ರನ್ ನೀಡದೆ ಒಂದೇ ಓವರ್‌ನಲ್ಲಿ 2 ವಿಕೆಟ್ ಉರುಳಿಸಿದ ಅಕ್ಷರ್ ಪಟೇಲ್
ಲಕ್ನೋದಲ್ಲಿ ನಡೆದ ಭಾರತ-ವೆಸ್ಟ್ ಇಂಡೀಸ್ ಮೊದಲ ಟಿ20 ಪಂದ್ಯದಲ್ಲಿ ಟಾಸ್ ಗೆದ್ದ ಭಾರತ ಬೌಲಿಂಗ್ ಆಯ್ದುಕೊಂಡಿತು. ವೆಸ್ಟ್ ಇಂಡೀಸ್ ಉತ್ತಮ ಆರಂಭ ಪಡೆದರೂ, ಅಕ್ಷರ್ ಪಟೇಲ್ ತಮ್ಮ ಎರಡನೇ ಓವರ್‌ನಲ್ಲಿ ಶಿಮ್ರಾನ್ ಹೆಟ್ಮೆಯರ್ ಮತ್ತು ರೋವ್‌ಮನ್ ಪೊವೆಲ್ ಅವರ ಎರಡು ಪ್ರಮುಖ ವಿಕೆಟ್‌ಗಳನ್ನು ಕಬಳಿಸಿದರು.

ಲಕ್ನೋದ ಭಾರತ ರತ್ನ ಶ್ರೀ ಅಟಲ್ ಬಿಹಾರಿ ವಾಜಪೇಯಿ ಏಕಾನಾ ಕ್ರಿಕೆಟ್ ಕ್ರೀಡಾಂಗಣದಲ್ಲಿ ಭಾರತ ಮತ್ತು ವೆಸ್ಟ್ ಇಂಡೀಸ್ ನಡುವೆ ಮೊದಲ ಟಿ20 ಪಂದ್ಯ ನಡೆಯಿತು. ಈ ಪಂದ್ಯದಲ್ಲಿ ಟಾಸ್ ಗೆದ್ದ ಭಾರತ ಮೊದಲು ಬೌಲಿಂಗ್ ಆಯ್ದುಕೊಂಡಿತು. ಹೀಗಾಗಿ ಮೊದಲು ಬ್ಯಾಟಿಂಗ್ ಆರಂಭಿಸಿದ ವೆಸ್ಟ್ ಇಂಡೀಸ್ ಮೊದಲ ಎರಡು ಓವರ್ಗಳಲ್ಲಿ ಉತ್ತಮ ರನ್ ಕಲೆಹಾಕಿತು. ನಾಯಕ ಶಾಯ್ ಹೋಪ್ 2 ನೇ ಓವರ್‌ನಲ್ಲಿ 4 ಬೌಂಡರಿಗಳನ್ನು ಬಾರಿಸುವ ಮೂಲಕ ಸ್ಫೋಟಕ ಆರಂಭ ಒದಗಿಸಿಕೊಡುವ ಕೆಲಸ ಮಾಡಿದರು. ಆದರೆ ಅದಾದ ಬಳಿಕ ದಾಳಿಗಿಳಿದ ಅಕ್ಷರ್ ಪಟೇಲ್ ತಮ್ಮ ಖೋಟಾದ ಎರಡನೇ ಓವರ್‌ನಲ್ಲಿ ಯಾವುದೇ ರನ್ ನೀಡದೆ ಪ್ರಮುಖ 2 ವಿಕೆಟ್‌ಗಳನ್ನು ಉರುಳಿಸಿದರು.
