AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಏಷ್ಯನ್ ಗೇಮ್ಸ್​: ಹೀಗಾದ್ರೆ ಮಾತ್ರ ಭಾರತ vs ಪಾಕಿಸ್ತಾನ್ ಮುಖಾಮುಖಿ

ಏಷ್ಯನ್ ಗೇಮ್ಸ್​ ಕ್ರಿಕೆಟ್ ಟೂರ್ನಿಯ ಕ್ವಾರ್ಟರ್ ಫೈನಲ್ ಪಂದ್ಯಗಳು ನಾಳೆಯಿಂದ (ಸೆ.28) ಶುರುವಾಗಲಿದೆ. ಮೊದಲ ಕ್ವಾರ್ಟರ್ ಫೈನಲ್​ನಲ್ಲಿ ಪಾಕಿಸ್ತಾನ್ ತಂಡ ಹಾಂಗ್ ಕಾಂಗ್ ತಂಡವನ್ನು ಎದುರಿಸಿದರೆ, ದ್ವಿತೀಯ ಕ್ವಾರ್ಟರ್ ಫೈನಲ್ ಮ್ಯಾಚ್​ನಲ್ಲಿ ಟೀಮ್ ಇಂಡಿಯಾ ಅಫ್ಘಾನಿಸ್ತಾನ್ ವಿರುದ್ಧ ಕಣಕ್ಕಿಳಿಯಲಿದೆ. ಈ ಪಂದ್ಯಗಳಲ್ಲಿ ಗೆದ್ದರೂ ಉಭಯ ತಂಡಗಳು ಸೆಮಿಫೈನಲ್​ನಲ್ಲಿ ಮುಖಾಮುಖಿಯಾಗುವುದಿಲ್ಲ.

ಏಷ್ಯನ್ ಗೇಮ್ಸ್​: ಹೀಗಾದ್ರೆ ಮಾತ್ರ ಭಾರತ vs ಪಾಕಿಸ್ತಾನ್ ಮುಖಾಮುಖಿ
Shreyas - ShahibzadaImage Credit source: x.com
ಝಾಹಿರ್ ಯೂಸುಫ್
|

Updated on:Sep 27, 2026 | 1:02 PM

Share

ಕ್ರಿಕೆಟ್ ಜಗತ್ತಿನ ಅತೀ ದೊಡ್ಡ ಹೈವೋಲ್ಟೇಜ್ ಪಂದ್ಯ ಎಂದರೆ ಅದು ಭಾರತ ಮತ್ತು ಪಾಕಿಸ್ತಾನ್ ನಡುವಿನ ಹಣಾಹಣಿ. ರಾಜತಾಂತ್ರಿಕ ಕಾರಣಗಳಿಂದಾಗಿ ಉಭಯ ದೇಶಗಳು ಕೇವಲ ಐಸಿಸಿ ಮತ್ತು ಏಷ್ಯನ್ ಕ್ರಿಕೆಟ್ ಕೌನ್ಸಿಲ್ ಟೂರ್ನಿಗಳಲ್ಲಿ ಮಾತ್ರ ಪರಸ್ಪರ ಸೆಣಸಾಡುತ್ತವೆ. ಸದ್ಯ ಜಪಾನ್‌ನ ನಾಗೋಯಾದಲ್ಲಿ ನಡೆಯುತ್ತಿರುವ ಏಷ್ಯನ್ ಗೇಮ್ಸ್ 2026ರ ಪುರುಷರ ಟಿ20 ಕ್ರಿಕೆಟ್ ಟೂರ್ನಿಯಲ್ಲೂ ಇವರಿಬ್ಬರ ಮುಖಾಮುಖಿಯನ್ನು ಕಣ್ತುಂಬಿಕೊಳ್ಳಲು ಜಗತ್ತಿನಾದ್ಯಂತ ಅಭಿಮಾನಿಗಳು ಕಾತರರಾಗಿದ್ದಾರೆ.

