Asia Cup 2022: ಶ್ರೀಲಂಕಾದಲ್ಲಿ ಆರ್ಥಿಕ ಬಿಕ್ಕಟ್ಟು; ಯುಎಇಯಲ್ಲಿ ಏಷ್ಯಾ ಕಪ್ ಆಯೋಜನೆ ಖಚಿತ

Asia Cup 2022: ಈ ಬಾರಿಯ ಏಷ್ಯಾ ಕಪ್ 2022 ಶ್ರೀಲಂಕಾದ ಬದಲಿಗೆ ಯುಎಇಯಲ್ಲಿ ನಡೆಯಲಿದೆ. ಇದು ಆಗಸ್ಟ್ 27 ರಂದು ಪ್ರಾರಂಭವಾಗಲಿದ್ದು, ಪ್ರಶಸ್ತಿ ಪಂದ್ಯವು ಸೆಪ್ಟೆಂಬರ್ 11 ರಂದು ನಡೆಯಲಿದೆ.

Asia Cup 2022: ಶ್ರೀಲಂಕಾದಲ್ಲಿ ಆರ್ಥಿಕ ಬಿಕ್ಕಟ್ಟು; ಯುಎಇಯಲ್ಲಿ ಏಷ್ಯಾ ಕಪ್ ಆಯೋಜನೆ ಖಚಿತ
ಪ್ರಾತಿನಿಧಿಕ ಚಿತ್ರ
Follow us
TV9 Web
| Updated By: ಪೃಥ್ವಿಶಂಕರ

Updated on:Jul 28, 2022 | 2:56 PM

ಈ ಬಾರಿಯ ಏಷ್ಯಾ ಕಪ್ 2022 (Asia Cup 2022) ಶ್ರೀಲಂಕಾದ ಬದಲಿಗೆ ಯುಎಇಯಲ್ಲಿ ನಡೆಯಲಿದೆ. ಇದು ಆಗಸ್ಟ್ 27 ರಂದು ಪ್ರಾರಂಭವಾಗಲಿದ್ದು, ಪ್ರಶಸ್ತಿ ಪಂದ್ಯವು ಸೆಪ್ಟೆಂಬರ್ 11 ರಂದು ನಡೆಯಲಿದೆ. ಮೊದಲ ಏಷ್ಯಾ ಕಪ್ ಶ್ರೀಲಂಕಾದಲ್ಲಿ ನಡೆಯಬೇಕಿತ್ತು, ಆದರೆ ಈ ಸಮಯದಲ್ಲಿ ಶ್ರೀಲಂಕಾ ಆರ್ಥಿಕ ಬಿಕ್ಕಟ್ಟನ್ನು ಎದುರಿಸುತ್ತಿದೆ. ಇಡೀ ದೇಶದಲ್ಲಿ ಪ್ರಕ್ಷುಬ್ಧತೆ ಇದೆ. ದೇಶವು ಆಹಾರ ಮತ್ತು ನೀರಿನ ಕೊರತೆಯಿಂದ ಹೋರಾಡುತ್ತಿದೆ. ಅಷ್ಟೇ ಅಲ್ಲ, ಪೆಟ್ರೋಲ್ ಮತ್ತು ಡೀಸೆಲ್‌ನಲ್ಲೂ ಗಣನೀಯ ಕೊರತೆ ಉಂಟಾಗಿದೆ. ಜನರು ಪ್ರತಿದಿನ ಬಂಕ್ ಮುಂದೆ ಕ್ಯೂ ನಿಲ್ಲುತ್ತಿದ್ದಾರೆ. ಈ ಹಿಂದೆ ಶ್ರೀಲಂಕಾ ಆಸ್ಟ್ರೇಲಿಯಾ ಪಂದ್ಯದ ವೇಳೆಯೂ ಪ್ರತಿಭಟನಾಕಾರರು ಕ್ರೀಡಾಂಗಣ ಪ್ರವೇಶಿಸಿದ್ದರು. ಹೀಗಾಗಿ ಮುನ್ನೇಚ್ಚರಿಕ ಕ್ರಮವಾಗಿ ಏಷ್ಯಾ ಕಪ್​ ಪಂದ್ಯಾವಳಿಯನ್ನು ಯುಎಇಗೆ ಸ್ಥಳಾಂತರಿಸಲಾಗಿದೆ.

