3 ಪಂದ್ಯದಲ್ಲಿ 205 ಬಾರಿಸಿದರೂ ಶುಭ್​ಮನ್ ಗಿಲ್​ಗೆ ಭಾರತದ ಬಿ ತಂಡದಲ್ಲೂ ಇಲ್ಲ ಭದ್ರ ಸ್ಥಾನ

Shubman Gill: ವೆಸ್ಟ್ ಇಂಡೀಸ್​ನಲ್ಲಿ ಉತ್ತಮ ಪ್ರದರ್ಶನ ನೀಡಿದ ಗಿಲ್ ಈ ಪ್ರವಾಸದಲ್ಲೂ ಸ್ಥಾನ ಪಡೆದಿದ್ದಾರೆ. ವಿಂಡೀಸ್ ವಿರುದ್ಧ ಸತತ 3 ಏಕದಿನ ಪಂದ್ಯಗಳಲ್ಲಿ ಉತ್ತಮ ಇನ್ನಿಂಗ್ಸ್ ಆಡಿದ ಗಿಲ್ ಒಟ್ಟು 205 ರನ್ ಗಳಿಸಿದ್ದರು.

3 ಪಂದ್ಯದಲ್ಲಿ 205 ಬಾರಿಸಿದರೂ ಶುಭ್​ಮನ್ ಗಿಲ್​ಗೆ ಭಾರತದ ಬಿ ತಂಡದಲ್ಲೂ ಇಲ್ಲ ಭದ್ರ ಸ್ಥಾನ
Shubman Gill
Follow us
| Updated By: ಪೃಥ್ವಿಶಂಕರ

Updated on:Aug 14, 2022 | 10:29 PM

ಮೂರು ಪಂದ್ಯಗಳ ಏಕದಿನ ಸರಣಿಗಾಗಿ ಭಾರತ ಕ್ರಿಕೆಟ್ ತಂಡ (Indian cricket team) ಜಿಂಬಾಬ್ವೆ ತಲುಪಿದ್ದು, ಸಿದ್ಧತೆ ಆರಂಭಿಸಿದೆ. ಸರಣಿಯು ಆಗಸ್ಟ್ 18 ರಿಂದ ಪ್ರಾರಂಭವಾಗಲಿದೆ. ಅಂದಹಾಗೆ, ಈ ಸರಣಿಗೆ ಹೆಚ್ಚಿನ ಮಹತ್ವವಿಲ್ಲ, ಏಕೆಂದರೆ ಎಲ್ಲರೂ ಪ್ರಸ್ತುತ ಆಗಸ್ಟ್ 27 ರಿಂದ ಪ್ರಾರಂಭವಾಗುವ ಏಷ್ಯಾ ಕಪ್‌ಗಾಗಿ ಕಾಯುತ್ತಿದ್ದಾರೆ. ಇದರ ಹೊರತಾಗಿಯೂ, ಈ ಸರಣಿಯ ಕೆಲವು ಅಂಶಗಳು ಎಲ್ಲರ ಗಮನವನ್ನು ಸೆಳೆಯುತ್ತವೆ. ಇದರಲ್ಲಿ ಒಂದು ಟೀಂ ಇಂಡಿಯಾದ ಬ್ಯಾಟಿಂಗ್ ಕ್ರಮಾಂಕ ಮತ್ತು ಅದರಲ್ಲಿ ಶುಭಮನ್ ಗಿಲ್ (Shubman Gill) ಅವರಂತಹ ಬ್ಯಾಟ್ಸ್‌ಮನ್ ಸ್ಥಾನ. ಗಿಲ್ ಆಡುವ XI ನಲ್ಲಿ ಸ್ಥಾನ ಪಡೆಯುತ್ತಾರಾ? ಸಿಕ್ಕರೆ ಆರಂಭಿಕರಾಗಿ ಕಣಕ್ಕಿಳಿಯುತ್ತಾರಾ? ಎಂಬುದಾಗಿದೆ.