ಆದರೆ, ಟೂರ್ನಿಯ ವೇಳಾಪಟ್ಟಿಯ ಪ್ರಕಾರ ಭಾರತ ಮತ್ತು ಪಾಕಿಸ್ತಾನ್ ತಂಡಗಳು ನೇರವಾಗಿ ಆರಂಭಿಕ ಹಂತದಲ್ಲಾಗಲಿ ಅಥವಾ ಸೆಮಿಫೈನಲ್‌ನಲ್ಲಾಗಲಿ ಮುಖಾಮುಖಿಯಾಗಲು ಸಾಧ್ಯವಿಲ್ಲ. ಹಾಗಾದರೆ ಈ ಎರಡು ಬಲಿಷ್ಠ ತಂಡಗಳು ಮೈದಾನದಲ್ಲಿ ಮುಖಾಮುಖಿಯಾಗಲು ಇರುವ ಆ ಏಕೈಕ ದಾರಿ ಮತ್ತು ಲೆಕ್ಕಾಚಾರ ಏನು ಎಂಬುದರ ಸಂಪೂರ್ಣ ವಿವರ ಇಲ್ಲಿದೆ.

  • ಐಸಿಸಿ ಟಿ20 ರ‍್ಯಾಂಕಿಂಗ್ ಆಧಾರದ ಮೇಲೆ ಟೂರ್ನಿಯ ಪ್ರಮುಖ ನಾಲ್ಕು ತಂಡಗಳಾದ ಭಾರತ, ಪಾಕಿಸ್ತಾನ್, ಬಾಂಗ್ಲಾದೇಶ್ ಮತ್ತು ಶ್ರೀಲಂಕಾ ತಂಡಗಳಿಗೆ ನೇರವಾಗಿ ಕ್ವಾರ್ಟರ್ ಫೈನಲ್ ಹಂತಕ್ಕೆ ನೇರವಾಗಿ ಅರ್ಹತೆ ಪಡೆದಿದೆ.
  • ಪ್ರಾಥಮಿಕ ಲೀಗ್ ಹಂತದ ಪಂದ್ಯಗಳಿಂದ ಅಫ್ಘಾನಿಸ್ತಾನ್, ನೇಪಾಳ, ಮಲೇಷ್ಯಾ ಮತ್ತು ಹಾಂಗ್ ಕಾಂಗ್ ತಂಡಗಳು ನಾಕೌಟ್ ಹಂತಕ್ಕೆ ಅರ್ಹತೆ ಪಡೆದುಕೊಂಡಿವೆ.

ಟೂರ್ನಿಯ ನಾಕೌಟ್ ಡ್ರಾ ವಿನ್ಯಾಸದ ಪ್ರಕಾರ, ಭಾರತ ಮತ್ತು ಪಾಕಿಸ್ತಾನ್ ತಂಡಗಳನ್ನು ಪರಸ್ಪರ ವಿರುದ್ಧ ಬದಿಯಲ್ಲಿ ಇರಿಸಲಾಗಿದೆ. ಅಂದರೆ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಉಭಯ ತಂಡಗಳು ಮುಖಾಮುಖಿಯಾಗುವುದಿಲ್ಲ.

ಪಾಕಿಸ್ತಾನದ ಹಾದಿ: ಸೆಪ್ಟೆಂಬರ್ 28 ರಂದು ನಡೆಯಲಿರುವ ಮೊದಲ ಕ್ವಾರ್ಟರ್ ಫೈನಲ್‌ನಲ್ಲಿ ಪಾಕಿಸ್ತಾನ್ ತಂಡವು ಹಾಂಗ್ ಕಾಂಗ್ ವಿರುದ್ಧ ಸೆಣಸಲಿದೆ. ಇದರಲ್ಲಿ ಗೆದ್ದರೆ, ಅಕ್ಟೋಬರ್ 1 ರಂದು ನಡೆಯಲಿರುವ ಸೆಮಿಫೈನಲ್‌ನಲ್ಲಿ ಬಾಂಗ್ಲಾದೇಶ್ ಅಥವಾ ಮಲೇಷ್ಯಾ ತಂಡವನ್ನು ಎದುರಿಸಲಿದೆ.

