AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ENG vs IND ODI: ಮೂರನೇ ಏಕದಿನಕ್ಕೆ ಒಂದು ಬದಲಾವಣೆ: ಪದಾರ್ಪಣೆಗೆ ಸಜ್ಜಾದ ಮತ್ತೊಬ್ಬ ಐಪಿಎಲ್ ಹೀರೋ

India Playing XI vs ENG 3rd ODI: ಇಂಗ್ಲೆಂಡ್ ವಿರುದ್ಧದ ಮೂರನೇ ಏಕದಿನ ಪಂದ್ಯಕ್ಕೆ ಟೀಮ್ ಇಂಡಿಯಾ ಬ್ಯಾಟಿಂಗ್ ವಿಭಾಗದಲ್ಲಿ ಬದಲಾವಣೆ ಅನುನಾನ. ಬದಲಾಗಿ ಬೌಲಿಂಗ್ ವಿಭಾಗದಲ್ಲಿ ಒಂದು ಮಹತ್ವದ ಬದಲಾವಣೆ ಮಾಡುವ ನಿರೀಕ್ಷಿಸಲಾಗಿದೆ.

ENG vs IND ODI: ಮೂರನೇ ಏಕದಿನಕ್ಕೆ ಒಂದು ಬದಲಾವಣೆ: ಪದಾರ್ಪಣೆಗೆ ಸಜ್ಜಾದ ಮತ್ತೊಬ್ಬ ಐಪಿಎಲ್ ಹೀರೋ
IND Playing XI vs ENG 3rd ODI
TV9 Web
| Updated By: Vinay Bhat|

Updated on:Jul 17, 2022 | 9:56 AM

Share

ಮ್ಯಾಂಚೆಸ್ಟರ್​ನ (Manchester) ಎಮಿರೇಟ್ಸ್​ ಓಲ್ಡ್ ಟ್ರಾಫಾರ್ಡ್ ಕ್ರೀಡಾಂಗಣದಲ್ಲಿ ಇಂದು ಭಾರತ ಹಾಗೂ ಇಂಗ್ಲೆಂಡ್ (India vs England) ನಡುವೆ ಅಂತಿಮ ತೃತೀಯ ಏಕದಿನ ಪಂದ್ಯ ನಡೆಯಲಿದೆ. ಈಗಾಗಲೇ ಆಡಿರುವ ಎರಡು ಪಂದ್ಯಗಳಲ್ಲಿ ಉಭಯ ತಂಡಗಳು ಒಂದು ಪಂದ್ಯ ಗೆದ್ದು 1-1ರ ಸಮಬಲ ಸಾಧಿಸಿರುವ ಕಾರಣ ಇಂದಿನ ಕದನ ನಿರ್ಣಾಯಕವಾಗಲಿದೆ. ಟಿ20 ಸರಣಿಯನ್ನು ವಶಪಡಿಸಿಕೊಂಡಿದ್ದ ಭಾರತ ಇದೀಗ ಏಕದಿನ ಸರಣಿಯನ್ನೂ ತನ್ನದಾಗಿಸುತ್ತಾ ನೋಡಬೇಕಿದೆ. ಅತ್ತ ತವರಿನಲ್ಲೇ ಭಾರತದ ಎದುರು ಭಾರೀ ಮುಖಭಂಗಕ್ಕೆ ಒಳಗಾಗಿರುವ ಆಂಗ್ಲರು ಫೈನಲ್ ಫೈಟ್​​ನಲ್ಲಿ ಗೆಲ್ಲಲು ಮಾಸ್ಟರ್ ಪ್ಲಾನ್ ರೂಪಿಸುವುದು ಖಚಿತ. ಕಳೆದ ಪಂದ್ಯದಲ್ಲಿ ಭಾರತ 146 ರನ್​ಗೆ ಸರ್ವಪತನ ಕಂಡಿತ್ತು. ಹೀಗಿದ್ದರೂ ಇಂದಿನ ಪಂದ್ಯಕ್ಕೆ ಟೀಮ್ ಇಂಡಿಯಾ (Team Indi) ಬ್ಯಾಟಿಂಗ್ ವಿಭಾಗದಲ್ಲಿ ಬದಲಾವಣೆ ಅನುನಾನ. ಬದಲಾಗಿ ಬೌಲಿಂಗ್ ವಿಭಾಗದಲ್ಲಿ ಒಂದು ಮಹತ್ವದ ಬದಲಾವಣೆ ಮಾಡುವ ನಿರೀಕ್ಷಿಸಲಾಗಿದೆ.

