IND vs WI: ರೋಹಿತ್- ಕೊಹ್ಲಿಗೆ ಕೋಕ್; ಹೊಸ ಜೆರ್ಸಿಯಲ್ಲಿ ಮಿಂಚಿದ ಯುವ ಟೀಂ ಇಂಡಿಯಾ; ವಿಡಿಯೋ ನೋಡಿ

IND vs WI: ಟೀಂ ಇಂಡಿಯಾದ ಯುವ ಆಟಗಾರರು ಹೊಸ ಡ್ರೀಮ್ ಇಲೆವೆನ್ ಏಕದಿನ ಜೆರ್ಸಿಯನ್ನು ತೊಟ್ಟು ಕ್ಯಾಮೆರಗಳಿಗೆ ಪೋಸ್ ನೀಡಿದ್ದಾರೆ.

IND vs WI: ರೋಹಿತ್- ಕೊಹ್ಲಿಗೆ ಕೋಕ್; ಹೊಸ ಜೆರ್ಸಿಯಲ್ಲಿ ಮಿಂಚಿದ ಯುವ ಟೀಂ ಇಂಡಿಯಾ; ವಿಡಿಯೋ ನೋಡಿ
ಹೊಸ ಜೆರ್ಸಿಯಲ್ಲಿ ಟೀಂ ಇಂಡಿಯಾ
Follow us
ಪೃಥ್ವಿಶಂಕರ
|

Updated on: Jul 27, 2023 | 1:00 PM

ಭಾರತ ಹಾಗೂ ವೆಸ್ಟ್ ಇಂಡೀಸ್ (India vs West Indies) ನಡುವೆ ಇಂದಿನಿಂದ ಅಂದರೆ ಜುಲೈ 27 ರಿಂದ ಮೂರು ಪಂದ್ಯಗಳ ಏಕದಿನ ಸರಣಿ ಆರಂಭವಾಗಲಿದೆ. ಸರಣಿಯ ಮೊದಲ ಪಂದ್ಯ ಬಾರ್ಬಡೋಸ್‌ನ ಕೆನ್ಸಿಂಗ್ಟನ್ ಓವಲ್‌ ಮೈದಾನದಲ್ಲಿ ನಡೆಯಲ್ಲಿದೆ. ವೇಳಾಪಟ್ಟಿಯ ಪ್ರಕಾರ ಪಂದ್ಯ ಭಾರತೀಯ ಕಾಲಮಾನ ಸಂಜೆ 7 ಗಂಟೆಗೆ ಆರಂಭವಾಗುತ್ತಿದೆ. ಆದರೆ ಅದಕ್ಕೂ ಮುನ್ನ ತನ್ನ ತಂಡದ ಹೊಸ ಏಕದಿನ ಜೆರ್ಸಿಯನ್ನು ಬಿಸಿಸಿಐ (BCCI) ಅನಾವರಣಗೊಳಿಸಿದೆ. ಯುವ ಆಟಗಾರರಾದ ಹಾರ್ದಿಕ್ ಪಾಂಡ್ಯ, ಶುಭ್​ಮನ್ ಗಿಲ್, ಇಶಾನ್ ಕಿಶನ್ ಮತ್ತು ಸಂಜು ಸ್ಯಾಮ್ಸನ್, ಉಮ್ರಾನ್ ಮಲಿಕ್, ಸೂರ್ಯಕುಮಾರ್ ಯಾದವ್ ಸೇರಿದಂತೆ ಮುಂತಾದ ಆಟಗಾರರು ಹೊಸ ಡ್ರೀಮ್ ಇಲೆವೆನ್ ಏಕದಿನ ಜೆರ್ಸಿಯನ್ನು (new Dream11 ODI jerseys) ತೊಟ್ಟು ಕ್ಯಾಮೆರಗಳಿಗೆ ಪೋಸ್ ನೀಡಿದ್ದಾರೆ.

