ಏಕದಿನ ವಿಶ್ವಕಪ್ನ 5ನೇ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ದ ಟೀಮ್ ಇಂಡಿಯಾ ಭರ್ಜರಿ ಜಯ ಸಾಧಿಸಿದೆ. ಚೆನ್ನೈನ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಗೆದ್ದ ಆಸ್ಟ್ರೇಲಿಯಾ ತಂಡದ ನಾಯಕ ಪ್ಯಾಟ್ ಕಮಿನ್ಸ್ ಬ್ಯಾಟಿಂಗ್ ಆಯ್ದುಕೊಂಡಿದ್ದರು. ಅದರಂತೆ ಇನಿಂಗ್ಸ್ ಆರಂಭಿಸಿದ ಆಸ್ಟ್ರೇಲಿಯಾ ತಂಡವು ಟೀಮ್ ಇಂಡಿಯಾ ಸ್ಪಿನ್ ದಾಳಿಗೆ ತತ್ತರಿಸಿತು. ಪರಿಣಾಮ 49.3 ಓವರ್ಗಳಲ್ಲಿ 199 ರನ್ಗಳಿಸಿ ಆಸ್ಟ್ರೇಲಿಯಾ ಆಲೌಟ್ ಆಯಿತು. 200 ರನ್ಗಳ ಸುಲಭ ಗುರಿಯನ್ನು ಬೆನ್ನತ್ತಿದ ಟೀಮ್ ಇಂಡಿಯಾಗೆ ಆಸೀಸ್ ವೇಗಿಗಳು ಆರಂಭಿಕ ಆಘಾತ ನೀಡಿದರು. ಆರಂಭಿಕರಾದ ಇಶಾನ್ ಕಿಶನ್ (0) ಹಾಗೂ ರೋಹಿತ್ ಶರ್ಮಾ (0) ಶೂನ್ಯಕ್ಕೆ ಔಟಾದರೆ, ಆ ಬಳಿಕ ಶ್ರೇಯಸ್ ಅಯ್ಯರ್ ಕೂಡ ಸೊನ್ನೆ ಸುತ್ತಿ ನಿರ್ಗಮಿಸಿದರು.
ಈ ಹಂತದಲ್ಲಿ ಜೊತೆಗೂಡಿದ ವಿರಾಟ್ ಕೊಹ್ಲಿ ಹಾಗೂ ಕೆಎಲ್ ರಾಹುಲ್ ಅದ್ಭುತ ಜೊತೆಯಾಟವಾಡಿದರು. 4ನೇ ವಿಕೆಟ್ಗೆ 165 ರನ್ ಪೇರಿಸಿದ ಈ ಜೋಡಿ ತಂಡವನ್ನು ಆರಂಭಿಕ ಆಘಾತದಿಂದ ಪಾರು ಮಾಡಿದರು. ಈ ಹಂತದಲ್ಲಿ 85 ರನ್ ಬಾರಿಸಿದ್ದ ವಿರಾಟ್ ಕೊಹ್ಲಿ ಔಟಾದರು. ಇದಾಗ್ಯೂ ಅಜೇಯ 97 ರನ್ ಬಾರಿಸುವ ಮೂಲಕ ಕೆಎಲ್ ರಾಹುಲ್ ಟೀಮ್ ಇಂಡಿಯಾವನ್ನು 41.2 ಓವರ್ಗಳಲ್ಲಿ ಗುರಿ ಮುಟ್ಟಿಸಿದರು. ಈ ಮೂಲಕ ಟೀಮ್ ಇಂಡಿಯಾ ಏಕದಿನ ವಿಶ್ವಕಪ್ನ ಮೊದಲ ಪಂದ್ಯದಲ್ಲೇ 6 ವಿಕೆಟ್ಗಳ ಭರ್ಜರಿ ಜಯ ಸಾಧಿಸಿದೆ.
ಭಾರತ (ಪ್ಲೇಯಿಂಗ್ XI): ರೋಹಿತ್ ಶರ್ಮಾ (ನಾಯಕ), ಇಶಾನ್ ಕಿಶನ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ರವಿಚಂದ್ರನ್ ಅಶ್ವಿನ್, ಕುಲ್ದೀಪ್ ಯಾದವ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್.
ಆಸ್ಟ್ರೇಲಿಯಾ (ಪ್ಲೇಯಿಂಗ್ XI): ಡೇವಿಡ್ ವಾರ್ನರ್, ಮಿಚೆಲ್ ಮಾರ್ಷ್, ಸ್ಟೀವ್ ಸ್ಮಿತ್, ಮಾರ್ನಸ್ ಲಾಬುಶೇನ್, ಕ್ಯಾಮರೋನ್ ಗ್ರೀನ್, ಅಲೆಕ್ಸ್ ಕ್ಯಾರಿ (ವಿಕೆಟ್ ಕೀಪರ್), ಗ್ಲೆನ್ ಮ್ಯಾಕ್ಸ್‌ವೆಲ್, ಪ್ಯಾಟ್ ಕಮಿನ್ಸ್ (ನಾಯಕ), ಮಿಚೆಲ್ ಸ್ಟಾರ್ಕ್, ಜೋಶ್ ಹ್ಯಾಝಲ್‌ವುಡ್, ಆ್ಯಡಂ ಝಂಪಾ.
ಭಾರತ ತಂಡ: ರೋಹಿತ್ ಶರ್ಮಾ (ನಾಯಕ), ಶುಭ್ಮನ್ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಸೂರ್ಯಕುಮಾರ್ ಯಾದವ್, ಕೆಎಲ್ ರಾಹುಲ್ (ವಿಕೆಟ್ ಕೀಪರ್), ಇಶಾನ್ ಕಿಶನ್ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ (ಉಪ ನಾಯಕ), ರವೀಂದ್ರ ಜಡೇಜಾ, ಶಾರ್ದೂಲ್ ಠಾಕೂರ್, ರವಿಚಂದ್ರನ್ ಅಶ್ವಿನ್, ಕುಲ್ದೀಪ್ ಯಾದವ್, ಜಸ್ಪ್ರಿತ್ ಬುಮ್ರಾ, ಮೊಹಮ್ಮದ್ ಶಮಿ ಮತ್ತು ಮೊಹಮ್ಮದ್ ಸಿರಾಜ್.
ಆಸ್ಟ್ರೇಲಿಯಾ ತಂಡ: ಪ್ಯಾಟ್ ಕಮಿನ್ಸ್ (ನಾಯಕ), ಸ್ಟೀವ್ ಸ್ಮಿತ್, ಅಲೆಕ್ಸ್ ಕ್ಯಾರಿ, ಜೋಶ್ ಇಂಗ್ಲಿಸ್, ಶಾನ್ ಅಬಾಟ್, ಮಾರ್ನಸ್ ಲಾಬುಶೇನ್, ಕ್ಯಾಮೆರೋನ್ ಗ್ರೀನ್, ಜೋಶ್ ಹ್ಯಾಝಲ್‌ವುಡ್, ಟ್ರಾವಿಸ್ ಹೆಡ್, ಮಿಚ್ ಮಾರ್ಷ್, ಗ್ಲೆನ್ ಮ್ಯಾಕ್ಸ್‌ವೆಲ್, ಮಾರ್ಕಸ್ ಸ್ಟೊಯಿನಿಸ್, ಡೇವಿಡ್ ವಾರ್ನರ್, ಆ್ಯಡಂ ಝಂಪಾ, ಮಿಚೆಲ್ ಸ್ಟಾರ್ಕ್.