ಟೀಮ್ ಇಂಡಿಯಾ ಪರ ಓಪನರ್​ಗಳಾಗಿ ರೋಹಿತ್ ಶರ್ಮಾ ಮತ್ತು ಶಿಖರ್ ಧವನ್ ಕಣಕ್ಕಿಳಿಯವುದುರಲ್ಲಿ ಯಾವುದೇ ಅನುಮಾನವಿಲ್ಲ. ಆದರೆ, ಈ ಜೋಡಿ ಮೊದಲ ಪಂದ್ಯದಲ್ಲಿ ಮಿಂಚಿದ್ದರೆ ಎರಡನೇ ಪಂದ್ಯದಲ್ಲಿ ಸಂಪೂರ್ಣ ವೈಫಲ್ಯ ಅನುಭವಿಸಿತ್ತು. ತಂಡಕ್ಕೆ ಉತ್ತಮ ಆರಂಭ ಕೊಡಬೇಕಾದ ಒತ್ತಡದಲ್ಲಿ ಈ ಜೋಡಿಯಿದೆ. ವಿರಾಟ್ ಕೊಹ್ಲಿ ಮೂರನೇ ಸ್ಥಾನದಲ್ಲಿ ಆಡಲಿದ್ದಾರೆ. ವಿರಾಟ್, ತಂಡಕ್ಕೆ ಗೆಲುವಿನ ಕಾಣಿಕೆ ನೀಡುವಂತಹ ಇನಿಂಗ್ಸ್ ಆಡುವಲ್ಲಿಯೂ ವಿಫಲರಾಗುತ್ತಿದ್ದಾರೆ. ಅವರು ಲಯಕ್ಕೆ ಮರಳಿದರೆ ಆತಿಥೇಯ ಬೌಲರ್‌ಗಳಿಗೆ ಒತ್ತಡ ಬೀಳಬಹುದು.

ನಾಳ್ಕನೇ ಕ್ರಮಾಂಕದಲ್ಲಿ ರಿಷಭ್ ಪಂತ್ ಕಣಕ್ಕಿಳಿಯಲಿದ್ದು ಸೂರ್ಯಕುಮಾರ್ ಯಾದವ್ ಐದನೇ ಸ್ಥಾನದಲ್ಲಿ ಆಡಿ ತಂಡಕ್ಕೆ ನೆರವಾಗಲಿದ್ದಾರೆ. ಭಾರತದ ಆಲ್ರೌಂಡರ್​​​ ವಿಭಾಗದಲ್ಲಿ ಬದಲಾವಣೆ ಅನುಮಾನ. ಈ ಸ್ಥಾನದಲ್ಲಿ ಹಾರ್ದಿಕ್ ಪಾಂಡ್ಯ ಮತ್ತು ರವೀಂದ್ರ ಜಡೇಜಾ ಆಡುವುದು ಖಚಿತ. ಬೌಲಿಂಗ್ ವಿಭಾಗದಲ್ಲಿ ಒಂದು ಬದಲಾವಣೆ ನಿರೀಕ್ಷಿಸಲಾಗಿದೆ. ದುಬಾರಿಯಾಗಿದ್ದ ಪ್ರಸಿದ್ಧ್ ಕೃಷ್ಣ ಜಾಗದಲ್ಲಿ ಶಾರ್ದೂಲ್ ಥಾಕೂರ್ ಅಥವಾ ಅರ್ಶ್​​ದೀಪ್ ಸಿಂಗ್ ಆಯ್ಕೆ ಆಗುವ ಸಾಧ್ಯತೆ ಇದೆ.

ಇದನ್ನೂ ಓದಿ
Image
IND vs ENG: ಇಂದು ಭಾರತ-ಇಂಗ್ಲೆಂಡ್ ಫೈನಲ್ ಫೈಟ್: ವಿಶ್ರಾಂತಿಗೂ ಮುನ್ನ ಕೊಹ್ಲಿಗೆ ಕೊನೆಯ ಪಂದ್ಯ
Image
ICC FTP: 4 ವರ್ಷಗಳಲ್ಲಿ 12 ಸರಣಿ; 32 ವರ್ಷಗಳ ನಂತರ ಭಾರತ-ಆಸ್ಟ್ರೇಲಿಯಾ ಟೆಸ್ಟ್ ಸರಣಿಯಲ್ಲೂ ಬದಲಾವಣೆ
Image
SL vs PAK: ಪಾಕ್ ದಾಳಿಗೆ ಪತರಗುಟ್ಟಿದ ಲಂಕಾ ಬ್ಯಾಟರ್​ಗಳು; ಇತ್ತ ಪಾಕ್ ಆರಂಭವೂ ಉತ್ತಮವಾಗಿಲ್ಲ
Image
CWG 2022: ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಭಾರತಕ್ಕೆ ಅತಿ ಹೆಚ್ಚು ಪದಕ ತಂದುಕೊಟ್ಟ ಕ್ರೀಡೆ​ಗಳಿವು