2 ವಿಕೆಟ್ ಪಡೆದ ಅಕ್ಷರ್
ಇಂದಿನ ಪಂದ್ಯದಲ್ಲಿ ವಿಂಡೀಸ್ ಪರ ನಾಯಕ ಶಾಯ್ ಹೋಪ್ ಹಾಗೂ ಚೊಚ್ಚಲ ಅಂತರರಾಷ್ಟ್ರೀಯ ಟಿ20 ಪಂದ್ಯವನ್ನಾಡಿದ ಕಾಮಿಲ್ ಪೂರನ್ ಆರಂಭಿಕರಾಗಿ ಕಣಕ್ಕಿಳಿದರು. ಮೊದಲ ಓವರ್‌ನಲ್ಲಿ ಕೇವಲ 1 ಬೌಂಡರಿ ಬಂದರೆ, ಮಯಾಂಕ್ ಯಾದವ್ ಬೌಲ್ ಮಾಡಿದ ಎರಡನೇ ಓವರ್‌ನಲ್ಲಿ ಹೋಪ್ 4 ಬೌಂಡರಿಗಳನ್ನು ಬಾರಿಸಿದರು. ಹೀಗಾಗಿ ನಾಯಕ ಶ್ರೇಯಸ್ ಬೇಗನೇ ಸ್ಪಿನ್ನರ್ಗಳನ್ನು ದಾಳಿಗಿಳಿಸಬೇಕಾಯಿತು. ಅದರಂತೆ ಬೌಲಿಂಗ್ಗೆ ಬಂದ ಅಕ್ಷರ್ ತಮ್ಮ ಖೋಟಾದ ಮೊದಲ ಓವರ್‌ನಲ್ಲಿ ಹೆಚ್ಚಿಗೆ ರನ್ ಬಿಟ್ಟುಕೊಡಲಿಲ್ಲ. ಆದರೆ ಎರಡನೇ ಓವರ್ ಬೌಲ್ ಮಾಡಲು ಬಂದ ಅಕ್ಷರ್, ಪ್ರಮುಖ 2 ವಿಕೆಟ್‌ಗಳನ್ನು ಉರುಳಿಸಿದರು.
ಕಾಮಿಲ್ ಪೂರನ್ ವಿಕೆಟ್ ಪತನದ ಬಳಿಕ ಬಂದ ಸ್ಫೋಟಕ ದಾಂಡಿಗ ಶಿಮ್ರಾನ್ ಹೆಟ್ಮೆಯರ್ ಅತ್ಯಂತ ನತದೃಷ್ಟಕರ ರೀತಿಯಲ್ಲಿ ರನೌಟ್ಗೆ ಬಲಿಯಾಗಬೇಕಾಯಿತು. ಹೆಟ್ಮೆಯರ್ ವಿಕೆಟ್ ಬಳಿಕ ಬಂದ ರೋವ್‌ಮನ್ ಪೊವೆಲ್ ಕೂಡ ಯಾವುದೇ ರನ್ ಕಲೆಹಾಕದೆ ಅದೇ ಓವರ್‌ನಲ್ಲಿ ಶೂನ್ಯಕ್ಕೆ ವಿಕೆಟ್ ಒಪ್ಪಿಸಿದರು. ಈ ಓವರ್‌ನಲ್ಲಿ ಅಕ್ಷರ್ ಯಾವುದೇ ರನ್ ಬಿಟ್ಟುಕೊಡದೆ ಪ್ರಮುಖ 2 ವಿಕೆಟ್‌ಗಳನ್ನು ಕಬಳಿಸಿದರು.
ಟಾಸ್ ಗೆದ್ದ ಭಾರತ; ಟಿ20ಗೆ ನಮನ್ ಧೀರ್ ಪಾದಾರ್ಪಣೆ
10 ಓವರ್ಗಳಲ್ಲಿ 83 ರನ್
ಪವರ್ಪ್ಲೇನಲ್ಲೇ ವಿಂಡೀಸ್ ತಂಡ ಪ್ರಮುಖ 3 ವಿಕೆಟ್‌ಗಳನ್ನು ಕಳೆದುಕೊಂಡಿದ್ದರಿಂದ ರನ್ ಗಳಿಸುವ ವೇಗ ಕುಂಟಿತಗೊಂಡಿತು. ಹೀಗಾಗಿ ಮೊದಲ 10 ಓವರ್ಗಳಲ್ಲಿ ತಂಡವು 3 ವಿಕೆಟ್‌ಗಳನ್ನು ಕಳೆದುಕೊಂಡು 83 ರನ್ ಕಲೆಹಾಕಿದೆ. ನಾಯಕ ಶಾಯ್ ಹೋಪ್ ತಂಡದ ಇನ್ನಿಂಗ್ಸ್ ನಿಭಾಯಿಸುತ್ತಿದ್ದಾರೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 8:00 pm, Tue, 6 October 26




