AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಏಷ್ಯಾಕಪ್‌ಗೂ ಮುನ್ನ ಜಿಂಬಾಬ್ವೆ ಪ್ರವಾಸ ಕೈಗೊಳ್ಳಲಿದೆ ಭಾರತ; ಏಕದಿನ ಸರಣಿಯ ವೇಳಾಪಟ್ಟಿ ಹೀಗಿದೆ

ಮುಂದಿನ ತಿಂಗಳು ಮೂರು ಪಂದ್ಯಗಳ ಏಕದಿನ ಸರಣಿಗಾಗಿ ಭಾರತ ಜಿಂಬಾಬ್ವೆ ಪ್ರವಾಸ ಕೈಗೊಳ್ಳಲಿದೆ. ಪ್ರವಾಸದ ಅಧಿಕೃತ ದಿನಾಂಕವನ್ನು ಇನ್ನೂ ಘೋಷಿಸಲಾಗಿಲ್ಲ.

ಏಷ್ಯಾಕಪ್‌ಗೂ ಮುನ್ನ ಜಿಂಬಾಬ್ವೆ ಪ್ರವಾಸ ಕೈಗೊಳ್ಳಲಿದೆ ಭಾರತ; ಏಕದಿನ ಸರಣಿಯ ವೇಳಾಪಟ್ಟಿ ಹೀಗಿದೆ
ಟೀಂ ಇಂಡಿಯಾ
TV9 Web
| Edited By: |

Updated on:Jul 08, 2022 | 10:48 PM

Share

ಮುಂದಿನ ತಿಂಗಳು ಮೂರು ಪಂದ್ಯಗಳ ಏಕದಿನ ಸರಣಿಗಾಗಿ ಭಾರತ ಜಿಂಬಾಬ್ವೆ ಪ್ರವಾಸ ಕೈಗೊಳ್ಳಲಿದೆ. ಪ್ರವಾಸದ ಅಧಿಕೃತ ದಿನಾಂಕವನ್ನು ಇನ್ನೂ ಘೋಷಿಸಲಾಗಿಲ್ಲ. ಆದರೆ ಕ್ರಿಕ್‌ಬಜ್‌ನ ಸುದ್ದಿಗಳ ಪ್ರಕಾರ, ಪಂದ್ಯಗಳು ಐಸಿಸಿ ಏಕದಿನ ಸೂಪರ್ ಲೀಗ್‌ನ ಭಾಗವಾಗಿರಲಿದ್ದು, ಕ್ರಮವಾಗಿ ಆಗಸ್ಟ್ 18, 20 ಮತ್ತು 22 ರಂದು ಪಂದ್ಯಗಳು ನಡೆಯಲಿವೆ ಎಂದು ವರದಿಯಾಗಿದೆ.

ಈ ಸರಣಿಯು ಜಿಂಬಾಬ್ವೆಗೆ ನಿರ್ಣಾಯಕವಾಗಿದೆ. ಏಕೆಂದರೆ ಈ ಸರಣಿಯಲ್ಲಿ ಜಿಂಬಾಬ್ವೆ ಸಂಪಾಧಿಸುವ ಅಂಕಗಳು ಮುಂದಿನ ವರ್ಷದ ODI ವಿಶ್ವಕಪ್‌ಗೆ ಅರ್ಹತೆಗಾಗಿ ಎಣಿಕೆಯಾಗುತ್ತವೆ. ಈ ಬಗ್ಗೆ ಮಾತನಾಡಿರುವ ಜಿಂಬಾಬ್ವೆ ಕ್ರಿಕೆಟ್ (ZC) ನ ಅಧಿಕಾರಿಯೊಬ್ಬರು, ಭಾರತದ ವಿರುದ್ಧ ಏಕದಿನ ಸರಣಿಯನ್ನು ಆಯೋಜಿಸಲು ನಮಗೆ ತುಂಬಾ ಸಂತೋಷವಾಗಿದೆ. ನಾವು ಸ್ಪರ್ಧಾತ್ಮಕ ಮತ್ತು ಸ್ಮರಣೀಯ ಸರಣಿಗಾಗಿ ಎದುರು ನೋಡುತ್ತಿದ್ದೇವೆ ಎಂದು ಹೇಳಿಕೊಂಡಿದ್ದಾರೆ.