ಐಪಿಎಲ್​ 2022 ರಲ್ಲಿ ಭರ್ಜರಿ ಪ್ರದರ್ಶನ ತೋರಿ ರಾಷ್ಟ್ರೀಯ ತಂಡದ ಕದ ತಟ್ಟಿರುವ ಅರ್ಶ್​​ದೀಪ್ ಸಿಂಗ್ ಪ್ಲೇಯಿಂಗ್ ಇಲೆವೆನ್​ನಲ್ಲಿ ಕಾಣಿಸಿಕೊಂಡರೆ ಟಿ20 ಬಳಿಕ ಇದೀಗ ಏಕದಿನ ಕ್ರಿಕೆಟ್​ಗೂ ಪದಾರ್ಪಣೆ ಗೈದ ವಿಶೇಷ ಸಾಧನೆ ಮಾಡಲಿದ್ದಾರೆ. ಉಳಿದಂತೆ ಮೊಹಮ್ಮದ್ ಶಮಿ ಹಾಗೂ ಜಸ್​ಪ್ರೀತ್ ಬುಮ್ರಾ ಟ್ರಂಪ್​ಕಾರ್ಡ್​ ಆಗಿದ್ದರೆ ಯುಜ್ವೇಂದ್ರ ಚಹಲ್ ಸ್ಪಿನ್ ಮೋಡಿ ಭರ್ಜರಿ ಆಗಿ ನಡೆಯುತ್ತಿರುವ ಕಾರಣ ಆಡುವ ಬಳಗದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಇತ್ತ ಇಂಗ್ಲೆಂಡ್ ತಂಡದಲ್ಲೂ ಸಮಸ್ಯೆ ಇದೆ. ಎರಡೂ ಪಂದ್ಯಗಳಲ್ಲಿ ಬ್ಯಾಟರ್‌ಗಳಿಂದ ನಿರೀಕ್ಷಿತ ಆಟ ಮೂಡಿಬಂದಿಲ್ಲ. ಸ್ವತಃ ನಾಯಕ ಜೋಸ್ ಬಟ್ಲರ್ ರನ್ ಗಳಿಸದಿರುವುದು ತಂಡಕ್ಕೆ ದೊಡ್ಡ ಹಿನ್ನಡೆ. ಸ್ಟಾರ್ ಬ್ಯಾಟರ್​ಗಳಾದ ಜಾನಿ ಬೈರ್​ಸ್ಟೋ, ಜೋ ರೂಟ್, ಬೆನ್ ಸ್ಟೋಕ್ಸ್​ ಕೂಡ ವೈಫಲ್ಯ ಅನುಭವಿಸಿದ್ದಾರೆ. ಕಳೆದ ಪಂದ್ಯದಲ್ಲಿ ಭಾರತದ 6 ವಿಕೆಟ್ ಕಿತ್ತ ರೀಸ್ ಟಾಪ್ಲಿ ಮೇಲೆ ನಿರೀಕ್ಷೆ ಹೆಚ್ಚಿದೆ. ಆದರೂ ತಂಡದಲ್ಲಿ ಬದಲಾವಣೆ ಅನುಮಾನ ಎನ್ನಬಹುದು.

ಭಾರತ ಸಂಭಾವ್ಯ ಪ್ಲೇಯಿಂಗ್ XI:

ರೋಹಿತ್ ಶರ್ಮಾ (ನಾಯಕ), ಶಿಖರ್ ಧವನ್, ವಿರಾಟ್ ಕೊಹ್ಲಿ, ರಿಷಭ್ ಪಂತ್ (ವಿಕೆಟ್-ಕೀಪರ್), ಸೂರ್ಯಕುಮಾರ್ ಯಾದವ್, ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ಮೊಹಮ್ಮದ್ ಶಮಿ, ಜಸ್​ಪ್ರೀತ್ ಬುಮ್ರಾ, ಯುಜ್ವೇಂದ್ರ ಚಹಲ್, ಅರ್ಶ್​ದೀಪ್ ಸಿಂಗ್.

Published On - 9:55 am, Sun, 17 July 22