IND vs AUS 1ST T20 Highlights: ಕೊನೆಯ ಎಸೆತದಲ್ಲಿ ರಿಂಕು ಸಿಕ್ಸರ್: ಭಾರತಕ್ಕೆ ರೋಚಕ ಜಯ

|

Updated on: Nov 23, 2023 | 10:54 PM

India vs Australia 1st T20I Highlights in Kannada: ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ವಿಶಾಖಪಟ್ಟಣದಲ್ಲಿ ನಡೆದ ಮೊದಲ ಟಿ20 ಪಂದ್ಯದಲ್ಲಿ ಟೀಂ ಇಂಡಿಯಾ 2 ವಿಕೆಟ್‌ಗಳ ಜಯ ಸಾಧಿಸಿದೆ. ಆಸ್ಟ್ರೇಲಿಯಾ ನೀಡಿದ 209 ರನ್​ಗಳ ಟಾರ್ಗೆಟ್ ಅನ್ನು ಭಾರತ 20ನೇ ಓವರ್​ನ ಕೊನೆಯ ಎಸೆತದಲ್ಲಿ ಸಾಧಿಸಿತು.

IND vs AUS 1ST T20 Highlights: ಕೊನೆಯ ಎಸೆತದಲ್ಲಿ ರಿಂಕು ಸಿಕ್ಸರ್: ಭಾರತಕ್ಕೆ ರೋಚಕ ಜಯ
ಭಾರತ- ಆಸ್ಟ್ರೇಲಿಯಾ

ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ವಿಶಾಖಪಟ್ಟಣದಲ್ಲಿ ನಡೆದ ಮೊದಲ ಟಿ20 ಪಂದ್ಯದಲ್ಲಿ ಟೀಂ ಇಂಡಿಯಾ 2 ವಿಕೆಟ್‌ಗಳ ಜಯ ಸಾಧಿಸಿದೆ. ಚೊಚ್ಚಲ ಬಾರಿಗೆ ಟೀಂ ಇಂಡಿಯಾದ ನಾಯಕತ್ವ ವಹಿಸಿರುವ ಸೂರ್ಯಕುಮಾರ್ ಯಾದವ್ ಏಕದಿನ ವಿಶ್ವಕಪ್​ನ ಫ್ಲಾಪ್ ಶೋ ಅನ್ನು ಮರೆತು ಟಿ20 ಕ್ರಿಕೆಟ್​ನಲ್ಲಿ ಅವರ ಸ್ಫೋಟಕ ಶೈಲಿಯನ್ನು ಪ್ರಸ್ತುತಪಡಿಸಿದರು. ಸೂರ್ಯ ಅವರ ಸ್ಫೋಟಕ ಬ್ಯಾಟಿಂಗ್ ಆಧಾರದ ಮೇಲೆ ಟೀಂ ಇಂಡಿಯಾ 209 ರನ್‌ಗಳ ದೊಡ್ಡ ಸ್ಕೋರ್ ಅನ್ನು ಸುಲಭವಾಗಿ ಬೆನ್ನಟ್ಟಿತು.

LIVE NEWS & UPDATES

The liveblog has ended.
  • 23 Nov 2023 10:53 PM (IST)

    ಭಾರತಕ್ಕೆ ಜಯ

    20ನೇ ಓವರ್​ನ ಕೊನೆಯ ಎಸೆತದಲ್ಲಿ ಸಿಕ್ಸರ್ ಬಾರಿಸುವ ಮೂಲಕ ರಿಂಕು ಸಿಂಗ್ ಟೀಂ ಇಂಡಿಯಾವನ್ನು ಗೆಲುವಿನ ದಡ ಸೇರಿಸಿದ್ದಾರೆ. ಇದರೊಂದಿಗೆ ಭಾರತ 5 ಪಂದ್ಯಗಳ ಟಿ20 ಸರಣಿಯಲ್ಲಿ 1-0 ಅಂತರದ ಮುನ್ನಡೆ ಸಾಧಿಸಿದೆ.

