IND vs ZIM: 20ನೇ ಪಂದ್ಯದಲ್ಲಿ ಶತಕದ ಖಾತೆ ತೆರೆದು ಸಚಿನ್ ದಾಖಲೆ ಮುರಿದ ಶುಭ್​ಮನ್ ಗಿಲ್..!

TV9kannada Web Team

TV9kannada Web Team | Edited By: pruthvi Shankar

Updated on: Aug 22, 2022 | 5:34 PM

Shubman Gill: ಜಿಂಬಾಬ್ವೆ ವಿರುದ್ಧ 130 ರನ್ ಗಳಿಸಿದ ಗಿಲ್ ODI ಕ್ರಿಕೆಟ್‌ನಲ್ಲಿ ಜಿಂಬಾಬ್ವೆ ವಿರುದ್ಧ ಅತಿ ಹೆಚ್ಚು ರನ್ ಗಳಿಸಿದ ಭಾರತೀಯ ಬ್ಯಾಟ್ಸ್‌ಮನ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಈ ಹಿಂದೆ ಈ ದಾಖಲೆ ಸಚಿನ್ ಹೆಸರಿನಲ್ಲಿತ್ತು.

IND vs ZIM: 20ನೇ ಪಂದ್ಯದಲ್ಲಿ ಶತಕದ ಖಾತೆ ತೆರೆದು ಸಚಿನ್ ದಾಖಲೆ ಮುರಿದ ಶುಭ್​ಮನ್ ಗಿಲ್..!
Shubman Gill

ಟೀಂ ಇಂಡಿಯಾದ ಸ್ಟಾರ್ ಓಪನರ್ ಶುಭ್​ಮನ್ ಗಿಲ್ (Shubman Gill) ಅಂತಿಮವಾಗಿ ತಮ್ಮ ಅಂತರಾಷ್ಟ್ರೀಯ ವೃತ್ತಿಜೀವನದ ಮೊದಲ ಶತಕವನ್ನು ಬಾರಿಸಿದ್ದಾರೆ. ಜಿಂಬಾಬ್ವೆ ವಿರುದ್ಧದ ಮೂರನೇ ಏಕದಿನ ಪಂದ್ಯದಲ್ಲಿ 82 ಎಸೆತಗಳಲ್ಲಿ ಶತಕ ಸಿಡಿಸಿದ್ದ ಗಿಲ್ ತಮ್ಮ ಅಂತಾರಾಷ್ಟ್ರೀಯ ಶತಕದ ಪಯಣವನ್ನು ಆರಂಭಿಸಿದರು. ಜೊತಗೆ ಗಿಲ್ ಅವರ ಚೊಚ್ಚಲ ಶತಕವನ್ನೂ ಇಡೀ ತಂಡವೇ ಸಂಭ್ರಮಿಸಿತು. ಗಿಲ್ ತನ್ನ 20ನೇ ಅಂತಾರಾಷ್ಟ್ರೀಯ ಪಂದ್ಯದಲ್ಲಿ 100 ರನ್ ಗಳಿಸಿದರು. ಆದಾಗ್ಯೂ, ಗಿಲ್ ಶತಕದಂಚಿನ್ನಲ್ಲಿ ಎಡವಿದ್ದರು, 43 ನೇ ಓವರ್‌ನಲ್ಲಿ ಇವಾನ್ಸ್ ಅವರ ಮೊದಲ ಎಸೆತದಲ್ಲಿಯೇ ಗಿಲ್ ವಿರುದ್ಧ ಎಲ್​ಬಿಡಬ್ಲ್ಯೂ ಮೇಲ್ಮನವಿ ಸಲ್ಲಿಸಲಾಗಿತ್ತು. ಆದರೆ ಗಿಲ್ ಔಟ್​ನಿಂದ ಪಾರಾದರಾದರೂ ಅದೇ ಎಸೆತದಲ್ಲಿ ಇಶಾನ್ ಕಿಶನ್ (Ishan Kishan) ಇನ್ನೊಂದು ತುದಿಯಲ್ಲಿ ರನೌಟ್ ಆದರು. ಇದರೊಂದಿಗೆ ಗಿಲ್ ಮತ್ತು ಇಶಾನ್ ಅವರ ದೊಡ್ಡ ಜೊತೆಯಾಟ ಮುರಿದುಬಿತ್ತು.