ಭಾರತದ ಹಾದಿ: ಹಾಲಿ ಚಾಂಪಿಯನ್ ಭಾರತ ತಂಡವು ತನ್ನ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಅಫ್ಘಾನಿಸ್ತಾನ್ ಸವಾಲನ್ನು ಎದುರಿಸಲಿದ್ದು, ಇದರಲ್ಲಿ ಜಯ ಸಾಧಿಸಿದರೆ ಸೆಮಿಫೈನಲ್‌ನಲ್ಲಿ ಶ್ರೀಲಂಕಾ ಅಥವಾ ನೇಪಾಳ ತಂಡದ ವಿರುದ್ಧ ಹೋರಾಡಬೇಕಾಗುತ್ತದೆ. ಅಂದರೆ ಸೆಮಿಫೈನಲ್​ನಲ್ಲೂ ಭಾರತ ಮತ್ತು ಪಾಕಿಸ್ತಾನ್ ತಂಡಗಳು ಮುಖಾಮುಖಿಯಾಗುವುದಿಲ್ಲ ಎಂಬುದು ಖಚಿತವಾಗಿದೆ. ಇನ್ನು ಉಭಯ ತಂಡಗಳು ಪರಸ್ಪರ ಮುಖಾಮುಖಿಯಾಗಲು ಕೇವಲ ಎರಡು ಸನ್ನಿವೇಶಗಳು ಮಾತ್ರ ಬಾಕಿ ಉಳಿದಿವೆ…

  • ಫೈನಲ್ ಪಂದ್ಯ: ಭಾರತ ಮತ್ತು ಪಾಕಿಸ್ತಾನ್ ತಂಡಗಳು ತಮ್ಮ ಕ್ವಾರ್ಟರ್ ಫೈನಲ್ ಮತ್ತು ಸೆಮಿಫೈನಲ್ ಪಂದ್ಯಗಳಲ್ಲಿ ಯಾವುದೇ ತಪ್ಪು ಮಾಡದೇ ಜಯಭೇರಿ ಬಾರಿಸಿದರೆ, ಅಕ್ಟೋಬರ್ 3 ರಂದು ನಡೆಯಲಿರುವ ಫೈನಲ್ ಪಂದ್ಯದಲ್ಲಿ ಚಿನ್ನದ ಪದಕಕ್ಕಾಗಿ ಮುಖಾಮುಖಿಯಾಗಲಿವೆ.
  • ಕಂಚಿನ ಪಂದ್ಯ: ಒಂದು ವೇಳೆ ಭಾರತ ಮತ್ತು ಪಾಕಿಸ್ತಾನ್ ತಂಡಗಳು ಸೆಮಿಫೈನಲ್​ಗಳಲ್ಲಿ ಸೋತರೆ, ಮೂರನೇ ಸ್ಥಾನಕ್ಕಾಗಿ ಅಕ್ಟೋಬರ್ 3 ರಂದೇ ನಡೆಯಲಿರುವ ಕಂಚಿನ ಪದಕದ ಪಂದ್ಯದಲ್ಲಿ ಮುಖಾಮುಖಿಯಾಗಬಹುದು.

ಇದನ್ನೂ ಓದಿ: ನವೆಂಬರ್ 19: ಕೊಹ್ಲಿ-ರೋಹಿತ್ ಜೋಡಿಯ ಎಂದೂ ಮಾಸದ ನೋವು!