205 ರನ್ ಗಳಿಸಿದ ನಂತರವೂ ಓಪನಿಂಗ್ ಸ್ಥಾನ ಡೌಟ್

ವೆಸ್ಟ್ ಇಂಡೀಸ್​ನಲ್ಲಿ ಉತ್ತಮ ಪ್ರದರ್ಶನ ನೀಡಿದ ಗಿಲ್ ಈ ಪ್ರವಾಸದಲ್ಲೂ ಸ್ಥಾನ ಪಡೆದಿದ್ದಾರೆ. ವಿಂಡೀಸ್ ವಿರುದ್ಧ ಸತತ 3 ಏಕದಿನ ಪಂದ್ಯಗಳಲ್ಲಿ ಉತ್ತಮ ಇನ್ನಿಂಗ್ಸ್ ಆಡಿದ ಗಿಲ್ ಒಟ್ಟು 205 ರನ್ ಗಳಿಸಿದ್ದರು. ಸುದೀರ್ಘ ಸಮಯದ ನಂತರ ಏಕದಿನ ತಂಡಕ್ಕೆ ವಾಪಸಾಗಿರುವ ಗಿಲ್, ಮುಂಬರುವ ಸಮಯಕ್ಕೆ ಟೀಂ ಇಂಡಿಯಾದಲ್ಲಿ ತಮ್ಮ ಸ್ಥಾನವನ್ನು ಭದ್ರಪಡಿಸಿಕೊಳ್ಳಲು ಈ ಇನ್ನಿಂಗ್ಸ್‌ಗಳ ಮೂಲಕ ಹಕ್ಕು ಸಾಧಿಸಿದ್ದಾರೆ. ಓಪನಿಂಗ್ ಮಾಡಿ ಗಿಲ್ ರನ್‌ ಬಾರಿಸಿದ್ದರೂ, ಜಿಂಬಾಬ್ವೆಯಲ್ಲಿ ಅವರಿಗೆ ಈ ಅವಕಾಶ ಸಿಗುವುದಿಲ್ಲ. ಏಕೆಂದರೆ ನಾಯಕ ಕೆಎಲ್ ರಾಹುಲ್ ಮತ್ತು ಶಿಖರ್ ಧವನ್ ಈ ಜವಾಬ್ದಾರಿಯನ್ನು ನಿರ್ವಹಿಸುತ್ತಾರೆ.

ಇದನ್ನೂ ಓದಿ
Image
IND vs WI: ಗಿಲ್ ವಿಚಾರದಲ್ಲಿ ಆತುರಪಟ್ಟು ಆರ್​ಸಿಬಿ ಎಡವಟ್ಟು; ಕೂಡಲೇ ಟ್ವೀಟ್ ಡಿಲೀಟ್
Image
WI vs IND: 800 ಬೌಂಡರಿ, 1000 ರನ್, ಶತಕ ಮಿಸ್; ವಿಂಡೀಸ್ ಮಣಿಸಿ ಪಾಕಿಸ್ತಾನದ ವಿಶ್ವದಾಖಲೆ ಮುರಿದ ಭಾರತ
Image
IND vs WI: 3 ವರ್ಷಗಳಲ್ಲಿ 3 ಪಂದ್ಯ, ಕೇವಲ 49 ರನ್; ಈಗ ಇದ್ದಕ್ಕಿದ್ದಂತೆ ತಂಡಕ್ಕೆ ಮರಳಿ ಫಿಫ್ಟಿ ಬಾರಿಸಿದ ಗಿಲ್

ಗಿಲ್​ಗೆ ಮೂರನೇ ಸ್ಥಾನ?

ಹೀಗಾಗಿ ವಿಂಡೀಸ್ ಸರಣಿಯಲ್ಲಿ ಅದ್ಭುತ ಪ್ರದರ್ಶನ ನೀಡಿದ ಗಿಲ್​ಗೆ ಜಿಂಬಾಬ್ವೆ ವಿರುದ್ಧ ಆಡುವ XI ನಲ್ಲಿ ಅವಕಾಶ ಸಿಗುತ್ತದಾ ಎಂಬ ಪ್ರಶ್ನೆಗೆ ಉತ್ತರ ಆಗಸ್ಟ್ 18 ರಂದು ಗೊತ್ತಾಗಲಿದೆ. ಆದರೆ ತಜ್ಞರು ಗಿಲ್ ಮೂರನೇ ಕ್ರಮಾಂಕದಲ್ಲಿ ಆಡಲಿದ್ದಾರೆ ಎಂಬ ಅಭಿಪ್ರಾಯ ಹೊರಹಾಕಿದ್ದಾರೆ. ಮಾಜಿ ಟೆಸ್ಟ್ ಓಪನರ್ ಮತ್ತು ಆಯ್ಕೆಗಾರ ದೇವಾಂಗ್ ಗಾಂಧಿ ಸುದ್ದಿ ಸಂಸ್ಥೆ ಪಿಟಿಐ ಜೊತೆ ಮಾತನಾಡುತ್ತಾ ಈ ಬಗ್ಗೆ ಹೇಳಿಕೊಂಡಿದ್ದಾರೆ.

ಟೀಂ ಇಂಡಿಯಾ ಗಿಲ್​ಗೆ ಸರಿಯಾದ ಸ್ಥಾನಮಾನ ನೀಡುತ್ತದೆ ಎಂದು ನಾನು ಭಾವಿಸಿದ್ದೇನೆ. ಗಿಲ್ ಕೆರಿಬಿಯನ್ ನೆಲದಲ್ಲಿ ಏಕದಿನ ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ನೀಡಿದ್ದಾರೆ. ನನ್ನ ಪ್ರಕಾರ ತಂಡವು ಯಾವುದೇ ಸ್ಥಾನದಲ್ಲಿ ಬ್ಯಾಟಿಂಗ್ ಮಾಡುವ ರೀತಿಯಲ್ಲಿ ಆಟಗಾರರನ್ನು ಸಿದ್ಧಪಡಿಸುತ್ತಿದೆ. ಹೀಗಾಗಿ ಈ ನಿರ್ದಿಷ್ಟ ಸರಣಿಯಲ್ಲಿ, ಶುಬ್‌ಮನ್ ಮೂರನೇ ಸ್ಥಾನದಲ್ಲಿ ಆಡಬಹುದು ಎಂದು ನಾನು ಭಾವಿಸುತ್ತೇನೆ ಎಂದಿದ್ದಾರೆ.

