WTC Points: ಹೀನಾಯ ಸೋಲಿನ ನಂತರ ಡಬ್ಲ್ಯುಟಿಸಿ ಪಾಯಿಂಟ್ ಪಟ್ಟಿಯಲ್ಲಿ ಕುಸಿದ ಪಾಕಿಸ್ತಾನ; ಭಾರತಕ್ಕೆ ಭರ್ಜರಿ ಲಾಭ
WTC Points: ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಅಂಕಪಟ್ಟಿಯಲ್ಲಿ ದಕ್ಷಿಣ ಆಫ್ರಿಕಾ ಮೊದಲ ಸ್ಥಾನದಲ್ಲಿದೆ. ಅದರ PCT ಅತ್ಯಧಿಕ 71.43% ಆಗಿದೆ. 70% ನೊಂದಿಗೆ ಆಸ್ಟ್ರೇಲಿಯಾ ಎರಡನೇ ಸ್ಥಾನದಲ್ಲಿದೆ.
ಗಾಲೆಯಲ್ಲಿ ನಡೆದ ಎರಡನೇ ಟೆಸ್ಟ್ ಪಂದ್ಯದಲ್ಲಿ ಶ್ರೀಲಂಕಾ ಪಾಕಿಸ್ತಾನವನ್ನು (Sri Lanka defeated Pakistan) ಸೋಲಿಸಿತು. ಮೊದಲ ಟೆಸ್ಟ್ ಗೆದ್ದಿದ್ದ ಪಾಕಿಸ್ತಾನ ತಂಡ ಎರಡನೇ ಪಂದ್ಯದಲ್ಲಿ 246 ರನ್‌ಗಳ ಬೃಹತ್ ಸೋಲು ಕಂಡಿತ್ತು. 508 ರನ್‌ಗಳ ಬೃಹತ್ ಗುರಿ ಬೆನ್ನತ್ತಿದ ಪಾಕಿಸ್ತಾನ ತಂಡ ಕೊನೆಯ ದಿನದಾಟದಲ್ಲಿ ಕೇವಲ 261 ರನ್‌ಗಳಿಗೆ ಆಲೌಟ್ ಆಗಿದ್ದು, ಇದರೊಂದಿಗೆ ಟೆಸ್ಟ್ ಸರಣಿ ಗೆಲ್ಲುವ ಸುವರ್ಣಾವಕಾಶವೂ ಕೈ ತಪ್ಪಿದೆ. ಈ ಮೂಲಕ ಟೆಸ್ಟ್ ಸರಣಿಯು 1-1 ಡ್ರಾದಲ್ಲಿ ಕೊನೆಗೊಂಡಿತು.ಈ ಸೋಲಿನೊಂದಿಗೆ ಪಾಕಿಸ್ತಾನಕ್ಕೆ ಮತ್ತೊಂದು ಹೊಡೆತ ಬಿದ್ದಿದ್ದು, ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಪಾಯಿಂಟ್ ಪಟ್ಟಿಯಲ್ಲಿ (World Test Championship points table) ಭಾರೀ ಹಿನ್ನಡೆ ಅನುಭವಿಸಿದೆ.
ಪಾಕಿಸ್ತಾನ ಐದನೇ ಸ್ಥಾನಕ್ಕೆ
ಗಾಲೆಯಲ್ಲಿ ನಡೆದ ಎರಡನೇ ಟೆಸ್ಟ್‌ನಲ್ಲಿ ಸೋತಿರುವ ಪಾಕಿಸ್ತಾನ ಇದೀಗ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಅಂಕಪಟ್ಟಿಯಲ್ಲಿ ಮೂರನೇ ಸ್ಥಾನದಿಂದ ಐದನೇ ಸ್ಥಾನಕ್ಕೆ ಕುಸಿದಿದೆ. ಅರ್ಥಾತ್ ಈಗ ಭಾರತ ತಂಡ ಪಾಕಿಸ್ತಾನಕ್ಕಿಂತ ಮೇಲುಗೈ ಸಾಧಿಸಿದೆ. ಭಾರತ ಅಂಕಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದೆ. ಭಾರತದ PCT ಶೇಕಡಾ 52.08 ರಷ್ಟಿದ್ದು, ಅದೇ ಸಮಯದಲ್ಲಿ, ಪಾಕಿಸ್ತಾನ 51.85 ಶೇಕಡಾದೊಂದಿಗೆ ಐದನೇ ಸ್ಥಾನದಲ್ಲಿದೆ. ಶ್ರೀಲಂಕಾ ದೊಡ್ಡ ಗೆಲುವಿನೊಂದಿಗೆ ಮೂರನೇ ಸ್ಥಾನವನ್ನು ವಶಪಡಿಸಿಕೊಂಡಿದೆ. ಈ ತಂಡ ಶೇ.53.33 ರೊಂದಿಗೆ ಅಗ್ರ 3ನೇ ಸ್ಥಾನ ಪಡೆದಿದೆ.
