ದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ಭಾರತ ಹಾಗೂ ಬಾಂಗ್ಲಾದೇಶ ನಡುವೆ ಎರಡನೇ ಟಿ20 ಪಂದ್ಯ ನಡೆಯುತ್ತಿದೆ. ಪಂದ್ಯದಲ್ಲಿ ಟಾಸ್ ಸೋತ ಟೀಂ ಇಂಡಿಯಾ ಮೊದಲು ಬ್ಯಾಟಿಂಗ್ ಮಾಡಬೇಕಾಯಿತು. ಆದರೆ ತಂಡಕ್ಕೆ ಉತ್ತಮ ಆರಂಭ ಸಿಗಲಿಲ್ಲ. ಆರಂಭಿಕರಿಬ್ಬರು ಕೇವಲ 25 ರನ್ಗಳಿಗೆ ಪೆವಿಲಿಯನ್ ಸೇರಿಕೊಂಡರು. ಸಂಜು ಸ್ಯಾಮ್ಸನ್ ಕೇವಲ 10 ರನ್ಗಳಿಗೆ ಸುಸ್ತಾದರೆ, ಅಭಿಷೇಕ್ ಶರ್ಮಾ ಅವರ ಇನ್ನಿಂಗ್ಸ್ 16 ರನ್ಗಳಿಗೆ ಕೊನೆಯಾಯಿತು. ಇದು ಸಾಲದೆಂಬಂತೆ ನಾಯಕ ಸೂರ್ಯ ಕೂಡ 8 ರನ್ ಬಾರಿಸಿ ಬಂದಷ್ಟೇ ವೇಗವಾಗಿ ಪೆವಿಲಿಯನ್ ಸೇರಿಕೊಂಡರು. ಹೀಗಾಗಿ ತಂಡ ಆರಂಭದಲ್ಲೇ ಒತ್ತಡಕ್ಕೆ ಸಿಲುಕಿದ್ದರಿಂದ 100 ರನ್ ಕಲೆಹಾಕುವುದು ಕಷ್ಟಕರವಾಗಿತ್ತು. ಆದರೆ ಆ ಬಳಿಕ ಜೊತೆಯಾದ ಯುವ ಆಲ್‌ರೌಂಡರ್ ನಿತೀಶ್ ಕುಮಾರ್ ರೆಡ್ಡಿ ಹಾಗೂ ರಿಂಕು ಸಿಂಗ್ ತಮ್ಮ ಸ್ಫೋಟಕ ಬ್ಯಾಟಿಂಗ್ ಮೂಲಕ ಇಡೀ ಪಂದ್ಯದ ದಿಕ್ಕನೇ ಬದಲಿಸಿದರು. ಅದರಲ್ಲೂ 2ನೇ ಅಂತಾರಾಷ್ಟ್ರೀಯ ಪಂದ್ಯವನ್ನಾಡುತ್ತಿರುವ ನಿತೀಶ್ ಆಟಕ್ಕೆ ಬಾಂಗ್ಲಾ ತಂಡವೇ ದಂಗಾಗಿ ಹೋಯಿತು.
