ಭಾರತ-ಆಸ್ಟ್ರೇಲಿಯಾ ನಡುವಣ ಪಂದ್ಯದಲ್ಲಿ ಯಾರು ಬಲಿಷ್ಠ?: ಅತಿ ಹೆಚ್ಚು ರನ್, ವಿಕೆಟ್ ಕಿತ್ತವರು ಯಾರು?
India vs Australia Head to Head Record: ಭಾರತ ಕ್ರಿಕೆಟ್ ತಂಡ ಹಾಗೂ ಆಸ್ಟ್ರೇಲಿಯಾ ನಡುವಣ ಮೂರು ಪಂದ್ಯಗಳ ಏಕದಿನ ಸರಣಿಗೆ ಇಂದು ಚಾಲನೆ ಸಿಗಲಿದೆ. ಮೊಹಾಲಿಯ ಪಂಜಾಬ್ ಕ್ರಿಕೆಟ್ ಅಸೋಸಿಯೇಷನ್ ಐಎಸ್ ಬಿಂದ್ರಾ ಸ್ಟೇಡಿಯಂನಲ್ಲಿ ಮೊದಲ ಏಕದಿನ ಪಂದ್ಯ ಆಯೋಜಿಸಲಾಗಿದೆ. ಹಾಗಾದರೆ, ಭಾರತ ಮತ್ತು ಆಸ್ಟ್ರೇಲಿಯ ನಡುವಿನ ಏಕದಿನ ಪಂದ್ಯಗಳ ಮುಖಾಮುಖಿ ಅಂಕಿಅಂಶಗಳನ್ನು ನೋಡೋಣ.
ಇಂದು ಮೊಹಾಲಿಯ ಪಿಸಿಎ ಐಎಸ್ ಬಿಂದ್ರಾ ಸ್ಟೇಡಿಯಂನಲ್ಲಿ ಭಾರತ ತಂಡ ಆಸ್ಟ್ರೇಲಿಯಾವನ್ನು (India vs Australia) ಮೊದಲ ಏಕದಿನ ಪಂದ್ಯದಲ್ಲಿ ಎದುರಿಸಲಿದೆ. ಒಟ್ಟು ಮೂರು ಪಂದ್ಯಗಳ ಏಕದಿನ ಸರಣಿ ಇದಾಗಿದೆ. ಅಕ್ಟೋಬರ್ 5 ರಿಂದ ಭಾರತದಲ್ಲಿ ಆರಂಭವಾಗಲಿರುವ ಐಸಿಸಿ ಏಕದಿನ ವಿಶ್ವಕಪ್ಗು ಮುನ್ನ ಉಭಯ ತಂಡಗಳಿಗೆ ಇದು ಕೊನೆಯ ಏಕದಿನ ಸರಣಿಯಾಗಿದೆ. ಹೀಗಾಗಿ ಎಲ್ಲ ಆಟಗಾರರಿಗೆ ಇದೊಂದು ಅಗ್ನಿಪರೀಕ್ಷೆ ಎನ್ನಬಹುದು. ಹಾಗಾದರೆ, ಭಾರತ ಮತ್ತು ಆಸ್ಟ್ರೇಲಿಯ ನಡುವಿನ ಏಕದಿನ ಪಂದ್ಯಗಳ ಮುಖಾಮುಖಿ ಅಂಕಿಅಂಶಗಳನ್ನು ನೋಡೋಣ.
ಏಕದಿನ ಪಂದ್ಯಗಳಲ್ಲಿ ಭಾರತ vs ಆಸ್ಟ್ರೇಲಿಯಾ ಮುಖಾಮುಖಿ ಅಂಕಿಅಂಶಗಳು
- ಆಡಿದ ಪಂದ್ಯಗಳು – 146
- ಭಾರತ ಗೆದ್ದಿರುವುದು – 54
- ಆಸ್ಟ್ರೇಲಿಯಾ ಗೆದ್ದಿರುವುದು – 82
- ಫಲಿತಾಂಶವಿಲ್ಲದ ಪಂದ್ಯ – 10
- ಕೊನೆಯ ಫಲಿತಾಂಶ – ಆಸ್ಟ್ರೇಲಿಯಾ 21 ರನ್‌ಗಳಿಂದ ಗೆದ್ದಿತ್ತು (ಚೆನ್ನೈ), ಮಾರ್ಚ್ 2023.
