AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Virat Kohli: ಟೀಕಿಸುವವರಿಗೆ ಒಂದೇ ಪದದಲ್ಲಿ ಉತ್ತರ ಕೊಟ್ಟ ಕಿಂಗ್ ಕೊಹ್ಲಿ; ಏನದು ಗೊತ್ತಾ?

Virat Kohli: ವಿರಾಟ್ ಕೊಹ್ಲಿ ಬ್ಯಾಟ್ ಬಹಳ ಸಮಯದಿಂದ ಮೌನವಾಗಿದ್ದು, ರನ್​ಗಳಿಸಲು ಪರದಾಡುತ್ತಿದ್ದಾರೆ. ಈ ಕಾರಣಕ್ಕಾಗಿ, ಅವರು ನಿರಂತರವಾಗಿ ಟೀಕೆಗೆ ಒಳಗಾಗುತ್ತಾರೆ . ಈಗ ಅಂತಹ ಅನೇಕ ಟೀಕೆಗಳಿಗೆ ಕೊಹ್ಲಿ ಒಂದೇ ಪದದಲ್ಲಿ ಉತ್ತರ ನೀಡಿದ್ದಾರೆ.

Virat Kohli: ಟೀಕಿಸುವವರಿಗೆ ಒಂದೇ ಪದದಲ್ಲಿ ಉತ್ತರ ಕೊಟ್ಟ ಕಿಂಗ್ ಕೊಹ್ಲಿ; ಏನದು ಗೊತ್ತಾ?
ವಿರಾಟ್ ಕೊಹ್ಲಿ
TV9 Web
| Updated By: ಪೃಥ್ವಿಶಂಕರ|

Updated on: Jul 16, 2022 | 3:52 PM

Share

ಕೆಲವೇ ಕೆಲವು ವರ್ಷಗಳ ಹಿಂದೆ ಕ್ರಿಕೆಟ್ ದುನಿಯಾದಲ್ಲಿ ವಿರಾಟ್ ಕೊಹ್ಲಿ (Virat Kohli) ಮುಟ್ಟಿದ್ದೆಲ್ಲ ಚಿನ್ನ ಎಂಬ ಮಾತು ಚಾಲ್ತಿಯಲ್ಲಿತ್ತು. ಆದರೆ ಇತ್ತೀಚಿನ ದಿನಗಳಲ್ಲಿ ಅಂದು ಕೊಹ್ಲಿಯನ್ನು ಹೊಗಳಿದವರೆಲ್ಲ ಇಂದು ತೆಗಳಲು ಶುರು ಮಾಡಿದ್ದಾರೆ. ಜೊತೆಗೆ ಕಳಪೆ ಫಾರ್ಮ್​ನಿಂದ ಬಳಲುತ್ತಿರುವ ಕೊಹ್ಲಿಗೆ ಬೆನ್ನೇಲುಬಾಗಿ ನಿಲ್ಲದೆ, ಕೊಹ್ಲಿಯನ್ನು ತಂಡದಿಂದ ಹೊರಗಿಡಿ ಎಂಬ ಟೀಕೆಗಳನ್ನು ಸಹ ಮಾಡುತ್ತಿದ್ದಾರೆ. ಆದರೆ ಟೀಕಾಕಾರರ ಟೀಕೆಗಳಿಗೆ ಪ್ರತಿಕ್ರಿಯಿಸದೆ ಇಷ್ಟು ದಿನ ಸುಮ್ಮನಿದ್ದ ಕೊಹ್ಲಿ ಈಗ ತಮ್ಮ ಮೌನ ಮುರಿದಿದ್ದಾರೆ. ಜೊತೆಗೆ ಒಂದೇ ಒಂದು ಪದ ಹಾಗೂ ಒಂದು ಫೋಟೋದಿಂದ ಇಡೀ ಟೀಕಾಕಾರರಿಗೆ ಉತ್ತರ ನೀಡಿದ್ದಾರೆ.