ಜೊತೆಗೆ ಟೀಂ ಇಂಡಿಯಾದ ದೊಡ್ಡ ಮತ್ತು ದಿಗ್ಗಜ ಆಟಗಾರರ ವಿರುದ್ಧ ಆಡುವ ಅವಕಾಶ ಪಡೆದ ನಮ್ಮ ಆಟಗಾರರಿಗೆ ಇದು ದೊಡ್ಡ ಅವಕಾಶ ಎಂದು ಅವರು ಹೇಳಿದರು. ಇದರಿಂದ ದೇಶದ ಯುವಕರು ಆಟವನ್ನು ಅಳವಡಿಸಿಕೊಳ್ಳುವಂತೆ ಪ್ರೇರೇಪಿಸುತ್ತದೆ. ಇದು ನಮಗೆ ಒಳ್ಳೆಯ ಅವಕಾಶ ಎಂದಿದ್ದಾರೆ.

ಇದನ್ನೂ ಓದಿ
Image
IND vs ENG: 5 ತಿಂಗಳ ನಂತರ ಶಾರ್ಟ್ ಫಾರ್ಮ್ಯಾಟ್‌ಗೆ ಕೊಹ್ಲಿ ರೀ ಎಂಟ್ರಿ; ವಿಫಲವಾದರೆ ಸ್ಥಾನಕ್ಕೆ ಕುತ್ತು!
Image
IND vs ENG: ಯುವರಾಜ್ ದಾಖಲೆ ಮುರಿದ ಹಾರ್ದಿಕ್; ಮೊದಲ ಟಿ20ಯಲ್ಲಿ ಇತಿಹಾಸ ಸೃಷ್ಟಿಸಿದ ಆಲ್ ರೌಂಡರ್
Image
IND VS ENG 2nd T20 Match Live Streaming: 2ನೇ ಟಿ20 ಪಂದ್ಯಕ್ಕೆ ಸಮಯ ಬದಲಾವಣೆ; ಪಂದ್ಯದ ಬಗ್ಗೆ ಪೂರ್ಣ ಮಾಹಿತಿ ಇಲ್ಲಿದೆ

ಆರು ವರ್ಷಗಳ ನಂತರ ಭಾರತ ಜಿಂಬಾಬ್ವೆಗೆ ಭೇಟಿ ನೀಡಲಿದೆ. 2016ರಲ್ಲಿ ಕೊನೆಯ ಬಾರಿಗೆ ಟೀಂ ಇಂಡಿಯಾ ಇಲ್ಲಿಗೆ ಹೋದಾಗ ತಂಡದ ನಾಯಕತ್ವ ಮಹೇಂದ್ರ ಸಿಂಗ್ ಧೋನಿ ಕೈಯಲ್ಲಿತ್ತು. ಆ ಪ್ರವಾಸದಲ್ಲಿ ಮೂರು ODI ಮತ್ತು ಮೂರು T20 ಪಂದ್ಯಗಳ ಸರಣಿಯನ್ನು ಆಡಲಾಯಿತು. ಆದರೂ ಈ ಬಾರಿ ಕೇವಲ ಏಕದಿನ ಸರಣಿಯನ್ನು ಮಾತ್ರ ಆಡಲಿದ್ದಾರೆ.

ಮುಂಬರುವ ಎರಡು ತಿಂಗಳುಗಳು ಭಾರತಕ್ಕೆ ತುಂಬಾ ಕಾರ್ಯನಿರತವಾಗಿವೆ. ಜುಲೈ 17 ರಂದು ಇಂಗ್ಲೆಂಡ್ ಪ್ರವಾಸ ಕೊನೆಗೊಳ್ಳಲಿದ್ದು, ಇದಾದ ಬಳಿಕ ವೆಸ್ಟ್ ಇಂಡೀಸ್ ವಿರುದ್ಧ 22ರಿಂದ ಆಗಸ್ಟ್ 7ರವರೆಗೆ ಸರಣಿ ನಡೆಯಲಿದೆ. ಇದಾದ ನಂತರ ಆಗಸ್ಟ್ 27 ರಿಂದ ಏಷ್ಯಾಕಪ್ ಇದೆ, ಆದರೆ ಅದಕ್ಕೂ ಮೊದಲು ತಂಡವು ಜಿಂಬಾಬ್ವೆ ಪ್ರವಾಸಕ್ಕೆ ಹೋಗಬೇಕಾಗಿದೆ.

