IND vs WI: ಗಿಲ್ ವಿಚಾರದಲ್ಲಿ ಆತುರಪಟ್ಟು ಆರ್​ಸಿಬಿ ಎಡವಟ್ಟು; ಕೂಡಲೇ ಟ್ವೀಟ್ ಡಿಲೀಟ್

IND vs WI: ಗಿಲ್ 90-ಪ್ಲಸ್ ಮಾರ್ಕ್ ತಲುಪುತ್ತಿದ್ದಂತೆ, ಅವರು ತಮ್ಮ ಚೊಚ್ಚಲ ODI ಶತಕವನ್ನು ಗಳಿಸಲು ಎಚ್ಚರಿಕೆಯಿಂದ ಆಡಲು ಪ್ರಾರಂಭಿಸಿದರು. ಏತನ್ಮಧ್ಯೆ, ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿಯು ಯುವ ಆಟಗಾರನಿಗೆ ಟ್ರಿಪಲ್ ಫಿಗರ್ ದಾಟುವ ಮೊದಲೇ ಅಭಿನಂದನಾ ಸಂದೇಶವನ್ನು ಹಂಚಿಕೊಂಡಿದೆ.

IND vs WI: ಗಿಲ್ ವಿಚಾರದಲ್ಲಿ ಆತುರಪಟ್ಟು ಆರ್​ಸಿಬಿ ಎಡವಟ್ಟು; ಕೂಡಲೇ ಟ್ವೀಟ್ ಡಿಲೀಟ್
ಆರ್​ಸಿಬಿ ಟ್ವೀಟ್, ಗಿಲ್
Follow us
| Updated By: ಪೃಥ್ವಿಶಂಕರ

Updated on:Jul 28, 2022 | 6:03 PM

ಟ್ರಿನಿಡಾಡ್‌ನ ಪೋರ್ಟ್ ಆಫ್ ಸ್ಪೇನ್‌ನಲ್ಲಿ ನಡೆದ ವೆಸ್ಟ್ ಇಂಡೀಸ್ ವಿರುದ್ಧದ ಏಕದಿನ ಸರಣಿಯನ್ನು (Ind Vs WI) ಟೀಂ ಇಂಡಿಯಾ 3-0 ಅಂತರದಿಂದ ಗೆದ್ದುಕೊಂಡಿತು. ಶಿಖರ್ ಧವನ್ (Shikhar Dhawan) ನೇತೃತ್ವದ ತಂಡ ವೆಸ್ಟ್ ಇಂಡೀಸ್ ತಂಡವನ್ನು ಮೊದಲ ಬಾರಿಗೆ ಏಕದಿನ ಸರಣಿಯಲ್ಲಿ ಕ್ಲೀನ್ ಸ್ವೀಪ್ ಮಾಡಿದೆ. ಓಪನರ್ ಶುಬ್ಮನ್ ಗಿಲ್ ಸರಣಿಯುದ್ದಕ್ಕೂ ಸ್ಥಿರ ಪ್ರದರ್ಶನ ನೀಡಿದರು ಮತ್ತು ಸರಣಿ ಶ್ರೇಷ್ಠರಾಗಿದ್ದರು. ಈ ಯುವ ಆಟಗಾರನನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಲವರು ಹೊಗಳಿದ್ದಾರೆ. ಈ ನಡುವೆ ಐಪಿಎಲ್ ಫ್ರಾಂಚೈಸಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮಾಡಿರುವ ಟ್ವೀಟ್ ಎಲ್ಲರ ಗಮನ ಸೆಳೆಯಿತು. ಈ ಟ್ವೀಟ್ ಕೂಡ ಚರ್ಚೆಗೆ ಗ್ರಾಸವಾಗಿತ್ತು. ಇದಕ್ಕೆ ಕಾರಣ ಆತುರದಲ್ಲಿ ಆರ್​ಸಿಬಿ ಫ್ರಾಂಚೈಸಿ ಮಾಡಿಕೊಂಡ ಎಡವಟ್ಟೆ ಕಾರಣವಾಗಿದೆ.