- ಕೊನೆಯ ಐದು ಫಲಿತಾಂಶಗಳು – ಆಸ್ಟ್ರೇಲಿಯಾ 3 ಪಂದ್ಯ ಗೆದ್ದರೆ, ಭಾರತ 2 ಪಂದ್ಯದಲ್ಲಿ ಜಯಿಸಿತ್ತು.
ಭಾರತದಲ್ಲಿ ನಡೆದ ಭಾರತ vs ಆಸ್ಟ್ರೇಲಿಯಾ ಮುಖಾಮುಖಿ ಅಂಕಿಅಂಶಗಳು
- ಆಡಿದ ಪಂದ್ಯಗಳು – 67
- ಭಾರತ ಗೆದ್ದಿರುವುದು – 30
- ಆಸ್ಟ್ರೇಲಿಯಾ ಗೆದ್ದಿರುವುದು – 32
- ಫಲಿತಾಂಶವಿಲ್ಲದ ಪಂದ್ಯ – 5
- ಕೊನೆಯ ಫಲಿತಾಂಶ – ಆಸ್ಟ್ರೇಲಿಯಾ 21 ರನ್‌ಗಳಿಂದ ಗೆದ್ದಿತು (ಚೆನ್ನೈ), ಮಾರ್ಚ್ 2023
- ಕೊನೆಯ ಐದು ಫಲಿತಾಂಶಗಳು – ಭಾರತ – 3, ಆಸ್ಟ್ರೇಲಿಯಾ – 2
ಪ್ರಮುಖ ಆಟಗಾರರಿಗೆ ವಿಶ್ರಾಂತಿ: ಹೀಗಿರಲಿದೆ ಟೀಮ್ ಇಂಡಿಯಾ ಪ್ಲೇಯಿಂಗ್ 11
ಇದನ್ನೂ ಓದಿ
ಭಾರತದಲ್ಲಿ ಭಾರತ vs ಆಸ್ಟ್ರೇಲಿಯಾ ಏಕದಿನದಲ್ಲಿ ಅತಿ ಹೆಚ್ಚು ರನ್ ಗಳಿಸಿದವರು
- ಸಚಿನ್ ತೆಂಡೂಲ್ಕರ್ 30 ಪಂದ್ಯಗಳಲ್ಲಿ 1561 ರನ್
- ವಿರಾಟ್ ಕೊಹ್ಲಿ 26 ಪಂದ್ಯಗಳಲ್ಲಿ 1288 ರನ್
- ರೋಹಿತ್ ಶರ್ಮಾ 22 ಪಂದ್ಯಗಳಲ್ಲಿ 1204 ರನ್
- ರಿಕಿ ಪಾಂಟಿಂಗ್ 25 ಪಂದ್ಯಗಳಲ್ಲಿ 1091 ರನ್
- ಎಂಎಸ್ ಧೋನಿ 30 ಪಂದ್ಯಗಳಲ್ಲಿ 926 ರನ್
ಭಾರತದಲ್ಲಿ ಭಾರತ vs ಆಸ್ಟ್ರೇಲಿಯಾ ಏಕದಿನದಲ್ಲಿ ಅತಿ ಹೆಚ್ಚು ವಿಕೆಟ್ ಪಡೆದವರು
- ಮಿಚೆಲ್ ಜಾನ್ಸನ್ 19 ಪಂದ್ಯಗಳಲ್ಲಿ 31 ವಿಕೆಟ್
- ಕುಲ್ದೀಪ್ ಯಾದವ್ 15 ಪಂದ್ಯಗಳಲ್ಲಿ 24 ವಿಕೆಟ್
- ಆಡಮ್ ಝಂಪಾ 14 ಪಂದ್ಯಗಳಲ್ಲಿ 24 ವಿಕೆಟ್
- ರವೀಂದ್ರ ಜಡೇಜಾ 22 ಪಂದ್ಯಗಳಲ್ಲಿ 23 ವಿಕೆಟ್
- ಮೊಹಮ್ಮದ್ ಶಮಿ 14 ಪಂದ್ಯಗಳಲ್ಲಿ 22 ವಿಕೆಟ್
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 11:45 am, Fri, 22 September 23