India vs West Indies first ODI: ಭಾರತದ ಅಜೇಯ ಓಟ ಮುಂದುವರೆಯುತ್ತಾ? ಪಂದ್ಯ ಆರಂಭ ಎಷ್ಟು ಗಂಟೆಗೆ? ಇಲ್ಲಿದೆ ವಿವರ

|

Updated on: Jul 27, 2023 | 10:57 AM

India vs West Indies first ODI: ಭಾರತ ಮತ್ತು ವೆಸ್ಟ್ ಇಂಡೀಸ್ ನಡುವಿನ ಮೂರು ಪಂದ್ಯಗಳ ಏಕದಿನ ಸರಣಿಗೆ ಇಂದಿನಿಂದ ಚಾಲನೆ ಸಿಗಲಿದೆ. ವಿಶ್ವಕಪ್ ದೃಷ್ಟಿಯಿಂದ ಭಾರತ ತಂಡಕ್ಕೆ ಏಕದಿನ ಸರಣಿ ಅತ್ಯಂತ ಮಹತ್ವದ್ದಾಗಿದೆ.

India vs West Indies first ODI: ಭಾರತದ ಅಜೇಯ ಓಟ ಮುಂದುವರೆಯುತ್ತಾ? ಪಂದ್ಯ ಆರಂಭ ಎಷ್ಟು ಗಂಟೆಗೆ? ಇಲ್ಲಿದೆ ವಿವರ
ಭಾರತ- ವೆಸ್ಟ್ ಇಂಡೀಸ್ ಮೊದಲ ಏಕದಿನ ಪಂದ್ಯ
Image Credit source: insidesport
Follow us on

ಭಾರತ ಮತ್ತು ವೆಸ್ಟ್ ಇಂಡೀಸ್ (India vs West Indies) ನಡುವಿನ ಮೂರು ಪಂದ್ಯಗಳ ಏಕದಿನ ಸರಣಿಗೆ ಇಂದಿನಿಂದ ಚಾಲನೆ ಸಿಗಲಿದೆ. ವಿಶ್ವಕಪ್ (ODI World Cup) ದೃಷ್ಟಿಯಿಂದ ಭಾರತ ತಂಡಕ್ಕೆ ಏಕದಿನ ಸರಣಿ ಅತ್ಯಂತ ಮಹತ್ವದ್ದಾಗಿದೆ. ಮುಂದಿನ ಏಕದಿನ ವಿಶ್ವಕಪ್ ಭಾರತದಲ್ಲಿ ನಡೆಯುತ್ತಿರುವುದರಿಂದ ಬಲಿಷ್ಠ ತಂಡವನ್ನು ಕಟ್ಟಿಕೊಂಡು ಕಣಕ್ಕಿಳಿಯುವುದು ರೋಹಿತ್​ (Rohit Sharma) ಪಡೆಯ ಮುಂದಿನ ಗುರಿಯಾಗಿದೆ. ಹೀಗಾಗಿ ಕೆರಿಬಿಯನ್ ನಾಡಲ್ಲಿ ಏಕದಿನ ಸರಣಿಯನ್ನಾಡುತ್ತಿರುವ ಭಾರತಕ್ಕೆ ತಂಡದ ನ್ಯೂನತೆಗಳನ್ನು ನೀಗಿಸಲು ಇದು ಸುವರ್ಣಾವಕಾಶವಾಗಿದೆ.

ಇನ್ನು ಮೊದಲ ಏಕದಿನ ಪಂದ್ಯ ಬಾರ್ಬಡೋಸ್‌ನಲ್ಲಿ ನಡೆಯಲಿದ್ದು, ಎರಡನೇ ಪಂದ್ಯವೂ ಇದೇ ಮೈದಾನದಲ್ಲಿ ನಡೆಯಲಿದೆ. ಅಂತಿಮ ಪಂದ್ಯ ಟ್ರಿನಿಡಾಡ್‌ನಲ್ಲಿ ನಡೆಯಲಿದೆ. ಮೂರು ಪಂದ್ಯಗಳ ಏಕದಿನ ಸರಣಿಯ ಅಂತಿಮ ಪಂದ್ಯ ಆಗಸ್ಟ್ 1ರಂದು ನಡೆಯಲಿದೆ. ನಂತರ ಟಿ20 ಸರಣಿಯು ಆಗಸ್ಟ್ 3 ರಿಂದ ತಕ್ಷಣವೇ ಆರಂಭವಾಗಲಿದ್ದು, 5 ಪಂದ್ಯಗಳ ಸರಣಿ ಆಗಸ್ಟ್ 13ರವರೆಗೆ ನಡೆಯಲಿದೆ. ಇದರ ಮೊದಲ ಪಂದ್ಯ ಟ್ರಿನಿಡಾಡ್‌ನಲ್ಲಿ ನಡೆಯಲಿದೆ.