ಪಂಜಾಬ್‌ನ ಯುವ ಆರಂಭಿಕ ಆಟಗಾರ ಶುಭಮನ್ ಗಿಲ್ ಸರಣಿಯ ಮೂರನೇ ಏಕದಿನ ಪಂದ್ಯದಲ್ಲಿ 98 ರನ್‌ಗಳ ಭರ್ಜರಿ ಔಟಾದರು. ನಿಧಾನವಾಗಿ ತನ್ನ ಇನ್ನಿಂಗ್ಸ್ ಆರಂಭಿಸಿದ ಗಿಲ್, ಪಂದ್ಯ ಮುಂದುವರಿದಂತೆ ವೇಗ ಹೆಚ್ಚಿಸಿದರು. ಆದರೆ ಮಳೆಯಿಂದಾಗಿ ಕೆಲಕಾಲ ಆಟ ಸ್ಥಗಿತಗೊಂಡಿತ್ತು. ಆ ಬಳಿಕ 40 ಓವರ್‌ಗಳಿಗೆ ಆಟವನ್ನು ಸೀಮಿತಗೊಳಿಸಲಾಯಿತು. ಭಾರತದ ಇನ್ನಿಂಗ್ಸ್‌ನ 36 ಓವರ್‌ಗಳ ನಂತರ, ಮತ್ತೆ ಮಳೆ ಸುರಿಯಿತು ಮತ್ತು ಸಂದರ್ಶಕರು 3 ವಿಕೆಟ್‌ಗೆ 225 ಕ್ಕೆ ತಮ್ಮ ಇನ್ನಿಂಗ್ಸ್ ಅನ್ನು ಕೊನೆಗೊಳಿಸಿದರು. ಆಗ ಗಿಲ್ ವೈಯಕ್ತಿಕ 98 ರನ್‌ಗಳಲ್ಲಿ ಆಡುತ್ತಿದ್ದರು. ನಂತರ ಡಕ್‌ವರ್ತ್ ಲೂಯಿಸ್ ವಿಧಾನದ ಪ್ರಕಾರ ವೆಸ್ಟ್ ಇಂಡೀಸ್‌ಗೆ 35 ಓವರ್‌ಗಳಲ್ಲಿ 257 ರನ್‌ಗಳ ಗುರಿಯನ್ನು ನಿಗದಿಪಡಿಸಲಾಯಿತು ಮತ್ತು ಆತಿಥೇಯರು ಕೇವಲ 137 ರನ್‌ಗಳಿಗೆ ಆಲೌಟ್ ಆಯಿತು.

ಗಿಲ್ 90-ಪ್ಲಸ್ ಮಾರ್ಕ್ ತಲುಪುತ್ತಿದ್ದಂತೆ, ಅವರು ತಮ್ಮ ಚೊಚ್ಚಲ ODI ಶತಕವನ್ನು ಗಳಿಸಲು ಎಚ್ಚರಿಕೆಯಿಂದ ಆಡಲು ಪ್ರಾರಂಭಿಸಿದರು. ಏತನ್ಮಧ್ಯೆ, ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿಯು ಯುವ ಆಟಗಾರನಿಗೆ ಟ್ರಿಪಲ್ ಫಿಗರ್ ದಾಟುವ ಮೊದಲೇ ಅಭಿನಂದನಾ ಸಂದೇಶವನ್ನು ಹಂಚಿಕೊಂಡಿದೆ. ಈ ಪಂದ್ಯದಲ್ಲಿ ಗಿಲ್ 98 ಎಸೆತಗಳಲ್ಲಿ 7 ಬೌಂಡರಿ ಹಾಗೂ 2 ಸಿಕ್ಸರ್‌ಗಳ ಅಜೇಯ ಇನ್ನಿಂಗ್ಸ್‌ನಲ್ಲಿ 98 ರನ್ ಗಳಿಸಿದರು.

ಇದನ್ನೂ ಓದಿ
Image
WI vs IND: 800 ಬೌಂಡರಿ, 1000 ರನ್, ಶತಕ ಮಿಸ್; ವಿಂಡೀಸ್ ಮಣಿಸಿ ಪಾಕಿಸ್ತಾನದ ವಿಶ್ವದಾಖಲೆ ಮುರಿದ ಭಾರತ
Image
SL vs PAK: ಲಂಕಾ ಮುಂದೆ ನಡೆಯದ ಪಾಕ್ ಆಟ; ಬಾಬರ್ ಪಡೆಗೆ 246 ರನ್​ಗಳ ಹೀನಾಯ ಸೋಲು..!
Image
Asia Cup 2022: ಶ್ರೀಲಂಕಾದಲ್ಲಿ ಆರ್ಥಿಕ ಬಿಕ್ಕಟ್ಟು; ಯುಎಇಯಲ್ಲಿ ಏಷ್ಯಾ ಕಪ್ ಆಯೋಜನೆ ಖಚಿತ

ಆರ್‌ಸಿಬಿ ಟ್ವೀಟ್‌ನಲ್ಲಿ ಏನಿದೆ?

