IND vs SL: ಲಂಕಾ ಪ್ರವಾಸದಲ್ಲಿ ನಾಯಕ ಸೂರ್ಯಕುಮಾರ್ ಮುಂದಿವೆ ಸಾಲು ಸಾಲು ಸವಾಲುಗಳು

Suryakumar Yadav: ಟಿ20 ಸರಣಿಯೊಂದಿಗೆ ಭಾರತದ ಶ್ರೀಲಂಕಾ ಪ್ರವಾಸ ಆರಂಭವಾಗಲಿದ್ದು, ನೂತನ ನಾಯಕನಾಗಿ ಆಯ್ಕೆಯಾಗಿರುವ ಸೂರ್ಯಕುಮಾರ್ ಯಾದವ್​ಗೆ ಈ ಪ್ರವಾಸ ಅತ್ಯಂತ ಮಹತ್ವದ್ದಾಗಿದೆ. ಟಿ20 ತಂಡದ ನಾಯಕತ್ವದ ರೇಸ್​ನಲ್ಲಿರುವ ತಂಡದ ಇತರ ಆಟಗಾರರನ್ನು ಸಂತೈಸಿಕೊಂಡು ತಂಡವನ್ನು ಮುನ್ನಡೆಸುವ ದೊಡ್ಡ ಜವಬ್ದಾರಿಯು ಸೂರ್ಯನ ಮೇಲಿದೆ. ಇದೆಲ್ಲದರ ಹೊರತಾಗಿಯೂ ನಾಯಕನಾಗಿ ಸೂರ್ಯನಿಗೆ ಲಂಕಾ ಪ್ರವಾಸದಲ್ಲಿ ಈ ಮೂರು ಕಠಿಣ ಸವಾಲುಗಳು ಎದುರಾಗಿವೆ.

ಪೃಥ್ವಿಶಂಕರ
|

Updated on: Jul 20, 2024 | 5:36 PM

ಭಾರತದ ಶ್ರೀಲಂಕಾ ಪ್ರವಾಸಕ್ಕೆ ಬಿಸಿಸಿಐ ಈಗಾಗಲೇ ತಂಡವನ್ನು ಪ್ರಕಟಿಸಿದೆ. ವೇಳಾಪಟ್ಟಿಯ ಪ್ರಕಾರ ಟೀಂ ಇಂಡಿಯಾ ಕೆಲವೇ ದಿನಗಳಲ್ಲಿ ಲಂಕಾಗೆ ಹಾರಲಿದೆ. ಟಿ20 ಸರಣಿಯೊಂದಿಗೆ ಪ್ರವಾಸ ಆರಂಭವಾಗಲಿದ್ದು, ನೂತನ ನಾಯಕನಾಗಿ ಆಯ್ಕೆಯಾಗಿರುವ ಸೂರ್ಯಕುಮಾರ್ ಯಾದವ್​ಗೆ ಈ ಪ್ರವಾಸ ಅತ್ಯಂತ ಮಹತ್ವದ್ದಾಗಿದೆ.

1 / 8
ಭಾರತಕ್ಕೆ ಟಿ20 ವಿಶ್ವಕಪ್ ಗೆಲ್ಲಿಸಿಕೊಟ್ಟ ರೋಹಿತ್ ಶರ್ಮಾ ಅವರ ಸ್ಥಾನವನ್ನು ತುಂಬುವುದು ಸೂರ್ಯನಿಗೆ ಸುಲಭದ ಕೆಲಸವಲ್ಲ. ಅದರೊಂದಿಗೆ ಟಿ20 ತಂಡದ ನಾಯಕತ್ವದ ರೇಸ್​ನಲ್ಲಿರುವ ತಂಡದ ಇತರ ಆಟಗಾರರನ್ನು ಸಂತೈಸಿಕೊಂಡು ತಂಡವನ್ನು ಮುನ್ನಡೆಸುವ ದೊಡ್ಡ ಜವಬ್ದಾರಿಯು ಸೂರ್ಯನ ಮೇಲಿದೆ. ಇದೆಲ್ಲದರ ಹೊರತಾಗಿಯೂ ನಾಯಕನಾಗಿ ಸೂರ್ಯನಿಗೆ ಲಂಕಾ ಪ್ರವಾಸದಲ್ಲಿ ಈ ಮೂರು ಕಠಿಣ ಸವಾಲುಗಳು ಎದುರಾಗಿವೆ.

