ಟಿ20 ವಿಶ್ವಕಪ್ (T20 World Cup 2024) ನಂತರ ಟೀಂ ಇಂಡಿಯಾ (Team India) ಬ್ಯಾಕ್ ಟು ಬ್ಯಾಕ್ ದ್ವಿಪಕ್ಷೀಯ ಸರಣಿಗಳನ್ನು ಆಡಲಿದೆ. ನಿನ್ನೆಯಷ್ಟೇ ಟಿ20 ವಿಶ್ವಕಪ್ ಬಳಿಕ ಯಾವ್ಯಾವ ತಂಡಗಳು ಭಾರತಕ್ಕೆ ಪ್ರವಾಸ ಮಾಡಲಿವೆ ಎಂಬುದರ ವರದಿಯನ್ನು ಅಂದರೆ ವೇಳಾಪಟ್ಟಿಯನ್ನು ಬಿಸಿಸಿಐ (BCCI) ಬಿಡುಗಡೆ ಮಾಡಿತ್ತು. ಇದೀಗ ಟೀಂ ಇಂಡಿಯಾ ಯಾವ ದೇಶಕ್ಕೆ ಪ್ರವಾಸ ಮಾಡಲಿದೆ ಎಂಬುದರ ಮಾಹಿತಿ ಹೊರಬಿದ್ದಿದೆ. ಹೊರಬಿದ್ದಿರುವ ಮಾಹಿತಿ ಪ್ರಕಾರ 4 ಪಂದ್ಯಗಳ ಟಿ20 ಸರಣಿಯನ್ನು ಆಡುವ ಸಲುವಾಗಿ ಟೀಂ ಇಂಡಿಯಾ, ದಕ್ಷಿಣ ಆಫ್ರಿಕಾ ಪ್ರವಾಸ (India tour of South Africa) ಕೈಗೊಳ್ಳಲಿದೆ.
ಭಾರತದ ದಕ್ಷಿಣ ಆಫ್ರಿಕಾ ಪ್ರವಾಸದ ಬಗ್ಗೆ ಮಾಹಿತಿ ನೀಡಿರುವ ಬಿಸಿಸಿಐ ಕಾರ್ಯದರ್ಶಿ ಜಯ್ ಶಾ, ‘ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಬಾಂಧವ್ಯ ಯಾವಾಗಲೂ ಉತ್ತಮವಾಗಿದೆ. ಭಾರತ ಕ್ರಿಕೆಟ್ ತಂಡವು ದಕ್ಷಿಣ ಆಫ್ರಿಕಾದಿಂದ ಸಾಕಷ್ಟು ಪ್ರೀತಿಯನ್ನು ಪಡೆದಿದೆ. ಅದೇ ರೀತಿ, ಭಾರತೀಯ ಅಭಿಮಾನಿಗಳು ಕೂಡ ಆಫ್ರಿಕನ್ ತಂಡವನ್ನು ಇಷ್ಟಪಡುತ್ತಾರೆ. ಮುಂಬರುವ ಸರಣಿಯಲ್ಲಿ ನಾವು ಮತ್ತೊಮ್ಮೆ ರೋಮಾಂಚಕಾರಿ ಕ್ರಿಕೆಟ್ ಅನ್ನು ನೋಡುತ್ತೇವೆ ಎಂದು ನನಗೆ ಖಾತ್ರಿಯಿದೆ ಎಂದಿದ್ದಾರೆ.
ಟೀಂ ಇಂಡಿಯಾದ ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿ ಒಟ್ಟು 4 ಪಂದ್ಯಗಳ ಟಿ20 ಸರಣಿ ನಡೆಯಲಿದೆ. ಉಭಯ ತಂಡಗಳ ನಡುವಿನ ಮೊದಲ ಪಂದ್ಯ ನವೆಂಬರ್ 8 ರಂದು ಡರ್ಬನ್‌ನ ಕಿಂಗ್ಸ್‌ಮೀಡ್‌ನಲ್ಲಿ ನಡೆಯಲಿದೆ. ಇದರ ನಂತರ, ಎರಡನೇ ಪಂದ್ಯವು ನವೆಂಬರ್ 10 ರಂದು ಗ್ಕೆಬರ್ಹಾದಲ್ಲಿ ನಡೆಯಲಿದ್ದು, ಮೂರನೇ ಪಂದ್ಯ ಸೆಂಚುರಿಯನ್‌ನಲ್ಲಿ ಮತ್ತು ನಾಲ್ಕನೇ ಪಂದ್ಯ ಜೂನ್ 15 ರಂದು ಜೋಹಾನ್ಸ್‌ಬರ್ಗ್‌ನಲ್ಲಿ ನಡೆಯಲಿದೆ.
🚨 NEWS 🚨
BCCI-CSA announce schedule of South Africa-India T20I series. #TeamIndia | #SAvIND
More Details 🔽https://t.co/JIi6wcoPcP
— BCCI (@BCCI) June 21, 2024
ಕಳೆದ ವರ್ಷ ಕೂಡ ಟೀಂ ಇಂಡಿಯಾ, ದಕ್ಷಿಣ ಆಪ್ರಿಕಾ ಪ್ರವಾಸ ಮಾಡಿತ್ತು. ಈ ಪ್ರವಾಸದಲ್ಲಿ ನಡೆದಿದ್ದ ಟಿ20 ಸರಣಿ 1-1 ರ ಸಮಬಲದೊಂದಿಗೆ ಕೊನೆಗೊಂಡಿತು. ಏಕೆಂದರೆ ಡರ್ಬನ್‌ನಲ್ಲಿ ಆಡಿದ ಸರಣಿಯ ನಿರ್ಣಾಯಕ ಪಂದ್ಯವು ಮಳೆಯಿಂದಾಗಿ ರದ್ದಾಗಿತ್ತು. ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಜಸ್ಪ್ರೀತ್ ಬುಮ್ರಾ ಅವರನ್ನೊಳಗೊಂಡ ಹಿರಿಯರ ತಂಡ ಈ ಪ್ರವಾಸಕ್ಕೆ ಹೋಗಲಿದೆಯೇ ಅಥವಾ ಯುವ ಆಟಗಾರರನ್ನು ಕಳುಹಿಸಲು ಮಂಡಳಿ ನಿರ್ಧರಿಸುತ್ತದೆಯೇ ಎಂಬುದನ್ನು ಈಗ ನೋಡಬೇಕಾಗಿದೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 7:16 pm, Fri, 21 June 24