ಟೀಮ್ ಇಂಡಿಯಾಗೆ 6 ವಿಕೆಟ್ಗಳ ಭರ್ಜರಿ ಜಯ.
ಭಾರತ ತಂಡದ ಗೆಲುವಿ ರೂವಾರಿಗಳು ಕೆಎಲ್ ರಾಹುಲ್ (97) ಹಾಗೂ ವಿರಾಟ್ ಕೊಹ್ಲಿ (85).
ಜೋಶ್ ಹ್ಯಾಝಲ್‌ವುಡ್ ಎಸೆದ 40ನೇ ಓವರ್ನ 5ನೇ ಎಸೆತದಲ್ಲಿ ಲಾಂಗ್ ಆಫ್ನತ್ತ ಭರ್ಜರಿ ಸಿಕ್ಸ್ ಸಿಡಿಸಿದ ಹಾರ್ದಿಕ್ ಪಾಂಡ್ಯ.
40 ಓವರ್ಗಳ ಮುಕ್ತಾಯದ ವೇಳೆಗೆ 182 ರನ್ ಕಲೆಹಾಕಿದ ಟೀಮ್ ಇಂಡಿಯಾ.
ಕ್ರೀಸ್ನಲ್ಲಿ ಕೆಎಲ್ ರಾಹುಲ್ ಹಾಗೂ ಹಾರ್ದಿಕ್ ಪಾಂಡ್ಯ ಬ್ಯಾಟಿಂಗ್.
ಜೋಶ್ ಹ್ಯಾಝಲ್‌ವುಡ್ ಎಸೆತದಲ್ಲಿ ಫ್ರಂಟ್ ಫೀಲ್ಡರ್ ಮಾರ್ನಸ್ ಲಾಬುಶೇನ್ಗೆ ಕ್ಯಾಚ್ ನೀಡಿದ ವಿರಾಟ್ ಕೊಹ್ಲಿ.
116 ಎಸೆತಗಳಲ್ಲಿ 85 ರನ್ ಬಾರಿಸಿ ವಿಕೆಟ್ ಒಪ್ಪಿಸಿದ ವಿರಾಟ್ ಕೊಹ್ಲಿ.
ಕ್ರೀಸ್ನಲ್ಲಿ ಕೆಎಲ್ ರಾಹುಲ್ ಹಾಗೂ ಹಾರ್ದಿಕ್ ಪಾಂಡ್ಯ ಬ್ಯಾಟಿಂಗ್.
ಜೋಶ್ ಹ್ಯಾಝಲ್‌ವುಡ್ ಎಸೆದ 36ನೇ ಓವರ್ನ 5ನೇ ಎಸೆತದಲ್ಲಿ ಸ್ಟ್ರೈಟ್ ಡ್ರೈವ್ ಫೋರ್ ಬಾರಿಸಿದ ಕೆಎಲ್ ರಾಹುಲ್.
ಗೆಲುವಿನತ್ತ ಟೀಮ್ ಇಂಡಿಯಾ. ವಿಕೆಟ್ಗಾಗಿ ಆಸ್ಟ್ರೇಲಿಯನ್ನರ ಪರದಾಟ.
ಕ್ರೀಸ್ನಲ್ಲಿ ಕೆಎಲ್ ರಾಹುಲ್ ಹಾಗೂ ವಿರಾಟ್ ಕೊಹ್ಲಿ ಬ್ಯಾಟಿಂಗ್.
35 ಓವರ್ಗಳ ಮುಕ್ತಾಯದ ವೇಳೆಗೆ 151 ರನ್ ಕಲೆಹಾಕಿದ ಟೀಮ್ ಇಂಡಿಯಾ.
ಟೀಮ್ ಇಂಡಿಯಾಗೆ ಗೆಲ್ಲಲು ಇನ್ನು 90 ಎಸೆತಗಳಲ್ಲಿ 49 ರನ್ಗಳ ಅವಶ್ಯಕತೆ.
ಕ್ರೀಸ್ನಲ್ಲಿ ವಿರಾಟ್ ಕೊಹ್ಲಿ (80) ಹಾಗೂ ಕೆಎಲ್ ರಾಹುಲ್ (64) ಬ್ಯಾಟಿಂಗ್,
30 ಓವರ್ಗಳ ಮುಕ್ತಾಯದ ವೇಳೆಗೆ 120 ರನ್ ಕಲೆಹಾಕಿದ ಟೀಮ್ ಇಂಡಿಯಾ.
ಕ್ರೀಸ್ನಲ್ಲಿ ವಿರಾಟ್ ಕೊಹ್ಲಿ (60) ಹಾಗೂ ಕೆಎಲ್ ರಾಹುಲ್ (55) ಬ್ಯಾಟಿಂಗ್.
ಟೀಮ್ ಇಂಡಿಯಾಗೆ 120 ಎಸೆತಗಳಲ್ಲಿ 80 ರನ್ಗಳ ಅವಶ್ಯಕತೆ.
ರೋಹಿತ್ ಶರ್ಮಾ (0), ಇಶಾನ್ ಕಿಶನ್ (0) ಹಾಗೂ ಶ್ರೇಯಸ್ ಅಯ್ಯರ್ (0) ಔಟ್.
72 ಎಸೆತಗಳಲ್ಲಿ 5 ಫೋರ್ಗಳೊಂದಿಗೆ ಅರ್ಧಶತಕ ಪೂರೈಸಿದ ಕೆಎಲ್ ರಾಹುಲ್.
ಟೀಮ್ ಇಂಡಿಯಾ ಉತ್ತಮ ಬ್ಯಾಟಿಂಗ್.
ಕ್ರೀಸ್ನಲ್ಲಿ ವಿರಾಟ್ ಕೊಹ್ಲಿ (54) ಹಾಗೂ ಕೆಎಲ್ ರಾಹುಲ್ (50) ಬ್ಯಾಟಿಂಗ್.
147 ಎಸೆತಗಳಲ್ಲಿ ಶತಕ ಜೊತೆಯಾಟವಾಡಿದ ಕೆಎಲ್ ರಾಹುಲ್ ಹಾಗೂ ವಿರಾಟ್ ಕೊಹ್ಲಿ.
ಟೀಮ್ ಇಂಡಿಯಾವನ್ನು ಆರಂಭಿಕ ಆಘಾತದಿಂದ ಪಾರು ಮಾಡಿದ ಕೊಹ್ಲಿ-ರಾಹುಲ್ ಜೋಡಿ.
27 ಓವರ್ಗಳ ಮುಕ್ತಾಯದ ವೇಳೆಗೆ 105 ರನ್ ಕಲೆಹಾಕಿದ ಟೀಮ್ ಇಂಡಿಯಾ.
