T20 Blast: 17 ಎಸೆತಗಳಲ್ಲಿ ಅರ್ಧಶತಕ; 6 ಸಿಕ್ಸರ್ ಬಾರಿಸಿ ವಿಶೇಷ ದಾಖಲೆ ಬರೆದ ಬ್ಯಾಟರ್..! ವಿಡಿಯೋ ನೋಡಿ
T20 Blast: ಈ ಪಂದ್ಯದಲ್ಲಿ ಥಾಂಪ್ಸನ್ ತಮ್ಮ ಇನ್ನಿಂಗ್ಸ್‌ನಲ್ಲಿ 17 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು. ಜೊತೆಗೆ ತಮ್ಮ ಇನ್ನಿಂಗ್ಸ್‌ನಲ್ಲಿ ಆರು ಸಿಕ್ಸರ್‌ಗಳನ್ನು ಹೊಡೆದರೆ, ಅವರ ಬ್ಯಾಟ್‌ನಿಂದ ಕೇವಲ ಒಂದೇ ಒಂದು ಬೌಂಡರಿ ಬಂದಿತ್ತು.
ಇಂಗ್ಲೆಂಡ್ನ ಟಿ20 ಲೀಗ್, ವಿಟಾಲಿಟಿ ಬ್ಲಾಸ್ಟ್ (T20 Blast) ಮೊದಲ ಸೆಮಿಫೈನಲ್ ಪಂದ್ಯ ಶನಿವಾರ ಯಾರ್ಕ್ ಶೈರ್ ಮತ್ತು ಲಂಕಾಶೈರ್ ತಂಡಗಳ ನಡುವೆ ನಡೆಯುತ್ತಿದ್ದು, ಈ ಪಂದ್ಯದಲ್ಲಿ ಯಾರ್ಕ್ ಶೈರ್ ಆಟಗಾರ ಅಮೋಘ ಬ್ಯಾಟಿಂಗ್ ಮೂಲಕ ದಾಖಲೆ ಬರೆದಿದ್ದಾರೆ. ತಂಡದ ಬ್ಯಾಟ್ಸ್‌ಮನ್ ಜೋರ್ಡಾನ್ ಥಾಂಪ್ಸನ್ ಬಿರುಸಿನ ಅರ್ಧಶತಕ ಗಳಿಸಿ ದಾಖಲೆ ಬರೆದಿದ್ದಾರೆ. ಥಾಂಪ್ಸನ್ ಕೊನೆಯ ಓವರ್‌ನಲ್ಲಿ ಬಿರುಸಿನ ಬ್ಯಾಟಿಂಗ್ ಮಾಡಿ ಅರ್ಧಶತಕ ಪೂರ್ಣಗೊಳಿಸಿದರು. ಅವರ ಇನ್ನಿಂಗ್ಸ್ ಆಧಾರದ ಮೇಲೆ ಯಾರ್ಕ್‌ಷೈರ್ ತಂಡ 200 ರನ್ ಗಡಿ ದಾಟುವಲ್ಲಿ ಯಶಸ್ವಿಯಾಯಿತು. ಈ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಯಾರ್ಕ್ ಶೈರ್ 20 ಓವರ್‌ಗಳಲ್ಲಿ ಏಳು ವಿಕೆಟ್ ನಷ್ಟಕ್ಕೆ 204 ರನ್ ಗಳಿಸಿತು.
ಈ ಪಂದ್ಯದಲ್ಲಿ ಥಾಂಪ್ಸನ್ ತಮ್ಮ ಇನ್ನಿಂಗ್ಸ್‌ನಲ್ಲಿ 17 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು. ಜೊತೆಗೆ ತಮ್ಮ ಇನ್ನಿಂಗ್ಸ್‌ನಲ್ಲಿ ಆರು ಸಿಕ್ಸರ್‌ಗಳನ್ನು ಹೊಡೆದರೆ, ಅವರ ಬ್ಯಾಟ್‌ನಿಂದ ಕೇವಲ ಒಂದೇ ಒಂದು ಬೌಂಡರಿ ಬಂದಿತ್ತು. ಆರನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಬಂದ ಥಾಂಪ್ಸನ್ 277.77 ಸ್ಟ್ರೈಕ್ ರೇಟ್‌ನಲ್ಲಿ ರನ್ ಗಳಿಸಿದರು. ಈ ಮೂಲಕ ಥಾಂಪ್ಸನ್ ಗಳಿಸಿದ ಅರ್ಧಶತಕವು ಈ ಟೂರ್ನಿಯ ಸೆಮಿಫೈನಲ್‌ನಲ್ಲಿ ಅತಿ ವೇಗದ ಅರ್ಧಶತಕವಾಗಿದೆ.
Unreal from @Tommo455 ?