2 / 8
ನಾಯಕನಾಗಿ ಸೂರ್ಯನಿಗೆ ಮೊದಲ ಸವಾಲೆಂದರೆ, 33 ವರ್ಷದ ಸೂರ್ಯಕುಮಾರ್​ಗೆ ದೊಡ್ಡ ಟೂರ್ನಿಗಳಲ್ಲಿ ತಂಡವನ್ನು ಮುನ್ನಡೆಸಿದ ಅನುಭವವಿಲ್ಲ. ಸೂರ್ಯ ಇದುವರೆಗೆ ಕೇವಲ 7 ಟಿ20 ಪಂದ್ಯಗಳಲ್ಲಿ ಮಾತ್ರ ನಾಯಕತ್ವ ನಿರ್ವಹಿಸಿದ್ದಾರೆ. ಇದರಲ್ಲಿ ಐದು ಪಂದ್ಯಗಳನ್ನು ಗೆಲ್ಲಿಸಿಕೊಡುವಲ್ಲಿ ಯಶಸ್ವಿಯಾಗಿದ್ದಾರೆ.

3 / 8
ಸೂರ್ಯ ನಾಯಕತ್ವದಲ್ಲಿ ತಂಡವು ತವರಿನ ಸರಣಿಯಲ್ಲಿ ಆಸ್ಟ್ರೇಲಿಯಾವನ್ನು 4-1 ಅಂತರದಿಂದ ಸೋಲಿಸಿತ್ತು. ಇದರ ನಂತರ, ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿ, ಟಿ20 ಸರಣಿಯನ್ನು 1-1 ರಿಂದ ಸಮಬಲಗೊಳಿಸಿತ್ತು. ಸದ್ಯ ನಾಯಕನಾಗಿ ಸೂರ್ಯ ಯಶಸ್ವಿಯಾಗಿದ್ದರೂ, ಇನ್ನು ಆರು ತಿಂಗಳಲ್ಲಿ ಅವರ ಮೇಲೆ ಇಟ್ಟಿರುವ ನಂಬಿಕೆಯನ್ನು ಎಷ್ಟರ ಮಟ್ಟಿಗೆ ಉಳಿಸಿಕೊಳ್ಳಲು ಸಾಧ್ಯವಾಗಿದೆ ಎಂಬುದು ಗೊತ್ತಾಗಲಿದೆ.

4 / 8
ಸೂರ್ಯನ ಎರಡನೇ ಸವಾಲೆಂದರೆ, ರೋಹಿತ್ ಶರ್ಮಾ ಸ್ಥಾನವನ್ನು ತುಂಬುವುದು. ರೋಹಿತ್ ಶರ್ಮಾ ನಾಯಕನಾಗಿ ಚಾಣಾಕ್ಷತನ ತೋರುವುದರ ಜೊತೆಗೆ ಡ್ರೆಸ್ಸಿಂಗ್ ರೂಮ್‌ನಲ್ಲಿ ವಾತಾವರಣವನ್ನು ಆಹ್ಲಾದಕರವಾಗಿಡುವುದರಲ್ಲಿ ನಿಸ್ಸೀಮರಾಗಿದ್ದರು. ಇದೀಗ ತಂಡದಲ್ಲಿ ನಾಯಕತ್ವಕ್ಕಾಗಿ ಹಪಹಪ್ಪಿಸುತ್ತಿರುವ ಆಟಗಾರರ ನಡುವೆ ಸೂರ್ಯ ಯಾವ ರೀತಿಯಾಗಿ ತಂಡವನ್ನು ಮುನ್ನಡೆಸುತ್ತಾರೆ ಎಂಬುದು ದೊಡ್ಡ ಪ್ರಶ್ನೆಯಾಗಿದೆ.

