
2026 ರ ಐಪಿಎಲ್ (IPL 2026) ಮುಗಿಯುವ ಹಂತಕ್ಕೆ ಬಂದಿದೆ. ಕೆಲವೇ ದಿನಗಳಲ್ಲಿ ಪ್ಲೇಆಫ್ ಸುತ್ತು ಆರಂಭವಾಗಲಿದೆ. ಐಪಿಎಲ್ ಅಂತ್ಯದೊಂದಿಗೆ ಟೀಂ ಇಂಡಿಯಾದ (Team India) ಅಂತರರಾಷ್ಟ್ರೀಯ ಕ್ಯಾಲೆಂಡರ್ ಕೂಡ ಶುರುವಾಗಲಿದೆ. ಅದರಂತೆ, ಭಾರತ ಎ ತಂಡವು ಶ್ರೀಲಂಕಾ ಪ್ರವಾಸ ಮಾಡಲಿದ್ದು, ಈ ಪ್ರವಾಸದಲ್ಲಿ ಶ್ರೀಲಂಕಾ ಎ, ಭಾರತ ಎ ಮತ್ತು ಅಫ್ಘಾನಿಸ್ತಾನ ಎ ತಂಡಗಳನ್ನು ಒಳಗೊಂಡ ಏಕದಿನ ತ್ರಿಕೋನ ಸರಣಿ (Tri-Series) ನಡೆಯಲಿದೆ. ಇದೀಗ ಬಿಸಿಸಿಐ ಈ ಸರಣಿಗೆ ಭಾರತ ಎ ತಂಡವನ್ನು ಪ್ರಕಟಿಸಿದೆ. ಐಪಿಎಲ್‌ನಲ್ಲಿ ತಮ್ಮ ಬ್ಯಾಟಿಂಗ್ ಮೂಲಕ ಗಮನ ಸೆಳೆಯುತ್ತಿರುವ ವೈಭವ್ ಸೂರ್ಯವಂಶಿ ಸೇರಿದಂತೆ ಹಲವಾರು ಯುವ ಆಟಗಾರರನ್ನು ತಂಡಕ್ಕೆ ಆಯ್ಕೆ ಮಾಡಲಾಗಿದೆ.
ಈ ಸರಣಿಗೆ ತಿಲಕ್ ವರ್ಮಾ ಅವರನ್ನು ಭಾರತ ಎ ತಂಡದ ನಾಯಕರನ್ನಾಗಿ ನೇಮಿಸಲಾಗಿದೆ, ರಿಯಾನ್ ಪರಾಗ್ ಉಪನಾಯಕರಾಗಿದ್ದಾರೆ. ಸರಣಿಯ ನಂತರ ಭಾರತ ಎ, ಶ್ರೀಲಂಕಾ ಎ ವಿರುದ್ಧ ಎರಡು ಬಹು-ದಿನದ (ರೆಡ್-ಬಾಲ್) ಪಂದ್ಯಗಳನ್ನು ಸಹ ಆಡಲಿದೆ. ಈ ಟೆಸ್ಟ್ ಪಂದ್ಯಗಳಿಗೆ ತಂಡವನ್ನು ನಂತರ ಪ್ರಕಟಿಸಲಾಗುವುದು. ತ್ರಿಕೋನ ಸರಣಿಯು ಜೂನ್ 9 ರಂದು ಪ್ರಾರಂಭವಾಗಲಿದ್ದು, ಜೂನ್ 21 ರಂದು ಅಂತಿಮ ಪಂದ್ಯ ನಡೆಯಲಿದೆ. ಎಲ್ಲಾ ತಂಡಗಳು ಪರಸ್ಪರ ಎರಡು ಬಾರಿ ಮುಖಾಮುಖಿಯಾಗಲಿದ್ದು, ಅಗ್ರ ಎರಡು ತಂಡಗಳು ಫೈನಲ್‌ನಲ್ಲಿ ಮುಖಾಮುಖಿಯಾಗಲಿವೆ.
ಐಪಿಎಲ್‌ನಲ್ಲಿ ರನ್ ಮಳೆ ಹರಿಸುತ್ತಿರುವ ಪ್ರಿಯಾಂಶ್ ಆರ್ಯ, ಆಯುಷ್ ಬಡೋನಿ ಮತ್ತು ಪ್ರಭ್ಸಿಮ್ರಾನ್ ಸಿಂಗ್ ಅವರಂತಹ ಯುವ ಆಟಗಾರರನ್ನು ಸಹ ಏಕದಿನ ತ್ರಿಕೋನ ಸರಣಿಗೆ ಆಯ್ಕೆ ಮಾಡಲಾಗಿದೆ. ಏತನ್ಮಧ್ಯೆ, ಯಶ್ ಠಾಕೂರ್, ಯುಧ್ವೀರ್ ಸಿಂಗ್, ಅನ್ಶುಲ್ ಕಾಂಬೋಜ್ ಮತ್ತು ಅರ್ಷದ್ ಖಾನ್ ಅವರಂತಹ ಯುವ ಬೌಲರ್‌ಗಳಿಗೂ ಈ ಸರಣಿಯಲ್ಲಿ ದೊಡ್ಡ ಅವಕಾಶ ಸಿಗಲಿದೆ.
🚨 News 🚨
India A squad for ODI tri-series in Sri Lanka announced.
The upcoming tri-series is scheduled to be held in June, 2026.
More Details ▶️ https://t.co/ZmL2u1boAW pic.twitter.com/7WXzZeeUFq
— BCCI (@BCCI) May 14, 2026
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