The fastest 50 at #FinalsDay ?#Blast22 pic.twitter.com/mPGq4zf8CX
— Vitality Blast (@VitalityBlast) July 16, 2022
ಟಾಮ್ ಕೊಹ್ಲರ್ ಕೂಡ ಅರ್ಧಶತಕ
ಥಾಂಪ್ಸನ್ ಮೊದಲು, ಟಾಮ್ ಕೊಹ್ಲರ್ ಕೂಡ ಯಾರ್ಕ್‌ಷೈರ್ ಪರ ಅರ್ಧಶತಕ ಗಳಿಸಿದರು. ಟಾಮ್ ಮೂರನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿ 66 ರನ್‌ಗಳ ಇನ್ನಿಂಗ್ಸ್ ಆಡಿದರು. ಈ ಬ್ಯಾಟ್ಸ್‌ಮನ್ ತನ್ನ ಇನ್ನಿಂಗ್ಸ್‌ನಲ್ಲಿ 44 ಎಸೆತಗಳನ್ನು ಎದುರಿಸಿ ಐದು ಬೌಂಡರಿಗಳ ಜೊತೆಗೆ ಮೂರು ಸಿಕ್ಸರ್‌ಗಳನ್ನು ಬಾರಿಸಿದರು. ಎರಡನೇ ವಿಕೆಟ್‌ಗೆ ಡೇವಿಡ್ ಮಲಾನ್ ಜೊತೆ 61 ರನ್ ಜೊತೆಯಾಟ ನಡೆಸಿದರು. ನಾಯಕ ಹ್ಯಾರಿ ಬ್ರೂಕ್ ಎರಡು ರನ್ ಗಳಿಸಿ ಔಟಾದರು, ಶಾದಾಬ್ ಖಾನ್ 34 ರನ್ ಗಳಿಸಿ ಇನ್ನಿಂಗ್ಸ್ ಆಡಿದರು. ಶಾದಾಬ್ 24 ಎಸೆತಗಳನ್ನು ಎದುರಿಸಿ ಮೂರು ಬೌಂಡರಿ ಹಾಗೂ ಒಂದು ಸಿಕ್ಸರ್ ಬಾರಿಸಿದರು.
Luke Wells gets the breakthrough! ?#Blast22 #FinalsDay pic.twitter.com/2k9tLG0rci
— Vitality Blast (@VitalityBlast) July 16, 2022
ಆರು ಬೌಲರ್‌ಗಳ ಬಳಕೆ
ಯಾರ್ಕ್‌ಷೈರ್ ಬ್ಯಾಟ್ಸ್‌ಮನ್‌ಗಳನ್ನು ತಡೆಯಲು ಲಂಕಾಶೈರ್ ನಾಯಕ ಡಾನ್ ವಿಲಾಸ್ ಆರು ಬೌಲರ್‌ಗಳನ್ನು ಬಳಸಿದರು ಆದರೆ ಯಾರೊಬ್ಬರೂ ಬಿರುಗಾಳಿಯ ಬ್ಯಾಟಿಂಗ್ ಅನ್ನು ತಡೆಯಲು ಸಾಧ್ಯವಾಗಲಿಲ್ಲ. ತಂಡದ ಅತ್ಯಂತ ಯಶಸ್ವಿ ಬೌಲರ್ ಲ್ಯೂಕ್ ವೆಲ್ಸ್. ಮೂರು ಓವರ್‌ಗಳಲ್ಲಿ 32 ರನ್ ನೀಡಿ ಎರಡು ವಿಕೆಟ್ ಪಡೆದರು. ಡ್ಯಾನಿ ಲ್ಯಾಂಬ್ ನಾಲ್ಕು ಓವರ್‌ಗಳಲ್ಲಿ 45 ರನ್ ನೀಡಿ ಎರಡು ವಿಕೆಟ್ ಪಡೆದರು. ಲ್ಯೂಕ್ ವುಡ್ ನಾಲ್ಕು ಓವರ್‌ಗಳಲ್ಲಿ 36 ರನ್ ನೀಡಿ ಒಂದು ವಿಕೆಟ್ ಪಡೆದರು. ರಿಚರ್ಡ್ ಗ್ಲೀಸನ್ ನಾಲ್ಕು ಓವರ್‌ಗಳಲ್ಲಿ 54 ರನ್ ನೀಡಿ ಒಂದು ವಿಕೆಟ್ ಪಡೆದರು. ಮ್ಯಾಟ್ ಪಾರ್ಕಿನ್ಸನ್ ಮೂರು ಓವರ್‌ಗಳಲ್ಲಿ 18 ರನ್ ನೀಡಿ ಒಂದು ವಿಕೆಟ್ ಪಡೆದರು.
Published On - 7:07 pm, Sat, 16 July 22