
ಜಿಂಬಾಬ್ವೆ ವಿರುದ್ಧದ ಮೂರನೇ ಏಕದಿನ ಪಂದ್ಯದಲ್ಲಿ ಶುಭ್ಮನ್ ಗಿಲ್ (Shubman Gill) ಭರ್ಜರಿ ಶತಕ ಬಾರಿಸಿದರೆ, ಇಶಾನ್ ಕಿಶನ್ (Ishan Kishan) ಕೂಡ ಅರ್ಧಶತಕ ದಾಖಲಿಸಿದರು. ಈ ಇಬ್ಬರೂ ಬ್ಯಾಟ್ಸ್ಮನ್ಗಳು ಮೂರನೇ ವಿಕೆಟ್ಗೆ 127 ಎಸೆತಗಳಲ್ಲಿ 140 ರನ್ಗಳನ್ನು ಹಂಚಿಕೊಂಡರು. ಆದಾಗ್ಯೂ, ಈ ಪಾಲುದಾರಿಕೆಯು ಅತ್ಯಂತ ದುರದೃಷ್ಟಕರ ರೀತಿಯಲ್ಲಿ ಕೊನೆಗೊಂಡಿತು. ಇಶಾನ್ ಕಿಶನ್ ರನ್ ಔಟ್ ಆದ ಕಾರಣ ಈ ಜೊತೆಯಾಟ ಮುರಿದುಬಿತ್ತು. ಆದರೆ ಇಶಾನ್ ರನ್ ಔಟ್ ಆದ ರೀತಿ ಎಲ್ಲರಲ್ಲೂ ಅಚ್ಚರಿ ಮೂಡಿಸಿತು. ವಾಸ್ತವವಾಗಿ ಜಿಂಬಾಬ್ವೆ ಆಟಗಾರರು ಶುಭ್ಮನ್ ಗಿಲ್ ವಿರುದ್ಧ ಮೇಲ್ಮನವಿ ಸಲ್ಲಿಸುತ್ತಿದ್ದರು. ಆದರೆ ಮೇಲ್ಮನವಿಯಲ್ಲಿ ಕಂಡುಬಂದಿದ್ದು ಮಾತ್ರ ಇಶಾನ್ ಕಿಶನ್ ರನೌಟ್ ಆಗಿರುವುದು.
ಗಿಲ್ ವಿರುದ್ಧ ಮೇಲ್ಮನವಿ, ಇಶಾನ್ ವಿಕೆಟ್ ಪತನ
43ನೇ ಓವರ್ನಲ್ಲಿ, ಬ್ರಾಡ್ ಇವಾನ್ಸ್ ಅವರ ಮೊದಲ ಎಸೆತದಲ್ಲಿ ಶುಭ್ಮನ್ ಗಿಲ್ ವಿರುದ್ಧ ಎಲ್ಬಿಡಬ್ಲ್ಯೂ ಅಪೀಲ್ ಆಗಿತ್ತು. ಈ ವೇಳೆ ಇಶಾನ್ ಕಿಶನ್ ರನ್ ಗಳಿಸಲು ಯತ್ನಿಸಿದರೂ ಗಿಲ್ ನಿರಾಕರಿಸಿದರು. ನಂತರ ಮುನ್ಯೊಂಗಾ ಸೊಗಸಾದ ಥ್ರೋ ಮಾಡಿ ಇಶಾನ್ ಕಿಶನ್ ಅವರನ್ನು ನಾನ್ ಸ್ಟ್ರೈಕರ್ ಕೊನೆಯಲ್ಲಿ ರನೌಟ್ ಮಾಡಿದರು. ಇದರ ನಂತರ ಜಿಂಬಾಬ್ವೆ
ಗಿಲ್ ವಿರುದ್ಧ ಡಿಆರ್ಎಸ್ ತೆಗೆದುಕೊಂಡಿತು. ಇದರಲ್ಲಿ ಗಿಲ್ ಔಟಾಗದ್ದಿದ್ದರು, ಇಶಾನ್ ಕಿಶನ್ ರನ್ ಔಟ್ ಆಗಿರುವುದು ಸ್ಪಷ್ಟವಾಗಿತ್ತು.