  • 23 Nov 2023 10:46 PM (IST)

    ರವಿ ಬಿಷ್ಣೋಯ್ ಕೂಡ ಔಟ್

    ರವಿ ಬಿಷ್ಣೋಯ್ ಮೊದಲ ಎಸೆತದಲ್ಲಿಯೇ ರನೌಟ್ ಆದರು. ಟೀಂ ಇಂಡಿಯಾಗೆ ಈಗ ಎರಡು ಎಸೆತಗಳಲ್ಲಿ 2 ರನ್‌ಗಳ ಅಗತ್ಯವಿದೆ.


  • 23 Nov 2023 10:46 PM (IST)

    ಆರನೇ ಹೊಡೆತ

    207 ರನ್ ಗಳಿಸುವಷ್ಟರಲ್ಲಿ ಟೀಂ ಇಂಡಿಯಾ ಆರನೇ ವಿಕೆಟ್ ಕಳೆದುಕೊಂಡಿತು. ಅಕ್ಷರ್ ಪಟೇಲ್ 2 ರನ್ ಗಳಿಸಿ ಔಟಾದರು.

  • 23 Nov 2023 10:35 PM (IST)

    ಸೂರ್ಯ ಔಟ್

    ಆಸ್ಟ್ರೇಲಿಯಾ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ರ್ಯಕುಮಾರ್ ಯಾದವ್ 42 ಎಸೆತಗಳಲ್ಲಿ 80 ರನ್ ಗಳಿಸಿ ಪೆವಿಲಿಯನ್‌ಗೆ ಮರಳಿದ್ದಾರೆ. ಭಾರತ ತಂಡವು 194 ರನ್‌ಗಳ ಸ್ಕೋರ್‌ನಲ್ಲಿ ಐದನೇ ಹೊಡೆತವನ್ನು ಅನುಭವಿಸಿದೆ. ಭಾರತ ಗೆಲ್ಲಲು ಇನ್ನೂ 14 ಎಸೆತಗಳಲ್ಲಿ 15 ರನ್‌ಗಳ ಅಗತ್ಯವಿದೆ.

  • 23 Nov 2023 10:27 PM (IST)

    17 ಓವರ್‌ಗಳಲ್ಲಿ 189 ರನ್

    ಆಸ್ಟ್ರೇಲಿಯಾ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಭಾರತ ತಂಡ ತನ್ನ ಗೆಲುವನ್ನು ಬಹುತೇಕ ಖಚಿತಪಡಿಸಿದೆ. 17 ಓವರ್‌ಗಳ ಅಂತ್ಯಕ್ಕೆ ಟೀಂ ಇಂಡಿಯಾ 4 ವಿಕೆಟ್ ನಷ್ಟಕ್ಕೆ 189 ರನ್ ಗಳಿಸಿದೆ. ಈಗ ಗೆಲ್ಲಲು 18 ಎಸೆತಗಳಲ್ಲಿ ಕೇವಲ 20 ರನ್ ಗಳಿಸಬೇಕಿದೆ.

  • 23 Nov 2023 10:20 PM (IST)

    16 ಓವರ್‌ಗಳಲ್ಲಿ 171 ರನ್

    16 ಓವರ್‌ಗಳ ಆಟ ಮುಗಿದಾಗ ಭಾರತ ತಂಡ 4 ವಿಕೆಟ್‌ ಕಳೆದುಕೊಂಡು 171 ರನ್‌ ಗಳಿಸಿದೆ. ಇದೀಗ ಟೀಂ ಇಂಡಿಯಾ ಗೆಲುವಿಗೆ 24 ಎಸೆತಗಳಲ್ಲಿ 38 ರನ್‌ಗಳ ಅಗತ್ಯವಿದೆ.