ಆರ್‌ಸಿಬಿ ತನ್ನ ಟ್ವೀಟ್‌ನಲ್ಲಿ, ಶುಬ್‌ಮನ್ ಗಿಲ್ ತಮ್ಮ ಮೊದಲ ಅಂತರರಾಷ್ಟ್ರೀಯ ಶತಕವನ್ನು ಗಳಿಸಿದ್ದಾರೆ. ಈ ಶತಕಕ್ಕೆ ಇದಕ್ಕಿಂತ ಉತ್ತಮವಾದ ಸಮಯವಿರಲಿಲ್ಲ. ಅಭಿನಂದನೆಗಳು ಚಾಂಪ್ ಎಂದು ಬರೆದು ಶುಭಾಷಯ ತಿಳಿಸಿತ್ತು. ಆದರೆ ಗಿಲ್‌ಗೆ ಈ ಪಂದ್ಯದಲ್ಲಿ ಶತಕ ಪೂರೈಸಲು ಸಾಧ್ಯವಾಗಲಿಲ್ಲ, ಅಷ್ಟರಲ್ಲಾಗಲೆ ಆರ್‌ಸಿಬಿ ಟ್ವೀಟ್ ವೈರಲ್ ಆಗಿತ್ತು. ತನ್ನ ತಪ್ಪಿನ ಅರಿವಾದ ಬಳಿಕ ಕೂಡಲೇ ಆರ್​ಸಿಬಿ ತನ್ನ ಟ್ವೀಟ್ ಅನ್ನು ಡಿಲೀಟ್ ಮಾಡಿದೆ. ಆದರೆ ಕೆಲವು ಬಳಕೆದಾರರು ಸ್ಕ್ರೀನ್‌ಶಾಟ್‌ಗಳನ್ನು ತೆಗೆದುಕೊಂಡು ಅದನ್ನು ವೈರಲ್ ಮಾಡಿದ್ದಾರೆ.

ಗಿಲ್ ವೈಯಕ್ತಿಕವಾಗಿ 98 ರನ್​ಗಳ ಆದಾರದ ಮೇಲೆ ವೆಸ್ಟ್ ಇಂಡೀಸ್‌ಗೆ ಡಕ್‌ವರ್ತ್ ಲೂಯಿಸ್ ವಿಧಾನದ ಪ್ರಕಾರ 35 ಓವರ್‌ಗಳಲ್ಲಿ 257 ರನ್‌ಗಳ ಗುರಿಯನ್ನು ನಿಗದಿಪಡಿಸಲಾಯಿತು. ಆದರೆ ಆತಿಥೇಯರು ಕೇವಲ 137 ರನ್‌ಗಳಿಗೆ ಆಲೌಟ್ ಆದರು. ಇದೇ ವೇಳೆ ಭಾರತ ಕೆರಿಬಿಯನ್ ನೆಲದಲ್ಲಿ ಐತಿಹಾಸಿಕ ಗೆಲುವು ಸಾಧಿಸಿದೆ. ಟೀಂ ಇಂಡಿಯಾ ಅವರದ್ದೆ ನೆಲದಲ್ಲಿ ಮೊದಲ ಬಾರಿಗೆ ಏಕದಿನ ಸರಣಿಯಲ್ಲಿ ಆತಿಥೇಯರನ್ನು 3-0 ಅಂತರದಿಂದ ಸೋಲಿಸಿತು. ಭಾರತವು ಈ ಹಿಂದೆ ವೆಸ್ಟ್ ಇಂಡೀಸ್‌ನಲ್ಲಿ ಹಲವಾರು ಸೀಮಿತ ಓವರ್‌ಗಳ ಸರಣಿಗಳನ್ನು ಗೆದ್ದಿದೆ ಆದರೆ ಎಂದಿಗೂ ವೈಟ್‌ವಾಶ್ ಮಾಡಲು ಸಾಧ್ಯವಾಗಿರಲಿಲ್ಲ.