ಶುಭಮನ್ ಗಿಲ್ ಅವರನ್ನು ನಿರ್ಲಕ್ಷಿಸುವುದು ಕಷ್ಟ

ಸೀಮಿತ ಓವರ್‌ಗಳಲ್ಲಿ ಗಿಲ್‌ಗೆ ಟೀಮ್ ಇಂಡಿಯಾದಲ್ಲಿ ಇನ್ನೂ ಹೆಚ್ಚಿನ ಅವಕಾಶಗಳು ಸಿಕ್ಕಿಲ್ಲ. 2019 ರಲ್ಲಿ ಅವರ ODI ಚೊಚ್ಚಲ ಪಂದ್ಯದ ನಂತರ ಅವರು ಕೇವಲ 6 ಪಂದ್ಯಗಳನ್ನು ಆಡಿದ್ದಾರೆ. ಇದರಲ್ಲೂ, ವೆಸ್ಟ್ ಇಂಡೀಸ್ ವಿರುದ್ಧ ಕಳೆದ ಮೂರು ಪಂದ್ಯಗಳಲ್ಲಿ ಅವರ ಸ್ಕೋರ್‌ಗಳು 64, 43 ಮತ್ತು 98 (ನಾಟ್‌ಔಟ್) ಆಗಿದ್ದವು. ಇದರ ಆಧಾರದ ಮೇಲೆ ಗಿಲ್​ಗೆ ಸರಣಿ ಶ್ರೇಷ್ಠ ಪ್ರಶಸ್ತಿಯನ್ನೂ ನೀಡಲಾಯಿತು. ಇಂತಹ ಪರಿಸ್ಥಿತಿಯಲ್ಲಿ ಟೀಂ ಇಂಡಿಯಾ ಈ ಅವಕಾಶವನ್ನು ಸದುಪಯೋಗಪಡಿಸಿಕೊಂಡು 50 ಓವರ್‌ಗಳ ಕ್ರಿಕೆಟ್‌ನಲ್ಲಿ ಭವಿಷ್ಯದ ಮುಂಚೂಣಿಯ ಬ್ಯಾಟ್ಸ್‌ಮನ್ ಎಂದು ನೋಡುತ್ತಿದ್ದು, ಇಂತಹ ಪರಿಸ್ಥಿತಿಯಲ್ಲಿ ಈ ಸರಣಿಯಲ್ಲಿ ಅವರು ಆಡುವ XI ನಲ್ಲಿ ಅವಕಾಶ ಪಡೆಯುವುದು ಖಚಿತವಾಗಿದೆ.

ಏಕದಿನ ವಿಶ್ವಕಪ್‌ಗೆ ಸಿದ್ಧತೆ

ಈ ಬಗ್ಗೆ ಭಾರತದ ಮಾಜಿ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಮತ್ತು ಖ್ಯಾತ ವೀಕ್ಷಕ ವಿವರಣೆಗಾರ ದೀಪ್ ದಾಸ್‌ಗುಪ್ತ ಕೂಡ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಉತ್ತಮ ಲಯದಲ್ಲಿರುವ ಆಟಗಾರನನ್ನು ಬೆಂಚ್ ಕಾಯಿಸುವುದು ಸರಿ ಇಲ್ಲ ಎಂದು ಅವರು ಹೇಳಿದರು. ಏಷ್ಯಾಕಪ್ ಟಿ20ಗೆ ರಾಹುಲ್‌ನ್ನು ಆರಂಭಿಕರಾಗಿ ಸಿದ್ಧಪಡಿಸುವುದು ಸದ್ಯಕ್ಕೆ ತಂಡದ ಗುರಿಯಾಗಿದೆ. ಹೀಗಾಗಿ ರಾಹುಲ್​ಗೆ ಓಪನಿಂಗ್​ನಲ್ಲಿ ಬ್ಯಾಟಿಂಗ್ ಮಾಡಲು ಹೆಚ್ಚು ಹೆಚ್ಚು ಅವಕಾಶ ನೀಡಬೇಕು ಎಂಬುದು ನನ್ನ ಆದ್ಯತೆಯಾಗಿದೆ. ಆದರೆ ಏಕದಿನ ವಿಶ್ವಕಪ್‌ಗೆ ಗಿಲ್​ರನ್ನು ಆರಂಭಿಕ ಆಟಗಾರನಾಗಿ ತಯಾರು ಮಾಡಬೇಕು ಎಂಬುದು ನನ್ನ ಅಭಿಪ್ರಾಯವಾಗಿದೆ ಎಂದಿದ್ದಾರೆ.

Published On - 10:29 pm, Sun, 14 August 22