  • 23 Nov 2023 10:13 PM (IST)

    ತಿಲಕ್ ಔಟ್

    ಆಸ್ಟ್ರೇಲಿಯಾ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ 209 ರನ್‌ಗಳ ಸ್ಕೋರ್ ಬೆನ್ನಟ್ಟಿದ ಭಾರತ ತಂಡವು 154 ರನ್‌ಗಳ ಸ್ಕೋರ್‌ನಲ್ಲಿ ತಿಲಕ್ ವರ್ಮಾ ರೂಪದಲ್ಲಿ ನಾಲ್ಕನೇ ವಿಕೆಟ್ ಕಳೆದುಕೊಂಡಿದೆ. ತಿಲಕ್ 10 ಎಸೆತಗಳಲ್ಲಿ 12 ರನ್ ಗಳಿಸಿ ಔಟಾದರು. 15 ಓವರ್‌ಗಳ ಆಟದ ಅಂತ್ಯಕ್ಕೆ ಭಾರತ 4 ವಿಕೆಟ್ ನಷ್ಟಕ್ಕೆ 155 ರನ್ ಗಳಿಸಿದೆ. ಇನ್ನು ಕೊನೆಯ 5 ಓವರ್‌ಗಳಲ್ಲಿ ಟೀಂ ಇಂಡಿಯಾ ಗೆಲ್ಲಲು ಇನ್ನೂ 54 ರನ್ ಗಳಿಸಬೇಕಿದೆ.

  • 23 Nov 2023 10:09 PM (IST)

    ಸೂರ್ಯಕುಮಾರ್ ಅರ್ಧಶತಕ

    ಸೂರ್ಯಕುಮಾರ್ ಯಾದವ್ ಕೂಡ ಅರ್ಧಶತಕ ಪೂರೈಸಿದ್ದಾರೆ. ಸೂರ್ಯ ಕೇವಲ 29 ಎಸೆತಗಳಲ್ಲಿ 50 ರನ್‌ಗಳ ಗಡಿ ಮುಟ್ಟಿದರು.

  • 23 Nov 2023 10:05 PM (IST)

    ಕಿಶನ್ ಔಟ್

    ಟೀಂ ಇಂಡಿಯಾ ಮೂರನೇ ವಿಕೆಟ್ ಕಳೆದುಕೊಂಡಿದೆ. ಇಶಾನ್ ಕಿಶನ್ 58 ರನ್ ಗಳಿಸಿ ಔಟಾದರು.

  • 23 Nov 2023 09:59 PM (IST)

    ಕಿಶನ್ ಅರ್ಧಶತಕ

    ಇಶಾನ್ ಕಿಶನ್ 37 ಎಸೆತಗಳಲ್ಲಿ ಅರ್ಧಶತಕ ಪೂರೈಸಿದ್ದಾರೆ. ಸದ್ಯಕ್ಕೆ ಟೀಂ ಇಂಡಿಯಾ ಉತ್ತಮ ಸ್ಥಿತಿಯಲ್ಲಿದೆ.

  • 23 Nov 2023 09:58 PM (IST)

    ಕಿಶನ್ ಸೂಪರ್ ಬ್ಯಾಟಿಂಗ್

    12 ಓವರ್‌ಗಳ ಆಟದಲ್ಲಿ ಟೀಂ ಇಂಡಿಯಾ 2 ವಿಕೆಟ್ ನಷ್ಟಕ್ಕೆ 124 ರನ್ ಗಳಿಸಿದೆ. ಇಶಾನ್ ಕಿಶನ್ 48 ರನ್ ಹಾಗೂ ಸೂರ್ಯಕುಮಾರ್ ಯಾದವ್ 48 ರನ್ ಗಳಿಸಿ ಆಡುತ್ತಿದ್ದಾರೆ. ಈ ಪಂದ್ಯ ಗೆಲ್ಲಲು ಟೀಂ ಇಂಡಿಯಾ 48 ಎಸೆತಗಳಲ್ಲಿ 85 ರನ್ ಗಳಿಸಬೇಕಿದೆ.