ವಿಶೇಷವೆಂದರೆ, ಏಷ್ಯನ್ ಗೇಮ್ಸ್‌ನ ಪುರುಷರ ಕ್ರಿಕೆಟ್ ಇತಿಹಾಸದಲ್ಲಿ ಭಾರತ ಮತ್ತು ಪಾಕಿಸ್ತಾನ್ ತಂಡಗಳು ಇದುವರೆಗೆ ಒಮ್ಮೆಯೂ ಪರಸ್ಪರ ಮುಖಾಮುಖಿಯಾಗಿಲ್ಲ. ಕಳೆದ ಬಾರಿಯ ಏಷ್ಯನ್ ಗೇಮ್ಸ್‌ನಲ್ಲಿ ಭಾರತ ಚಿನ್ನ ಗೆದ್ದಿದ್ದರೆ, ಪಾಕಿಸ್ತಾನ್ ಪದಕದ ರೇಸ್‌ನಿಂದ ಹೊರಬಿದ್ದಿತ್ತು. ಹೀಗಾಗಿ, ಉಭಯ ತಂಡಗಳು ತಮ್ಮ ಮುಂದಿನ ಎರಡು ನಾಕೌಟ್ ಪಂದ್ಯಗಳನ್ನು ಯಶಸ್ವಿಯಾಗಿ ಗೆದ್ದು ಮುನ್ನಡೆದರೆ, ಇತಿಹಾಸದಲ್ಲೇ ಮೊದಲ ಬಾರಿಗೆ ಏಷ್ಯನ್ ಗೇಮ್ಸ್‌ನಲ್ಲಿ ಭಾರತ-ಪಾಕ್ ನಡುವಣ ಹೈವೋಲ್ಟೇಜ್ ಪಂದ್ಯವನ್ನು ವೀಕ್ಷಿಸಬಹುದು.

Published On - 1:01 pm, Sun, 27 September 26

Follow Us
ಝಾಹಿರ್ ಯೂಸುಫ್
ಝಾಹಿರ್ ಯೂಸುಫ್

ಟಿವಿ9 ಡಿಜಿಟಲ್ ಮುಖ್ಯ ಉಪ ಸಂಪಾದಕ. 10 ವರ್ಷಗಳಿಂದ ಕನ್ನಡ ಡಿಜಿಟಲ್​ ಮಾಧ್ಯಮದಲ್ಲಿ ಪತ್ರಿಕಾ ವೃತ್ತಿ. ಕ್ರೀಡಾ ಸುದ್ದಿ, ದೀರ್ಘ ಲೇಖನ, ವಿಶ್ಲೇಷಣೆ, ಹೀಗೆ ಎಲ್ಲ ತರಹದ ಬರಹದಲ್ಲೂ ಅನುಭವ. ಪ್ರಸ್ತುತ ವಿದ್ಯಮಾನಗಳ ವ್ಯಾಖ್ಯಾನ, ಚರ್ಚೆಯಲ್ಲಿ ನೈಪುಣ್ಯ. ಈ ಹಿಂದೆ ಉದಯವಾಣಿ, ನ್ಯೂಸ್ 18 ಕನ್ನಡ ಡಿಜಿಟಲ್​​ನಲ್ಲಿ ಕೆಲಸ ಮಾಡಿದ ಅನುಭವ. ಆಸಕ್ತಿದಾಯಕ ವಿಷಯ ಕ್ರೀಡೆ, ಸಿನಿಮಾ ಮತ್ತು ರಾಜಕೀಯ.

