AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ICC FTP: 4 ವರ್ಷಗಳಲ್ಲಿ 12 ಸರಣಿ; 32 ವರ್ಷಗಳ ನಂತರ ಭಾರತ-ಆಸ್ಟ್ರೇಲಿಯಾ ಟೆಸ್ಟ್ ಸರಣಿಯಲ್ಲೂ ಬದಲಾವಣೆ

ICC FTP: 1992ರ ನಂತರ ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ತಲಾ 5 ಪಂದ್ಯಗಳ ಟೆಸ್ಟ್ ಸರಣಿ ನಡೆಯುತ್ತಿರುವುದು ಇದೇ ಮೊದಲು. ಭಾರತ ತಂಡ ಮೊದಲು ಆಸ್ಟ್ರೇಲಿಯಾ ಪ್ರವಾಸ ಕೈಗೊಳ್ಳಲಿದ್ದು, ನಂತರ ಆಸ್ಟ್ರೇಲಿಯಾ ತಂಡ ಭಾರತಕ್ಕೆ ಬರಲಿದೆ.

ICC FTP: 4 ವರ್ಷಗಳಲ್ಲಿ 12 ಸರಣಿ; 32 ವರ್ಷಗಳ ನಂತರ ಭಾರತ-ಆಸ್ಟ್ರೇಲಿಯಾ ಟೆಸ್ಟ್ ಸರಣಿಯಲ್ಲೂ ಬದಲಾವಣೆ
ಟೀಮ್ ಇಂಡಿಯಾ
TV9 Web
| Updated By: ಪೃಥ್ವಿಶಂಕರ|

Updated on:Jul 16, 2022 | 10:29 PM

Share

ಭಾರತ ಕ್ರಿಕೆಟ್ ತಂಡ ಈ ಬಾರಿ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ (ICC World Test Championship)ನಲ್ಲಿ ಫೈನಲ್ ತಲುಪಲಿದೆಯೇ? ಕಳೆದ ಕೆಲವು ದಿನಗಳಿಂದ ಈ ಪ್ರಶ್ನೆಯನ್ನು ಸಾಕಷ್ಟು ಕೇಳಲಾಗುತ್ತಿದೆ. ಇಂಗ್ಲೆಂಡ್ ವಿರುದ್ಧದ ಎಜ್‌ಬಾಸ್ಟನ್ ಟೆಸ್ಟ್‌ನಲ್ಲಿ ಟೀಂ ಇಂಡಿಯಾ ಸೋಲಿನ ನಂತರ ಈ ಪ್ರಶ್ನೆ ಹೆಚ್ಚು ಗಂಭೀರವಾಗಿದೆ. ಈ ಫೈನಲ್ ಪಂದ್ಯ ಮುಂದಿನ ವರ್ಷ ನಡೆಯಲಿದೆ. ಇದೀಗ ಟೀಂ ಇಂಡಿಯಾ (Team India) ಅದನ್ನು ತಲುಪುತ್ತದೋ ಇಲ್ಲವೋ ಎಂಬುದು ಮುಂದಿನ ವರ್ಷವಷ್ಟೇ ತಿಳಿಯಲಿದೆ. ಆದರೆ ಯಾವಾಗ 2023ರಲ್ಲಿ ಮತ್ತೆ ಟೆಸ್ಟ್ ಚಾಂಪಿಯನ್‌ಶಿಪ್ ಆರಂಭವಾಗುತ್ತದೆಯೋ, ಆಗ ಟೀಂ ಇಂಡಿಯಾ ಜೊತೆ ಯಾವ ತಂಡಗಳು ಕಣಕ್ಕಿಳಿಯಲಿವೆ ಎಂಬುದು ಖಚಿತವಾಗಿ ಗೊತ್ತಾಗಿದೆ. ಇದರ ಪ್ರಮುಖ ಮತ್ತು ರೋಚಕ ಅಂಶವೆಂದರೆ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಟೆಸ್ಟ್ ಸರಣಿಯ ಸಂಖ್ಯೆಗಳು ಮಾತ್ರ ಮೊದಲಿಗಿಂತ ಹೆಚ್ಚಾಗಲಿದೆ.

ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ ತನ್ನ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಭವಿಷ್ಯದ ಕ್ರಿಕೆಟ್ ಪಂದ್ಯಾವಳಿಗಳು ಮತ್ತು 2023 ರಿಂದ 2027 ರ ನಡುವಿನ ಪಂದ್ಯಗಳಿಗಾಗಿ ಭವಿಷ್ಯದ ಪ್ರವಾಸ ಕಾರ್ಯಕ್ರಮವನ್ನು ಸಿದ್ಧಪಡಿಸಿದೆ. ಈ FTP ಕಾರ್ಯಕ್ರಮದಲ್ಲಿ, ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಅನ್ನು 2023 ರಿಂದ 2025 ಮತ್ತು 2025 ರಿಂದ 2027 ರ ನಡುವೆ 2 ಬಾರಿ ಆಯೋಜನೆಯಾಗಲಿದೆ.

ಕ್ರಿಕೆಟ್ ವೆಬ್‌ಸೈಟ್ ESPN-Cricinfo ICC ಯ ಕರಡು FTP ಯನ್ನು ಉಲ್ಲೇಖಿಸಿ, ಮೊದಲ ಮತ್ತು ಪ್ರಸ್ತುತ ಟೆಸ್ಟ್ ಚಾಂಪಿಯನ್‌ಶಿಪ್‌ನಂತೆ, ಪ್ರತಿ ತಂಡವು ಮುಂದಿನ ಎರಡು ಸುತ್ತುಗಳಲ್ಲಿ ತಲಾ 6 ಸರಣಿಗಳನ್ನು ಸಹ ಆಡುತ್ತವೆ. ನಾವು ಟೀಮ್ ಇಂಡಿಯಾದ ಬಗ್ಗೆ ಮಾತನಾಡುವುದಾದರೆ, ಭಾರತವು ಈ ಎರಡು ಸುತ್ತುಗಳಲ್ಲಿ ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್ ವಿರುದ್ಧ ಒಂದು ಸರಣಿಯನ್ನು ತವರಿನಲ್ಲಿ ಮತ್ತು ತಲಾ ಒಂದನ್ನು ಅವರ ನೆಲದಲ್ಲಿ ಆಡಬೇಕಾಗಿದೆ. ಇವುಗಳಲ್ಲದೆ, ತಂಡವು ದಕ್ಷಿಣ ಆಫ್ರಿಕಾ, ವೆಸ್ಟ್ ಇಂಡೀಸ್ ಮತ್ತು ನ್ಯೂಜಿಲೆಂಡ್‌ನಂತಹ ತಂಡಗಳ ವಿರುದ್ಧವೂ ಸೆಣಸಲಿದೆ.

ಇದನ್ನೂ ಓದಿ
Image
ಜೈ ಶಾ ಯೋಜನೆಗೆ ಐಸಿಸಿ ಗ್ರೀನ್ ಸಿಗ್ನಲ್; ಇನ್ಮುಂದೆ ಎರಡೂವರೆ ತಿಂಗಳು ನಡೆಯಲಿದೆ ಐಪಿಎಲ್! ಜೊತೆಗೆ?
Image
IND vs ENG: 6 ಪಂದ್ಯಗಳಲ್ಲಿ 17 ಕ್ಯಾಚ್​ ಬಿಟ್ಟ ಟೀಂ ಇಂಡಿಯಾ; ಹೀಗಾದರೆ ಟಿ20 ವಿಶ್ವಕಪ್ ಕೈ ಜಾರುವುದು ಗ್ಯಾರಂಟಿ?
Image
IND vs ENG, 3rd ODI: ಭಾರತ- ಇಂಗ್ಲೆಂಡ್ ಫೈನಲ್ ಕದನಕ್ಕೆ ರೋಹಿತ್ ಪಡೆಯ ಸಂಭಾವ್ಯ 11