  • 23 Nov 2023 09:45 PM (IST)

    10 ಓವರ್‌ ಮುಕ್ತಾಯ

    10 ಓವರ್‌ಗಳಲ್ಲಿ ಟೀಂ ಇಂಡಿಯಾ 2 ವಿಕೆಟ್ ನಷ್ಟಕ್ಕೆ 106 ರನ್ ಗಳಿಸಿದೆ. ಇಶಾನ್ ಕಿಶನ್ ಮತ್ತು ಸೂರ್ಯಕುಮಾರ್ ಯಾದವ್ ಉತ್ತಮ ಬ್ಯಾಟಿಂಗ್ ಮಾಡುತ್ತಿದ್ದಾರೆ. ಇನ್ನು ಟೀಂ ಇಂಡಿಯಾ ಗೆಲುವಿಗೆ 60 ಎಸೆತಗಳಲ್ಲಿ 103 ರನ್ ಅಗತ್ಯವಿದೆ.

  • 23 Nov 2023 09:44 PM (IST)

    8 ಓವರ್‌ಗಳ ನಂತರ ಭಾರತದ ಸ್ಕೋರ್

    8 ಓವರ್‌ಗಳ ಆಟದಲ್ಲಿ ಟೀಂ ಇಂಡಿಯಾ 2 ವಿಕೆಟ್ ನಷ್ಟಕ್ಕೆ 79 ರನ್ ಗಳಿಸಿದೆ. ಇಶಾನ್ ಕಿಶನ್ 19 ರನ್ ಹಾಗೂ ಸೂರ್ಯಕುಮಾರ್ ಯಾದವ್ 37 ರನ್ ಗಳಿಸಿ ಆಡುತ್ತಿದ್ದಾರೆ. ಇಬ್ಬರು ಆಟಗಾರರ ನಡುವೆ ಉತ್ತಮ ಜೊತೆಯಾಟ ನಡೆಯುತ್ತಿದೆ.

  • 23 Nov 2023 09:19 PM (IST)

    ಭಾರತದ ಅರ್ಧಶತಕ ಪೂರ್ಣ

    ಭಾರತ 5ನೇ ಓವರ್​ನಲ್ಲಿ ಅರ್ಧಶತಕದ ಗಡಿ ದಾಟಿದೆ. 5ನೇ ಓವರ್​ನಲ್ಲಿ 2 ಸಿಕ್ಸರ್, 1 ಬೌಂಡರಿ ಸೇರಿದಂತೆ 20 ರನ್ ಬಂದವು.

  • 23 Nov 2023 09:11 PM (IST)

    ಯಶಸ್ವಿ ಜೈಸ್ವಾಲ್ ಔಟ್

    ಟೀಂ ಇಂಡಿಯಾ 22 ರನ್ ಗಳಿಸುವಷ್ಟರಲ್ಲಿ ಎರಡನೇ ವಿಕೆಟ್ ಕಳೆದುಕೊಂಡಿತು. ಯಶಸ್ವಿ ಜೈಸ್ವಾಲ್ 21 ರನ್ ಗಳಿಸಿ ಔಟಾದರು.

  • 23 Nov 2023 09:02 PM (IST)

    ರುತುರಾಜ್ ರನೌಟ್

    ಟೀಂ ಇಂಡಿಯಾಗೆ ಮೊದಲ ಹೊಡೆತ ಬಿದ್ದಿದೆ. ಈಗಾಗಲೇ ಟೀಂ ಇಂಡಿಯಾ ಮೊದಲ ಓವರ್‌ನಲ್ಲಿ 1 ವಿಕೆಟ್ ಕಳೆದುಕೊಂಡಿದೆ. ರಿತುರಾಜ್ ಗಾಯಕ್ವಾಡ್ ಚೆಂಡನ್ನು ಆಡದೇ ರನೌಟ್ ಆಗಿದ್ದಾರೆ.