16 ದಿನಗಳ ಪಂದ್ಯಾವಳಿ

ಕಠಿಣ ಪರಿಸ್ಥಿತಿಯಲ್ಲಿಯೂ ಸಹ, ಶ್ರೀಲಂಕಾ ಕ್ರಿಕೆಟ್ ಮಂಡಳಿಯು ಏಷ್ಯಾಕಪ್ ಅನ್ನು ಆಯೋಜಿಸಲು ಹೆಣಗಾಡುತ್ತಿದೆ, ಆದರೆ ಈಗ ಮಾಧ್ಯಮ ವರದಿಗಳ ಪ್ರಕಾರ, ಪಂದ್ಯಾವಳಿಯನ್ನು ಶ್ರೀಲಂಕಾ ಬದಲಿಗೆ ಯುಎಇಯಲ್ಲಿ ಆಯೋಜಿಸಲಾಗುತ್ತದೆ. ಆದಾಗ್ಯೂ, ಈ ಹಿಂದೆ, ಶ್ರೀಲಂಕಾ ಕ್ರಿಕೆಟ್ ಮಂಡಳಿಯ ಕಾರ್ಯದರ್ಶಿ ಮೋಹನ್ ಡಿ ಸಿಲ್ವಾ ಅವರು 16 ದಿನಗಳ ಸುದೀರ್ಘ ಪಂದ್ಯಾವಳಿಯನ್ನು ಯುಎಇಯಲ್ಲಿ ಆಯೋಜಿಸಬಹುದು ಎಂದು ಸೂಚಿಸಿದ್ದರು. ಏಷ್ಯಾಕಪ್‌ನಲ್ಲಿ ಭಾರತ, ಶ್ರೀಲಂಕಾ, ಪಾಕಿಸ್ತಾನ, ಬಾಂಗ್ಲಾದೇಶ, ಅಫ್ಘಾನಿಸ್ತಾನ ಸೇರಿದಂತೆ ಒಟ್ಟು 6 ತಂಡಗಳು ಭಾಗವಹಿಸಲಿವೆ. ಒಂದು ತಂಡ ಅರ್ಹತಾ ತಂಡವಾಗಿರುತ್ತದೆ.

ಇದನ್ನೂ ಓದಿ
Image
Asia Cup 2022: ‘ನಂ.1 ಮೇರಾ ಇಂಡಿಯಾ’ ಏಷ್ಯಾ ಕಪ್ ಪ್ರೋಮೋದಲ್ಲಿ ಮಿಂಚಿದ ರೋಹಿತ್, ಕೊಹ್ಲಿ; ವಿಡಿಯೋ
Image
ಏಷ್ಯಾಕಪ್‌ಗೂ ಮುನ್ನ ಜಿಂಬಾಬ್ವೆ ಪ್ರವಾಸ ಕೈಗೊಳ್ಳಲಿದೆ ಭಾರತ; ಏಕದಿನ ಸರಣಿಯ ವೇಳಾಪಟ್ಟಿ ಹೀಗಿದೆ
Image
Asia Cup: ಪಾಕಿಸ್ತಾನದಲ್ಲಿ 2023 ರ ಏಷ್ಯಾ ಕಪ್ ಆಯೋಜನೆಗೆ ಜೈ ಶಾ ಒಪ್ಪಿಗೆ! ಬದ್ಧವೈರಿ ನಾಡಿಗೆ ಭಾರತ ಕಾಲಿಡುತ್ತಾ?