ಅರ್ಧಶತಕ ಬಾರಿಸಿದ ಇಶಾನ್ ಕಿಶನ್
ಆದರೆ ರನೌಟ್ ಆಗುವುದಕ್ಕೂ ಮುನ್ನ ಇಶಾನ್ ಕಿಶನ್ ಅರ್ಧ ಶತಕ ಗಳಿಸಿದ್ದರು. ಹರಾರೆಯ ಕಠಿಣ ಪಿಚ್ನಲ್ಲಿ ಇಶಾನ್ ಕಿಶನ್ ನಿಧಾನವಾಗಿ ಪ್ರಾರಂಭಿಸಿ, ನಂತರ ವೇಗವನ್ನು ಹೆಚ್ಚಿಸಿದರು. ಕಿಶನ್ 61 ಎಸೆತಗಳಲ್ಲಿ 6 ಬೌಂಡರಿ ಒಳಗೊಂಡಂತೆ ಅರ್ಧಶತಕ ಪೂರೈಸಿದರು.
ಶತಕ ಬಾರಿಸಿದ ಗಿಲ್
ಇಶಾನ್ ಕಿಶನ್ ರನೌಟ್ ಆದರೂ, ಶತಕ ಗಳಿಸಿದ ನಂತರವೇ ಗಿಲ್ ತಮ್ಮ ವಿಕೆಟ್ ಕಳೆದುಕೊಂಡರು. ಈ ಬಲಗೈ ಬ್ಯಾಟ್ಸ್ಮನ್ ಅದ್ಭುತವಾಗಿ ಬ್ಯಾಟಿಂಗ್ ಮಾಡಿ, ಅಂತರರಾಷ್ಟ್ರೀಯ ವೃತ್ತಿಜೀವನದ ಮೊದಲ ಶತಕವನ್ನು ಬಾರಿಸಿದರು. ಕೆಎಲ್ ರಾಹುಲ್ ವಿಕೆಟ್ ಕಳೆದುಕೊಂಡ ನಂತರ ಕ್ರೀಸ್ಗೆ ಕಾಲಿಟ್ಟ ಗಿಲ್, ಬಂದ ತಕ್ಷಣವೇ ಅಬ್ಬರಿಸಲು ಆರಂಭಿಸಿದರು. ಕಠಿಣ ಪಿಚ್ನಲ್ಲಿ ಕೇವಲ 51 ಎಸೆತಗಳಲ್ಲಿ ಅರ್ಧಶತಕ ಬಾರಿಸಿದ ಗಿಲ್ ನಂತರದ 31 ಎಸೆತಗಳಲ್ಲಿ ಶತಕ ಪೂರೈಸಿದರು. ಗಿಲ್ ಅವರ ಅತ್ಯುತ್ತಮ ಇನ್ನಿಂಗ್ಸ್ನ ಆಧಾರದ ಮೇಲೆ ಭಾರತ ತಂಡ ಜಿಂಬಾಬ್ವೆ ವಿರುದ್ಧ 50 ಓವರ್ಗಳಲ್ಲಿ 289 ರನ್ ಗಳಿಸಿತು. ಒಂದು ಶತಕ ಮತ್ತು ಅರ್ಧಶತಕವನ್ನು ಒಳಗೊಂಡಂತೆ ಈ ODI ಸರಣಿಯಲ್ಲಿ ಗಿಲ್ ಅತ್ಯಧಿಕ 245 ರನ್ಗಳನ್ನು ಗಳಿಸಿದ್ದಾರೆ.
Published On - 5:51 pm, Mon, 22 August 22