ಪ್ಯಾಟ್ ಕಮಿನ್ಸ್ ಎಸೆತದಲ್ಲಿ ಲೆಗ್ ಸೈಡ್ನತ್ತ ಬಾರಿಸಿ 2 ರನ್ ಓಡಿದ ವಿರಾಟ್ ಕೊಹ್ಲಿ.
ಈ 2 ರನ್ಗಳೊಂದಿಗೆ ಅರ್ಧಶತಕ ಪೂರೈಸಿದ ಕಿಂಗ್ ಕೊಹ್ಲಿ. ಇದು ಏಕದಿನ ಕ್ರಿಕೆಟ್ನಲ್ಲಿ ಕೊಹ್ಲಿಯ 67ನೇ ಅರ್ಧಶತಕ.
25 ಓವರ್ಗಳ ಮುಕ್ತಾಯದ ವೇಳೆಗೆ 97 ರನ್ ಕಲೆಹಾಕಿದ ಟೀಮ್ ಇಂಡಿಯಾ.
ಇನ್ನು ಟೀಮ್ ಇಂಡಿಯಾಗೆ ಗೆಲ್ಲಲು 150 ಎಸೆತಗಳಲ್ಲಿ 103 ರನ್ಗಳ ಅವಶ್ಯಕತೆ.
ಕ್ರೀಸ್ನಲ್ಲಿ ವಿರಾಟ್ ಕೊಹ್ಲಿ (48) ಹಾಗೂ ಕೆಎಲ್ ರಾಹುಲ್ (46) ಬ್ಯಾಟಿಂಗ್.
ರೋಹಿತ್ ಶರ್ಮಾ (0), ಇಶಾನ್ ಕಿಶನ್ (0) ಹಾಗೂ ಶ್ರೇಯಸ್ ಅಯ್ಯರ್ (0) ಔಟ್.
20 ಓವರ್ಗಳಲ್ಲಿ 80 ರನ್ ಕಲೆಹಾಕಿದ ಟೀಮ್ ಇಂಡಿಯಾ.
ಇನ್ನು 30 ಓವರ್ಗಳಲ್ಲಿ 120 ರನ್ಗಳ ಅವಶ್ಯಕತೆ.
ಕ್ರೀಸ್ನಲ್ಲಿ ವಿರಾಟ್ ಕೊಹ್ಲಿ (38) ಹಾಗೂ ಕೆಎಲ್ ರಾಹುಲ್ (39) ಬ್ಯಾಟಿಂಗ್.
ರೋಹಿತ್ ಶರ್ಮಾ (0)
ಇಶಾನ್ ಕಿಶಾನ್ (0)
ಶ್ರೇಯಸ್ ಅಯ್ಯರ್ (0) ಔಟ್.
ಆ್ಯಡಂ ಝಂಪಾ ಎಸೆದ 18ನೇ ಓವರ್ನ 3ನೇ ಎಸೆತದಲ್ಲಿ ಆಕರ್ಷಕ ಫೋರ್ ಬಾರಿಸಿದ ಕೆಎಲ್ ರಾಹುಲ್.
5ನೇ ಮತ್ತು 6ನೇ ಎಸೆತಗಳಲ್ಲೂ ಕೆಎಲ್ ರಾಹುಲ್ ಬ್ಯಾಟ್ನಿಂದ ಬ್ಯಾಕ್ ಟು ಬ್ಯಾಕ್ ಫೋರ್ಗಳು.
ಕ್ರೀಸ್ನಲ್ಲಿ ಕೆಎಲ್ ರಾಹುಲ್ ಹಾಗೂ ವಿರಾಟ್ ಕೊಹ್ಲಿ ಬ್ಯಾಟಿಂಗ್.
ಕ್ಯಾಮರೋನ್ ಗ್ರೀನ್ ಎಸೆದ 15ನೇ ಓವರ್ನ ಕೊನೆಯ ಎರಡು ಎಸೆತಗಳಲ್ಲಿ ಡೀಪ್ ಮಿಡ್ ವಿಕೆಟ್ನತ್ತ ಆಕರ್ಷಕ ಬೌಂಡರಿ ಬಾರಿಸಿದ ವಿರಾಟ್ ಕೊಹ್ಲಿ.
15 ಓವರ್ಗಳ ಮುಕ್ತಾಯದ ವೇಳೆಗೆ 49 ರನ್ ಕಲೆಹಾಕಿದ ಟೀಮ್ ಇಂಡಿಯಾ.
ಕ್ರೀಸ್ನಲ್ಲಿ ವಿರಾಟ್ ಕೊಹ್ಲಿ (31) ಹಾಗೂ ಕೆಎಲ್ ರಾಹುಲ್ (15) ಬ್ಯಾಟಿಂಗ್.
ಪ್ಯಾಟ್ ಕಮಿನ್ಸ್ ಎಸೆದ 11ನೇ ಓವರ್ನ 4ನೇ ಎಸೆತದಲ್ಲಿ ಆಫ್ ಸೈಡ್ನತ್ತ ಫೋರ್ ಬಾರಿಸಿದ ಕೆಎಲ್ ರಾಹುಲ್.
11 ಓವರ್ಗಳ ಮುಕ್ತಾಯದ ವೇಳೆಗೆ 33 ರನ್ ಕಲೆಹಾಕಿದ ಟೀಮ್ ಇಂಡಿಯಾ.
ಕ್ರೀಸ್ನಲ್ಲಿ ಕೆಎಲ್ ರಾಹುಲ್ ಹಾಗೂ ವಿರಾಟ್ ಕೊಹ್ಲಿ.
ಹ್ಯಾಝಲ್‌ವುಡ್ ಎಸೆದ 8ನೇ ಓವರ್ನ 3ನೇ ಎಸೆತದಲ್ಲಿ ಪುಲ್ ಶಾಟ್ ಬಾರಿಸಲು ಯತ್ನಿಸಿದ ವಿರಾಟ್ ಕೊಹ್ಲಿ. ಮಿಡ್ ವಿಕೆಟ್ನಿಂದ ಓಡಿ ಬಂದು ಕ್ಯಾಚ್ ಕೈ ಬಿಟ್ಟ ಮಿಚೆಲ್ ಮಾರ್ಷ್. ವಿರಾಟ್ ಕೊಹ್ಲಿಗೆ ಮೊದಲ ಜೀವದಾನ.
ಜೋಶ್ ಹ್ಯಾಝಲ್‌ವುಡ್ ಎಸೆದ 6ನೇ ಓವರ್ನ 5ನೇ ಎಸೆತದಲ್ಲಿ ಸ್ಟ್ರೈಟ್ ಡ್ರೈವ್ ಫೋರ್ ಬಾರಿಸಿದ ವಿರಾಟ್ ಕೊಹ್ಲಿ.
ಕ್ರೀಸ್ನಲ್ಲಿ ವಿರಾಟ್ ಕೊಹ್ಲಿ ಹಾಗೂ ಕೆಎಲ್ ರಾಹುಲ್ ಬ್ಯಾಟಿಂಗ್.