  • 23 Nov 2023 09:01 PM (IST)

    ಭಾರತದ ರನ್ ಚೇಸ್ ಶುರು

    ಭಾರತ ಬೌಂಡರಿಯೊಂದಿಗೆ ಇನಿಂಗ್ಸ್ ಆರಂಭಿಸಿತು. ಯಶಸ್ವಿ ಕವರ್ ಡ್ರೈವ್‌ನಲ್ಲಿ ಬೌಂಡರಿ ಬಾರಿಸಿದರು. ಯಶಸ್ವಿ ಹಾಗೂ ರಿತುರಾಜ್ ಆರಂಭಿಕರಾಗಿ ಕಣಕ್ಕಿಳಿದಿದ್ದಾರೆ. ಅಂದರೆ ಮಧ್ಯಮ ಕ್ರಮಾಂಕದಲ್ಲಿ ಇಶಾನ್ ಕಾಣಿಸಿಕೊಳ್ಳಲಿದ್ದಾರೆ.

  • 23 Nov 2023 08:45 PM (IST)

    ಭಾರತಕ್ಕೆ 209 ರನ್ ಟಾರ್ಗೆಟ್

    ಮೊದಲು ಬ್ಯಾಟ್ ಮಾಡಿದ ಆಸ್ಟ್ರೇಲಿಯಾ ತಂಡ ನಿಗದಿತ 20 ಓವರ್‌ಗಳಲ್ಲಿ 3 ವಿಕೆಟ್ ನಷ್ಟಕ್ಕೆ 208 ರನ್ ಗಳಿಸಿದೆ. ಜೋಶ್ ಇಂಗ್ಲಿಸ್ ಆಸ್ಟ್ರೇಲಿಯಾ ಪರ ಗರಿಷ್ಠ 110 ರನ್ ಗಳಿಸಿದರೆ, ಸ್ಟೀವ್ ಸ್ಮಿತ್ 52 ರನ್‌ಗಳ ಇನಿಂಗ್ಸ್‌ ಆಡಿದರು. ಭಾರತದ ಪರ ರವಿ ಬಿಷ್ಣೋಯ್ ಮತ್ತು ಅರ್ಷದೀಪ್ ಸಿಂಗ್ ತಲಾ 1 ವಿಕೆಟ್ ಪಡೆದರು.

  • 23 Nov 2023 08:38 PM (IST)

    ಕೊನೆಯ ಓವರ್ ಬಾಕಿ

    19 ಓವರ್‌ಗಳ ಆಟ ಮುಗಿದಾಗ ಆಸ್ಟ್ರೇಲಿಯಾ ತಂಡ 3 ವಿಕೆಟ್ ನಷ್ಟಕ್ಕೆ 203 ರನ್ ಗಳಿಸಿದೆ.

  • 23 Nov 2023 08:33 PM (IST)

    Karnataka Breaking News Live: ಎಸ್‌ಜೆಎಂ ವಿದ್ಯಾಪೀಠದ ಅಧ್ಯಕ್ಷ ಸ್ಥಾನದಿಂದ ಮುರುಘಾಶ್ರೀಗೆ ಕೊಕ್