ವಿರಾಟ್ ಕೊಹ್ಲಿ ಪ್ರಸ್ತುತ ತಮ್ಮ ವೃತ್ತಿಜೀವನದ ಕೆಟ್ಟ ಹಂತವನ್ನು ಎದುರಿಸುತ್ತಿದ್ದಾರೆ.  ಹಲವು ಅನುಭವಿ ಆಟಗಾರರು ಕೊಹ್ಲಿಯನ್ನು ತಂಡದಿಂದ ಹೊರಗಿಡುವ ಬಗ್ಗೆ ಮಾತನಾಡಿದ್ದಾರೆ. ಕೊಹ್ಲಿಯ ಬ್ಯಾಟ್ ತುಂಬಾ ಸಮಯದಿಂದ ರನ್ ಗಳಿಸುತ್ತಿಲ್ಲ. 2019ರಿಂದ ಅಂತರಾಷ್ಟ್ರೀಯ ಮಟ್ಟದಲ್ಲಿ ಶತಕ ಬಾರಿಸಲು ಸಾಧ್ಯವಾಗಿಲ್ಲ. ಸದ್ಯ ಇಂಗ್ಲೆಂಡ್ ಪ್ರವಾಸದಲ್ಲಿರುವ ಅವರು ಏಕದಿನ ಸರಣಿಯಲ್ಲಿ ಭಾಗವಹಿಸುತ್ತಿದ್ದಾರೆ. ಈ ಸರಣಿಯ ಮೂರನೇ ಪಂದ್ಯ ಭಾನುವಾರ ನಡೆಯಲಿದ್ದು, ಕೊಹ್ಲಿ ಜೊತೆಗೆ ಅವರ ಎಲ್ಲಾ ಅಭಿಮಾನಿಗಳು ಈ ಪಂದ್ಯದಲ್ಲಿ ಕೊಹ್ಲಿ ಫಾರ್ಮ್‌ಗೆ ಮರಳುತ್ತಾರೆ ಎಂದು ಹಾರೈಸುತ್ತಿದ್ದಾರೆ. ಆದರೆ ಈ ಪಂದ್ಯಕ್ಕೂ ಮುನ್ನ ಕೊಹ್ಲಿ ಸ್ಪೂರ್ತಿದಾಯಕ ಪೋಸ್ಟ್ ಒಂದನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ಇದನ್ನೂ ಓದಿ
Image
India vs England 3rd ODI Match Live Streaming: ನಾಳೆ ಫೈನಲ್; ಪಂದ್ಯ ಆರಂಭದ ಸಮಯ 5:30 ಅಲ್ಲ
Image
Singapore Open 2022: ಸೆಮಿಫೈನಲ್‌ನಲ್ಲಿ ಸಿಂಧುಗೆ ಸುಲಭ ಜಯ; ಚಾಂಪಿಯನ್ ಪಟ್ಟಕ್ಕೇರಲು ಇನ್ನೊಂದೆ ಮೆಟ್ಟಿಲು ಬಾಕಿ