ಮೊದಲ 5 ಓವರ್ಗಳಲ್ಲಿ ಕೇವಲ 12 ರನ್ ಕಲೆಹಾಕಿದ ಟೀಮ್ ಇಂಡಿಯಾ.
ಕ್ರೀಸ್ನಲ್ಲಿ ಕೆಎಲ್ ರಾಹುಲ್ ಹಾಗೂ ವಿರಾಟ್ ಕೊಹ್ಲಿ ಬ್ಯಾಟಿಂಗ್.
ರೋಹಿತ್ ಶರ್ಮಾ (0)
ಇಶಾನ್ ಕಿಶಾನ್ (0)
ಶ್ರೇಯಸ್ ಅಯ್ಯರ್ (0) ಔಟ್.
ಜೋಶ್ ಹ್ಯಾಝಲ್‌ವುಡ್ ಎಸೆದ 4ನೇ ಓವರ್ನ ಕೊನೆಯ ಎಸೆತದಲ್ಲಿ ಆಫ್ ಸೈಡ್ನತ್ತ ಬೌಂಡರಿ ಬಾರಿಸಿದ ಕೆಎಲ್ ರಾಹುಲ್.
ಮೊದಲ 4 ಓವರ್ಗಳಲ್ಲಿ ಮೂಡಿಬಂದ ಮೊದಲ ಫೋರ್ ಇದು.
ಕ್ರೀಸ್ನಲ್ಲಿ ವಿರಾಟ್ ಕೊಹ್ಲಿ ಹಾಗೂ ಕೆಎಲ್ ರಾಹುಲ್ ಬ್ಯಾಟಿಂಗ್
ಜೋಶ್ ಹ್ಯಾಝಲ್‌ವುಡ್ ಎಸೆದ 2ನೇ ಓವರ್ನ ಕೊನೆಯ ಎಸೆತದಲ್ಲಿ ಫ್ರಂಟ್ ಫೀಲ್ಡರ್ಗೆ ಕ್ಯಾಚ್ ನೀಡಿದ ಡೇವಿಡ್ ವಾರ್ನರ್.
ಕ್ರೀಸ್ನಲ್ಲಿ ವಿರಾಟ್ ಕೊಹ್ಲಿ ಹಾಗೂ ಕೆಎಲ್ ರಾಹುಲ್ ಬ್ಯಾಟಿಂಗ್
ರೋಹಿತ್ ಶರ್ಮಾ (0)
ಇಶಾನ್ ಕಿಶಾನ್ (0)
ಶ್ರೇಯಸ್ ಅಯ್ಯರ್ (0)
ಜೋಶ್ ಹ್ಯಾಝಲ್‌ವುಡ್ ಎಸೆತದಲ್ಲಿ ಎಲ್ಬಿಡಬ್ಲ್ಯೂ ಆಗಿ ಹೊರನಡೆದ ರೋಹಿತ್ ಶರ್ಮಾ.
6 ಎಸೆತಗಳನ್ನು ಎದುರಿಸಿ ಶೂನ್ಯದೊಂದಿಗೆ ಮರಳಿದ ಹಿಟ್ಮ್ಯಾನ್.
ಟೀಮ್ ಇಂಡಿಯಾಗೆ ಆರಂಭಿಕ ಆಘಾತ.
ಕ್ರೀಸ್ನಲ್ಲಿ ವಿರಾಟ್ ಕೊಹ್ಲಿ ಹಾಗೂ ಶ್ರೇಯಸ್ ಅಯ್ಯರ್ ಬ್ಯಾಟಿಂಗ್.
ಮಿಚೆಲ್ ಸ್ಟಾರ್ಕ್ ಎಸೆದ ಮೊದಲ ಓವರ್ನ 4ನೇ ಎಸೆತದಲ್ಲಿ ಸ್ಲಿಪ್ನಲ್ಲಿದ್ದ ಕ್ಯಾಮರೋನ್ ಗ್ರೀನ್ಗೆ ಕ್ಯಾಚ್ ನೀಡಿದ ಇಶಾನ್ ಕಿಶನ್.
ಏಕದಿನ ವಿಶ್ವಕಪ್ನ ಮೊದಲ ಪಂದ್ಯದಲ್ಲೇ ಗೋಲ್ಡನ್ ಡಕ್ಗೆ ಔಟಾದ ಇಶಾನ್ ಕಿಶನ್.
ಕ್ರೀಸ್ನಲ್ಲಿ ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿ ಬ್ಯಾಟಿಂಗ್.
ಮೊಹಮ್ಮದ್ ಸಿರಾಜ್ ಎಸೆದ ಕೊನೆಯ ಓವರ್ನ 3ನೇ ಎಸೆತದಲ್ಲಿ ಲೆಗ್ ಸೈಡ್ನತ್ತ ಬಾರಿಸಿದ ಮಿಚೆಲ್ ಸ್ಟಾರ್ಕ್. ಬೌಂಡರಿ ಲೈನ್ನಿಂದ ಓಡಿ ಬಂದು ಅತ್ಯುತ್ತಮ ಕ್ಯಾಚ್ ಹಿಡಿದ ಶ್ರೇಯಸ್ ಅಯ್ಯರ್. 199 ರನ್ಗಳಿಗೆ ಆಸ್ಟ್ರೇಲಿಯಾ ತಂಡ ಆಲೌಟ್.
ಭಾರತ ತಂಡಕ್ಕೆ 200 ರನ್ಗಳ ಗುರಿ ನೀಡಿದ ಆಸ್ಟ್ರೇಲಿಯಾ.
49 ಓವರ್ ಮುಕ್ತಾಯದ ವೇಳೆಗೆ 195 ರನ್ ಕಲೆಹಾಕಿದ ಆಸ್ಟ್ರೇಲಿಯಾ.
ಕ್ರೀಸ್ನಲ್ಲಿ ಮಿಚೆಲ್ ಸ್ಟಾರ್ಕ್ ಹಾಗೂ ಜೋಶ್ ಹ್ಯಾಝಲ್‌ವುಡ್ ಬ್ಯಾಟಿಂಗ್.
50ನೇ ಓವರ್ ಬೌಲಿಂಗ್ ಮಾಡುತ್ತಿರುವ ಮೊಹಮ್ಮದ್ ಸಿರಾಜ್.
ಹಾರ್ದಿಕ್ ಪಾಂಡ್ಯ ಎಸೆದ 49ನೇ ಓವರ್ನ 2ನೇ ಎಸೆತದಲ್ಲಿ ವಿರಾಟ್ ಕೊಹ್ಲಿಗೆ ಸುಲಭ ಕ್ಯಾಚ್ ನೀಡಿದ ಆ್ಯಡಂ ಝಂಪಾ (6).
ಆಸ್ಟ್ರೇಲಿಯಾ ತಂಡದ 9ನೇ ವಿಕೆಟ್ ಪತನ.
