IND vs SL: ಭಾರತ vs ಶ್ರೀಲಂಕಾ 2ನೇ ಟಿ20 ಯಾವಾಗ? ಎಷ್ಟು ಗಂಟೆಗೆ ಶುರು? ಇಲ್ಲಿದೆ ಮಾಹಿತಿ

|

Updated on: Jul 28, 2024 | 12:02 PM

Sri Lanka vs India: ಭಾರತ ಮತ್ತು ಶ್ರೀಲಂಕಾ ನಡುವೆ ಇಂದು 2 ಪಂದ್ಯಗಳು ನಡೆಯಲಿದೆ. ಮಧ್ಯಾಹ್ನ ನಡೆಯಲಿರುವ ಮಹಿಳಾ ಏಷ್ಯಾಕಪ್ ಫೈನಲ್​ನಲ್ಲಿ ಭಾರತ ಮತ್ತು ಶ್ರೀಲಂಕಾ ಮಹಿಳೆಯರ ತಂಡಗಳು ಮುಖಾಮುಖಿಯಾಗಲಿದೆ. ಇನ್ನು ರಾತ್ರಿ ಜರುಗಲಿರುವ 2ನೇ ಟಿ20 ಪಂದ್ಯದಲ್ಲಿ ಭಾರತ ಮತ್ತು ಶ್ರೀಲಂಕಾ ಪುರುಷರ ತಂಡಗಳು ಕಣಕ್ಕಿಳಿಯಲಿವೆ.

IND vs SL: ಭಾರತ vs ಶ್ರೀಲಂಕಾ 2ನೇ ಟಿ20 ಯಾವಾಗ? ಎಷ್ಟು ಗಂಟೆಗೆ ಶುರು? ಇಲ್ಲಿದೆ ಮಾಹಿತಿ
India vs Sri Lanka
Follow us on

ಭಾರತ ಮತ್ತು ಶ್ರೀಲಂಕಾ ನಡುವಣ ಮೂರು ಪಂದ್ಯಗಳ ಟಿ20 ಸರಣಿ ಶುರುವಾಗಿದೆ. ಪಲ್ಲೆಕೆಲೆಯ ಇಂಟರ್​ನ್ಯಾಷನಲ್ ಸ್ಟೇಡಿಯಂನಲ್ಲಿ ನಡೆದ ಮೊದಲ ಟಿ20 ಪಂದ್ಯದಲ್ಲಿ ಟೀಮ್ ಇಂಡಿಯಾ ಭರ್ಜರಿ ಜಯ ಸಾಧಿಸಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಭಾರತ ತಂಡವು 20 ಓವರ್​ಗಳಲ್ಲಿ 7 ವಿಕೆಟ್ ಕಳೆದುಕೊಂಡು 213 ರನ್ ಪೇರಿಸಿತ್ತು.

214 ರನ್​ಗಳ ಕಠಿಣ ಗುರಿಯನ್ನು ಬೆನ್ನತ್ತಿದ ಶ್ರೀಲಂಕಾ ತಂಡವು 14 ಓವರ್​ಗಳಲ್ಲಿ 1 ವಿಕೆಟ್ ಕಳೆದುಕೊಂಡು 140 ರನ್ ಕಲೆಹಾಕಿತ್ತು. ಆದರೆ 15ನೇ ಓವರ್​ನಿಂದ ಪೆವಿಲಿಯನ್ ಪರೇಡ್ ನಡೆಸಿದ ಲಂಕಾ ಬ್ಯಾಟರ್​ಗಳು ಕೇವಲ 30 ರನ್​ಗಳಿಸುಷ್ಟರಲ್ಲಿ 9 ವಿಕೆಟ್ ಕೈಚೆಲ್ಲಿದರು. ಪರಿಣಾಮ ಟೀಮ್ ಇಂಡಿಯಾ 43 ರನ್​ಗಳ ಜಯ ಸಾಧಿಸಿತು. ಈ ಗೆಲುವಿನೊಂದಿಗೆ ಭಾರತ ತಂಡವು ಮೂರು ಪಂದ್ಯಗಳ ಸರಣಿಯಲ್ಲಿ 1-0 ಅಂತರದಿಂದ ಮುನ್ನಡೆ ಸಾಧಿಸಿದೆ.

2ನೇ ಪಂದ್ಯ ಯಾವಾಗ?