Read More
ಗದಗದ ಕೆಆರ್​ಡಿಎಲ್​ ಎಇಇ ಪತ್ರ ಬರೆದು ನಾಪತ್ತೆ ವಿಚಾರಕ್ಕೆ ಸಿಎಂ ಹೀಗಂದ್ರು
ಗದಗದ ಕೆಆರ್​ಡಿಎಲ್​ ಎಇಇ ಪತ್ರ ಬರೆದು ನಾಪತ್ತೆ ವಿಚಾರಕ್ಕೆ ಸಿಎಂ ಹೀಗಂದ್ರು
ಬಿಗ್ ಬಾಸ್ ಕನ್ನಡ: ಮೂವರು ವೈಲ್ಡ್ ಕಾರ್ಡ್ ಸ್ಪರ್ಧಿಗಳಿಗೆ ಸುದೀಪ್ ಸ್ವಾಗತ
ಬಿಗ್ ಬಾಸ್ ಕನ್ನಡ: ಮೂವರು ವೈಲ್ಡ್ ಕಾರ್ಡ್ ಸ್ಪರ್ಧಿಗಳಿಗೆ ಸುದೀಪ್ ಸ್ವಾಗತ
ಖರ್ಗೆ ಜತೆ ಏನೇನು ಮಾತುಕತೆಯಾಯ್ತು? ಸಿಎಂ ಡಿಕೆ ಶಿವಕುಮಾರ್ ಮಾಹಿತಿ
ಖರ್ಗೆ ಜತೆ ಏನೇನು ಮಾತುಕತೆಯಾಯ್ತು? ಸಿಎಂ ಡಿಕೆ ಶಿವಕುಮಾರ್ ಮಾಹಿತಿ
ಶಿವಲಿಂಗವನ್ನು ನೇರವಾಗಿ ಸ್ಪರ್ಶಿಸಿದ ಸೂರ್ಯ ರಶ್ಮಿ!
ಶಿವಲಿಂಗವನ್ನು ನೇರವಾಗಿ ಸ್ಪರ್ಶಿಸಿದ ಸೂರ್ಯ ರಶ್ಮಿ!
ಗಣೇಶ ವಿಸರ್ಜನಾ ಮೆರವಣಿಗೆಯಲ್ಲಿ ಹರತಾಳು ಹಾಲಪ್ಪ ಭರ್ಜರಿ ಡ್ಯಾನ್ಸ್
ಗಣೇಶ ವಿಸರ್ಜನಾ ಮೆರವಣಿಗೆಯಲ್ಲಿ ಹರತಾಳು ಹಾಲಪ್ಪ ಭರ್ಜರಿ ಡ್ಯಾನ್ಸ್
ವಿಷ್ಣುವರ್ಧನ್ ಅಮೃತ ಮಹೋತ್ಸವಕ್ಕಾಗಿ ಒಂದಾಗುತ್ತಿದೆ ಇಡೀ ಕನ್ನಡ ಚಿತ್ರರಂಗ
ವಿಷ್ಣುವರ್ಧನ್ ಅಮೃತ ಮಹೋತ್ಸವಕ್ಕಾಗಿ ಒಂದಾಗುತ್ತಿದೆ ಇಡೀ ಕನ್ನಡ ಚಿತ್ರರಂಗ
ಸುದೀಪ್ ಸಿನಿ ಜರ್ನಿಗೆ 30 ವರ್ಷ: ಶುಭಕೋರಿದ ಸಲ್ಮಾನ್, ಗಂಗೂಲಿ, ಮೋಹನ್​ಲಾಲ್
ಸುದೀಪ್ ಸಿನಿ ಜರ್ನಿಗೆ 30 ವರ್ಷ: ಶುಭಕೋರಿದ ಸಲ್ಮಾನ್, ಗಂಗೂಲಿ, ಮೋಹನ್​ಲಾಲ್
ಸೆಪ್ಟೆಂಬರ್ 28 ರಿಂದ ಅಕ್ಟೋಬರ್ 4ರ ವರೆಗಿನ ದ್ವಾದಶ ರಾಶಿಗಳ ಫಲಾಫಲ ಇಲ್ಲಿದೆ
ಸೆಪ್ಟೆಂಬರ್ 28 ರಿಂದ ಅಕ್ಟೋಬರ್ 4ರ ವರೆಗಿನ ದ್ವಾದಶ ರಾಶಿಗಳ ಫಲಾಫಲ ಇಲ್ಲಿದೆ
ವಿಷ್ಣುವರ್ಧನ್ ಅಮೃತ ಮಹೋತ್ಸವ ನೇರಪ್ರಸಾರ: ಅಭಿಮಾನಿಗಳಿಂದ ಬೃಹತ್ ಸಮಾರಂಭ
ವಿಷ್ಣುವರ್ಧನ್ ಅಮೃತ ಮಹೋತ್ಸವ ನೇರಪ್ರಸಾರ: ಅಭಿಮಾನಿಗಳಿಂದ ಬೃಹತ್ ಸಮಾರಂಭ
ಗ್ಯಾರಂಟಿ ಕೊಟ್ಟಿದ್ದೇವೆ, ಈಗ ಸಮಸ್ಯೆಯಲ್ಲಿ ಒದ್ದಾಡುತ್ತಿದ್ದೇವೆ: ಬಾಲಕೃಷ್ಣ
ಗ್ಯಾರಂಟಿ ಕೊಟ್ಟಿದ್ದೇವೆ, ಈಗ ಸಮಸ್ಯೆಯಲ್ಲಿ ಒದ್ದಾಡುತ್ತಿದ್ದೇವೆ: ಬಾಲಕೃಷ್ಣ