    ಚಿತ್ರದುರ್ಗ: ಜೈಲಿನಿಂದ ಬಿಡುಗಡೆಯಾಗಿರುವ ಮುರುಘಾಶ್ರೀಗೆ ಮತ್ತೆ ಶಾಕ್ ಎದುರಾಗಿದೆ. ಮುರುಘಾಮಠದ ಎಸ್‌ಜೆಎಂ ವಿದ್ಯಾಪೀಠಕ್ಕೆ ನೂತನ ಸಮಿತಿ ರಚನೆ ಮಾಡಿದ್ದು, ಎಸ್‌ಜೆಎಂ ವಿದ್ಯಾಪೀಠದ ಅಧ್ಯಕ್ಷರಾಗಿದ್ದ ಮುರುಘಾ ಮಠದ ಶ್ರೀಗಳಿಗೆ ಕೊಕ್​ ಕೊಟ್ಟಿದೆ. ಜಡ್ಜ್‌ ರೇಖಾ ನೇತೃತ್ವದಲ್ಲಿ ಎಸ್‌ಜೆಎಂ ವಿದ್ಯಾಪೀಠಕ್ಕೆ ನೂತನ ಸಮಿತಿ ರಚನೆ ಮಾಡಲಾಗಿದೆ. ಜಿಲ್ಲಾ ಪ್ರಧಾನ ನ್ಯಾಯಾಧೀಶೆ, ಮಠದ ಆಡಳಿತಾಧಿಕಾರಿಯಾಗಿದ್ದ ರೇಖಾ
    ಕಾರ್ಯದರ್ಶಿ ಭರತ್, ವಿವಿಧ ಮಠಾಧೀಶರನ್ನೊಳಗೊಂಡ ಸಮಿತಿ  ರಚಿಸಿ ರಿನಿವಲ್ ಮಾಡಿಸಿರುವ ದಾಖಲೆ ವೈರಲ್ ಆಗಿದೆ.

  • 23 Nov 2023 08:26 PM (IST)

    ಜೋಶ್ ಇಂಗ್ಲಿಸ್ ಔಟ್

    ಜೋಶ್ ಇಂಗ್ಲಿಸ್ 50 ಎಸೆತಗಳಲ್ಲಿ 110 ರನ್ ಗಳಿಸಿ ಔಟಾದರು. ಈ ಇನ್ನಿಂಗ್ಸ್‌ನಲ್ಲಿ ಅವರು 11 ಬೌಂಡರಿ ಮತ್ತು 8 ಸಿಕ್ಸರ್‌ಗಳನ್ನು ಬಾರಿಸಿದರು.

  • 23 Nov 2023 08:23 PM (IST)

    ಜೋಶ್ ಇಂಗ್ಲಿಷ್ ಶತಕ

    ಜೋಶ್ ಇಂಗ್ಲಿಸ್ ತಮ್ಮ ಟಿ20 ವೃತ್ತಿಜೀವನದ ಮೊದಲ ಶತಕವನ್ನು ಬಾರಿಸಿದ್ದಾರೆ. ಜೋಶ್ ಇಂಗ್ಲಿಸ್ 47 ಎಸೆತಗಳಲ್ಲಿ ಈ ಸಾಧನೆ ಮಾಡಿದರು. ಆಸ್ಟ್ರೇಲಿಯಾ ತಂಡದ ಸ್ಕೋರ್ 17 ಓವರ್‌ಗಳಲ್ಲಿ 179 ರನ್ ಆಗಿದೆ.

  • 23 Nov 2023 08:17 PM (IST)

    ಸ್ಮಿತ್ ಔಟ್

    ಟೀಂ ಇಂಡಿಯಾಗೆ ಎರಡನೇ ಯಶಸ್ಸು ಸಿಕ್ಕಿದೆ. ಸ್ಟೀವ್ ಸ್ಮಿತ್ ಅರ್ಧಶತಕ ಗಳಿಸಿ ರನೌಟ್ ಆಗಿದ್ದಾರೆ.

  • 23 Nov 2023 08:06 PM (IST)

    14 ಓವರ್‌ ಮುಕ್ತಾಯ

    14 ಓವರ್‌ಗಳ ಆಟ ಮುಗಿದಾಗ ಆಸ್ಟ್ರೇಲಿಯಾ ತಂಡ 1 ವಿಕೆಟ್ ನಷ್ಟಕ್ಕೆ 130 ರನ್ ಗಳಿಸಿದೆ. ಸ್ಟೀವ್ ಸ್ಮಿತ್ 40 ರನ್ ಹಾಗೂ ಜೋಶ್ ಇಂಗ್ಲಿಸ್ 75 ರನ್ ಗಳಿಸಿ ಆಡುತ್ತಿದ್ದಾರೆ. ಇಬ್ಬರು ಆಟಗಾರರ ನಡುವೆ 99 ರನ್‌ಗಳ ಜೊತೆಯಾಟವಿದೆ.