ಕೊಹ್ಲಿ ಹಾಗೂ ರೋಹಿತ್ ಕಾಣಿಸಿಕೊಂಡಿಲ್ಲ

ಬಿಸಿಸಿಐ ತನ್ನ ಅಧಿಕೃತ ಟ್ವಿಟರ್ ಖಾತೆಯಲ್ಲಿ 1 ನಿಮಿಷ 18 ಸೆಕೆಂಡ್‌ಗಳ ವೀಡಿಯೊವನ್ನು ಹಂಚಿಕೊಂಡಿದ್ದು, ಇದರಲ್ಲಿ ಆಟಗಾರರು ಹೊಸ ಏಕದಿನ ಜೆರ್ಸಿ ತೊಟ್ಟು ಮಿರಮಿರ ಮಿಂಚಿದ್ದಾರೆ. ವಾಸ್ತವವಾಗಿ ಯಾವುದೇ ಜೆರ್ಸಿಯಾಗಲಿ ಅಥವಾ ಕಿಟ್ ಆಗಲಿ, ಅದರ ಮೊದಲ ಪ್ರಚಾರದ ವೀಡಿಯೋಗಳಲ್ಲಿ ಸಾಮಾನ್ಯವಾಗಿ ಕೊಹ್ಲಿ ಮತ್ತು ರೋಹಿತ್ ಹೆಚ್ಚು ಗಮನ ಸೆಳೆಯುತ್ತಾರೆ. ಆದರೆ ಬಿಸಿಸಿಐ ಈಗ ರಿಲೀಸ್ ಮಾಡಿರುವ ವಿಡಿಯೋದಲ್ಲಿ ಕೊಹ್ಲಿ ಹಾಗೂ ರೋಹಿತ್ ಕಾಣಿಸಿಕೊಂಡಿಲ್ಲ.

IND vs WI: ಸಿರಾಜ್ ಬದಲು ಯಾರಿಗೆ ಚಾನ್ಸ್? ಮೊದಲ ಪಂದ್ಯಕ್ಕೆ ಭಾರತ ಸಂಭಾವ್ಯ ತಂಡ ಇಲ್ಲಿದೆ

ಈ ಬಾರಿ ಅನುಭವದ ಜೋಡಿಗಿಂತ ಯುವಕರಿಗೆ ಆದ್ಯತೆ ನೀಡಲಾಗಿದ್ದು, ಗಿಲ್, ಸ್ಯಾಮ್ಸನ್ ಮತ್ತು ಕಿಶನ್ ಅವರಲ್ಲದೆ, ಸೂರ್ಯಕುಮಾರ್ ಯಾದವ್, ರುತುರಾಜ್ ಗಾಯಕ್ವಾಡ್, ಮುಖೇಶ್ ಕುಮಾರ್, ಶಾರ್ದೂಲ್ ಠಾಕೂರ್, ಚಹಾಲ್ ಮತ್ತು ಉನದ್ಕಟ್ ಕೂಡ ಕಾಣಿಸಿಕೊಂಡಿದ್ದಾರೆ.

5 ವರ್ಷಗಳವರೆಗೆ ಒಪ್ಪಂದ

ಬಿಸಿಸಿಐ ಕಿಟ್ ಪ್ರಾಯೋಜಕತ್ವವನ್ನು ಮುಂದಿನ 5 ವರ್ಷಗಳವರೆಗೆ ಅಡಿಡಾಸ್ ಕಂಪನಿ ವಹಿಸಿಕೊಂಡಿದೆ. ಈ ಒಪ್ಪಂದವು ಮಾರ್ಚ್ 2028 ರವರೆಗೆ ಇರಲ್ಲಿದ್ದು, ಈ ಅವಧಿಯಲ್ಲಿ ಟೀಂ ಇಂಡಿಯಾ ಎಲ್ಲಾ ಸ್ವರೂಪದ ಕ್ರಿಕೆಟ್​ನಲ್ಲಿ ಅಡಿಡಾಸ್ ಕಂಪನಿಯ ಜೆರ್ಸಿ ತೊಟ್ಟು ಕಣಕ್ಕಿಳಿಯಲಿದೆ. ಪುರುಷರ, ಮಹಿಳಾ ಮತ್ತು ಯುವ ತಂಡಗಳು ಸೇರಿದಂತೆ ಬಿಸಿಸಿಐನ ಎಲ್ಲಾ ಪಂದ್ಯಗಳು, ತರಬೇತಿ ಮತ್ತು ಪ್ರಯಾಣದ ಉಡುಗೆಗಳನ್ನು ಸಹ ಅಡಿಡಾಸ್ ಪೂರೈಸಲಿದೆ. ಈ ಹಿಂದೆ ನಡೆದ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ನಲ್ಲಿ ಟೀಂ ಇಂಡಿಯಾ ಅಡಿಡಾಸ್ ಪಾಯೋಜಕತ್ವದ ಜೆರ್ಸಿ ತೊಟ್ಟು ಕಣಕ್ಕಿಳಿದಿತ್ತು.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