ಕ್ರೀಸ್ನಲ್ಲಿ ಮಿಚೆಲ್ ಸ್ಟಾರ್ಕ್ ಹಾಗೂ ಜೋಶ್ ಹ್ಯಾಝಲ್‌ವುಡ್ ಬ್ಯಾಟಿಂಗ್.
ಬುಮ್ರಾ ಎಸೆದ 47ನೇ ಓವರ್ನ 2ನೇ ಎಸೆತದಲ್ಲಿ ಭರ್ಜರಿ ಸಿಕ್ಸ್ ಸಿಡಿಸಿದ ಮಿಚೆಲ್ ಸ್ಟಾರ್ಕ್.
ಈ ಸಿಕ್ಸ್ನೊಂದಿಗೆ ಆಸ್ಟ್ರೇಲಿಯಾ ತಂಡದ ಸ್ಕೋರ್ 183 ಕ್ಕೆ ಏರಿಕೆ.
10 ಓವರ್ಗಳಲ್ಲಿ 34 ರನ್ ನೀಡಿ 1 ವಿಕೆಟ್ ಕಬಳಿಸಿದ ಅಶ್ವಿನ್.
10 ಓವರ್ಗಳಲ್ಲಿ 42 ರನ್ ನೀಡಿ 2 ವಿಕೆಟ್ ಪಡೆದ ಕುಲ್ದೀಪ್ ಯಾದವ್.
10 ಓವರ್ಗಳಲ್ಲಿ ಕೇವಲ 28 ರನ್ ನೀಡಿ 3 ವಿಕೆಟ್ ಕಬಳಿಸಿದ ರವೀಂದ್ರ ಜಡೇಜಾ.
44 ಓವರ್ಗಳ ಮುಕ್ತಾಯದ ವೇಳೆಗೆ 168 ರನ್ ಕಲೆಹಾಕಿದ ಆಸ್ಟ್ರೇಲಿಯಾ.
8 ವಿಕೆಟ್ ಕಬಳಿಸಿ ಪಂದ್ಯದ ಮೇಲೆ ಹಿಡಿತ ಹೊಂದಿರುವ ಟೀಮ್ ಇಂಡಿಯಾ.
ಕ್ರೀಸ್ನಲ್ಲಿ ಆ್ಯಡಂ ಝಂಪಾ ಹಾಗೂ ಮಿಚೆಲ್ ಸ್ಟಾರ್ಕ್ ಬ್ಯಾಟಿಂಗ್.
ಜಸ್ಪ್ರೀತ್ ಬುಮ್ರಾ ಎಸೆದ 43ನೇ ಓವರ್ನ 2ನೇ ಎಸೆತದಲ್ಲಿ ಸ್ಟ್ರೈಟ್ ಹಿಟ್ ಹೊಡೆತಕ್ಕೆ ಯತ್ನಿಸಿದ ಪ್ಯಾಟ್ ಕಮಿನ್ಸ್. ಬೌಂಡರಿ ಲೈನ್ನಿಂದ ಓಡಿ ಬಂದು ಉತ್ತಮ ಡೈವಿಂಗ್ ಕ್ಯಾಚ್ ಹಿಡಿದ ಶ್ರೇಯಸ್ ಅಯ್ಯರ್. ಆಸ್ಟ್ರೇಲಿಯಾ ತಂಡದ 8ನೇ ವಿಕೆಟ್ ಪತನ.
ಕುಲ್ದೀಪ್ ಯಾದವ್ ಎಸೆದ 40ನೇ ಓವರ್ನ 3ನೇ ಎಸೆತದಲ್ಲಿ ಲಾಂಗ್ ಆನ್ನತ್ತ ಭರ್ಜರಿ ಸಿಕ್ಸ್ ಸಿಡಿಸಿದ ಪ್ಯಾಟ್ ಕಮಿನ್ಸ್.
40 ಓವರ್ಗಳ ಮುಕ್ತಾಯದ ವೇಳೆ 156 ರನ್ ಕಲೆಹಾಕಿದ ಆಸ್ಟ್ರೇಲಿಯಾ.
ಕ್ರೀಸ್ನಲ್ಲಿ ಕಮಿನ್ಸ್ ಹಾಗೂ ಸ್ಟಾರ್ಕ್ ಬ್ಯಾಟಿಂಗ್.
ಅಶ್ವಿನ್ ಎಸೆತದಲ್ಲಿ ಸ್ಕ್ವೇರ್ನತ್ತ ಬಾರಿಸಿದ ಕ್ಯಾಮರೋನ್ ಗ್ರೀನ್…ಚೆಂಡು ನೇರವಾಗಿ ಹಾರ್ದಿಕ್ ಪಾಂಡ್ಯ ಕೈಗೆ…ಔಟ್.
20 ಎಸೆತಗಳಲ್ಲಿ 8 ರನ್ ಬಾರಿಸಿ ಔಟಾದ ಕ್ಯಾಮರೋನ್ ಗ್ರೀನ್.
ಕ್ರೀಸ್ನಲ್ಲಿ ಪ್ಯಾಟ್ ಕಮಿನ್ಸ್ ಹಾಗೂ ಮಿಚೆಲ್ ಸ್ಟಾರ್ಕ್ ಬ್ಯಾಟಿಂಗ್.
ಕುಲ್ದೀಪ್ ಯಾದವ್ ಎಸೆd 36ನೇ ಓವರ್ನ 5ನೇ ಎಸೆತದಲ್ಲಿ ಗ್ಲೆನ್ ಮ್ಯಾಕ್ಸ್‌ವೆಲ್ ಕ್ಲೀನ್ ಬೌಲ್ಡ್.
25 ಎಸೆತಗಳಲ್ಲಿ 15 ರನ್ ಬಾರಿಸಿ ವಿಕೆಟ್ ಒಪ್ಪಿಸಿದ ಮ್ಯಾಕ್ಸ್‌ವೆಲ್.
ಕ್ರೀಸ್ನಲ್ಲಿ ಕ್ಯಾಮರೋನ್ ಗ್ರೀನ್ ಹಾಗೂ ಪ್ಯಾಟ್ ಕಮಿನ್ಸ್ ಬ್ಯಾಟಿಂಗ್.
35 ಓವರ್ಗಳ ಮುಕ್ತಾಯದ ವೇಳೆಗೆ 138 ರನ್ಗಳನ್ನು ಕಲೆಹಾಕಿದ ಆಸ್ಟ್ರೇಲಿಯಾ.
5 ವಿಕೆಟ್ ಕಬಳಿಸಿ ಪಂದ್ಯದ ಮೇಲೆ ಹಿಡಿತ ಸಾಧಿಸಿದ ಟೀಮ್ ಇಂಡಿಯಾ.
ಕ್ರೀಸ್ನಲ್ಲಿ ಗ್ಲೆನ್ ಮ್ಯಾಕ್ಸ್‌ವೆಲ್ ಹಾಗೂ ಕ್ಯಾಮರೋನ್ ಗ್ರೀನ್ ಬ್ಯಾಟಿಂಗ್.