ಭಾರತ ಮತ್ತು ಶ್ರೀಲಂಕಾ ನಡುವಣ 2ನೇ ಟಿ20 ಪಂದ್ಯ ಇಂದು (ಜುಲೈ 28) ನಡೆಯಲಿದೆ. ಪಲ್ಲೆಕೆಲೆ ಸ್ಟೇಡಿಯಂನಲ್ಲೇ ನಡೆಯಲಿರುವ ಈ ಪಂದ್ಯದಲ್ಲಿ ಟೀಮ್ ಇಂಡಿಯಾ ಜಯ ಸಾಧಿಸಿದರೆ ಸರಣಿ ವಶಪಡಿಸಿಕೊಳ್ಳಬಹುದು. ಹೀಗಾಗಿ ಲಂಕಾ ಪಾಲಿಗೆ ಇಂದಿನ ಪಂದ್ಯವು ಮಾಡು ಇಲ್ಲವೇ ಮಡಿ ಪಂದ್ಯವಾಗಿ ಮಾರ್ಪಟ್ಟಿದೆ.

ಎಷ್ಟು ಗಂಟೆಗೆ ಪಂದ್ಯ ಶುರು?

ಈ ಪಂದ್ಯವು ಭಾರತೀಯ ಕಾಲಮಾನ ರಾತ್ರಿ 7 ಗಂಟೆಯಿಂದ ಶುರುವಾಗಲಿದೆ. ಹಾಗೆಯೇ ಟಾಸ್ ಪ್ರಕ್ರಿಯೆ 6.30 ಕ್ಕೆ ನಡೆಯಲಿದೆ.

ಯಾವ ಚಾನೆಲ್​ನಲ್ಲಿ ನೇರ ಪ್ರಸಾರ?

ಭಾರತ ಮತ್ತು ಶ್ರೀಲಂಕಾ ಸರಣಿಯ ಪಂದ್ಯಗಳು ಸೋನಿ ಸ್ಪೋರ್ಟ್ಸ್ ನೆಟ್​ವರ್ಕ್​ನ ಚಾನೆಲ್​ಗಳಲ್ಲಿ ನೇರ ಪ್ರಸಾರವಾಗಲಿದೆ. ಹಾಗೆಯೇ ಸೋನಿ ಲೈವ್ ಆ್ಯಪ್​ನಲ್ಲೂ ಈ ಪಂದ್ಯಗಳ ಲೈವ್ ಸ್ಟ್ರೀಮಿಂಗ್ ವೀಕ್ಷಿಸಬಹುದು.

ಶ್ರೀಲಂಕಾ ತಂಡ: ಪಾತುಮ್ ನಿಸ್ಸಾಂಕ, ಕುಸಾಲ್ ಮೆಂಡಿಸ್ (ವಿಕೆಟ್ ಕೀಪರ್), ಕುಸಾಲ್ ಪೆರೆರಾ, ಕಮಿಂದು ಮೆಂಡಿಸ್, ಚರಿತ್ ಅಸಲಂಕಾ (ನಾಯಕ), ದಸುನ್ ಶಾನಕ, ವನಿಂದು ಹಸರಂಗ, ಮಹೀಶ್ ತೀಕ್ಷಣ, ಮಥೀಶ ಪತಿರಾಣ, ಅಸಿತ ಫೆರ್ನಾಂಡೊ, ದಿಲ್ಶನ್ ಮಧುಶಂಕ, ಅವಿಷ್ಕಾ ಫೆರ್ನಾಂಡೊ, ಬಿನೂರ ಫರ್ನಾಂಡೊ, ದಿನೇಶ್ ಚಂಡಿಮಲ್, ದುನಿತ್ ವೆಲ್ಲಲಾಗೆ, ಚಮಿಂದು ವಿಕ್ರಮಸಿಂಘೆ.

ಇದನ್ನೂ ಓದಿ: Suryakumar Yadav: ಸೂರ್ಯಕುಮಾರ್ ಯಾದವ್ ಅಬ್ಬರಕ್ಕೆ ಮ್ಯಾಕ್ಸ್​ವೆಲ್ ವಿಶ್ವ ದಾಖಲೆ ಉಡೀಸ್

ಭಾರತ ತಂಡ: ಶುಭ್​ಮನ್ ಗಿಲ್, ಯಶಸ್ವಿ ಜೈಸ್ವಾಲ್, ಸೂರ್ಯಕುಮಾರ್ ಯಾದವ್ (ನಾಯಕ), ರಿಷಭ್ ಪಂತ್ (ವಿಕೆಟ್ ಕೀಪರ್), ರಿಯಾನ್ ಪರಾಗ್, ಹಾರ್ದಿಕ್ ಪಾಂಡ್ಯ, ರಿಂಕು ಸಿಂಗ್, ಅಕ್ಷರ್ ಪಟೇಲ್, ರವಿ ಬಿಷ್ಣೋಯ್, ಅರ್ಷದೀಪ್ ಸಿಂಗ್, ಮೊಹಮ್ಮದ್ ಸಿರಾಜ್, ವಾಷಿಂಗ್ಟನ್ ಸುಂದರ್, ಸಂಜು ಸ್ಯಾಮ್ಸನ್, ಖಲೀಲ್ ಅಹ್ಮದ್ , ಶಿವಂ ದುಬೆ.