Published On - 10:01 pm, Fri, 8 July 22

ಇದ್ದಕ್ಕಿದ್ದಂತೆ ಜನರು, ಹಸುಗಳ ಮೇಲೆ ಕಾಡು ಕರಡಿ ದಾಳಿ; ವಿಡಿಯೋ ವೈರಲ್
ಇದ್ದಕ್ಕಿದ್ದಂತೆ ಜನರು, ಹಸುಗಳ ಮೇಲೆ ಕಾಡು ಕರಡಿ ದಾಳಿ; ವಿಡಿಯೋ ವೈರಲ್
ಮೈಸೂರು ರಿಂಗ್ ರಸ್ತೆಯ ಪರಿಸ್ಥಿತಿ ಹೇಗಿದೆ? ವಿಡಿಯೋ ಮೂಲಕ ತಿಳಿಸಿದ ಅನಿರುದ್
ಮೈಸೂರು ರಿಂಗ್ ರಸ್ತೆಯ ಪರಿಸ್ಥಿತಿ ಹೇಗಿದೆ? ವಿಡಿಯೋ ಮೂಲಕ ತಿಳಿಸಿದ ಅನಿರುದ್
ನರಕ ಸದೃಶ್ಯವಾಗಿತ್ತು ಖಳನಟ ವಜ್ರಮುನಿ ಕೊನೆಯ ದಿನಗಳು
ನರಕ ಸದೃಶ್ಯವಾಗಿತ್ತು ಖಳನಟ ವಜ್ರಮುನಿ ಕೊನೆಯ ದಿನಗಳು
ಉತ್ತರಾಖಂಡದ ಜೋಶಿಮಠದಲ್ಲಿರುವ ಸೇನಾ ಶಿಬಿರದಲ್ಲಿ ಬೆಂಕಿ ಅವಘಡ
ಉತ್ತರಾಖಂಡದ ಜೋಶಿಮಠದಲ್ಲಿರುವ ಸೇನಾ ಶಿಬಿರದಲ್ಲಿ ಬೆಂಕಿ ಅವಘಡ
ಪತಿ ಮತ್ತು ಮಾವನಿಂದ ಚಿತ್ರಹಿಂಸೆ
ಪತಿ ಮತ್ತು ಮಾವನಿಂದ ಚಿತ್ರಹಿಂಸೆ
ಬಳ್ಳಾರಿ ಗಲಭೆ: ಶಾಸಕ ಜನಾರ್ದನರೆಡ್ಡಿ ನಿವಾಸದಲ್ಲಿ ಮತ್ತೊಂದು ಬುಲೆಟ್ ಪತ್ತೆ
ಬಳ್ಳಾರಿ ಗಲಭೆ: ಶಾಸಕ ಜನಾರ್ದನರೆಡ್ಡಿ ನಿವಾಸದಲ್ಲಿ ಮತ್ತೊಂದು ಬುಲೆಟ್ ಪತ್ತೆ
ಗಿಲ್ಲಿ-ಅಶ್ವಿನಿ ನಡುವೆ ಮತ್ತೆ ಜಗಳ, ಯೋಗ್ಯತೆ ಬಗ್ಗೆ ಮಾತು: ವಿಡಿಯೋ
ಗಿಲ್ಲಿ-ಅಶ್ವಿನಿ ನಡುವೆ ಮತ್ತೆ ಜಗಳ, ಯೋಗ್ಯತೆ ಬಗ್ಗೆ ಮಾತು: ವಿಡಿಯೋ
ರಿವರ್ಸ್ ವೇಳೆ ನಿಯಂತ್ರಣ ತಪ್ಪಿದ ಕಾರು: ವಿಡಿಯೋ ನೋಡಿದ್ರೆ ಹೌಹಾರ್ತೀರಿ
ರಿವರ್ಸ್ ವೇಳೆ ನಿಯಂತ್ರಣ ತಪ್ಪಿದ ಕಾರು: ವಿಡಿಯೋ ನೋಡಿದ್ರೆ ಹೌಹಾರ್ತೀರಿ
ಬಳ್ಳಾರಿ ಘರ್ಷಣೆಯಲ್ಲಿ ಕೈ ಕಾರ್ಯಕರ್ತ ಬಲಿ: ಗಲಾಟೆ ಶುರುವಾಗಿದ್ದು ಹೇಗೆ?
ಬಳ್ಳಾರಿ ಘರ್ಷಣೆಯಲ್ಲಿ ಕೈ ಕಾರ್ಯಕರ್ತ ಬಲಿ: ಗಲಾಟೆ ಶುರುವಾಗಿದ್ದು ಹೇಗೆ?
ಸರ್ಕಾರಿ ಶಾಲಾ ಮಕ್ಕಳಿಗೆ ಶಿಕ್ಷಕರಿಂದ ಔತಣಕೂಟ: ವಿಶೇಷವೇನು?
ಸರ್ಕಾರಿ ಶಾಲಾ ಮಕ್ಕಳಿಗೆ ಶಿಕ್ಷಕರಿಂದ ಔತಣಕೂಟ: ವಿಶೇಷವೇನು?