೋಷಿಸಲಿದೆ. ಇದಕ್ಕಾಗಿ ಜುಲೈ 22ರಂದು ಮುಂಬೈನ ಅಂಧೇರಿಯಲ್ಲಿರುವ ಪಂಚತಾರಾ ಹೋಟೆಲ್​ನಲ್ಲಿ ಪತ್ರಿಕಾಗೋಷ್ಠಿ ನಡೆಸಲು ಯೋಜನೆ ಸಿದ್ಧಪಡಿಸಲಾಗಿದೆ. ಈ ಪತ್ರಿಕಾಗೋಷ್ಠಿಯಲ್ಲಿ ನಾಯಕ ರೋಹಿತ್ ಶರ್ಮಾ ಮತ್ತು ಟಿ20 ತಂಡದ ನಾಯಕ ಸೂರ್ಯಕುಮಾರ್ ಯಾದವ್ ಕೂಡ ಪಾಲ್ಗೊಳ್ಳುವ ನಿರೀಕ್ಷೆಯಿದೆ.

ಫೀಲ್ಡಿಂಗ್ ಕೋಚ್‌ ಯಾರು?

ಇದುವರೆಗೂ ಟೀಂ ಇಂಡಿಯಾದ ಫೀಲ್ಡಿಂಗ್ ಕೋಚ್ ಆಗಿದ್ದ ಟಿ ದಿಲೀಪ್ ಅವರ ಅವಧಿ ಮತ್ತೆ ವಿಸ್ತರಣೆಯಾಗುವುದು ಖಚಿತ ಎಂದು ಪರಿಗಣಿಸಲಾಗಿದೆ. ಟಿ ದಿಲೀಪ್ ಅವರು ಫೀಲ್ಡಿಂಗ್ ಕೋಚ್ ಆಗಿ ಡ್ರೆಸ್ಸಿಂಗ್ ರೂಮ್‌ನಲ್ಲಿ ಉತ್ತಮ ವಾತಾವರಣ ಸೃಷ್ಟಿಸಿದ್ದಾರೆ. ಆಟಗಾರರೊಂದಿಗಿನ ಅವರ ಬಾಂಧವ್ಯವನ್ನು ನೋಡಿದರೆ, ಟಿ ದಿಲೀಪ್ ಅವರು ಟೀಂ ಇಂಡಿಯಾದ ಮುಂದಿನ ಫೀಲ್ಡಿಂಗ್ ಕೋಚ್ ಆಗಿ ಕಾರ್ಯನಿರ್ವಹಿಸಲಿದ್ದಾರೆ ಎಂದು ಹೇಳಲಾಗುತ್ತಿದೆ. ಟಿ ದಿಲೀಪ್ ಕೂಡ ಸೋಮವಾರ ಭಾರತ ತಂಡದೊಂದಿಗೆ ಕೊಲಂಬೊಗೆ ತೆರಳಲಿದ್ದಾರೆ.

ಬೌಲಿಂಗ್ ಕೋಚ್‌ ಯಾರು?

ಹೊಸ ಬೌಲಿಂಗ್ ಕೋಚ್ ಬಗ್ಗೆ ಚಿತ್ರಣ ಇನ್ನೂ ಸ್ಪಷ್ಟವಾಗಿಲ್ಲ. ಈ ರೇಸ್​ನಲ್ಲಿ ದಕ್ಷಿಣ ಆಫ್ರಿಕಾದ ಬೌಲರ್ ಮೊರ್ನೆ ಮೊರ್ಕೆಲ್ ಹೆಸರು ಮುಂಚೂಣಿಯಲ್ಲಿದ್ದು, ಬಹುಶಃ ಅವರ ಹೆಸರೇ ಫೈನಲ್ ಆಗಬಹುದು ಎನ್ನಲಾಗುತ್ತಿದೆ. ಇನ್ನು 1ರಿಂದ 2 ದಿನಗಳಲ್ಲಿ ನೂತನ ಬೌಲಿಂಗ್ ಕೋಚ್ ಬಗ್ಗೆ ಇರುವ ಎಲ್ಲ ಅನುಮಾನಗಳೂ ನಿವಾರಣೆಯಾಗಲಿವೆ. ಮೋರ್ನೆ ಮೊರ್ಕೆಲ್ ಅವರು ಗೌತಮ್ ಗಂಭೀರ್ ಅವರೊಂದಿಗೆ ಲಕ್ನೋ ಸೂಪರ್ ಜೈಂಟ್ಸ್ ತಂಡದಲ್ಲಿ 2 ವರ್ಷಗಳ ಕಾಲ ಕೆಲಸ ಮಾಡಿದ್ದಾರೆ.

ಸಹಾಯಕ ಕೋಚ್ ಯಾರು?

ಕ್ರಿಕ್‌ಬಜ್‌ನ ವರದಿಯ ಪ್ರಕಾರ, ಅಭಿಷೇಕ್ ನಾಯರ್ ಮತ್ತು ರಿಯಾನ್ ಟೆನ್ ಡೋಸ್ಚೇಟ್ ಇಬ್ಬರನ್ನೂ ಟೀಂ ಇಂಡಿಯಾ ಮುಖ್ಯ ಕೋಚ್ ಗೌತಮ್ ಗಂಭೀರ್‌ಗೆ ಸಹಾಯಕರಾಗಿ ಆಯ್ಕೆಮಾಡಲಾಗುತ್ತದೆ. ಗೌತಮ್ ಗಂಭೀರ್ ಹೊರತಾಗಿ, ಅಭಿಷೇಕ್ ನಾಯರ್ ಕೂಡ ಐಪಿಎಲ್‌ನಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ತಂಡದಲ್ಲಿ ಕೆಲಸ ಮಾಡಿದ್ದಾರೆ. ಅವರ ಮಾರ್ಗದರ್ಶನದಲ್ಲಿ ವರುಣ್ ಚಕ್ರವರ್ತಿ ಮತ್ತು ವೆಂಕಟೇಶ್ ಅಯ್ಯರ್ ಅವರಂತಹ ಆಟಗಾರರು ಕಳೆದ ಐಪಿಎಲ್‌ನಲ್ಲಿ ನೈಟ್ ರೈಡರ್ಸ್ ಪರ ಅದ್ಭುತ ಪ್ರದರ್ಶನ ನೀಡಿದ್ದರು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