  • 23 Nov 2023 07:57 PM (IST)

    ಇಂಗ್ಲಿಸ್ ಅರ್ಧಶತಕ

    ಜೋಶ್ ಇಂಗ್ಲಿಸ್ 29 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು. 12 ಓವರ್‌ಗಳ ಆಟ ಮುಗಿದಾಗ ಆಸ್ಟ್ರೇಲಿಯಾ ತಂಡ 1 ವಿಕೆಟ್ ನಷ್ಟಕ್ಕೆ 110 ರನ್ ಗಳಿಸಿದೆ.

  • 23 Nov 2023 07:44 PM (IST)

    10 ಓವರ್ ಪೂರ್ಣ

    ಆಸೀಸ್ ಇನ್ನಿಂಗ್ಸ್​ನ 10 ಓವರ್​ ಮುಗಿದಿದೆ. ಈ 10 ಓವರ್​ಗಳಲ್ಲಿ ಆಸೀಸ್ 1 ವಿಕೆಟ್ ಕಳೆದುಕೊಂಡು 83 ರನ್ ಕಲೆಹಾಕಿದೆ. 10ನೇ ಓವರ್​ನಲ್ಲಿ ಇಂಗ್ಲಿಸ್ 1 ಬೌಂಡರಿ ಕೂಡ ಹೊಡೆದರು.

  • 23 Nov 2023 07:37 PM (IST)

    ಪ್ರಸಿದ್ಧ್ ಮತ್ತೆ ದುಬಾರಿ

    8ನೇ ಓವರ್ ಬೌಲ್ ಮಾಡಿದ ಪ್ರಸಿದ್ಧ್ ಕೃಷ್ಣ ಮತ್ತೊಮ್ಮೆ ದುಬಾರಿಯಾಗಿದ್ದಾರೆ. ಈ ಓವರ್​ನಲ್ಲಿ 1 ಸಿಕ್ಸರ್ ಹಾಗೂ 3 ಬೌಂಡರಿ ಬಾರಿಸಿದರು.

  • 23 Nov 2023 07:36 PM (IST)

    ಆಸೀಸ್ ಅರ್ಧಶತಕ ಪೂರ್ಣ

    8 ಓವರ್​ಗಳಲ್ಲಿ ಆಸೀಸ್ ಅರ್ಧಶತಕ ಪೂರ್ಣಗೊಳಿಸಿದೆ. ಇದಕ್ಕಾಗಿ ತಂಡ ಒಂದು ವಿಕೆಟ್ ಕಳೆದುಕೊಂಡಿದೆ. ಸ್ಮಿತ್ 22 ಹಾಗೂ ಇಂಗ್ಲಿಸ್ 28 ರನ್ ಬಾರಿಸಿ ಕ್ರೀಸ್​ನಲ್ಲಿದ್ದಾರೆ.

  • 23 Nov 2023 07:26 PM (IST)

    ಶಾರ್ಟ್​ ಔಟ್

    ಐದನೇ ಓವರ್ ಬೌಲ್ ಮಾಡಲು ಬಂದ ರವಿ ಬಿಷ್ಣೋಯಿ ಓವರ್​ನ ನಾಲ್ಕನೇ ಎಸೆತದಲ್ಲಿ ಮ್ಯಾಟ್ ಶಾರ್ಟ್​ ಅವರನ್ನು ಕ್ಲೀನ್ ಬೌಲ್ಡ್ ಮಾಡಿದರು.

