ಟಿ20 ವಿಶ್ವ ಚಾಂಪಿಯನ್ ಟೀಮ್ ಇಂಡಿಯಾ (Team India) ಗುರುವಾರ ಮುಂಜಾನೆ ದೆಹಲಿಗೆ ಬಂದಿಳಿದಿದ್ದಾರೆ. ಬಿಸಿಸಿಐ ವ್ಯವಸ್ಥೆ ಮಾಡಿದ ಏರ್ ಇಂಡಿಯಾ ಚಾರ್ಟರ್ಡ್ ಫ್ಲೈಟ್ನಲ್ಲಿ ಭಾರತೀಯ ಆಟಗಾರರು, ಸಿಬ್ಬಂದಿಗಳು ಹಾಗೂ ಕುಟುಂಬಸ್ಥರು ಬಾರ್ಬಡೋಸ್ನಿಂದ ದೆಹಲಿಯ ಇಂದಿರಾ ಗಾಂಧಿ ಇಂಟರ್ನ್ಯಾಷನ್ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದಾರೆ. ಅಲ್ಲದೆ ಆ ಬಳಿಕ ಟೀಮ್ ಇಂಡಿಯಾ ಆಟಗಾರರು ವಿಶ್ರಾಂತಿಗಾಗಿ ಹೋಟೆಲ್ಗೆ ತೆರಳಿದ್ದು, ಬೆಳಗ್ಗೆ 11 ಗಂಟೆಗೆ ವಿಶ್ವಕಪ್ ಟ್ರೋಫಿಯೊಂದಿಗೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಲಿದ್ದಾರೆ ಎಂದು ಬಿಸಿಸಿಐ ಉಪಾಧ್ಯಕ್ಷ ರಾಜೀವ್ ಶುಕ್ಲಾ ಮಾಹಿತಿ ನೀಡಿದ್ದಾರೆ.
ಭಾರತ ತಂಡವು ಮುಂಜಾನೆ ಆಗಮಿಸಿದರೂ, ಏರ್ಪೋರ್ಟ್ನಲ್ಲಿ ಟೀಮ್ ಇಂಡಿಯಾವನ್ನು ಸ್ವಾಗತಿಸಲು ಅಭಿಮಾನಿಗಳು ಜಮಾಯಿಸಿದ್ದರು. ಅಲ್ಲದೆ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಟೀಮ್ ಇಂಡಿಯಾ ಘೋಷಣೆಗಳೊಂದಿಗೆ ಭಾರತ ತಂಡವನ್ನು ಅಭಿಮಾನಿಗಳು ಅದ್ಧೂರಿಯಾಗಿ ಸ್ವಾಗತಿಸಿದ್ದಾರೆ. ಇದೀಗ ಸ್ವಾಗತದ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
Huge crowds of ICT fans gathered at Delhi Airport to welcome Team India#AIC24WC #IndianCricketTeam pic.twitter.com/cvJzohQDt6
— Ganpat Teli (@gateposts_) July 4, 2024
Live Scenes from New Delhi Airport 😍🔥#IndianCricketTeampic.twitter.com/K1KOb6d15C
— Virat Kohli Fan Club (@Trend_VKohli) July 4, 2024
ಟಿ20 ವಿಶ್ವಕಪ್ ಫೈನಲ್ ಮುಕ್ತಾಯದ ಬೆನ್ನಲ್ಲೇ ಬಾರ್ಬಡೋಸ್ನಲ್ಲಿ ಬೆರಿಲ್ ಚಂಡಮಾರುತ ಶುರುವಾಗಿತ್ತು. ಬಿರುಗಾಳಿ ಸಹಿತದ ಭಾರೀ ಮಳೆಯಿಂದಾಗಿ ವಿಮಾನಯಾನಗಳು ಬಂದ್ ಆಗಿದ್ದವು. ಅಲ್ಲದೆ ಬಹುತೇಕ ವಿಮಾನ ನಿಲ್ದಾಣಗಳು ತನ್ನ ಸೇವಾ ಕಾರ್ಯವನ್ನು ಸ್ಥಗಿತಗೊಳಿಸಿತ್ತು. ಇದರಿಂದ ಟೀಮ್ ಇಂಡಿಯಾದ ಹಿಂತಿರುಗುವಿಕೆಯು ವಿಳಂಬವಾಗಿದೆ. ಅದರಂತೆ ಇದೀಗ ಬಿಸಿಸಿಐ ವ್ಯವಸ್ಥೆ ಮಾಡಿದ ವಿಶೇಷ ವಿಮಾನದ ಮೂಲಕ ಭಾರತೀಯ ಆಟಗಾರರು ವಿಶ್ವಕಪ್ನೊಂದಿಗೆ ತವರಿಗೆ ಹಿಂತಿರುಗಿದ್ದಾರೆ.
ಗುರುವಾರ ಸಂಜೆ 5 ಗಂಟೆಗೆ ಮುಂಬೈನ ನ್ಯಾಷನಲ್ ಸೆಂಟರ್ ಫಾರ್ ಪರ್ಫಾರ್ಮಿಂಗ್ ಆರ್ಟ್‌ನಿಂದ ಮೆರವಣಿಗೆ ಮೂಲಕ ತೆರೆದ ಬಸ್ನಲ್ಲಿ ಟೀಮ್ ಇಂಡಿಯಾ ವಾಂಖೆಡೆ ಸ್ಟೇಡಿಯಂಗೆ ಆಗಮಿಸಲಿದ್ದಾರೆ. ಅಲ್ಲದೆ ಈ ರೋಡ್ ಶೋನ ಬಳಿಕ ವಾಂಖೆಡೆ ಕ್ರೀಡಾಂಗಣಕ್ಕೆ ವಿಜಯೋತ್ಸವ ಆಚರಿಸಲಿದ್ದಾರೆ. ಇದೇ ವೇಳೆ ವಿಶ್ವ ಚಾಂಪಿಯನ್ನರಿಗೆ ಬಿಸಿಸಿಐ ಘೋಷಿಸಿರುವ 125 ಕೋಟಿ ರೂ. ಬಹುಮಾನ ಮೊತ್ತವನ್ನು ನೀಡಲಾಗುತ್ತದೆ.
ಇದನ್ನೂ ಓದಿ: Team India: ಟೀಮ್ ಇಂಡಿಯಾದ ಮುಂದಿನ ನಾಯಕ ಯಾರು?
ಟೀಮ್ ಇಂಡಿಯಾದ ವಿಜಯೋತ್ಸವವನ್ನು ಸಂಜೆ 5 ಗಂಟೆಯಿಂದ ಸ್ಟಾರ್ ಸ್ಪೋರ್ಟ್ಸ್ ನೆಟ್ವರ್ಕ್ನ ಚಾನೆಲ್ಗಳಲ್ಲಿ ನೇರ ಪ್ರಸಾರವನ್ನು ವೀಕ್ಷಿಸಬಹುದು. ಹಾಗೆಯೇ ಜಿಯೋ ಸಿನಿಮಾ ಆ್ಯಪ್ ಹಾಗೂ ಸ್ಪೋರ್ಟ್ಸ್ 18 ಚಾನೆಲ್ಗಳಲ್ಲೂ ಈ ಅದ್ಧೂರಿ ಕಾರ್ಯಕ್ರಮದ ನೇರ ಪ್ರಸಾರ ಇರಲಿದೆ.
Published On - 7:30 am, Thu, 4 July 24