2025ರ ಫೆಬ್ರವರಿ-ಮಾರ್ಚ್‌ನಲ್ಲಿ ನಡೆಯಲಿರುವ ಚಾಂಪಿಯನ್ಸ್ ಟ್ರೋಫಿಗೆ ಸಂಬಂಧಿಸಿದಂತೆ ಭಾರತ ಮತ್ತು ಪಾಕಿಸ್ತಾನದ ನಡುವಿನ ವಿವಾದ ಇದುವರೆಗೂ ಬಗೆಹರಿದಿಲ್ಲ. ಹೀಗಾಗಿ ಐಸಿಸಿ ಕೂಡ ಈ ಪಂದ್ಯಾವಳಿಯ ವೇಳಾಪಟ್ಟಿಯನ್ನು ಪ್ರಕಟಿಸಿಲ್ಲ. ಆದರೀಗ ಭಾರತ ಹಾಗೂ ಪಾಕಿಸ್ತಾನ ನಡುವಿನ ವಿವಾದವನ್ನು ಬಗೆಹರಿಸುವ ಸಲುವಾಗಿಯೇ ಐಸಿಸಿ, ನವೆಂಬರ್ 29 ರಂದು ಸಭೆ ನಡೆಸಲು ತೀರ್ಮಾನಿಸಿದೆ. ಈ ಸಭೆಯ ಬಳಿಕ ಪಂದ್ಯಾವಳಿಯ ವೇಳಾಪಟ್ಟಿಯನ್ನು ಪ್ರಕಟಿಸುವ ಸಾಧ್ಯತೆಗಳಿವೆ. ಆದರೆ ಅದಕ್ಕೂ ಮುನ್ನ ಅಂದರೆ ಕೇವಲ ಇನ್ನೇರಡು ದಿನಗಳಲ್ಲಿ ಭಾರತ ಮತ್ತು ಪಾಕಿಸ್ತಾನ ತಂಡಗಳ ನಡುವೆ ಕ್ರಿಕೆಟ್ ಪಂದ್ಯ ನಡೆಯಲಿದೆ.
ವಾಸ್ತವವಾಗಿ ಪುರುಷರ ಅಂಡರ್-19 ಏಷ್ಯಾಕಪ್ ನವೆಂಬರ್ 29 ರಿಂದ ಡಿಸೆಂಬರ್ 8 ರವರೆಗೆ ಯುಎಇಯಲ್ಲಿ ನಡೆಯಲಿದೆ. ಈ ಟೂರ್ನಿಯಲ್ಲಿ ಭಾರತ, ಪಾಕಿಸ್ತಾನ, ಅಫ್ಘಾನಿಸ್ತಾನ, ಶ್ರೀಲಂಕಾ, ಬಾಂಗ್ಲಾದೇಶ, ಜಪಾನ್, ಯುಎಇ ಮತ್ತು ನೇಪಾಳ ಸೇರಿದಂತೆ ಒಟ್ಟು 8 ತಂಡಗಳು ಭಾಗವಹಿಸಲಿವೆ. 1989 ರಲ್ಲಿ ಪ್ರಾರಂಭವಾದ ಅಂಡರ್-19 ಏಷ್ಯಾಕಪ್ನ 11ನೇ ಆವೃತ್ತಿಯ ಟೂರ್ನಿ ನಡೆಯಲಿದ್ದು, ಸತತ ನಾಲ್ಕನೇ ಬಾರಿಗೆ ಯುಎಇ ಆತಿಥ್ಯ ವಹಿಸಲಿದೆ. ಈ ಟೂರ್ನಿಯಲ್ಲಿ ಭಾಗವಹಿಸುವ 8 ತಂಡಗಳನ್ನು ತಲಾ 4ರ ಎರಡು ಗುಂಪುಗಳಾಗಿ ವಿಂಗಡಿಸಲಾಗಿದೆ. ಭಾರತ, ಪಾಕಿಸ್ತಾನ, ಜಪಾನ್ ಮತ್ತು ಯುಎಇ ತಂಡಗಳು ಎ ಗುಂಪಿನಲ್ಲಿದ್ದರೆ, ಶ್ರೀಲಂಕಾ, ಬಾಂಗ್ಲಾದೇಶ, ಅಫ್ಘಾನಿಸ್ತಾನ ಮತ್ತು ನೇಪಾಳವನ್ನು ಬಿ ಗುಂಪಿನಲ್ಲಿ ಸ್ಥಾನ ಪಡೆದಿವೆ.