ದಕ್ಷಿಣ ಆಫ್ರಿಕಾ ನಂ 1
ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಅಂಕಪಟ್ಟಿಯಲ್ಲಿ ದಕ್ಷಿಣ ಆಫ್ರಿಕಾ ಮೊದಲ ಸ್ಥಾನದಲ್ಲಿದೆ. ಅದರ PCT ಅತ್ಯಧಿಕ 71.43% ಆಗಿದೆ. 70% ನೊಂದಿಗೆ ಆಸ್ಟ್ರೇಲಿಯಾ ಎರಡನೇ ಸ್ಥಾನದಲ್ಲಿದೆ. ಈ ಅಂತರವನ್ನು ಮತ್ತಷ್ಟು ಹೆಚ್ಚಿಸಿಕೊಳ್ಳಲು ದಕ್ಷಿಣ ಆಫ್ರಿಕಾಕ್ಕೆ ಅವಕಾಶವಿದೆ. ಮುಂದಿನ ತಿಂಗಳು ಇಂಗ್ಲೆಂಡ್ ವಿರುದ್ಧ ತಂಡ ಮೂರು ಪಂದ್ಯಗಳ ಟೆಸ್ಟ್ ಸರಣಿಯನ್ನು ಆಡಬೇಕಿದೆ.
ಪಾಕಿಸ್ತಾನದ ಮಧ್ಯಮ ಕ್ರಮಾಂಕ ವಿಫಲ
ಗಾಲೆ ಟೆಸ್ಟ್ ಕುರಿತು ಮಾತನಾಡುವುದಾದರೆ, ಪಾಕಿಸ್ತಾನದ ಮಧ್ಯಮ ಕ್ರಮಾಂಕ ಎರಡನೇ ಇನ್ನಿಂಗ್ಸ್‌ನಲ್ಲಿ ಕಾರ್ಡ್‌ಗಳ ಉದುರಿತು. ನಾಯಕ ಬಾಬರ್ ಅಜಮ್ ಬಿಟ್ಟರೆ ಶ್ರೀಲಂಕಾ ಸ್ಪಿನ್ನರ್‌ಗಳ ಎದುರು ನಿಲ್ಲುವ ಧೈರ್ಯವನ್ನು ಯಾವ ಬ್ಯಾಟ್ಸ್‌ಮನ್‌ಗೂ ತೋರಿಸಲಾಗಲಿಲ್ಲ. ಬಾಬರ್ ಇಂದು ಎರಡನೇ ಇನ್ನಿಂಗ್ಸ್‌ನಲ್ಲಿ 81 ರನ್ ಗಳಿಸಿ ಔಟಾದರು. ಅಬ್ದುಲ್ಲಾ ಶಫೀಕ್ 16, ಇಮಾಮ್ 49 ಮತ್ತು ಮೊಹಮ್ಮದ್ ರಿಜ್ವಾನ್ 37 ರನ್ ಗಳಿಸಿದರು. ಫವಾದ್ ಆಲಂ, ಅಘಾ ಸಲ್ಮಾನ್ ವಿಫಲರಾದರು. ಹೀಗಾಗಿ ಎರಡನೇ ಇನ್ನಿಂಗ್ಸ್ ಕೇವಲ 261 ರನ್‌ಗಳಿಗೆ ಆಲೌಟ್ ಆಗಿತ್ತು. ಎರಡನೇ ಇನ್ನಿಂಗ್ಸ್‌ನಲ್ಲಿ ಪ್ರಭಾತ್ ಜಯಸೂರ್ಯ 5 ವಿಕೆಟ್ ಪಡೆದರು. ಅದೇ ಸಮಯದಲ್ಲಿ ರಮೇಶ್ ಮೆಂಡಿಸ್ 4 ಬಲಿಪಶುಗಳನ್ನು ಮಾಡಿದರು. ಶ್ರೀಲಂಕಾ ಪರ ಎರಡನೇ ಇನ್ನಿಂಗ್ಸ್‌ನಲ್ಲಿ ಶತಕ ಸಿಡಿಸಿದ ಧನಂಜಯ್ ಡಿ ಸಿಲ್ವಾ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು. ಅದೇ ವೇಳೆ ಸರಣಿಯಲ್ಲಿ 17 ವಿಕೆಟ್ ಪಡೆದ ಪ್ರಭಾತ್ ಸರಣಿ ಶ್ರೇಷ್ಠ ಪ್ರಶಸ್ತಿ ಪಡೆದರು.
Published On - 8:12 pm, Thu, 28 July 22