Published On - 6:03 pm, Thu, 28 July 22

ಬಿಗ್​ಬಾಸ್ ಮನೆಯ ಫೇಕ್ ಸ್ಪರ್ಧಿ ಯಾರು? ಊಸರವಳ್ಳಿ ಯಾರು?
ಬಿಗ್​ಬಾಸ್ ಮನೆಯ ಫೇಕ್ ಸ್ಪರ್ಧಿ ಯಾರು? ಊಸರವಳ್ಳಿ ಯಾರು?
Daily Devotional: ಪೂಜೆಯ ಫಲ ಪಡೆಯುವುದು ಹೇಗೆ? ವಿಡಿಯೋ ನೋಡಿ
Daily Devotional: ಪೂಜೆಯ ಫಲ ಪಡೆಯುವುದು ಹೇಗೆ? ವಿಡಿಯೋ ನೋಡಿ
ವಾರ ಭವಿಷ್ಯ: ನವೆಂಬರ್​ 11 ರಿಂದ ​17ರವರೆಗೆ ವಾರ ಭವಿಷ್ಯ ಹೀಗಿದೆ
ವಾರ ಭವಿಷ್ಯ: ನವೆಂಬರ್​ 11 ರಿಂದ ​17ರವರೆಗೆ ವಾರ ಭವಿಷ್ಯ ಹೀಗಿದೆ
Nithya Bhavishya: ಈ ರಾಶಿಯವರಿಗೆ 5 ಗ್ರಹಗಳ ಶುಭ ಫಲವಿದೆ
Nithya Bhavishya: ಈ ರಾಶಿಯವರಿಗೆ 5 ಗ್ರಹಗಳ ಶುಭ ಫಲವಿದೆ
ನಾಗೇಂದ್ರರನ್ನು ಪುನಃ ಸಂಪುಟಕ್ಕೆ ಸೇರಿಸಿಕೊಳ್ಳುವ ಸುಳಿವು ನೀಡಿದ ಸಿಎಂ
ನಾಗೇಂದ್ರರನ್ನು ಪುನಃ ಸಂಪುಟಕ್ಕೆ ಸೇರಿಸಿಕೊಳ್ಳುವ ಸುಳಿವು ನೀಡಿದ ಸಿಎಂ
ಬಿಜೆಪಿಯ ನಿಷ್ಠಾವಂತ ನಾಯಕರಿಂದ ಸರ್ಕಾರದ ವಿರುದ್ಧ ಪುನಃ ಹೋರಾಟ: ಯತ್ನಾಳ್
ಬಿಜೆಪಿಯ ನಿಷ್ಠಾವಂತ ನಾಯಕರಿಂದ ಸರ್ಕಾರದ ವಿರುದ್ಧ ಪುನಃ ಹೋರಾಟ: ಯತ್ನಾಳ್
ಮೂರು ಬಾರಿ ಸಂಸದರಾಗಿದ್ದ ಸುರೇಶ್ ಚನ್ನಪಟ್ಟಣಕ್ಕೆ ನೀಡಿದ್ದೇನು? ನಿಖಿಲ್
ಮೂರು ಬಾರಿ ಸಂಸದರಾಗಿದ್ದ ಸುರೇಶ್ ಚನ್ನಪಟ್ಟಣಕ್ಕೆ ನೀಡಿದ್ದೇನು? ನಿಖಿಲ್
ಆರಂಭಿಕ ಹಂತದಲ್ಲಿ ಕಾಂಗ್ರೆಸ್ ಪಕ್ಷದ ಕುತಂತ್ರ ಅಡ್ಡಿಯಾಗಿತ್ತು:ಕುಮಾರಸ್ವಾಮಿ
ಆರಂಭಿಕ ಹಂತದಲ್ಲಿ ಕಾಂಗ್ರೆಸ್ ಪಕ್ಷದ ಕುತಂತ್ರ ಅಡ್ಡಿಯಾಗಿತ್ತು:ಕುಮಾರಸ್ವಾಮಿ
ಮುಂಬೈ-ಪುಣೆ ಎಕ್ಸ್‌ಪ್ರೆಸ್‌ವೇಯಲ್ಲಿ ಟ್ರಕ್‌ಗೆ ಬಸ್ ಡಿಕ್ಕಿ;18 ಮಂದಿಗೆ ಗಾಯ
ಮುಂಬೈ-ಪುಣೆ ಎಕ್ಸ್‌ಪ್ರೆಸ್‌ವೇಯಲ್ಲಿ ಟ್ರಕ್‌ಗೆ ಬಸ್ ಡಿಕ್ಕಿ;18 ಮಂದಿಗೆ ಗಾಯ
ವಾರದ ಪಂಚಾಯಿತಿ ನಡೆಸಲು ಬಂದ ಸುದೀಪ್, ಮಂಜುಗೆ ಕಾದಿದೆ ಮಾತಿನ ಚಾಟಿ?
ವಾರದ ಪಂಚಾಯಿತಿ ನಡೆಸಲು ಬಂದ ಸುದೀಪ್, ಮಂಜುಗೆ ಕಾದಿದೆ ಮಾತಿನ ಚಾಟಿ?