ಏಷ್ಯನ್ ಕ್ರಿಕೆಟ್ ಮಂಡಳಿಗೆ ಮಾಹಿತಿ ನೀಡಲಾಗಿದೆ

ಆಗಸ್ಟ್ 20ರಿಂದ ಅರ್ಹತಾ ಟೂರ್ನಿ ಆರಂಭವಾಗಲಿದ್ದು, ಹಾಂಕಾಂಗ್, ಕುವೈತ್, ಸಿಂಗಾಪುರ, ಯುಎಇ ತಂಡಗಳು ಇದರಲ್ಲಿ ಭಾಗವಹಿಸಲಿವೆ. ಇತ್ತೀಚೆಗಷ್ಟೇ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಕೂಡ ಏಷ್ಯಾ ಕಪ್ ಯುಎಇಯಲ್ಲಿ ನಡೆಯಲಿದೆ ಎಂದು ಹೇಳಿದ್ದರು. ಶ್ರೀಲಂಕಾದ ಮಂಡಳಿಯು ಇತ್ತೀಚೆಗೆ ಏಷ್ಯನ್ ಕ್ರಿಕೆಟ್ ಕೌನ್ಸಿಲ್‌ಗೆ ದೇಶದ ಪ್ರಸ್ತುತ ಪರಿಸ್ಥಿತಿಯನ್ನು ಗಮನಿಸಿದರೆ, ಏಷ್ಯಾಕಪ್ ಅನ್ನು ಆಯೋಜಿಸುವ ಸ್ಥಿತಿಯಲ್ಲಿಲ್ಲ ಎಂದು ತಿಳಿಸಿತ್ತು. ಆರ್ಥಿಕ ಬಿಕ್ಕಟ್ಟು ಮತ್ತು ರಾಜಕೀಯ ಪ್ರಕ್ಷುಬ್ಧತೆಯಿಂದಾಗಿ ಶ್ರೀಲಂಕಾ ಲಂಕಾ ಪ್ರೀಮಿಯರ್ ಲೀಗ್‌ನ ಮೂರನೇ ಸೀಸನ್​ ಅನ್ನು ಕೂಡ ಮುಂದೂಡಿದೆ.

ಭಾರತ ಮತ್ತು ಪಾಕಿಸ್ತಾನ ಮುಖಾಮುಖಿಯಾಗಲಿವೆ

ಟಿ20 ವಿಶ್ವಕಪ್‌ನಲ್ಲಿ ಭಾರತ ಮತ್ತು ಪಾಕಿಸ್ತಾನ ಮುಖಾಮುಖಿಯಾಗಲಿವೆ, ಆದರೆ ಅದಕ್ಕೂ ಮೊದಲು ಎರಡೂ ತಂಡಗಳು ಈಗ ಯುಎಇಯಲ್ಲಿ ಮುಖಾಮುಖಿಯಾಗಲಿವೆ. ಇಬ್ಬರ ನಡುವಿನ ಪಂದ್ಯ ಆಗಸ್ಟ್ 28 ರಂದು ನಡೆಯಲಿದೆ. T20 ವಿಶ್ವಕಪ್ 2021 ರ ನಂತರ ಉಭಯ ತಂಡಗಳು ಮೊದಲ ಬಾರಿಗೆ ಮುಖಾಮುಖಿಯಾಗಲಿವೆ. ಇದರ ನಂತರ ಅಕ್ಟೋಬರ್ 23 ರಂದು ಭಾರತ ಮತ್ತು ಪಾಕಿಸ್ತಾನವು T20 ವಿಶ್ವಕಪ್‌ನಲ್ಲಿ ಮುಖಾಮುಖಿಯಾಗಲಿದೆ. ಭಾರತ 6 ಬಾರಿ ಏಷ್ಯಾಕಪ್ ಗೆದ್ದಿದೆ. ಕಳೆದ ಬಾರಿ ಭಾರತ ಬಾಂಗ್ಲಾದೇಶವನ್ನು ಸೋಲಿಸಿ ಪ್ರಶಸ್ತಿ ಗೆದ್ದಿತ್ತು.

Published On - 2:56 pm, Thu, 28 July 22

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