ಇಂದು ಭಾರತ vs ಅಫ್ಘಾನ್ ಪಂದ್ಯ: ಯಾವ ಚಾನೆಲ್​ನಲ್ಲಿ ನೇರ ಪ್ರಸಾರ? ಇಲ್ಲಿದೆ ಮಾಹಿತಿ

ಏಷ್ಯನ್ ಗೇಮ್ಸ್ 2026ರ ನಾಕೌಟ್ ಹಂತಕ್ಕೆ ವೇದಿಕೆ ಸಿದ್ಧವಾಗಿದ್ದು, ಎರಡನೇ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಭಾರತ ಮತ್ತು ಅಫ್ಘಾನಿಸ್ತಾನ್ ತಂಡಗಳು ಮುಖಾಮುಖಿಯಾಗಲಿವೆ. ಗ್ರೂಪ್ ಹಂತದಲ್ಲಿ ನೇಪಾಳ ವಿರುದ್ಧ ಆಘಾತಕಾರಿ ಸೋಲು ಅನುಭವಿಸಿದ ಅಫ್ಘಾನ್ ಪಡೆ, ಅಂಕ ಪಟ್ಟಿಯಲ್ಲಿ ದ್ವಿತೀಯ ಸ್ಥಾನಕ್ಕೆ ತಳ್ಳಲ್ಪಟ್ಟಿದೆ. ಹೀಗಾಗಿ ಕ್ವಾರ್ಟರ್ ಫೈನಲ್ ಸುತ್ತಿನಲ್ಲಿ ಟೀಮ್ ಇಂಡಿಯಾವನ್ನು ಎದುರಿಸುತ್ತಿದೆ.

ಇಂದು ಭಾರತ vs ಅಫ್ಘಾನ್ ಪಂದ್ಯ: ಯಾವ ಚಾನೆಲ್​ನಲ್ಲಿ ನೇರ ಪ್ರಸಾರ? ಇಲ್ಲಿದೆ ಮಾಹಿತಿ
Team India
Image Credit source: x.com

Updated on: Sep 28, 2026 | 7:55 AM

ಏಷ್ಯನ್ ಗೇಮ್ಸ್‌ನ ಪುರುಷರ ಕ್ರಿಕೆಟ್‌ನಲ್ಲಿ ಭಾರತ ತಂಡವು ಇಂದು (ಸೆಪ್ಟೆಂಬರ್ 28) ತನ್ನ ಅಭಿಯಾನವನ್ನು ಆರಂಭಿಸಲಿದೆ. ಜಪಾನ್‌ನ ನಿಶ್ಶಿನ್ ಕೊರೋಗಿ ಸ್ಪೋರ್ಟ್ಸ್ ಪಾರ್ಕ್ ಮೈದಾನದಲ್ಲಿ ನಡೆಯಲಿರುವ ಈ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಭಾರತ ಮತ್ತು ಅಫ್ಘಾನಿಸ್ತಾನ್ ತಂಡಗಳು ಮುಖಾಮುಖಿಯಾಗುತ್ತಿವೆ. ಈ ಪಂದ್ಯದಲ್ಲಿ ಗೆಲ್ಲುವ ತಂಡವು ನೇರವಾಗಿ ಸೆಮಿಫೈನಲ್‌ಗೆ ಅರ್ಹತೆ ಪಡೆಯುವುದರಿಂದ, ಉಭಯ ತಂಡಗಳ ನಡುವೆ ಇಂದು ಜಿದ್ದಾಜಿದ್ದಿನ ಪೈಪೋಟಿ ನಿರೀಕ್ಷಿಸಲಾಗಿದೆ. ಈ ಪಂದ್ಯದ ಕುರಿತಾದ ಮತ್ತಷ್ಟು ಮಾಹಿತಿ ಈ ಕೆಳಗಿನಂತಿದೆ…

ಎಷ್ಟು ಗಂಟೆಗೆ ಪಂದ್ಯ ಶುರು?

ಭಾರತ ಮತ್ತು ಅಫ್ಘಾನಿಸ್ತಾನ್ ನಡುವಣ ಪಂದ್ಯವು ಭಾರತೀಯ ಕಾಲಮಾನ ಬೆಳಗ್ಗೆ 10:30ಕ್ಕೆ ಪಂದ್ಯ ಆರಂಭವಾಗಲಿದ್ದು,  10:00 ಗಂಟೆಗೆ ಟಾಸ್ ಪ್ರಕ್ರಿಯೆ ನಡೆಯಲಿದೆ.

ಯಾವ ಚಾನೆಲ್​ನಲ್ಲಿ ನೇರ ಪ್ರಸಾರ?