ಕೊಹ್ಲಿಗೆ ಸದ್ಯಕ್ಕೆ ರನ್‌ಗಳ ಅಗತ್ಯವಿದ್ದು, ಅದಕ್ಕಾಗಿ ಅವರು ಪಾಸಿಟಿವ್ ಆಗಿ ಚಿಂತಿಸುವುದು ಮುಖ್ಯವಾಗಿದೆ. ಇದು ಕೊಹ್ಲಿಗೂ ಚೆನ್ನಾಗಿ ಗೊತ್ತು. ಹೀಗಾಗಿ ತಾನು ಸದಾ ಪಾಸಿಟಿವ್ ಆಗಿದ್ದು, ಯಾವುದೇ ರೀತಿಯಲ್ಲಿ ಬಿಟ್ಟುಕೊಡುವುದಿಲ್ಲ ಎಂದು ಕೊಹ್ಲಿ ತಮ್ಮ ಪೋಸ್ಟ್‌ವೊಂದರಲ್ಲಿ ಹೇಳಿಕೊಂಡಿದ್ದಾರೆ. ಕೊಹ್ಲಿ, ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿರುವ ಫೋಟೋಗೆ ‘ಪರ್ಸ್ಪೆಕ್ಟಿವ್’ ಎಂಬ ಶಿರ್ಷಿಕೆ ನೀಡಿದ್ದಾರೆ. ಜೊತೆಗೆ ಕೊಹ್ಲಿ ಹಂಚಿಕೊಂಡಿರುವ ಫೋಟೋದಲ್ಲಿ, ವಾಟ್ ಇಫ್ ಐ ಫಾಲ್? ಓ, ಬಟ್ ಡಾರ್ಲಿಂಗ್, ವಾಟ್ ಇಫ್ ಯು ಫ್ಲೈ (What if I fall? Oh, but darling, what if you fly?”) ಎಂಬ ಅದ್ಭುತ ಅರ್ಥ ನೀಡುವ ಹೇಳಿಕೆ ಕೂಡ ಇದೆ. ಇದರರ್ಥ ಯಾರು ಸೋಲಿನಿಂದ ಹತಾಷರಾಗಿದ್ದಾರೋ ಅಥವಾ ತಾವು ಮಾಡುತ್ತಿರುವ ನಿರ್ದಿಷ್ಟ ಕೆಲಸ ನನ್ನಿಂದ ಸಾಧ್ಯವಾಗುತ್ತಾ ಎಂಬ ಅನುಮಾನದಿಂದ ಚಿಂತಿಸುತ್ತಿರುತ್ತಾರೋ ಅಂತಹವರಿಗೆ ಪ್ರೋತ್ಸಾಹಿಸುವಂತ್ತಾದಾಗಿದೆ.

ಕೀರ್ತನೆ ಕಾರ್ಯಕ್ರಮದಲ್ಲಿ ಭಾಗಿ

ಕೊಹ್ಲಿ ತಮ್ಮ ಪತ್ನಿ ಅನುಷ್ಕಾ ಶರ್ಮಾ ಅವರೊಂದಿಗೆ ಇಂಗ್ಲೆಂಡ್‌ನಲ್ಲಿ ಆಯೋಜನೆಯಾಗಿದ್ದ ಕೀರ್ತನೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಕೊಹ್ಲಿ ಮತ್ತು ಅನುಷ್ಕಾ ಕೀರ್ತನೆ ಕಾರ್ಯಕ್ರಮದಲ್ಲಿ ಭಾಗವಹಿಸಿದ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿವೆ. ಈ ಕೀರ್ತನೆ ಕಾರ್ಯಕ್ರಮದ ವಿಡಿಯೋ ಕೂಡ ಸಾಕಷ್ಟು ವೈರಲ್ ಆಗುತ್ತಿದೆ. ಈ ಕೀರ್ತನೆ ಕಾರ್ಯಕ್ರಮವನ್ನು ಅಮೆರಿಕದ ಗಾಯಕ ಕೃಷ್ಣ ದಾಸ್ ಅವರು ಲಂಡನ್‌ನಲ್ಲಿ ಆಯೋಜಿಸಿದ್ದರು. ಜುಲೈ 14 ರಿಂದ 15 ರವರೆಗೆ ಎರಡು ದಿನಗಳ ಕಾಲ ಲಂಡನ್‌ನಲ್ಲಿ ಈ ಕೀರ್ತನೆಯನ್ನು ಆಯೋಜಿಸಲಾಗಿದೆ. ಭಾರತ ಮತ್ತು ಇಂಗ್ಲೆಂಡ್ ಎರಡನೇ ಏಕದಿನ ಪಂದ್ಯವನ್ನು ಲಂಡನ್‌ನಲ್ಲಿಯೇ ಆಡಿದ್ದವು. ಹಾಗಾಗಿ ಪಂದ್ಯ ಮುಗಿದ ಬಳಿಕ ಕೊಹ್ಲಿ ಮತ್ತು ಪತ್ನಿ ಅನುಷ್ಕಾ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.