SL vs PAK: ಲಂಕಾ ಮುಂದೆ ನಡೆಯದ ಪಾಕ್ ಆಟ; ಬಾಬರ್ ಪಡೆಗೆ 246 ರನ್​ಗಳ ಹೀನಾಯ ಸೋಲು..!

SL vs PAK: ಶ್ರೀಲಂಕಾದ ಬೌಲರ್‌ಗಳು, ವಿಶೇಷವಾಗಿ ತಂಡದ ಸ್ಪಿನ್ನರ್‌ಗಳು ಪಾಕಿಸ್ತಾನದ ಸ್ಥಿತಿಯನ್ನು ಹಾಳು ಮಾಡುವಲ್ಲಿ ದೊಡ್ಡ ಪಾತ್ರವನ್ನು ವಹಿಸಿದರು. ಎರಡನೇ ಇನ್ನಿಂಗ್ಸ್‌ನಲ್ಲಿ ಪಾಕಿಸ್ತಾನದ 10 ವಿಕೆಟ್‌ಗಳಲ್ಲಿ 9 ವಿಕೆಟ್‌ಗಳನ್ನು ಇಬ್ಬರು ಶ್ರೀಲಂಕಾ ಸ್ಪಿನ್ನರ್‌ಗಳು ಕಬಳಿಸಿದ್ದಾರೆ.

SL vs PAK: ಲಂಕಾ ಮುಂದೆ ನಡೆಯದ ಪಾಕ್ ಆಟ; ಬಾಬರ್ ಪಡೆಗೆ 246 ರನ್​ಗಳ ಹೀನಾಯ ಸೋಲು..!
SL vs PAK
Follow us
TV9 Web
| Updated By: ಪೃಥ್ವಿಶಂಕರ

Updated on: Jul 28, 2022 | 3:28 PM

ಶ್ರೀಲಂಕಾ ನೆಲದಲ್ಲಿ ತನ್ನ ವೈಭವವನ್ನು ಸ್ಥಾಪಿಸುವ ಪಾಕಿಸ್ತಾನದ ಕನಸು ಭಗ್ನಗೊಂಡಿದೆ. ಪಾಕಿಸ್ತಾನ ಮತ್ತು ಶ್ರೀಲಂಕಾ (Pakistan and Sri Lanka) ನಡುವಿನ ಎರಡು ಟೆಸ್ಟ್‌ಗಳ ಸರಣಿಯು 1-1 ಡ್ರಾದಲ್ಲಿ ಕೊನೆಗೊಂಡಿತು. ಈ ಎರಡೂ ಟೆಸ್ಟ್‌ಗಳು ಗಾಲೆಯಲ್ಲಿ ನಡೆದಿವೆ. ಮೊದಲ ಟೆಸ್ಟ್‌ನಲ್ಲಿ 4 ವಿಕೆಟ್‌ಗಳಿಂದ ಪಾಕಿಸ್ತಾನದ ಪರವಾಗಿ ಫಲಿತಾಂಶ ಬಂದಿದ್ದರೆ, ಎರಡನೇ ಟೆಸ್ಟ್‌ನಲ್ಲಿ 246 ರನ್‌ಗಳ ಗೆಲುವು ಪಡೆದ ಶ್ರೀಲಂಕಾ, ತವರಿನಲ್ಲಿ ನಮ್ಮ ವಿರುದ್ಧ ಗೆಲ್ಲುವುದು ಅಷ್ಟು ಸುಲಭವಲ್ಲ ಎಂಬುದನ್ನು ಸಾಭೀತುಪಡಿಸಿದೆ.

ಪಾಕಿಸ್ತಾನದ ಎದುರು ಗಾಲೆಯಲ್ಲಿ ನಡೆದ ಎರಡನೇ ಟೆಸ್ಟ್ ಪಂದ್ಯದಲ್ಲಿ ಶ್ರೀಲಂಕಾ ಗೆಲುವಿಗೆ 508 ರನ್ ಗುರಿ ನೀಡಿತ್ತು. ಈ ಗುರಿ ಮುಟ್ಟಲು ಹರಸಾಹಸ ಪಟ್ಟ ಪಾಕಿಸ್ತಾನ ತಂಡದ ಕೆಲ ಅಗ್ರ ಬ್ಯಾಟ್ಸ್‌ಮನ್‌ಗಳು ಒಂದಷ್ಟು ಜವಾಬ್ದಾರಿ ತೋರಿದರಾದರೂ ಕೆಳಗೆ ಉಳಿದವರು ವಿಕೆಟ್ ಕಳೆದುಕೊಂಡರು.