  • 23 Nov 2023 07:18 PM (IST)

    ಕೃಷ್ಣ ದುಬಾರಿ

    ಎರಡನೇ ಓವರ್ ಬೌಲ್ ಮಾಡಿದ ಕನ್ನಡಿಗ ಪ್ರಸಿದ್ಧ್ ಕೃಷ್ಣ ದುಬಾರಿಯಾದರು. ಈ ಓವರ್​ನಲ್ಲಿ ಸ್ಮಿತ್ 2 ಬೌಂಡರಿ ಬಾರಿಸಿದರೆ, ಶಾರ್ಟ್​ 1 ಬೌಂಡರಿ ಬಾರಿಸಿದರು.

  • 23 Nov 2023 07:09 PM (IST)

    ಆಸೀಸ್ ಬ್ಯಾಟಿಂಗ್ ಆರಂಭ

    ಆಸೀಸ್ ಬ್ಯಾಟಿಂಗ್ ಆರಂಭವಾಗಿದ್ದು, ಸ್ಟೀವ್ ಸ್ಮಿತ್ ಹಾಗೂ ಮ್ಯಾಟ್ ಶಾರ್ಟ್​ ಆರಂಭಿಕರಾಗಿ ಕಣಕ್ಕಿಳಿದಿದ್ದಾರೆ.

  • 23 Nov 2023 06:46 PM (IST)

    ಆಸ್ಟ್ರೇಲಿಯಾ ತಂಡ

    ಮ್ಯಾಥ್ಯೂ ಶಾರ್ಟ್, ಸ್ಟೀವ್ ಸ್ಮಿತ್, ಜೋಶ್ ಇಂಗ್ಲಿಸ್, ಆರನ್ ಹಾರ್ಡಿ, ಮಾರ್ಕಸ್ ಸ್ಟೊಯಿನಿಸ್, ಟಿಮ್ ಡೇವಿಡ್, ಮ್ಯಾಥ್ಯೂ ವೇಡ್, ಸೀನ್ ಅಬಾಟ್, ನಾಥನ್ ಎಲ್ಲಿಸ್, ಜೇಸನ್ ಬೆಹ್ರೆನ್‌ಡಾರ್ಫ್, ತನ್ವೀರ್ ಸಂಘ

  • 23 Nov 2023 06:46 PM (IST)

    ಟೀಮ್ ಇಂಡಿಯಾ

    ಸೂರ್ಯಕುಮಾರ್ ಯಾದವ್ (ನಾಯಕ), ರುತುರಾಜ್ ಗಾಯಕ್ವಾಡ್ (ಉಪನಾಯಕ), ಇಶಾನ್ ಕಿಶನ್, ಯಶಸ್ವಿ ಜೈಸ್ವಾಲ್, ತಿಲಕ್ ವರ್ಮಾ, ರಿಂಕು ಸಿಂಗ್, ಅಕ್ಸರ್ ಪಟೇಲ್, ರವಿ ಬಿಷ್ಣೋಯ್, ಅರ್ಷದೀಪ್ ಸಿಂಗ್, ಪ್ರಸಿದ್ಧ್ ಕೃಷ್ಣ, ಮುಖೇಶ್ ಕುಮಾರ್.

  • 23 Nov 2023 06:44 PM (IST)

    ಟಾಸ್ ಗೆದ್ದ ಟೀಂ ಇಂಡಿಯಾ

    5 ಪಂದ್ಯಗಳ ಟಿ20 ಸರಣಿಯ ಮೊದಲ ಪಂದ್ಯದಲ್ಲಿ ಟೀಂ ಇಂಡಿಯಾ ನಾಯಕ ಸೂರ್ಯಕುಮಾರ್ ಯಾದವ್ ಟಾಸ್ ಗೆದ್ದು ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿದ್ದಾರೆ.

Published On - 6:44 pm, Thu, 23 November 23

Follow us on