5 / 8
ಮೂರನೇ ಸವಾಲೆಂದರೆ... ಸೂರ್ಯ ಮಧ್ಯಮ ಕ್ರಮಾಂಕದ ಬ್ಯಾಟರ್ ಆಗಿ ತಂಡವನ್ನು ಗೆಲುವಿನತ್ತ ಕೊಂಡೊಯ್ಯುವ ಮಹತ್ವದ ಕೆಲಸದ ಜೊತೆಗೆ ಇದೀಗ ನಾಯಕನಾಗಿಯೂ ತಂಡವನ್ನು ಮುನ್ನಡೆಸಬೇಕಿದೆ. ಎಲ್ಲಾ ಆಟಗಾರರ ಪ್ರದರ್ಶನವನ್ನು ಉತ್ತಮಗೊಳಿಸುವುದರ ಜೊತೆಗೆ ತನ್ನ ಆಟವನ್ನು ಸುಧಾರಿಸುವುದು ಸೂರ್ಯಕುಮಾರ್ ಮೇಲಿರುವ ದೊಡ್ಡ ಜವಬ್ದಾರಿಯಾಗಿದೆ.

6 / 8
ನಾಯಕನಾಗಿ ಇದುವರೆಗೆ ಆಡಿರುವ 7 ಪಂದ್ಯಗಳಲ್ಲಿ ಸೂರ್ಯ ಒಬ್ಬ ಬ್ಯಾಟರ್ ಆಗಿ ಉತ್ತಮ ಪ್ರದರ್ಶನವನ್ನು ನೀಡಿದ್ದಾರೆ. ಈ 7 ಪಂದ್ಯಗಳಲ್ಲಿ ಸೂರ್ಯ, 42.85 ಸರಾಸರಿಯಲ್ಲಿ ಒಂದು ಶತಕ ಮತ್ತು ಎರಡು ಅರ್ಧ ಶತಕಗಳೊಂದಿಗೆ ಒಟ್ಟು 300 ರನ್ ಗಳಿಸಿದ್ದಾರೆ. ಇದೀಗ ಪೂರ್ಣ ಪ್ರಮಾಣದ ನಾಯಕತ್ವದ ಜವಾಬ್ದಾರಿಯನ್ನು ವಹಿಸಿಕೊಂಡ ನಂತರ ಯಾದವ್ ತಮ್ಮ ಫಾರ್ಮ್​ ಅನ್ನು ಯಾವ ರೀತಿ ಮುಂದುವರೆಸುತ್ತಾರೆ ಎಂಬುದನ್ನು ಕಾದುನೋಡಬೇಕಿದೆ.

7 / 8
ಈ ಎಲ್ಲಾ ಸವಾಲುಗಳ ನಡುವೆ ಈಗಾಗಲೇ ಕೇಳಿಬಂದಿರುವ ಸುದ್ದಿ ಪ್ರಕಾರ, ಸೂರ್ಯ ತಮ್ಮ ನಾಯಕತ್ವದಲ್ಲಿ ತಂಡವನ್ನು ಗೆಲುವಿನತ್ತ ಮುನ್ನಡೆಸಲು ವಿಫಲರಾದರೆ, ಅವರನ್ನು ಯಾವಾಗ ಬೇಕಾದರೂ ನಾಯಕತ್ವದಿಂದ ಕೆಳಗಿಳಿಸಬಹುದು ಎಂದು ಬಿಸಿಸಿಐ ಹೇಳಿದೆ. ಹೀಗಾಗಿ ತಂಡವನ್ನು ಗೆಲುವಿನತ್ತ ಮುನ್ನಡೆಸುವಲ್ಲಿ ಸೂರ್ಯ ಯಶಸ್ವಿಯಾದರೆ, 2026ರಲ್ಲಿ ನಡೆಯಲಿರುವ ಮುಂದಿನ ಟಿ20 ವಿಶ್ವಕಪ್‌ವರೆಗೆ ಅವರೇ ನಾಯಕನಾಗಿ ಉಳಿಯುತ್ತಾರೆ. ಇಲ್ಲದಿದ್ದರೆ, ಸೂರ್ಯ ತನ್ನ ನಾಯಕತ್ವವನ್ನು ಬೇರೆಯವರಿಗೆ ಬಿಟ್ಟುಕೊಡಬೇಕಾಗುತ್ತದೆ.

8 / 8
Follow us