BCCI vs BCB: ಬಿಸಿಸಿಐಗೆ ಸೆಡ್ಡು ಹೊಡೆಯಲು ನಿಂತ ಬಾಂಗ್ಲಾ ಕ್ರಿಕೆಟ್ ಮಂಡಳಿ
BCCI vs BCB: 2026ರ ಐಪಿಎಲ್ ನಡುವೆ ಬಾಂಗ್ಲಾದೇಶ ಕ್ರಿಕೆಟ್ ಮಂಡಳಿಯು ನ್ಯೂಜಿಲೆಂಡ್ ಪುರುಷರ ಮತ್ತು ಶ್ರೀಲಂಕಾ ಮಹಿಳಾ ತಂಡಗಳ ವಿರುದ್ಧ ಅಂತರರಾಷ್ಟ್ರೀಯ ಸರಣಿಗಳನ್ನು ಆಯೋಜಿಸಿದೆ. ಏಪ್ರಿಲ್-ಮೇ ತಿಂಗಳಿನಲ್ಲಿ ನಡೆಯುವ ಈ ಪಂದ್ಯಗಳು ಐಪಿಎಲ್‌ಗೆ ಅಡ್ಡಿಯಾಗುವುದಿಲ್ಲ, ಏಕೆಂದರೆ ಬಾಂಗ್ಲಾದೇಶದ ಆಟಗಾರರು ಐಪಿಎಲ್‌ನಲ್ಲಿ ಭಾಗವಹಿಸುವುದಿಲ್ಲ ಹಾಗೂ ನ್ಯೂಜಿಲೆಂಡ್ ಬಿ-ತಂಡವನ್ನು ಕಳುಹಿಸಬಹುದು. ಸಂಪೂರ್ಣ ವೇಳಾಪಟ್ಟಿಯನ್ನು ಪ್ರಕಟಿಸಲಾಗಿದೆ.

2026ರ ಐಪಿಎಲ್ (IPL 2026) ಇದೇ ಮಾರ್ಚ್ 28 ರಿಂದ ಪ್ರಾರಂಭವಾಗುತ್ತಿರುವುದು ಪ್ರತಿಯೊಬ್ಬ ಕ್ರಿಕೆಟ್ ಪ್ರಿಯರಿಗೂ ತಿಳಿದಿರುವಂತ ವಿಚಾರ. ವಿಶ್ವದ ಅತಿದೊಡ್ಡ ಕ್ರಿಕೆಟ್ ಲೀಗ್ನಲ್ಲಿ ವಿಶ್ವ ಕ್ರಿಕೆಟ್ನ ಸೂಪರ್ ಸ್ಟಾರ್ ಆಟಗಾರರು ಆಡುವುದು ಹೊಸ ವಿಚಾರವೆನ್ನಲ್ಲ. ಹೀಗಾಗಿ ಐಪಿಎಲ್ ನಡೆಯುವ ಸಮಯದಲ್ಲಿ ಸಾಮಾನ್ಯವಾಗಿ, ಯಾವುದೇ ಪ್ರಮುಖ ಕ್ರಿಕೆಟ್ ಮಂಡಳಿಯು ಅಂತರರಾಷ್ಟ್ರೀಯ ಕ್ರಿಕೆಟ್ ಪಂದ್ಯಾವಳಿಯನ್ನು ಆಯೋಜಿಸುವುದಿಲ್ಲ. ಆದಾಗ್ಯೂ, ಈ ಬಾರಿ, ಬಾಂಗ್ಲಾದೇಶ ಕ್ರಿಕೆಟ್ ಮಂಡಳಿಯು ಐಪಿಎಲ್ ಸಮಯದಲ್ಲಿ ಸರಣಿಯನ್ನಾಡಲು ಮುಂದಾಗಿದ್ದು, ಅದರ ವೇಳಾಪಟ್ಟಿಯನ್ನು ಸಹ ಪ್ರಕಟಿಸಿದೆ. ಅದರಂತೆ ಐಪಿಎಲ್ ನಡೆಯುವ ಸಮಯದಲ್ಲಿ ಬಾಂಗ್ಲಾದೇಶ ತಂಡವು ನ್ಯೂಜಿಲೆಂಡ್ (Bangladesh vs New Zealand) ತಂಡವನ್ನು ಎದುರಿಸಲಿದೆ. ಉಭಯ ತಂಡಗಳು ಏಕದಿನ ಮತ್ತು ಟಿ20 ಸರಣಿಗಳನ್ನು ಆಡಲಿದ್ದು, ಅದರ ವೇಳಾಪಟ್ಟಿಯನ್ನು ಪ್ರಕಟಿಸಲಾಗಿದೆ.