ಪಾಕಿಸ್ತಾನ 176/3 ರಿಂದ 261/10 ವರೆಗೆ

ಇದನ್ನೂ ಓದಿ
Image
SL Vs PAK: ಬರೋಬ್ಬರಿ 13 ವರ್ಷಗಳ ಬಳಿಕ ಟೆಸ್ಟ್ ಕ್ರಿಕೆಟ್​ನಲ್ಲಿ 1000 ರನ್ ಪೂರೈಸಿದ ಪಾಕ್ ಕ್ರಿಕೆಟಿಗ..!
Image
ICC FTP: 4 ವರ್ಷಗಳಲ್ಲಿ 12 ಸರಣಿ; 32 ವರ್ಷಗಳ ನಂತರ ಭಾರತ-ಆಸ್ಟ್ರೇಲಿಯಾ ಟೆಸ್ಟ್ ಸರಣಿಯಲ್ಲೂ ಬದಲಾವಣೆ
Image
SL vs AUS: ಚೊಚ್ಚಲ ಪಂದ್ಯದಲ್ಲೇ 12 ವಿಕೆಟ್! ಜಯಸೂರ್ಯ ದಾಳಿಗೆ ಬೆದರಿದ ಕಾಂಗರೂಗಳು; ಎರಡನೇ ಟೆಸ್ಟ್ ಗೆದ್ದ ಲಂಕಾ!

ಆರಂಭಿಕ ಇಮಾಮ್-ಉಲ್-ಹಕ್ ಅವರ 49 ಮತ್ತು ನಾಯಕ ಬಾಬರ್ ಅಜಮ್ ಅವರ 81 ರನ್ಗಳಿಂದ ಆರಂಭದಲ್ಲಿ ಪಾಕಿಸ್ತಾನ ಉತ್ತಮ ಸ್ಥಾನದಲ್ಲಿತ್ತು. ಪಾಕಿಸ್ತಾನ ತಂಡದ ಸ್ಕೋರ್ ಒಂದು ಸಮಯದಲ್ಲಿ 3 ವಿಕೆಟ್ಗೆ 176 ಆಗಿತ್ತು. ಆದರೆ ಆ ನಂತರ ಉಳಿದ 7 ಬ್ಯಾಟ್ಸ್‌ಮನ್‌ಗಳು ಒಟ್ಟಾಗಿ ಸ್ಕೋರ್ ಬೋರ್ಡ್‌ಗೆ 100 ರನ್ ಸೇರಿಸಲು ಸಾಧ್ಯವಾಗಲಿಲ್ಲ. ಇದರ ಪರಿಣಾಮವಾಗಿ 508 ರನ್‌ಗಳ ಮೊತ್ತವನ್ನು ಬೆನ್ನಟ್ಟಿದ ಪಾಕಿಸ್ತಾನದ ಇಡೀ ತಂಡವು ತನ್ನ ಎರಡನೇ ಇನ್ನಿಂಗ್ಸ್‌ನಲ್ಲಿ ಕೇವಲ 261 ರನ್‌ಗಳಿಗೆ ಆಲೌಟ್ ಆಯಿತು ಮತ್ತು ಪಂದ್ಯವನ್ನು 246 ರನ್‌ಗಳಿಂದ ಕಳೆದುಕೊಂಡಿತು.