ಮಿಚೆಲ್ ಮಾರ್ಷ್ (0), ಡೇವಿಡ್ ವಾರ್ನ್ (41), ಸ್ಟೀವ್ ಸ್ಮಿತ್ (46), ಮಾರ್ನಸ್ ಲಾಬುಶೇನ್ (27), ಅಲೆಕ್ಸ್ ಕ್ಯಾರಿ (0) ಔಟ್.
ಜಡೇಜಾ ಎಸೆದ 32ನೇ ಓವರ್ನ 5ನೇ ಎಸೆತದಲ್ಲಿ ಆಫ್ ಸೈಡ್ನತ್ತ ಫೋರ್ ಬಾರಿಸಿದ ಗ್ಲೆನ್ ಮ್ಯಾಕ್ಸ್‌ವೆಲ್.
32 ಓವರ್ ಮುಕ್ತಾಯದ ವೇಳೆಗೆ 130 ರನ್ ಕಲೆಹಾಕಿದ ಆಸ್ಟ್ರೇಲಿಯಾ.
ಕ್ರೀಸ್ನಲ್ಲಿ ಮ್ಯಾಕ್ಸ್‌ವೆಲ್ ಹಾಗೂ ಕ್ಯಾಮರೋನ್ ಗ್ರೀನ್ ಬ್ಯಾಟಿಂಗ್
ರವೀಂದ್ರ ಜಡೇಜಾ ಎಸೆದ 30ನೇ ಓವರ್ನ 4ನೇ ಎಸೆತದಲ್ಲಿ ಅಲೆಕ್ಸ್ ಕ್ಯಾರಿ ಎಲ್ಬಿಡಬ್ಲ್ಯೂ…ಔಟ್.
ಟೀಮ್ ಇಂಡಿಯಾಗೆ ಬ್ಯಾಕ್ ಟು ಬ್ಯಾಕ್ ಯಶಸ್ಸು ತಂದುಕೊಟ್ಟ ಜಡೇಜಾ.
ಕ್ರೀಸ್ನಲ್ಲಿ ಗ್ಲೆನ್ ಮ್ಯಾಕ್ಸ್‌ವೆಲ್ ಹಾಗೂ ಕ್ಯಾಮರೋನ್ ಗ್ರೀನ್ ಬ್ಯಾಟಿಂಗ್.
ರವೀಂದ್ರ ಜಡೇಜಾ 30ನೇ ಓವರ್ನ 2ನೇ ಎಸೆತದಲ್ಲಿ ವಿಕೆಟ್ ಕೀಪರ್ಗೆ ಕ್ಯಾಚ್ ನೀಡಿದ ಮಾರ್ನಸ್ ಲಾಬುಶೇನ್.
41 ಎಸೆತಗಳಲ್ಲಿ 27 ರನ್ ಬಾರಿಸಿ ವಿಕೆಟ್ ಒಪ್ಪಿಸಿದ ಮಾರ್ನಸ್ ಲಾಬುಶೇನ್.
ಕ್ರೀಸ್ನಲ್ಲಿ ಗ್ಲೆನ್ ಮ್ಯಾಕ್ಸ್‌ವೆಲ್ ಹಾಗೂ ಅಲೆಕ್ಸ್ ಕ್ಯಾರಿ ಬ್ಯಾಟಿಂಗ್.
ರವೀಂದ್ರ ಜಡೇಜಾ ಎಸೆತದಲ್ಲಿ ಸ್ಟೀವ್ ಸ್ಮಿತ್ ಕ್ಲೀನ್ ಬೌಲ್ಡ್.
71 ಎಸೆತಗಳಲ್ಲಿ 46 ರನ್ ಬಾರಿಸಿ ವಿಕೆಟ್ ಒಪ್ಪಿಸಿದ ಸ್ಟೀವ್ ಸ್ಮಿತ್.
ಟೀಮ್ ಇಂಡಿಯಾ ಮೂರನೇ ಯಶಸ್ಸು ತಂದುಕೊಟ್ಟ ಜಡ್ಡು.
ಮಿಚೆಲ್ ಮಾರ್ಷ್, ಡೇವಿಡ್ ವಾರ್ನರ್, ಸ್ಟೀವ್ ಸ್ಮಿತ್ ಔಟ್.
25 ಓವರ್ಗಳ ಮುಕ್ತಾಯದ ವೇಳೆಗೆ 102 ರನ್ ಕಲೆಹಾಕಿದ ಆಸ್ಟ್ರೇಲಿಯಾ.
ಕ್ರೀಸ್ನಲ್ಲಿ ಸ್ಟೀವ್ ಸ್ಮಿತ್ (43) ಹಾಗೂ ಮಾರ್ನಸ್ ಲಾಬುಶೇನ್ (17) ಬ್ಯಾಟಿಂಗ್.
ಆರಂಭಿಕರಾದ ಮಿಚೆಲ್ ಮಾರ್ಷ್ (0) ಹಾಗೂ ಡೇವಿಡ್ ವಾರ್ನರ್ (41) ಔಟ್.
ಟೀಮ್ ಇಂಡಿಯಾ ಉತ್ತಮ ಬೌಲಿಂಗ್. ಕೊನೆಯ ಮೂರು ಓವರ್ಗಳಲ್ಲಿ ಕೇವಲ 8 ರನ್ ನೀಡಿದ ಭಾರತೀಯ ಸ್ಪಿನ್ನರ್ಗಳು.
ಕ್ರೀಸ್ನಲ್ಲಿ ಸ್ಟೀವ್ ಸ್ಮಿತ್ ಹಾಗೂ ಮಾರ್ನಸ್ ಲಾಬುಶೇನ್ ಬ್ಯಾಟಿಂಗ್.
20 ಓವರ್ಗಳಲ್ಲಿ 85 ರನ್ ಕಲೆಹಾಕಿದ ಆಸ್ಟ್ರೇಲಿಯಾ.
ಮಿಚೆಲ್ ಮಾರ್ಷ್ (0) ಹಾಗೂ ಡೇವಿಡ್ ವಾರ್ನರ್ (41) ವಿಕೆಟ್ ಪಡೆದಿರುವ ಟೀಮ್ ಇಂಡಿಯಾ.
ಕ್ರೀಸ್ನಲ್ಲಿ ಸ್ಟೀವ್ ಸ್ಮಿತ್ (36) ಹಾಗೂ ಮಾರ್ನಸ್ ಲಾಬುಶೇನ್ ಬ್ಯಾಟಿಂಗ್.
ಕುಲ್ದೀಪ್ ಯಾದವ್ ಎಸೆದ 17ನೇ ಓವರ್ನ 3ನೇ ಎಸೆತದಲ್ಲಿ ಬೌಲರ್ಗೆ ಕ್ಯಾಚ್ ನೀಡಿದ ಡೇವಿಡ್ ವಾರ್ನರ್.
52 ಎಸೆತಗಳಲ್ಲಿ 41 ರನ್ ಬಾರಿಸಿ ವಿಕೆಟ್ ಒಪ್ಪಿಸಿದ ವಾರ್ನರ್.
ಕ್ರೀಸ್ನಲ್ಲಿ ಸ್ಟೀಮ್ ಸ್ಮಿತ್ ಹಾಗೂ ಮಾರ್ನಸ್ ಲಾಬುಶೇನ್ ಬ್ಯಾಟಿಂಗ್.
