Shubman Gill: ಏಕದಿನ ಸರಣಿಯಲ್ಲಿ ಮಿಂಚಿದಕ್ಕೆ ಬಂಪರ್ ಗಿಫ್ಟ್; ಕಿವೀಸ್ ವಿರುದ್ಧದ ಸರಣಿಗೆ ಗಿಲ್ ನಾಯಕ..!
Shubman Gill: ಗಿಲ್ ಪ್ರದರ್ಶನವನ್ನು ಮನಗಂಡ ಬಿಸಿಸಿಐ ಈಗ ಗಿಲ್ಗೆ ದೊಡ್ಡ ಜವಬ್ದಶರಿಯೊಂದನ್ನು ನೀಡಲು ಮುಂದಾಗಿದೆ. ಅದೆನಂದರೆ, ಈ ಪ್ರವಾಸದ ನಂತರ, ಗಿಲ್ ನ್ಯೂಜಿಲೆಂಡ್ A ವಿರುದ್ಧದ ಪಂದ್ಯದಲ್ಲಿ ಭಾರತ A ತಂಡದ ನಾಯಕತ್ವವನ್ನು ವಹಿಸಿಕೊಳ್ಳಲಿದ್ದಾರೆ.
ಭಾರತದ ಆರಂಭಿಕ ಆಟಗಾರ ಶುಭಮನ್ ಗಿಲ್ (Shubman Gill) ಸದ್ಯ ಉತ್ತಮ ಫಾರ್ಮ್ನಲ್ಲಿದ್ದಾರೆ. ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಸಿಕ್ಕ ಅವಕಾಶಗಳನ್ನು ಸದುಪಯೋಗಪಡಿಸಿಕೊಂಡಿರುವ ಗಿಲ್, ವಿಂಡೀಸ್ ವಿರುದ್ಧ ಅಬ್ಬರಿಸಿದ ಬಳಿಕ ಈಗ ಜಿಂಬಾಬ್ವೆ ವಿರುದ್ಧವೂ ಜವಬ್ದಾರಿಯುತ ಆಟ ಪ್ರದರ್ಶಿಸಿದ್ದಾರೆ. ಗಿಲ್ ಪ್ರದರ್ಶನವನ್ನು ಮನಗಂಡ ಬಿಸಿಸಿಐ ಈಗ ಗಿಲ್ಗೆ ದೊಡ್ಡ ಜವಬ್ದಶರಿಯೊಂದನ್ನು ನೀಡಲು ಮುಂದಾಗಿದೆ. ಅದೆನಂದರೆ, ಈ ಪ್ರವಾಸದ ನಂತರ, ಗಿಲ್ ನ್ಯೂಜಿಲೆಂಡ್ A ವಿರುದ್ಧದ ಪಂದ್ಯದಲ್ಲಿ ಭಾರತ A ತಂಡದ ನಾಯಕತ್ವವನ್ನು ವಹಿಸಿಕೊಳ್ಳಲಿದ್ದಾರೆ ಎಂಬ ಸುದ್ದಿಯಿದೆ. ಭಾರತ A ತಂಡವು ನ್ಯೂಜಿಲೆಂಡ್ A ವಿರುದ್ಧ 3 ಪಂದ್ಯವನ್ನು ಆಡಲಿದ್ದು, ಇದಕ್ಕೆ 2021- 2022 ರ ರಣಜಿ ಟ್ರೋಫಿ ಸೀಸನ್ನಲ್ಲಿ ಉತ್ತಮ ಪ್ರದರ್ಶನ ನೀಡಿದ ಆಟಗಾರರನ್ನು ಸಹ ಸೇರಿಸಲಾಗಿದೆ. ಟೈಮ್ಸ್ ಆಫ್ ಇಂಡಿಯಾ ವರದಿ ಪ್ರಕಾರ, ಈ ಟೆಸ್ಟ್ ತಂಡದಲ್ಲಿ ಶುಭಮನ್ ಗಿಲ್ ಅಲ್ಲದೆ, ಹನುಮ ವಿಹಾರಿ, ವಾಷಿಂಗ್ಟನ್ ಸುಂದರ್, ಕೆಎಸ್ ಭರತ್ ಮತ್ತು ಮೊಹಮ್ಮದ್ ಸಿರಾಜ್ (Hanuma Vihari, Washington Sundar, KS Bharat and Mohammad Siraj)ಅವರಿಗೂ ಅವಕಾಶ ನೀಡಲಾಗಿದೆ.
ರಣಜಿಯಲ್ಲಿ ಮುಂಬೈ ಪರ ಯಶಸ್ವಿ ಜೈಸ್ವಾಲ್, ಶಮ್ಸ್ ಮುಲಾನಿ, ಶಾರ್ದೂಲ್ ಠಾಕೂರ್ ಅದ್ಭುತ ಪ್ರದರ್ಶನ ನೀಡಿದ್ದರೆ, ರಣಜಿ ಟ್ರೋಫಿ ಫೈನಲ್‌ನಲ್ಲಿ ಮಧ್ಯಪ್ರದೇಶ ಪರ ಶತಕ ಸಿಡಿಸಿದ ಯಶ್ ದುಬೆ, ಶುಭಂ ಶರ್ಮಾ ಮತ್ತು ರಜತ್ ಪಾಟಿದಾರ್ ಕೂಡ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಜಿಂಬಾಬ್ವೆ ಪ್ರವಾಸದಲ್ಲಿ ವಾಷಿಂಗ್ಟನ್ ಸುಂದರ್‌ಗೆ ಬದಲಿ ಆಟಗಾರನಾಗಿ ಸೇರ್ಪಡೆಗೊಂಡಿದ್ದ ಶಾದಾಬ್ ಖಾನ್ ಮತ್ತು ದೇಶೀಯ ಕ್ರಿಕೆಟ್‌ನ ಅನುಭವಿ ಆಟಗಾರರಲ್ಲಿ ಒಬ್ಬರಾದ ಜಲಜ್ ಸಕ್ಸೇನಾ ಅವರಿಗೂ ತಂಡದಲ್ಲಿ ಅವಕಾಶ ನೀಡಲಾಗಿದೆ.