ಆಸ್ಟ್ರೇಲಿಯಾದ ಎದುರು 5 ಟೆಸ್ಟ್‌ಗಳ ಸರಣಿ

ಈಗ ಇದರಲ್ಲಿ ಪ್ರಮುಖವಾದ ವಿಷಯವೆಂದರೆ ಇಂಗ್ಲೆಂಡ್ ವಿರುದ್ಧ ಭಾರತ ಕೇವಲ ತಲಾ 5 ಪಂದ್ಯಗಳ (ಒಂದು ಟೆಸ್ಟ್​ ಸರಣಿ ಭಾರತದಲ್ಲಾದರೆ, ಇನ್ನೊಂದು ಟೆಸ್ಟ್ ಸರಣಿ ಅವರ ನೆಲದಲ್ಲಿ ನಡೆಯಲಿದೆ) ಟೆಸ್ಟ್‌ಗಳ ಸರಣಿಯನ್ನು ಮಾತ್ರ ಆಡಲಿದೆ. ಜೊತೆಗೆ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಬಾರ್ಡರ್-ಗವಾಸ್ಕರ್ ಟ್ರೋಫಿಯಲ್ಲಿ ತಲಾ 5 ಟೆಸ್ಟ್‌ಗಳ ಸರಣಿ (ಒಂದು ಟೆಸ್ಟ್​ ಸರಣಿ ಭಾರತದಲ್ಲಾದರೆ, ಇನ್ನೊಂದು ಟೆಸ್ಟ್ ಸರಣಿ ಅವರ ನೆಲದಲ್ಲಿ ನಡೆಯಲಿದೆ) ನಡೆಯಲಿದೆ. ಈ ಸರಣಿಯಲ್ಲಿ ಇಲ್ಲಿಯವರೆಗೆ ತಲಾ 4 ಟೆಸ್ಟ್ ಪಂದ್ಯಗಳನ್ನು ಆಡಲಾಗುತ್ತಿತ್ತು. 1992ರ ನಂತರ ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ತಲಾ 5 ಪಂದ್ಯಗಳ ಟೆಸ್ಟ್ ಸರಣಿ ನಡೆಯುತ್ತಿರುವುದು ಇದೇ ಮೊದಲು. ಭಾರತ ತಂಡ ಮೊದಲು ಆಸ್ಟ್ರೇಲಿಯಾ ಪ್ರವಾಸ ಕೈಗೊಳ್ಳಲಿದ್ದು, ನಂತರ ಆಸ್ಟ್ರೇಲಿಯಾ ತಂಡ ಭಾರತಕ್ಕೆ ಬರಲಿದೆ.

ಎರಡು ಟೆಸ್ಟ್ ಚಾಂಪಿಯನ್‌ಶಿಪ್‌ಗಳಲ್ಲಿ ಭಾರತದ ಸರಣಿ

ಸದ್ಯಕ್ಕೆ ಸಿದ್ಧಪಡಿಸಿರುವ ಎಫ್‌ಟಿಪಿಯ ಕರಡು ಪ್ರಕಾರ, ಭಾರತ ತಂಡವು 2023 ರಿಂದ 2025 ರವರೆಗೆ ಟೆಸ್ಟ್ ಚಾಂಪಿಯನ್‌ಶಿಪ್‌ನಲ್ಲಿ ಇಂಗ್ಲೆಂಡ್, ನ್ಯೂಜಿಲೆಂಡ್ ಮತ್ತು ಬಾಂಗ್ಲಾದೇಶ ವಿರುದ್ಧ ತವರಿನಲ್ಲಿ ಟೆಸ್ಟ್ ಸರಣಿಯನ್ನು ಆಡಲಿದೆ. ಅದೇ ಸಮಯದಲ್ಲಿ, ಟೀಮ್ ಇಂಡಿಯಾ ಆಸ್ಟ್ರೇಲಿಯಾ, ವೆಸ್ಟ್ ಇಂಡೀಸ್ ಮತ್ತು ದಕ್ಷಿಣ ಆಫ್ರಿಕಾ ವಿರುದ್ಧ ಅವರ ನೆಲದಲ್ಲೇ ಸ್ಪರ್ಧಿಸಲಿದೆ. ನಾವು 2025-2027ರ ಟೆಸ್ಟ್ ಚಾಂಪಿಯನ್‌ಶಿಪ್ ಬಗ್ಗೆ ಮಾತನಾಡುವುದಾದರೆ, ಈ ಸಮಯದಲ್ಲಿ ಆಸ್ಟ್ರೇಲಿಯಾ, ವೆಸ್ಟ್ ಇಂಡೀಸ್ ಮತ್ತು ದಕ್ಷಿಣ ಆಫ್ರಿಕಾ ತಂಡಗಳು ಸರಣಿಗಾಗಿ ಭಾರತಕ್ಕೆ ಬರುತ್ತವೆ. ಹಾಗೆಯೇ ಟೀಮ್ ಇಂಡಿಯಾ ಉಳಿದ 3 ಟೆಸ್ಟ್ ಸರಣಿಗಾಗಿ ಇಂಗ್ಲೆಂಡ್, ನ್ಯೂಜಿಲೆಂಡ್ ಮತ್ತು ಶ್ರೀಲಂಕಾ ಪ್ರವಾಸ ಕೈಗೊಳ್ಳಬೇಕಾಗುತ್ತದೆ.

Published On - 10:29 pm, Sat, 16 July 22

ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