17 ವರ್ಷಗಳಿಂದ ಭಾರತದ ವಿರುದ್ಧ ಗೆದ್ದಿಲ್ಲ

ನಾವು ಏಕದಿನ ಸರಣಿಯ ಬಗ್ಗೆ ಮಾತನಾಡುವುದಾದರೆ, ವೆಸ್ಟ್ ಇಂಡೀಸ್ ವಿರುದ್ಧದ ಭಾರತದ ದಾಖಲೆ ಅತ್ಯುತ್ತಮವಾಗಿದೆ. ವೆಸ್ಟ್ ಇಂಡೀಸ್ ಕಳೆದ 17 ವರ್ಷಗಳಲ್ಲಿ ಭಾರತದ ವಿರುದ್ಧ ದ್ವಿಪಕ್ಷೀಯ ಸರಣಿಯನ್ನು ಗೆದ್ದಿಲ್ಲ. 1983 ರಿಂದ 1989 ರವರೆಗೆ ಭಾರತದ ವಿರುದ್ಧ ಸತತ ಐದು ಸರಣಿಗಳನ್ನು ಗೆಲ್ಲುವಲ್ಲಿ ವಿಂಡೀಸ್ ಯಶಸ್ವಿಯಾಗಿತ್ತು. ಅದಾದ ಬಳಿಕ1994 ರಲ್ಲಿ, ಮೊದಲ ಬಾರಿಗೆ ವೆಸ್ಟ್ ಇಂಡೀಸ್ ವಿರುದ್ಧ ಭಾರತ ಏಕದಿನ ಸರಣಿಯನ್ನು ಗೆದ್ದುಕೊಂಡಿತು. ಬಳಿಕ 2006 ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಸೋತಿದ್ದ ಭಾರತ, ಇದಾದ ನಂತರ ವಿಂಡೀಸ್ ವಿರುದ್ಧ ಸತತ 12 ಏಕದಿನ ಸರಣಿಗಳಲ್ಲಿ ಅಜೇಯ ಸಾಧನೆ ಮಾಡಿದೆ.

IND vs WI: ಕರ್ಟ್ನಿ ವಾಲ್ಷ್, ಕಪಿಲ್ ದೇವ್ ದಾಖಲೆ ಮುರಿಯುವ ಹೊಸ್ತಿಲಿನಲ್ಲಿ ರವೀಂದ್ರ ಜಡೇಜಾ..!

ಮೊದಲ ಏಕದಿನ ಪಂದ್ಯದ ಪೂರ್ಣ ವಿವರ ಇಲ್ಲಿದೆ.

ಭಾರತ ಮತ್ತು ವೆಸ್ಟ್ ಇಂಡೀಸ್ ನಡುವಿನ ಮೊದಲ ಏಕದಿನ ಪಂದ್ಯ ಯಾವಾಗ ನಡೆಯಲಿದೆ?

ಭಾರತ ಮತ್ತು ವೆಸ್ಟ್ ಇಂಡೀಸ್ ನಡುವಿನ ಮೊದಲ ಏಕದಿನ ಪಂದ್ಯವು ಜುಲೈ 27 ರಂದು (ಇಂದು) ಬಾರ್ಬಡೋಸ್‌ನ ಬ್ರಿಡ್ಜ್‌ಟೌನ್‌ನ ಕೆನ್ಸಿಂಗ್ಟನ್ ಓವಲ್‌ನಲ್ಲಿ ನಡೆಯಲಿದೆ.

ಭಾರತ ಮತ್ತು ವೆಸ್ಟ್ ಇಂಡೀಸ್ ನಡುವಿನ ಮೊದಲ ಏಕದಿನ ಪಂದ್ಯ ಎಷ್ಟು ಗಂಟೆಗೆ ಆರಂಭವಾಗಲಿದೆ?

ಭಾರತ ಮತ್ತು ವೆಸ್ಟ್ ಇಂಡೀಸ್ ನಡುವಿನ ಮೊದಲ ಏಕದಿನ ಪಂದ್ಯವು ಸ್ಥಳೀಯ ಕಾಲಮಾನ ಬೆಳಗ್ಗೆ 9:30 ಕ್ಕೆ ಆರಂಭವಾದರೆ, ಭಾರತೀಯ ಕಾಲಮಾನ ಸಂಜೆ 7 ಗಂಟೆಗೆ ಆರಂಭವಾಗಲಿದೆ.

ಮೊದಲ ಏಕದಿನ ಪಂದ್ಯವನ್ನು ಯಾವ ಚಾನೆಲ್ ನೇರ ಪ್ರಸಾರ ಮಾಡಲಿದೆ?

ಭಾರತ ಮತ್ತು ವೆಸ್ಟ್ ಇಂಡೀಸ್ ನಡುವಿನ ಮೊದಲ ಏಕದಿನ ಪಂದ್ಯವನ್ನು ದೂರದರ್ಶನ ಸ್ಪೋರ್ಟ್ಸ್ ಚಾನೆಲ್‌ನಲ್ಲಿ ನೇರಪ್ರಸಾರ ವೀಕ್ಷಿಸಬಹುದು.

ಮೊದಲ ಏಕದಿನ ಪಂದ್ಯದ ಲೈವ್ ಸ್ಟ್ರೀಮ್ ಅನ್ನು ಹೇಗೆ ವೀಕ್ಷಿಸುವುದು?

ಭಾರತ ಮತ್ತು ವೆಸ್ಟ್ ಇಂಡೀಸ್ ನಡುವಿನ ಮೊದಲ ಏಕದಿನ ಪಂದ್ಯದ ಲೈವ್ ಸ್ಟ್ರೀಮ್ ಅನ್ನು ಜಿಯೋ ಸಿನಿಮಾ ಅಪ್ಲಿಕೇಶನ್ ಮತ್ತು ವೆಬ್‌ಸೈಟ್‌ನಲ್ಲಿ ವೀಕ್ಷಿಸಬಹುದಾಗಿದೆ.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 10:53 am, Thu, 27 July 23