ವಾಷಿಂಗ್ಟನ್ ಸುಂದರ್‌ಗೆ ಸರಣಿ ಪ್ರಮುಖ
ನ್ಯೂಜಿಲೆಂಡ್ ‘ಎ’ ವಿರುದ್ಧದ ಈ ಸರಣಿಯ ಮೂಲಕ ವಾಷಿಂಗ್ಟನ್ ಸುಂದರ್ ಅವರ ಫಿಟ್ನೆಸ್ ಕೂಡ ಗಮನ ಸೆಳೆಯಲಿದೆ. ವಾಷಿಂಗ್ಟನ್ ಕೆಲವು ದಿನಗಳಿಂದ ಗಾಯದ ಸಮಸ್ಯೆಯಿಂದ ಬಳುತ್ತಿದ್ದಾರೆ. ಈ ಹಿಂದೆ ಜಿಂಬಾಬ್ವೆ ವಿರುದ್ಧದ ODI ಸರಣಿಗೆ ಅವರನ್ನು ಆಯ್ಕೆ ಮಾಡಲಾಗಿತ್ತು. ಆದರೆ ಗಾಯದಿಂದಾಗಿ ಅವರು ತಂಡದಿಂದ ಹಿಂದೆ ಸರಿಯಬೇಕಾಯಿತು.
ಯಾವ ಆಟಗಾರರಿಗೆ ಅವಕಾಶ?
ಮುಂಬೈನ ಎಡಗೈ ಸ್ಪಿನ್ನರ್ ಶಮ್ಸ್ ಮುಲಾನಿ ಭಾರತ ‘ಎ’ ತಂಡಕ್ಕೆ ಆಯ್ಕೆಯಾಗುವ ಸಾಧ್ಯತೆ ಇದೆ. ಐಪಿಎಲ್‌ನಲ್ಲಿ ಆರ್‌ಎಸ್‌ಬಿ ಪರ ಶತಕ ಸಿಡಿಸಿದ ರಜತ್ ಪಾಟಿದಾರ್‌ಗೂ ಅವಕಾಶ ಸಿಗಬಹುದು. ಭಾರತಕ್ಕಾಗಿ ಯಾವ ಆಟಗಾರರು ಹೇಗೆ ಆಡಬಹುದು ಎಂಬುದನ್ನು ಪರೀಕ್ಷಿಸಲು ಈ ಸರಣಿ ಮುಖ್ಯವಾಗಿದೆ. ನ್ಯೂಜಿಲೆಂಡ್ ಕೂಡ ತನ್ನ ಬಲಿಷ್ಠ ತಂಡವನ್ನು ಆಯ್ಕೆ ಮಾಡಿಕೊಂಡಿದೆ. ಟಾಮ್ ಬ್ರೂಸ್ ತಂಡದ ನಾಯಕತ್ವವಹಿಸಲಿದ್ದಾರೆ. ಜೊತೆಗೆ ಅವರ ತಂಡದಲ್ಲಿ ಅಂತಾರಾಷ್ಟ್ರೀಯ ಆಟಗಾರರೂ ಕೂಡ ಇದ್ದಾರೆ.
ನ್ಯೂಜಿಲೆಂಡ್ ಪ್ರವಾಸ ಸೆಪ್ಟೆಂಬರ್ 1 ರಂದು ಆರಂಭವಾಗಲಿದ್ದು, ಮೂರನೇ ಮತ್ತು ಕೊನೆಯ ಪಂದ್ಯ ಸೆಪ್ಟೆಂಬರ್ 15 ರಿಂದ ಆರಂಭವಾಗಲಿದೆ. ಪಂದ್ಯಗಳ ನಡುವೆ 3 ದಿನಗಳ ಅಂತರವಿರುತ್ತದೆ. ಎಲ್ಲ ಮೂರು ಪಂದ್ಯಗಳು ಬೆಂಗಳೂರಿನಲ್ಲಿ ನಡೆಯಲಿವೆ. ಇದಾದ ಬಳಿಕ ಸೆಪ್ಟೆಂಬರ್ 22ರಿಂದ 27ರವರೆಗೆ 3 ಲಿಸ್ಟ್ ಎ ಪಂದ್ಯಗಳೂ ನಡೆಯಲಿವೆ.
ಭಾರತ ಎ ಸಂಭಾವ್ಯ ತಂಡ: ಶುಭಮನ್ ಗಿಲ್, ಯಶ್ ದುಬೆ, ಹನುಮ ವಿಹಾರಿ, ರಜತ್ ಪಾಟಿದಾರ್, ಸರ್ಫರಾಜ್ ಖಾನ್, ವಾಷಿಂಗ್ಟನ್ ಸುಂದರ್, ಕೆಎಸ್ ಭರತ್, ಶಮ್ಸ್ ಮುಲಾನಿ, ಜಲಜ್ ಸಕ್ಸೇನಾ, ಶಾರ್ದೂಲ್ ಠಾಕೂರ್, ಮೊಹಮ್ಮದ್ ಸಿರಾಜ್, ಯಶಸ್ವಿ ಜೈಸ್ವಾಲ್, ಶುಭಂ ಶರ್ಮಾ, ಅಕ್ಸರ್ ವಾದ್ಕರ್, ಶಹಬಾಜ್ ಅಹಮದ್, ಮಣಿಶಂಕರ್ ಮುರ್ಸಿಂಗ್