ಕುಲ್ದೀಪ್ ಯಾದವ್ ಎಸೆದ 15ನೇ ಓವರ್ನ 4ನೇ ಎಸೆತದಲ್ಲಿ ಬ್ಯಾಕ್ವರ್ಡ್ ಸ್ಕ್ವೇರ್ನತ್ತ ಫೋರ್ ಬಾರಿಸಿದ ವಾರ್ನರ್.
15 ಓವರ್ಗಳಲ್ಲಿ 71 ರನ್ ಕಲೆಹಾಕಿದ ಆಸ್ಟ್ರೇಲಿಯಾ.
ಕ್ರೀಸ್ನಲ್ಲಿ ಡೇವಿಡ್ ವಾರ್ನರ್ (40) ಹಾಗೂ ಸ್ಮಿತ್ (31) ಬ್ಯಾಟಿಂಗ್.
ಅಶ್ವಿನ್ ಎಸೆದ 14ನೇ ಓವರ್ನ ಮೊದಲ ಎಸೆತವನ್ನು ಲಾಂಗ್ ಆಫ್ನತ್ತ ಬಾರಿಸಿದ ಡೇವಿಡ್ ವಾರ್ನರ್…ಫೋರ್.
ಕ್ರೀಸ್ನಲ್ಲಿ ಡೇವಿಡ್ ವಾರ್ನರ್ (35) ಹಾಗೂ ಸ್ಟೀವ್ ಸ್ಮಿತ್ (31) ಬ್ಯಾಟಿಂಗ್.
2ನೇ ವಿಕೆಟ್ಗೆ ಅರ್ಧಶತಕದ ಜೊತೆಯಾಟವಾಡಿದ ಡೇವಿಡ್ ವಾರ್ನರ್-ಸ್ಟೀವ್ ಸ್ಮಿತ್.
13 ಓವರ್ ಮುಕ್ತಾಯದ ವೇಳೆಗೆ 59 ರನ್ ಕಲೆಹಾಕಿದ ಆಸ್ಟ್ರೇಲಿಯಾ.
ವಿಕೆಟ್ಗಾಗಿ ಟೀಮ್ ಇಂಡಿಯಾ ಬೌಲರ್ಗಳ ಕಸರತ್ತು.
ಮಿಚೆಲ್ ಮಾರ್ಷ್ (0) ಔಟ್.
ಹಾರ್ದಿಕ್ ಪಾಂಡ್ಯ ಎಸೆದ 11ನೇ ಓವರ್ನ 2ನೇ ಎಸೆತದಲ್ಲಿ ಆಕರ್ಷಕ ಬೌಂಡರಿ ಬಾರಿಸಿದ ಸ್ಟೀವ್ ಸ್ಮಿತ್.
5ನೇ ಎಸೆತದಲ್ಲಿ ಲೆಗ್ ಸೈಡ್ನತ್ತ ಮೊತ್ತ ಫೋರ್ ಸಿಡಿಸಿದ ಸ್ಮಿತ್.
ಈ ಫೋರ್ನೊಂದಿಗೆ ಅರ್ಧಶತಕ ಪೂರೈಸಿದ ಆಸ್ಟ್ರೇಲಿಯಾ.
ಅಶ್ವಿನ್ ಎಸೆದ 10ನೇ ಓವರ್ನ 5ನೇ ಎಸೆತವನ್ನು ಸ್ವೀಪ್ ಶಾಟ್ ಮೂಲಕ ಬೌಂಡರಿಗಟ್ಟಿದ ಡೇವಿಡ್ ವಾರ್ನರ್.
10 ಓವರ್ ಮುಕ್ತಾಯದ ವೇಳೆಗೆ ಆಸ್ಟ್ರೇಲಿಯಾ ತಂಡದ ಸ್ಕೋರ್ 43.
ಕ್ರೀಸ್ನಲ್ಲಿ ಡೇವಿಡ್ ವಾರ್ನರ್ ಹಾಗೂ ಸ್ಮಿತ್ ಬ್ಯಾಟಿಂಗ್.
ಮಿಚೆಲ್ ಮಾರ್ಷ್ (0) ವಿಕೆಟ್ ಪಡೆದ ಬುಮ್ರಾ.
9 ಓವರ್ಗಳಲ್ಲಿ ಕೇವಲ 36 ರನ್ ನೀಡಿದ ಟೀಮ್ ಇಂಡಿಯಾ.
ಪ್ರತಿ ಓವರ್ಗೆ 4 ರ ಸರಾಸರಿಯಲ್ಲಿ ರನ್ ಗಳಿಸಿದ ಆಸ್ಟ್ರೇಲಿಯಾ.
ಕ್ರೀಸ್ನಲ್ಲಿ ಡೇವಿಡ್ ವಾರ್ನರ್ ಹಾಗೂ ಸ್ಟೀವ್ ಸ್ಮಿತ್ ಬ್ಯಾಟಿಂಗ್
ಹಾರ್ದಿಕ್ ಪಾಂಡ್ಯ ಎಸೆದ 7ನೇ ಓವರ್ನಲ್ಲಿ ಡೇವಿಡ್ ವಾರ್ನರ್ ಬ್ಯಾಟ್ನಿಂದ 2 ಫೋರ್ ಹಾಗೂ ಸ್ಟೀವ್ ಸ್ಮಿತ್ ಬ್ಯಾಟ್ನಿಂದ ಒಂದು ಫೋರ್.
7ನೇ ಓವರ್ನಲ್ಲಿ 13 ರನ್ ಕಲೆಹಾಕಿದ ಆಸ್ಟ್ರೇಲಿಯಾ.
ಕ್ರೀಸ್ನಲ್ಲಿ ಸ್ಮಿತ್ ಹಾಗೂ ವಾರ್ನರ್ ಬ್ಯಾಟಿಂಗ್.
6ನೇ ಓವರ್ ಅನ್ನು ಮೇಡನ್ ಮಾಡಿದ ಮೊಹಮ್ಮದ್ ಸಿರಾಜ್.
ಸಿರಾಜ್ ಎಸೆತಗಳಲ್ಲಿ ಒಂದೇ ಒಂದು ರನ್ಗಳಿಸಲು ಪರದಾಡಿದ ಸ್ಮಿತ್.
6 ಓವರ್ಗಳ ಮುಕ್ತಾಯದ ವೇಳೆಗೆ ಆಸ್ಟ್ರೇಲಿಯಾ ತಂಡದ ಸ್ಕೋರ್ 16.
ಕ್ರೀಸ್ನಲ್ಲಿ ವಾರ್ನರ್ ಹಾಗೂ ಸ್ಮಿತ್ ಬ್ಯಾಟಿಂಗ್.
ಬುಮ್ರಾ ಎಸೆದ 5ನೇ ಓವರ್ನ ಮೊದಲ ಎಸೆತದಲ್ಲೇ ಬ್ಯೂಟಿಫುಲ್ ಕವರ್ ಡ್ರೈವ್ ಬಾರಿಸಿದ ಸ್ಟೀವ್ ಸ್ಮಿತ್…ಫೋರ್.