ಬಾಂಗ್ಲಾ- ಕಿವೀಸ್ ಸರಣಿ
ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ ಮುಂಬರುವ ನ್ಯೂಜಿಲೆಂಡ್ ಪ್ರವಾಸದ ಸಂಪೂರ್ಣ ವೇಳಾಪಟ್ಟಿಯನ್ನು ಪ್ರಕಟಿಸಿದೆ. ಈ ನಿಯಮಿತ ಓವರ್ಗಳ ಸರಣಿಯು ಏಪ್ರಿಲ್-ಮೇ 2026 ರಲ್ಲಿ ನಡೆಯಲಿದ್ದು, ಇದರಲ್ಲಿ ಮೂರು ಏಕದಿನ ಅಂತರರಾಷ್ಟ್ರೀಯ ಪಂದ್ಯಗಳು ಮತ್ತು ಮೂರು ಅಂತರರಾಷ್ಟ್ರೀಯ ಟಿ20 ಪಂದ್ಯಗಳು ಸೇರಿವೆ. ಆದಾಗ್ಯೂ ಉಭಯ ತಂಡಗಳ ಈ ಸರಣಿಗಳು ಐಪಿಎಲ್ ಮೇಲೆ ಯಾವುದೇ ಪರಿಣಾಮ ಬೀರುವುದರಿಲ್ಲ. ಏಕೆಂದರೆ ಯಾವುದೇ ಬಾಂಗ್ಲಾದೇಶಿ ಆಟಗಾರ ಐಪಿಎಲ್‌ನಲ್ಲಿ ಆಡುತ್ತಿಲ್ಲ. ಇತ್ತ ನ್ಯೂಜಿಲೆಂಡ್ ತನ್ನ ಬಿ ತಂಡವನ್ನು ಬಾಂಗ್ಲಾದೇಶ ಪ್ರವಾಸಕ್ಕೆ ಕಳುಹಿಸಬಹುದು.ಏಕೆಂದರೆ ಆ ಸಮಯದಲ್ಲಿ ಕಿವೀಸ್ ತಂಡದ ಸ್ಟಾರ್ ಆಟಗಾರರು ಐಪಿಎಲ್ ಅಂಗಳದಲ್ಲಿರುತ್ತಾರೆ.
ನ್ಯೂಜಿಲೆಂಡ್ ತಂಡ ಏಪ್ರಿಲ್ 13 ರಂದು ಢಾಕಾಗೆ ಆಗಮಿಸಲಿದೆ. ಸರಣಿಯು ಏಕದಿನ ಪಂದ್ಯಗಳೊಂದಿಗೆ ಪ್ರಾರಂಭವಾಗಲಿದ್ದು, ಮೊದಲ ಎರಡು ಪಂದ್ಯಗಳು ಢಾಕಾದ ಮಿರ್ಪುರ್‌ನಲ್ಲಿ ಮತ್ತು ಮೂರನೇ ಪಂದ್ಯ ಚಿತ್ತಗಾಂಗ್‌ನಲ್ಲಿ ನಡೆಯಲಿದೆ. ಟಿ20 ಪಂದ್ಯಗಳು ಎರಡೂ ನಗರಗಳಲ್ಲಿಯೂ ನಡೆಯಲಿವೆ. ಸರಣಿಯು ಏಪ್ರಿಲ್ 17 ರಂದು ಪ್ರಾರಂಭವಾಗಿ ಮೇ 2 ರವರೆಗೆ ನಡೆಯುತ್ತದೆ. ಬಾಂಗ್ಲಾದೇಶ ಇತ್ತೀಚೆಗೆ ಪಾಕಿಸ್ತಾನ ವಿರುದ್ಧದ ತವರು ಏಕದಿನ ಸರಣಿಯನ್ನು 2-1 ಅಂತರದಿಂದ ಗೆದ್ದುಕೊಂಡಿದ್ದು, ಇದೀಗ ನ್ಯೂಜಿಲೆಂಡ್ ವಿರುದ್ಧ ಅದೇ ಗೆಲುವಿನ ನಿರೀಕ್ಷೆಯಲ್ಲಿದೆ.
ಏಕದಿನ ಸರಣಿ ವೇಳಾಪಟ್ಟಿ:
- ಮೊದಲ ಏಕದಿನ ಪಂದ್ಯ: ಏಪ್ರಿಲ್ 17, ಮಿರ್ಪುರ್ (ಢಾಕಾ)
- 2 ನೇ ಏಕದಿನ ಪಂದ್ಯ: ಏಪ್ರಿಲ್ 20, ಮೀರ್ಪುರ್ (ಢಾಕಾ)
- ಮೂರನೇ ಏಕದಿನ ಪಂದ್ಯ: ಏಪ್ರಿಲ್ 23, ಚಿತ್ತಗಾಂಗ್
ಟಿ20 ಸರಣಿ ವೇಳಾಪಟ್ಟಿ:
- ಮೊದಲ ಟಿ20: ಏಪ್ರಿಲ್ 27, ಚಿತ್ತಗಾಂಗ್
- ಎರಡನೇ ಟಿ20: ಏಪ್ರಿಲ್ 29, ಚಿತ್ತಗಾಂಗ್
- ಮೂರನೇ ಟಿ20: ಮೇ 2, ಮೀರ್‌ಪುರ (ಢಾಕಾ)
ಮಹಿಳಾ ತಂಡಗಳು ಕಣಕ್ಕೆ
ಇದರ ಜೊತೆಗೆ, ಬಾಂಗ್ಲಾದೇಶ ಮಹಿಳಾ ತಂಡವು ಈ ಸಮಯದಲ್ಲಿ ಶ್ರೀಲಂಕಾ ಮಹಿಳಾ ತಂಡಕ್ಕೆ ಆತಿಥ್ಯ ವಹಿಸಲಿದೆ. ಮಹಿಳಾ ಸರಣಿಯು ಮೂರು ಏಕದಿನ ಪಂದ್ಯಗಳು ಮತ್ತು ಮೂರು ಟಿ20ಪಂದ್ಯಗಳನ್ನು ಒಳಗೊಂಡಿರುತ್ತದೆ. ಏಕದಿನ ಪಂದ್ಯಗಳು ಏಪ್ರಿಲ್ 20, 22 ಮತ್ತು 25 ರಂದು ರಾಜ್‌ಶಾಹಿಯಲ್ಲಿ ನಡೆದರೆ, ಆ ನಂತರ ಟಿ20 ಪಂದ್ಯಗಳು ಏಪ್ರಿಲ್ 28, 30 ಮತ್ತು ಮೇ 2 ರಂದು ಸಿಲ್ಹೆಟ್‌ನಲ್ಲಿ ನಡೆಯಲಿವೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