ಏಷ್ಯನ್ ಗೇಮ್ಸ್ 2026ರ ಅಧಿಕೃತ ಪ್ರಸಾರ ಹಕ್ಕುಗಳನ್ನು ಸೋನಿ ಸ್ಪೋರ್ಟ್ಸ್​ ನೆಟ್​ವರ್ಕ್​ ಪಡೆದುಕೊಂಡಿದೆ. ಅದರಂತೆ ಭಾರತ ಮತ್ತು ಅಫ್ಘಾನ್ ನಡುವಣ ಪಂದ್ಯವನ್ನು Sony Sports Ten 1, Sony Sports Ten 3 ಮತ್ತು Sony Sports Ten 5 ಚಾನೆಲ್​ಗಳಲ್ಲಿ ವೀಕ್ಷಿಸಬಹುದು. ಹಾಗೆಯೇ ಈ ಪಂದ್ಯದ ಲೈವ್ ಸ್ಟ್ರೀಮಿಂಗ್ Sony LIV ಆ್ಯಪ್ ಹಾಗೂ ವೆಬ್‌ಸೈಟ್‌ನಲ್ಲಿ ಲಭ್ಯವಿರಲಿದೆ.

ಉಭಯ ತಂಡಗಳು:

ಭಾರತ ಟಿ20 ತಂಡ: ಶ್ರೇಯಸ್ ಅಯ್ಯರ್ (ನಾಯಕ), ತಿಲಕ್ ವರ್ಮಾ (ಉಪಾನಯಕ), ರವಿ ಬಿಷ್ಣೋಯ್, ಅಭಿಷೇಕ್ ಶರ್ಮಾ, ನಿತೀಶ್ ಕುಮಾರ್ ರೆಡ್ಡಿ, ಜಸ್​ಪ್ರೀತ್ ಬುಮ್ರಾ ಬುಮ್ರಾ, ಸಂಜು ಸ್ಯಾಮ್ಸನ್, ಅಕ್ಷರ್ ಪಟೇಲ್, ಯಶ್ ಠಾಕೂರ್, ಇಶಾನ್ ಕಿಶನ್, ವಾಷಿಂಗ್ಟನ್ ಸುಂದರ್, ಅರ್ಷದೀಪ್ ಸಿಂಗ್, ಶಿವಂ ದುಬೆ, ವಿಪ್ರಾಜ್ ನಿಗಮ್, ವೈಭವ್ ಸೂರ್ಯವಂಶಿ.

ಇದನ್ನೂ ಓದಿ: ದಾಖಲೆಗಳ ಮೇಲೆ ದಾಖಲೆ: ಕಿಂಗ್ ಕೊಹ್ಲಿ ಹೆಸರಿಗೆ 10 ಭರ್ಜರಿ ದಾಖಲೆ!

ಅಫ್ಘಾನಿಸ್ತಾನ್ ಟಿ20 ತಂಡ: ದರ್ವಿಶ್ ರಸೂಲಿ (ನಾಯಕ) , ಮೊಹಮ್ಮದ್ ಇಶಾಕ್ , ಇಮ್ರಾನ್ ಮೀರ್ , ನಜೀಬುಲ್ಲಾ ಝದ್ರಾನ್ , ಇಸ್ಮತ್ ಅಲಂ , ಕರೀಮ್ ಜನತ್ , ನಂಗೆಯಾಲಿಯಾ ಖರೋಟಿ , ಅಬ್ದುಲ್ಲಾ ಅಹ್ಮದ್‌ಝೈ , ಖಾಲಿದ್ ತನಿವಾಲ್ , ಮೊಹಮ್ಮದ್ ಅಕ್ರಮ್ , ಫರಿದೂನ್ ದಾವೂದ್‌ಝೈ , ಫರ್ಮಾನುಲ್ಲಾ ಸಫಿ , ಹಸನ್ ಐಸಾಖಿಲ್ , ಫೈಸಲ್ ಶಿನೋಜಾಡಾ , ಅರಬ್ ಗುಲ್ ಮೊಮಂದ್.

 

ಝಾಹಿರ್ ಯೂಸುಫ್

ಟಿವಿ9 ಡಿಜಿಟಲ್ ಮುಖ್ಯ ಉಪ ಸಂಪಾದಕ. 10 ವರ್ಷಗಳಿಂದ ಕನ್ನಡ ಡಿಜಿಟಲ್​ ಮಾಧ್ಯಮದಲ್ಲಿ ಪತ್ರಿಕಾ ವೃತ್ತಿ. ಕ್ರೀಡಾ ಸುದ್ದಿ, ದೀರ್ಘ ಲೇಖನ, ವಿಶ್ಲೇಷಣೆ, ಹೀಗೆ ಎಲ್ಲ ತರಹದ ಬರಹದಲ್ಲೂ ಅನುಭವ. ಪ್ರಸ್ತುತ ವಿದ್ಯಮಾನಗಳ ವ್ಯಾಖ್ಯಾನ, ಚರ್ಚೆಯಲ್ಲಿ ನೈಪುಣ್ಯ. ಈ ಹಿಂದೆ ಉದಯವಾಣಿ, ನ್ಯೂಸ್ 18 ಕನ್ನಡ ಡಿಜಿಟಲ್​​ನಲ್ಲಿ ಕೆಲಸ ಮಾಡಿದ ಅನುಭವ. ಆಸಕ್ತಿದಾಯಕ ವಿಷಯ ಕ್ರೀಡೆ, ಸಿನಿಮಾ ಮತ್ತು ರಾಜಕೀಯ.

Read More
Loading...
Unable to load recommendations.
Follow Us