ಸ್ಮಿತ್ ಉತ್ತಮ ಬ್ಯಾಟಿಂಗ್-ರಕ್ಷಣಾತ್ಮಕ ಆಟಕ್ಕೆ ಒತ್ತು ನೀಡಿದ ಡೇವಿಡ್ ವಾರ್ನರ್.
ಆರಂಭಿಕ ಆಟಗಾರ ಮಿಚೆಲ್ ಮಾರ್ಷ್ (0) ಔಟ್.
ಮೊಹಮ್ಮದ್ ಸಿರಾಜ್ ಎಸೆದ 4ನೇ ಓವರ್ನ 4ನೇ ಎಸೆತದಲ್ಲಿ ಡೀಪ್ ಮಿಡ್ ವಿಕೆಟ್ನತ್ತ ಆಕರ್ಷಕ ಬೌಂಡರಿ ಬಾರಿಸಿದ ಸ್ಟೀವ್ ಸ್ಮಿತ್.
ಕ್ರೀಸ್ನಲ್ಲಿ ಸ್ಟೀವ್ ಸ್ಮಿತ್ ಹಾಗೂ ಡೇವಿಡ್ ವಾರ್ನರ್ ಬ್ಯಾಟಿಂಗ್.
ಮಿಚೆಲ್ ಮಾರ್ಷ್ (0) ಔಟ್.
ಬುಮ್ರಾ ಎಸೆದ 2ನೇ ಓವರ್ನ 2ನೇ ಎಸೆತವು ಮಿಚೆಲ್ ಮಾರ್ಷ್ ಬ್ಯಾಟ್ ಸವರಿ ಸ್ಲಿಪ್ನತ್ತ…ವಿರಾಟ್ ಕೊಹ್ಲಿ ಅದ್ಭುತ ಡೈವಿಂಗ್ ಕ್ಯಾಚ್…ಮಿಚೆಲ್ ಮಾರ್ಷ್ (0) ಔಟ್.
ಟೀಮ್ ಇಂಡಿಯಾಗೆ ಮೊದಲ ಯಶಸ್ಸು ತಂದುಕೊಟ್ಟ ಬುಮ್ರಾ.
ಮೊಹಮ್ಮದ್ ಸಿರಾಜ್ ಎಸೆದ 2ನೇ ಓವರ್ನ ಮೊದಲ ಎಸೆತದಲ್ಲೇ ಆಫ್ ಸೈಡ್ನತ್ತ ಫೋರ್ ಬಾರಿಸಿದ ಎಡಗೈ ದಾಂಡಿಗ ಡೇವಿಡ್ ವಾರ್ನರ್. ಈ ಫೋರ್ ಬಳಿಕ ಅತ್ಯುತ್ತಮ ದಾಳಿ ಸಂಘಟಿಸಿದ ಸಿರಾಜ್.
ಕ್ರೀಸ್ನಲ್ಲಿ ವಾರ್ನರ್ – ಮಾರ್ಷ್ ಬ್ಯಾಟಿಂಗ್.
ಜಸ್ಪ್ರೀತ್ ಬುಮ್ರಾ ಎಸೆದ ಮೊದಲ ಓವರ್ನ 2ನೇ ಎಸೆತದಲ್ಲಿ ಒಂದು ರನ್ ಓಡಿ ಸ್ಕೋರ್ ಖಾತೆ ತೆರೆದ ಡೇವಿಡ್ ವಾರ್ನರ್.
ಮೊದಲ ಓವರ್ನಲ್ಲಿ ಕೇವಲ 1 ರನ್ ಮಾತ್ರ ನೀಡಿದ ಬುಮ್ರಾ.
ಕ್ರೀಸ್ನಲ್ಲಿ ಡೇವಿಡ್ ವಾರ್ನರ್ – ಮಿಚೆಲ್ ಮಾರ್ಷ್ ಬ್ಯಾಟಿಂಗ್.
ಆಸ್ಟ್ರೇಲಿಯಾ ಪರ ಆರಂಭಿಕರು: ಡೇವಿಡ್ ವಾರ್ನರ್ ಹಾಗೂ ಮಿಚೆಲ್ ಮಾರ್ಷ್.
ಭಾರತದ ಪರ ಮೊದಲ ಓವರ್: ಜಸ್ಪ್ರೀತ್ ಬುಮ್ರಾ
Take a look at #TeamIndia‘s Playing XI against Australia 👌👌
Follow the Match ▶️ https://t.co/ToKaGif9ri#CWC23 | #INDvAUS | #MeninBlue pic.twitter.com/PDcGkolGz3
— BCCI (@BCCI) October 8, 2023
ಭಾರತ (ಪ್ಲೇಯಿಂಗ್ XI): ರೋಹಿತ್ ಶರ್ಮಾ (ನಾಯಕ), ಇಶಾನ್ ಕಿಶನ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ರವಿಚಂದ್ರನ್ ಅಶ್ವಿನ್, ಕುಲ್ದೀಪ್ ಯಾದವ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್.
ಭಾರತ (ಪ್ಲೇಯಿಂಗ್ XI): ರೋಹಿತ್ ಶರ್ಮಾ (ನಾಯಕ), ಇಶಾನ್ ಕಿಶನ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ರವಿಚಂದ್ರನ್ ಅಶ್ವಿನ್, ಕುಲ್ದೀಪ್ ಯಾದವ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್.
ಆಸ್ಟ್ರೇಲಿಯಾ (ಪ್ಲೇಯಿಂಗ್ XI): ಡೇವಿಡ್ ವಾರ್ನರ್, ಮಿಚೆಲ್ ಮಾರ್ಷ್, ಸ್ಟೀವ್ ಸ್ಮಿತ್, ಮಾರ್ನಸ್ ಲಾಬುಶೇನ್, ಕ್ಯಾಮರೋನ್ ಗ್ರೀನ್, ಅಲೆಕ್ಸ್ ಕ್ಯಾರಿ (ವಿಕೆಟ್ ಕೀಪರ್), ಗ್ಲೆನ್ ಮ್ಯಾಕ್ಸ್‌ವೆಲ್, ಪ್ಯಾಟ್ ಕಮಿನ್ಸ್ (ನಾಯಕ), ಮಿಚೆಲ್ ಸ್ಟಾರ್ಕ್, ಜೋಶ್ ಹ್ಯಾಝಲ್‌ವುಡ್, ಆ್ಯಡಂ ಝಂಪಾ.
ಚೆನ್ನೈನ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಈ ಪಂದ್ಯದ ಟಾಸ್ ಗೆದ್ದಿರುವ ಆಸ್ಟ್ರೇಲಿಯಾ ತಂಡದ ನಾಯಕ ಪ್ಯಾಟ್ ಕಮಿನ್ಸ್ ಬ್ಯಾಟಿಂಗ್ ಆಯ್ದುಕೊಂಡಿದ್ದಾರೆ.
Published On - 1:33 pm, Sun, 8 October 23