ಭಾರತ ಮತ್ತು ಪಾಕಿಸ್ತಾನ ತಂಡಗಳು ಒಂದೇ ಗುಂಪಿನಲ್ಲಿರುವುದರಿಂದ ಎರಡೂ ತಂಡಗಳು ಗುಂಪು ಹಂತದಲ್ಲೇ ಮುಖಾಮುಖಿಯಾಗಲಿವೆ. ಭಾರತ ಮತ್ತು ಪಾಕಿಸ್ತಾನ ತಂಡಗಳ ನಡುವಿನ ಈ ಪಂದ್ಯ ನವೆಂಬರ್ 30 ರಂದು ದುಬೈ ಮೈದಾನದಲ್ಲಿ ನಡೆಯಲಿದೆ. ಈ ಪಂದ್ಯ ಭಾರತೀಯ ಕಾಲಮಾನ ಬೆಳಗ್ಗೆ 10.30ಕ್ಕೆ ನಡೆಯಲಿದೆ. ಇದರ ನಂತರ, ಭಾರತ ತಂಡವು ಡಿಸೆಂಬರ್ 2 ರಂದು ಶಾರ್ಜಾದಲ್ಲಿ ಜಪಾನ್ ತಂಡವನ್ನು ಎದುರಿಸಲಿದೆ. ಆ ನಂತರ ಭಾರತ ತನ್ನ ಕೊನೆಯ ಗುಂಪು ಹಂತದ ಪಂದ್ಯವನ್ನು ಯುಎಇ ತಂಡದ ವಿರುದ್ಧ ಡಿಸೆಂಬರ್ 4 ರಂದು ಆಡಲಿದೆ.
ಅಂಡರ್-19 ಏಷ್ಯಾಕಪ್ಗೆ ಟೀಂ ಇಂಡಿಯಾ: ಆಯುಷ್ ಮ್ಹಾತ್ರೆ, ವೈಭವ್ ಸೂರ್ಯವಂಶಿ, ಸಿ ಆಂಡ್ರೆ ಸಿದ್ಧಾರ್ಥ್, ಮೊಹಮ್ಮದ್ ಅಮನ್ (ನಾಯಕ), ಕಿರಣ್ ಚೋರ್ಮಲೆ (ಉಪನಾಯಕ), ಪ್ರಣಬ್ ಪಂತ್, ಹರ್ವಂಶ್ ಸಿಂಗ್ ಪಂಗಾಲಿಯಾ (ವಿಕೆಟ್ ಕೀಪರ್), ಅನುರಾಗ್ ಕಾವ್ಡೆ (ವಿಕೆಟ್ ಕೀಪರ್), ಹಾರ್ದಿಕ್ ರಾಜ್, ಮೊಹಮ್ಮದ್ ಅನನ್, ಸಮರ್ತ್ ಕಾರ್ತಿಕೇಯ, ನಾಗರಾಜ್, ಯುಧಾಜಿತ್ ಗುಹಾ, ಚೇತನ್ ಶರ್ಮಾ, ನಿಖಿಲ್ ಕುಮಾರ್.
ನಾನ್ ಟ್ರಾವೆಲಿಂಗ್ ರಿಸರ್ವ್: ಸಾಹಿಲ್ ಪರಾಖ್, ನಮನ್ ಪುಷ್ಪಕ್, ಅನ್ಮೋಲ್ಜೀತ್ ಸಿಂಗ್, ಪ್ರಣವ್ ರಾಘವೇಂದ್ರ, ಡಿ ದೀಪೇಶ್.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 7:22 pm, Thu, 28 November 24