- Kannada News Photo gallery Cricket photos sania mirza father react on tennis star marriage with mohammed shami
ಕ್ರಿಕೆಟಿಗ ಶಮಿ ಜೊತೆ ಟೆನಿಸ್ ಸ್ಟಾರ್ ಸಾನಿಯಾ ಮದುವೆ? ಮೌನ ಮುರಿದ ಮುಗುತಿ ಸುಂದರಿಯ ತಂದೆ
Sania Mirza-Mohammed Shami marriage: ಕೆಲವು ದಿನಗಳ ಹಿಂದೆ ಸಾನಿಯಾ ಮಿರ್ಜಾ ಮತ್ತು ಮೊಹಮ್ಮದ್ ಶಮಿ ಮದುವೆಯ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದರು. ಇದಾದ ನಂತರ, ಸಾಮಾಜಿಕ ಮಾಧ್ಯಮದಲ್ಲಿ, ಅಭಿಮಾನಿಗಳು ಇಬ್ಬರೂ ಒಬ್ಬರಿಗೊಬ್ಬರು ಪರ್ಫೆಕ್ಟ್ ಮ್ಯಾಚ್ ಎಂದು ಕರೆಯಲು ಪ್ರಾರಂಭಿಸಿದರು. ಇಲ್ಲಿಂದ ಇಂತಹ ಸುದ್ದಿ ವೈರಲ್ ಆಗಲು ಪ್ರಾರಂಭಿಸಿತ್ತು.
Updated on: Jun 21, 2024 | 9:00 PM

ಟೆನಿಸ್ ಸೆನ್ಸೇಶನ್ ಸಾನಿಯಾ ಮಿರ್ಜಾ ಮತ್ತು ಟೀಂ ಇಂಡಿಯಾ ಕ್ರಿಕೆಟಿಗ ಮೊಹಮ್ಮದ್ ಶಮಿ ವಿವಾಹವಾಗಲಿದ್ದಾರೆಯೇ?. ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಈ ಸುದ್ದಿ ಸಖತ್ ವೈರಲ್ ಆಗುತ್ತಿದೆ. ಇದರಿಂದಾಗಿ ಇವರಿಬ್ಬರು ಮದುವೆಯಾಗಲಿದ್ದಾರೆಯೇ ಎಂಬ ಗೊಂದಲ ಅಭಿಮಾನಿಗಳಲ್ಲಿ ಮೂಡಿದೆ.

ಆದರೆ ಇದೀಗ ಈ ವದಂತಿಗಳಿಗೆ ಸಾನಿಯಾ ಮಿರ್ಜಾ ತಂದೆ ಇಮ್ರಾನ್ ಮಿರ್ಜಾ ಪ್ರತಿಕ್ರಿಯಿಸಿದ್ದು, ಇದು ಸಂಪೂರ್ಣ ಅಸಂಬದ್ಧ. ಈ ವರದಿಗಳಲ್ಲಿ ಯಾವುದೇ ಸತ್ಯಾಂಶವಿಲ್ಲ ಎಂದು ಹೇಳಿದ್ದಾರೆ. ಇದರೊಂದಿಗೆ ಈ ಇಬ್ಬರ ಬಗ್ಗೆ ಎದ್ದಿದ್ದ ವದಂತಿಗೆ ತೆರೆ ಎಳೆದಿದ್ದಾರೆ.

ಇತ್ತೀಚೆಗೆ ಸಾನಿಯಾ ಮಿರ್ಜಾ ಮತ್ತು ಪಾಕಿಸ್ತಾನಿ ಕ್ರಿಕೆಟಿಗ ಶೋಯೆಬ್ ಮಲಿಕ್ ಪರಸ್ಪರ ಬೇರ್ಪಟ್ಟಿದ್ದಾರೆ. ಮತ್ತೊಂದೆಡೆ, ಮೊಹಮ್ಮದ್ ಶಮಿ ಕೂಡ ತಮ್ಮ ಪತ್ನಿ ಹಸೀನ್ ಜಹಾನ್‌ನಿಂದ ಪ್ರತ್ಯೇಕವಾಗಿ ವಾಸಿಸುತ್ತಿದ್ದಾರೆ. ಹೀಗಾಗಿ ಈ ಇಬ್ಬರ ಬಗ್ಗೆ ಮದುವೆ ವದಂತಿ ಹರಿದಾಡಿತ್ತು.

ವಾಸ್ತವವಾಗಿ, ಕೆಲವು ದಿನಗಳ ಹಿಂದೆ ಸಾನಿಯಾ ಮಿರ್ಜಾ ಮತ್ತು ಮೊಹಮ್ಮದ್ ಶಮಿ ಮದುವೆಯ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದರು. ಇದಾದ ನಂತರ, ಸಾಮಾಜಿಕ ಮಾಧ್ಯಮದಲ್ಲಿ, ಅಭಿಮಾನಿಗಳು ಇಬ್ಬರೂ ಒಬ್ಬರಿಗೊಬ್ಬರು ಪರ್ಫೆಕ್ಟ್ ಮ್ಯಾಚ್ ಎಂದು ಕರೆಯಲು ಪ್ರಾರಂಭಿಸಿದರು. ಇಲ್ಲಿಂದ ಇಂತಹ ಸುದ್ದಿ ವೈರಲ್ ಆಗಲು ಪ್ರಾರಂಭಿಸಿತ್ತು.

ಪ್ರಸ್ತುತ ಸಾನಿಯಾ ಮಿರ್ಜಾ ಹಜ್ ಯಾತ್ರೆಗೆ ತೆರಳಿದ್ದಾರೆ. ಈ ಬಗ್ಗೆ ಸಾಮಾಜಿಕ ಜಾಲತಾಣ ಪ್ಲಾಟ್‌ಫಾರ್ಮ್ ಎಕ್ಸ್‌ನಲ್ಲಿ ಸಾನಿಯಾ ಮಾಹಿತಿ ನೀಡಿದ್ದು, ಸುದೀರ್ಘ ಕಾಯುವಿಕೆಯ ನಂತರ ಈ ಪವಿತ್ರ ಪ್ರಯಾಣಕ್ಕೆ ಹೋಗುವ ಅವಕಾಶ ಸಿಕ್ಕಿದೆ ಎಂದು ಹೇಳಿದ್ದಾರೆ.

2023ರ ವಿಶ್ವಕಪ್ ಬಳಿಕ ಮೊಹಮ್ಮದ್ ಶಮಿ ಕ್ರಿಕೆಟ್‌ನಿಂದ ದೂರ ಉಳಿದಿದ್ದಾರೆ. ಇಂಜುರಿಗೊಳಗಾಗಿದ್ದ ಶಮಿ ಶಸ್ತ್ರಚಿಕಿತ್ಸೆಗೆ ಒಳಗಾಗಬೇಕಾಯಿತು. ಈಗ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ (ಎನ್‌ಸಿಎ) ಶಮಿ ಪುನರ್ವಸತಿ ನಡೆಸುತ್ತಿದ್ದು, ಪುನರಾಗಮನಕ್ಕೆ ತಯಾರಿ ನಡೆಸುತ್ತಿದ್ದಾರೆ.