ಇಬ್ಬರು ಸ್ಪಿನ್ನರ್‌ಗಳ ಅಬ್ಬರ

ಶ್ರೀಲಂಕಾದ ಬೌಲರ್‌ಗಳು, ವಿಶೇಷವಾಗಿ ತಂಡದ ಸ್ಪಿನ್ನರ್‌ಗಳು ಪಾಕಿಸ್ತಾನದ ಸ್ಥಿತಿಯನ್ನು ಹಾಳು ಮಾಡುವಲ್ಲಿ ದೊಡ್ಡ ಪಾತ್ರವನ್ನು ವಹಿಸಿದರು. ಎರಡನೇ ಇನ್ನಿಂಗ್ಸ್‌ನಲ್ಲಿ ಪಾಕಿಸ್ತಾನದ 10 ವಿಕೆಟ್‌ಗಳಲ್ಲಿ 9 ವಿಕೆಟ್‌ಗಳನ್ನು ಇಬ್ಬರು ಶ್ರೀಲಂಕಾ ಸ್ಪಿನ್ನರ್‌ಗಳು ಕಬಳಿಸಿದ್ದಾರೆ. ಎರಡನೇ ಇನ್ನಿಂಗ್ಸ್‌ನಲ್ಲಿ ಪ್ರಭಾತ್ ಜಯಸೂರ್ಯ 5 ಮತ್ತು ರಮೇಶ್ ಮೆಂಡಿಸ್ 4 ವಿಕೆಟ್ ಪಡೆದರು. ಇದೇ ವೇಳೆ ಪಾಕಿಸ್ತಾನದ ಓರ್ವ ಬ್ಯಾಟ್ಸ್‌ಮನ್ ರನ್ ಔಟ್ ಆದರು.

ಶ್ರೀಲಂಕಾಗೆ ಮೊದಲ ಇನಿಂಗ್ಸ್ ಮುನ್ನಡೆ ‘ಲಾಟರಿ’ ಆಗಿತ್ತು

ಇದಕ್ಕೂ ಮೊದಲು ಶ್ರೀಲಂಕಾ ತನ್ನ ಮೊದಲ ಇನ್ನಿಂಗ್ಸ್‌ನಲ್ಲಿ 378 ರನ್ ಗಳಿಸಿತ್ತು. ಇದಕ್ಕೆ ಉತ್ತರವಾಗಿ ಪಾಕಿಸ್ತಾನ ತನ್ನ ಮೊದಲ ಇನ್ನಿಂಗ್ಸ್‌ನಲ್ಲಿ ಕೇವಲ 231 ರನ್ ಗಳಿಸಲಷ್ಟೇ ಶಕ್ತವಾಯಿತು. ಶ್ರೀಲಂಕಾದ ಸ್ಪಿನ್ನರ್‌ಗಳಾದ ರಮೇಶ್ ಮೆಂಡಿಸ್ ಮತ್ತು ಪ್ರಬಾತ್ ಜಯಸೂರ್ಯ ಅವರು ಪಾಕಿಸ್ತಾನದ ಮೊದಲ ಇನ್ನಿಂಗ್ಸ್ ಅನ್ನು ಇಷ್ಟು ಕಡಿಮೆ ಸ್ಕೋರ್‌ಗೆ ನಿಲ್ಲಿಸುವಲ್ಲಿ ಪ್ರಮುಖ ಪಾತ್ರ ವಹಿಸಿದರು. ಇವರಿಬ್ಬರು ಮೊದಲ ಇನ್ನಿಂಗ್ಸ್‌ನಲ್ಲಿ 8 ವಿಕೆಟ್‌ಗಳನ್ನು ಪಡೆದರು, ಇದರಲ್ಲಿ ಜಯಸೂರ್ಯ 3 ಮತ್ತು ಮೆಂಡಿಸ್ 5 ವಿಕೆಟ್ ಪಡೆದರು.

ಶ್ರೀಲಂಕಾ ಮೊದಲ ಇನಿಂಗ್ಸ್‌ನಲ್ಲಿ ಗಳಿಸಿದ ದೊಡ್ಡ ಮುನ್ನಡೆ, ತಂಡಕ್ಕೆ ಲಾಭದಾಯಕವಾಯಿತು. ಶ್ರೀಲಂಕಾ ತಂಡ 8 ವಿಕೆಟ್‌ಗೆ 360 ರನ್ ಗಳಿಸುವ ಮೂಲಕ ಎರಡನೇ ಇನ್ನಿಂಗ್ಸ್ ಡಿಕ್ಲೇರ್ ಮಾಡಿಕೊಂಡಿತು. ಆ ಮೂಲಕ ಪಾಕಿಸ್ತಾನದ ಮುಂದೆ ತನ್ನ ಗುರಿಯನ್ನು ನಿಗದಿಪಡಿಸಿತು, ಆದರೆ ಪಾಕಿಸ್ತಾನ ಲಂಕಾ ಎದುರು ಅವಮಾನಕರ ಸೋಲನ್ನು ಎದುರಿಸಬೇಕಾಯಿತು.

ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್