ಮೇಲೆ ಹೇಳಿದಂತೆ ನಿತೀಶ್ ರೆಡ್ಡಿ ಕ್ರೀಸ್‌ಗೆ ಬಂದಾಗ ಟೀಂ ಇಂಡಿಯಾ ಸಂಕಷ್ಟದಲ್ಲಿತ್ತು. ಆದ್ದರಿಂದ ರಿಂಕು ಹಾಗೂ ನಿತೀಶ್ ಆರಂಭದಲ್ಲಿ ನಿದಾನಗತಿಯ ಆಟಕ್ಕೆ ಮುಂದಾದರು. ಹೀಗಾಗಿ ನಿತೀಶ್ ಮೊದಲ 12 ಎಸೆತಗಳಲ್ಲಿ ಕೇವಲ 13 ರನ್ ಗಳಿಸಿದ್ದರು. ಆದರೆ ಇದಾದ ನಂತರ ತಮ್ಮ ನಿಜ ರೂಪ ತೊರಿದ ನಿತೀಶ್ ಮುಂದಿನ 15 ಎಸೆತಗಳಲ್ಲಿ 37 ರನ್ ಚಚ್ಚಿದರು. ಈ ನಡುವೆ ಕೇವಲ 27 ಎಸೆತಗಳಲ್ಲಿ ತಮ್ಮ ಚೊಚ್ಚಲ ಅರ್ಧಶತಕವನ್ನು ಪೂರೈಸಿದರು. ಅಂತಿಮವಾಗಿ ತಮ್ಮ ಇನ್ನಿಂಗ್ಸ್‌ನಲ್ಲಿ 34 ಎಸೆತಗಳನ್ನು ಎದುರಿಸಿದ ನಿತೀಶ್, 7 ಭರ್ಜರಿ ಸಿಕ್ಸರ್ ಹಾಗೂ 4 ಬೌಂಡರಿ ಸಹಿತ 74 ರನ್ ಚಚ್ಚಿದರು. ಇದಲ್ಲದೆ ರಿಂಕು ಜೊತೆಗೂಡಿ ಶತಕದ ಜೊತೆಯಾಟವನ್ನು ನಡೆಸಿದರು.
Maiden T20I Half-Century for Nitish Kumar Reddy 🔥🔥
Watch him hit two consecutive sixes off Rishad Hossain’s bowling!
Live – https://t.co/Otw9CpO67y…… #INDvBAN@IDFCFIRSTBank pic.twitter.com/jmq5Yt711n
— BCCI (@BCCI) October 9, 2024
ನಿತೀಶ್ ಕುಮಾರ್ ರೆಡ್ಡಿ ತಮ್ಮ ಇನ್ನಿಂಗ್ಸ್‌ನಲ್ಲಿ ಬರೋಬ್ಬರಿ 7 ಸಿಕ್ಸರ್ ಬಾರಿಸಿದ್ದರು. ಮಹಮ್ಮದುಲ್ಲಾ ಅವರ 9ನೇ ಓವರ್‌ನಲ್ಲಿ ತಮ್ಮ ಮೊದಲ ಸಿಕ್ಸರ್ ಬಾರಿಸಿದ ನಿತೀಶ್ ಇದರ ನಂತರ, ಮುಂದಿನ ಓವರ್ ಎಸೆದ ಲೆಗ್ ಸ್ಪಿನ್ನರ್ ರಿಶಾದ್ ಹುಸೇನ್ ಅವರ ಸತತ ಎರಡು ಎಸೆತಗಳಲ್ಲಿ ಎರಡು ಸಿಕ್ಸರ್ ಬಾರಿಸಿದರು. 11ನೇ ಓವರ್ ಬೌಲ್ ಮಾಡಿದ ಮುಸ್ತಫಿಜುರ್ ರೆಹಮಾನ್ ಎಸೆತದಲ್ಲಿಯೂ ನಿತೀಶ್ ಸಿಕ್ಸರ್ ಬಾರಿಸಿದರು. ಇದಾದ ನಂತರ ನಿತೀಶ್, ಮೆಹದಿ ಹಸನ್ ಅವರ ಓವರ್‌ನಲ್ಲಿ ಎರಡು ಸಿಕ್ಸರ್ ಬಾರಿಸಿದರು. ಒಟ್ಟಾರೆ ನಿತೀಶ್ ಬಾರಿಸಿದ 7 ಸಿಕ್ಸರ್‌ಗಳಲ್ಲಿ 6 ಸಿಕ್ಸರ್ಗಳನ್ನು ಸ್ಪಿನ್ನರ್‌ಗಳ ವಿರುದ್ಧ ಹೊಡೆದರು. ಈ ಮೂಲಕ ನಾನು ಸ್ಪಿನ್ನರ್‌ಗಳ ವಿರುದ್ಧ ಮುಕ್ತವಾಗಿ ಆಡಬಲ್ಲೆ ಎಂಬುದು ನಿತೀಶ್ ಸಾಭೀತುಪಡಿಸಿದರು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 8:32 pm, Wed, 9 October 24