‘ಈಗಿನ್ನೂ ಆಡೋಕೆ ಬರುತ್ತಿದೆ, ಅಡ್ಡಗಾಲು ಹಾಕಿದ್ರು’: ಚೈತ್ರಾ ಹಳೇ ರಾಗ
‘ಈಗಿನ್ನೂ ಆಡೋಕೆ ಬರುತ್ತಿದೆ, ಅಡ್ಡಗಾಲು ಹಾಕಿದ್ರು’: ಚೈತ್ರಾ ಹಳೇ ರಾಗ
ಡಿನ್ನರ್​ ಸಭೆ ಗದ್ದಲದ ಮಧ್ಯ ಡಿಕೆಶಿ, ಸತೀಶ್, ಪರಮೇಶ್ವರ್ ಸುದ್ದಿಗೋಷ್ಠಿ
ಡಿನ್ನರ್​ ಸಭೆ ಗದ್ದಲದ ಮಧ್ಯ ಡಿಕೆಶಿ, ಸತೀಶ್, ಪರಮೇಶ್ವರ್ ಸುದ್ದಿಗೋಷ್ಠಿ
ಸಿದ್ದರಾಮಯ್ಯ ಅವರನ್ನು ‘ಹೀರೋ’ ಎಂದು ಕರೆಯುತ್ತಿದ್ದರು ಈ ಹಿರಿಯ ನಟಿ
ಸಿದ್ದರಾಮಯ್ಯ ಅವರನ್ನು ‘ಹೀರೋ’ ಎಂದು ಕರೆಯುತ್ತಿದ್ದರು ಈ ಹಿರಿಯ ನಟಿ
Video: ಕೇರಳ ಉತ್ಸವದಲ್ಲಿ ಕೆರಳಿದ ಆನೆ, 20ಕ್ಕೂ ಅಧಿಕ ಮಂದಿಗೆ ಗಾಯ
Video: ಕೇರಳ ಉತ್ಸವದಲ್ಲಿ ಕೆರಳಿದ ಆನೆ, 20ಕ್ಕೂ ಅಧಿಕ ಮಂದಿಗೆ ಗಾಯ
ನಗರದಲ್ಲಿ ನಾಲ್ಕು ಕಡೆ ನಿರ್ಮಿಸಲಾಗಿದೆ ಹೊಸ ಪೊಲೀಸ್ ಠಾಣೆಗಳು!
ನಗರದಲ್ಲಿ ನಾಲ್ಕು ಕಡೆ ನಿರ್ಮಿಸಲಾಗಿದೆ ಹೊಸ ಪೊಲೀಸ್ ಠಾಣೆಗಳು!
ನಮ್ಮ ಸಭೆ ರದ್ದಾಗಿಲ್ಲ ಮುಂದೂಡಲ್ಪಟ್ಟಿದೆ ಅಷ್ಟೇ: ಪರಮೇಶ್ವರ್, ಗೃಹ ಸಚಿವ
ನಮ್ಮ ಸಭೆ ರದ್ದಾಗಿಲ್ಲ ಮುಂದೂಡಲ್ಪಟ್ಟಿದೆ ಅಷ್ಟೇ: ಪರಮೇಶ್ವರ್, ಗೃಹ ಸಚಿವ
ಜೆಈ ರವೀಂದ್ರ ಆದಾಯಕ್ಕಿಂತ ಹೆಚ್ಚು ಆಸ್ತಿ ಹೊಂದಿರುವ ಅರೋಪ ಹಿನ್ನೆಲೆ ದಾಳಿ
ಜೆಈ ರವೀಂದ್ರ ಆದಾಯಕ್ಕಿಂತ ಹೆಚ್ಚು ಆಸ್ತಿ ಹೊಂದಿರುವ ಅರೋಪ ಹಿನ್ನೆಲೆ ದಾಳಿ
Video: ಮಂಜಿನ ಹೊದಿಕೆ ಹೊದ್ದು ಮಲಗಿದ ತಾಜ್​ಮಹಲ್
Video: ಮಂಜಿನ ಹೊದಿಕೆ ಹೊದ್ದು ಮಲಗಿದ ತಾಜ್​ಮಹಲ್
156 ದಿನ ಗರಿಷ್ಠ ಮಟ್ಟ ಕಾಯ್ದುಕೊಂಡ ಕೆಆರ್​​ಎಸ್, ಮೊದಲ ಬಾರಿಗೆ ದಾಖಲೆ
156 ದಿನ ಗರಿಷ್ಠ ಮಟ್ಟ ಕಾಯ್ದುಕೊಂಡ ಕೆಆರ್​​ಎಸ್, ಮೊದಲ ಬಾರಿಗೆ ದಾಖಲೆ
ಆಟವೆಲ್ಲ ರಂಪಾಟವಾದಾಗ; ಹದ್ದುಮೀರಿ ನಡೆದುಕೊಂಡ ಸ್ಪರ್ಧಿಗಳು
ಆಟವೆಲ್ಲ ರಂಪಾಟವಾದಾಗ; ಹದ್ದುಮೀರಿ ನಡೆದುಕೊಂಡ ಸ್ಪರ್ಧಿಗಳು