ಇನ್ನಿಂಗ್ಸ್ ನಿಭಾಯಿಸಿದ ಗಿಲ್

ತಾಜಾ ಸುದ್ದಿ

ಮೂರನೇ ಏಕದಿನ ಪಂದ್ಯದಲ್ಲಿ ಗಿಲ್ ಸಚಿನ್ ತೆಂಡೂಲ್ಕರ್ ದಾಖಲೆಯನ್ನೂ ಮುರಿದಿದ್ದಾರೆ. 3ನೇ ಏಕದಿನ ಪಂದ್ಯದಲ್ಲಿ ಜಿಂಬಾಬ್ವೆ ವಿರುದ್ಧ 130 ರನ್ ಗಳಿಸಿದ ಗಿಲ್, ಜಿಂಬಾಬ್ವೆ ನೆಲದಲ್ಲಿ ಅತಿ ಹೆಚ್ಚು ರನ್ ಗಳಿಸಿದ ಭಾರತೀಯ ಬ್ಯಾಟ್ಸ್‌ಮನ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಈ ಹಿಂದೆ ಈ ದಾಖಲೆ ಸಚಿನ್ ಹೆಸರಿನಲ್ಲಿತ್ತು. ಮಾಸ್ಟರ್ ಬ್ಲಾಸ್ಟರ್ 1998 ರಲ್ಲಿ ಜಿಂಬಾಬ್ವೆ ನೆಲದಲ್ಲಿ ಔಟಾಗದೆ 127 ರನ್ ಗಳಿಸಿದ್ದರು. ಈಗ ಗಿಲ್ 130 ರನ್ ಬಾರಿಸುವುದರೊಂದಿಗೆ ಸಚಿನ್ ದಾಖಲೆಯನ್ನು ಮೀರಿಸಿದ್ದಾರೆ. ಗಿಲ್ 97 ಎಸೆತಗಳಲ್ಲಿ 130 ರನ್‌ಗಳ ಇನಿಂಗ್ಸ್‌ ಆಡಿದರು. ಈ ವೇಳೆ ಗಿಲ್ 15 ಬೌಂಡರಿ ಹಾಗೂ ಒಂದು ಸಿಕ್ಸರ್ ಕೂಡ ಬಾರಿಸಿದರು. ಈ ಪ್ರಬಲ ಇನ್ನಿಂಗ್ಸ್‌ನಿಂದ ಮೊದಲು ಬ್ಯಾಟ್ ಮಾಡಿದ ಭಾರತ ನಿಗದಿತ ಓವರ್‌ನಲ್ಲಿ 8 ವಿಕೆಟ್‌ಗೆ 289 ರನ್ ಗಳಿಸಿತು. ಗಿಲ್ ಹೊರತಾಗಿ ಇಶಾನ್ ಕಿಶನ್ 50 ರನ್ ಮತ್ತು ಶಿಖರ್ ಧವನ್ 40 ರನ್ ಗಳಿಸಿದರು.

ವೆಸ್ಟ್ ಇಂಡೀಸ್ ವಿರುದ್ಧ ಶತಕ ವಂಚಿತರಾಗಿದ್ದ ಗಿಲ್

ಇದನ್ನೂ ಓದಿ

ಗಿಲ್ 2019 ರಲ್ಲಿ ನ್ಯೂಜಿಲೆಂಡ್ ವಿರುದ್ಧದ ODI ಪಂದ್ಯದೊಂದಿಗೆ ತಮ್ಮ ಅಂತರರಾಷ್ಟ್ರೀಯ ಚೊಚ್ಚಲ ಪಂದ್ಯವನ್ನು ಆಡಿದ್ದರು. ಮುಂದಿನ ವರ್ಷ ಅವರು ಆಸ್ಟ್ರೇಲಿಯಾ ವಿರುದ್ಧ ಟೆಸ್ಟ್‌ಗೆ ಪದಾರ್ಪಣೆ ಮಾಡಿದರು. ಆದರೆ ಗಿಲ್​ಗೆ ಆ ಬಳಿಕ ಹೆಚ್ಚು ಅವಕಾಶಗಳು ಸಿಕ್ಕಿರಲಿಲ್ಲ. ಆದರೆ ವೆಸ್ಟ್ ಇಂಡೀಸ್ ವಿರುದ್ಧ ತಂಡಕ್ಕೆ ಎಂಟ್ರಿಕೊಟ್ಟಿದ್ದ ಗಿಲ್, ಅಲ್ಲಿ ತಮ್ಮ ಚೊಚ್ಚಲ ಶತಕವನ್ನು ತಪ್ಪಿಸಿಕೊಂಡಿದ್ದರು. ಕಳೆದ ತಿಂಗಳು ಪೋರ್ಟ್ ಆಫ್ ಸ್ಪೇನ್​ನಲ್ಲಿ ನಡೆದ ಮಳೆ ಪೀಡಿತ ಪಂದ್ಯದಲ್ಲಿ ಗಿಲ್ 98 ರನ್ ಗಳಿಸಿ ಅಜೇಯರಾಗಿ ಉಳಿದಿದ್ದರು. ವೆಸ್ಟ್ ಇಂಡೀಸ್ ವಿರುದ್ಧದ ಏಕದಿನ ಸರಣಿಯಲ್ಲಿ ಗಿಲ್ ಒಟ್ಟು 205 ರನ್ ಗಳಿಸಿದ್ದರು. ಈಗ ಜಿಂಬಾಬ್ವೆಯಲ್ಲೂ ಅವರ ಅಮೋಘ ಪ್ರದರ್ಶನ ಮುಂದುವರೆದಿದೆ. ಶಿಖರ್ ಧವನ್ ಜತೆಗೂಡಿ ಮೊದಲ ಏಕದಿನ ಪಂದ್ಯದಲ್ಲಿ ಭಾರತಕ್ಕೆ 10 ವಿಕೆಟ್‌ಗಳ ಜಯ ತಂದುಕೊಟ್ಟಿದ ಗಿಲ್, ಮೊದಲ ಪಂದ್ಯದಲ್ಲಿ ಅಜೇಯ 82 ರನ್ ಗಳಿಸಿದ್ದರು. ಇದಾದ ಬಳಿಕ ಎರಡನೇ ಪಂದ್ಯದಲ್ಲಿ 33 ರನ್‌ಗಳ ಇನ್ನಿಂಗ್ಸ್‌ ಆಡಿದ್ದರು.

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada