ಅಭಿಷೇಕ್ ಶರ್ಮಾ ಅವರ ಅಬ್ಬರದ ಇನ್ನಿಂಗ್ಸ್ ನೆರವಿನಿಂದ ಭಾರತ ತಂಡವು ಮೊದಲ ಟಿ20 ಪಂದ್ಯದಲ್ಲಿ ಇಂಗ್ಲೆಂಡ್ ತಂಡವನ್ನು ಏಳು ವಿಕೆಟ್‌ಗಳಿಂದ ಸೋಲಿಸಿ ಐದು ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ. ಮೊದಲು ಬ್ಯಾಟಿಂಗ್ ಮಾಡಿದ ಇಂಗ್ಲೆಂಡ್ 20 ಓವರ್‌ಗಳಲ್ಲಿ 132 ರನ್ ಗಳಿಸಿತು. ಈ ಗುರಿ ಬೆನ್ನಟ್ಟಿದ ಭಾರತದ ಪರ ಅಭಿಷೇಕ್ ಶರ್ಮಾ 34 ಎಸೆತಗಳಲ್ಲಿ ಐದು ಬೌಂಡರಿ ಮತ್ತು ಎಂಟು ಸಿಕ್ಸರ್‌ಗಳ ಸಹಾಯದಿಂದ 79 ರನ್ ಗಳಿಸಿದರು, ಇದರ ಆಧಾರದ ಮೇಲೆ ಭಾರತ 12.5 ಓವರ್‌ಗಳಲ್ಲಿ ಮೂರು ವಿಕೆಟ್‌ಗಳಿಗೆ 133 ರನ್ ಗಳಿಸುವ ಮೂಲಕ ಪಂದ್ಯವನ್ನು ಗೆದ್ದುಕೊಂಡಿತು. ಇಂಗ್ಲೆಂಡ್ ಪರ ವೇಗಿ ಜೋಫ್ರಾ ಆರ್ಚರ್ ಎರಡು ವಿಕೆಟ್ ಮತ್ತು ಆದಿಲ್ ರಶೀದ್ ಒಂದು ವಿಕೆಟ್ ಪಡೆದರು.
ಅಭಿಷೇಕ್ ಶರ್ಮಾ ಅವರ ಅಬ್ಬರದ ಇನ್ನಿಂಗ್ಸ್ ನೆರವಿನಿಂದ ಭಾರತ ತಂಡವು ಮೊದಲ ಟಿ20 ಪಂದ್ಯದಲ್ಲಿ ಇಂಗ್ಲೆಂಡ್ ತಂಡವನ್ನು ಏಳು ವಿಕೆಟ್‌ಗಳಿಂದ ಸೋಲಿಸಿ ಐದು ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ.
ಅಭಿಷೇಕ್ ಶರ್ಮಾ 34 ಎಸೆತಗಳಲ್ಲಿ 79 ರನ್ ಗಳಿಸಿ ಔಟಾದರು. ಅಭಿ ತಮ್ಮ ಇನ್ನಿಂಗ್ಸ್ನಲ್ಲಿ 8 ಸಿಕ್ಸರ್ ಮತ್ತು 5 ಬೌಂಡರಿಗಳನ್ನು ಬಾರಿಸಿದರು. ಅಂತಿಮವಾಗಿ ಆದಿಲ್ ರಶೀದ್ ಎಸೆತದಲ್ಲಿ ಔಟಾದರು.
ಅಭಿಷೇಕ್ ಶರ್ಮಾ 20 ಎಸೆತಗಳಲ್ಲಿ 6 ಸಿಕ್ಸರ್‌ಗಳ ನೆರವಿನಿಂದ ಅರ್ಧಶತಕ ಪೂರ್ಣಗೊಳಿಸಿದ್ದಾರೆ. ಅಭಿಷೇಕ್ ಶರ್ಮಾ ತಮ್ಮ ಸ್ಫೋಟಕ ಫಾರ್ಮ್ ಅನ್ನು ಮರಳಿ ಕಂಡುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
ಅಭಿಷೇಕ್ ಶರ್ಮಾ ಮತ್ತೊಮ್ಮೆ ಎರಡು ಸಿಕ್ಸರ್‌ಗಳನ್ನು ಬಾರಿಸಿದರು. ಆದಿಲ್ ರಶೀದ್ ಅವರ ಓವರ್‌ನಲ್ಲಿ ಮೊದಲು ಬೌಂಡರಿ ಬಾರಿಸಿದ ನಂತರ ಕೊನೆಯ ಎರಡು ಎಸೆತಗಳಲ್ಲಿ ಎರಡು ಸಿಕ್ಸರ್‌ಗಳನ್ನು ಬಾರಿಸಿದರು.
ಇನಿಂಗ್ಸ್‌ನ ಆರನೇ ಓವರ್‌ನಲ್ಲಿ ಅಭಿಷೇಕ್ ಶರ್ಮಾ ಮಾರ್ಕ್ ವುಡ್ ವಿರುದ್ಧ 2 ಸಿಕ್ಸರ್ ಮತ್ತು 1 ಬೌಂಡರಿ ಬಾರಿಸುವ ಮೂಲಕ ಒಟ್ಟು 17 ರನ್ ಗಳಿಸಿದರು. ಮಾರ್ಕ್ ವುಡ್ ಈ ಓವರ್‌ನಲ್ಲಿ ಒಟ್ಟು 18 ರನ್ ನೀಡಿದರು.
ಐದನೇ ಓವರ್ ಬೌಲ್ ಮಾಡಿದ ಜೋಫ್ರಾ ಆರ್ಚರ್ ಪ್ರಮುಖ 2 ವಿಕೆಟ್ ಪಡೆದರು. ಈ ಓವರ್‌ನಲ್ಲಿ ಸಂಜು ಸ್ಯಾಮ್ಸನ್ ಮತ್ತು ಸೂರ್ಯಕುಮಾರ್ ಯಾದವ್‌ಗೆ ಆರ್ಚರ್ ಪೆವಿಲಿಯನ್ ಹಾದಿ ತೋರಿಸಿದರು.
ನಾಲ್ಕನೇ ಓವರ್‌ನಲ್ಲಿ ಮಾರ್ಕ್ ವುಡ್ ಅದ್ಭುತ ಬೌಲಿಂಗ್ ಮಾಡಿದರು. ಈ ಓವರ್‌ನಲ್ಲಿ ಕೇವಲ 6 ರನ್‌ಗಳು ಬಂದವು, ಅದರಲ್ಲಿ 4 ರನ್‌ಗಳು ಬೈಗಳಾಗಿವೆ. ಈ ಓವರ್‌ನಲ್ಲಿ ಮಾರ್ಕ್ ವುಡ್ ಒಂದು ಎಸೆತವನ್ನು ಗಂಟೆಗೆ 153.9 ಕಿ.ಮೀ. ವೇಗದಲ್ಲಿ ಎಸೆದರು.
ಗಸ್ ಅಟ್ಕಿನ್ಸನ್ ಓವರ್‌ನಲ್ಲಿ ಸ್ಯಾಮ್ಸನ್ 22 ರನ್ ಕಲೆಹಾಕಿದ್ದಾರೆ. ಮೊದಲ ಎಸೆತದಲ್ಲಿ ಫೋರ್, ಎರಡನೇ ಎಸೆತದಲ್ಲಿ ಫೋರ್, ನಾಲ್ಕನೇ ಎಸೆತದಲ್ಲಿ ಕವರ್ಸ್ ಏರಿಯಾದಲ್ಲಿ ಸಿಕ್ಸರ್, ಐದನೇ ಮತ್ತು ಆರನೇ ಎಸೆತಗಳಲ್ಲಿಯೂ ಬೌಂಡರಿ ಬಾರಿಸಿದರು.
ಕೋಲ್ಕತ್ತಾದಲ್ಲಿ ನಡೆಯುತ್ತಿರುವ ಮೊದಲ ಟಿ20 ಪಂದ್ಯದಲ್ಲಿ ಇಂಗ್ಲೆಂಡ್ ತಂಡ ಕೇವಲ 132 ರನ್‌ಗಳಿಗೆ ಆಲೌಟ್ ಆಗಿದೆ. ಇನಿಂಗ್ಸ್‌ನ ಕೊನೆಯ ಎಸೆತದಲ್ಲಿ ಮಾರ್ಕ್ ವುಡ್ ರನೌಟ್ ಆದರು. ಭಾರತದ ಪರ ವರುಣ್ ಚಕ್ರವರ್ತಿ 3 ವಿಕೆಟ್ ಪಡೆದರೆ, ಅರ್ಷದೀಪ್ ಸಿಂಗ್ ಕೂಡ ಎರಡು ವಿಕೆಟ್ ಉರುಳಿಸಿದರು. ಪಾಂಡ್ಯ ಮತ್ತು ಅಕ್ಷರ್ ಪಟೇಲ್ ತಲಾ 2 ವಿಕೆಟ್ ಪಡೆದರು.
ಅಂತಿಮವಾಗಿ ಜೋಸ್ ಬಟ್ಲರ್ ಕೂಡ ಔಟಾದರು. ವರುಣ್ ಚಕ್ರವರ್ತಿ ಎಸೆತದಲ್ಲಿ ವೈಯಕ್ತಿಕ ಸ್ಕೋರ್ 68 ರಲ್ಲಿ ಔಟಾದರು. ನಿತೀಶ್ ರೆಡ್ಡಿ ಅದ್ಭುತ ಕ್ಯಾಚ್ ಪಡೆದರು. ವರುಣ್ ಚಕ್ರವರ್ತಿ 4 ಓವರ್‌ಗಳಲ್ಲಿ 23 ರನ್ ನೀಡಿ ಮೂರು ವಿಕೆಟ್ ಪಡೆದರು.
ಇಂಗ್ಲೆಂಡ್ 15.5 ಓವರ್‌ಗಳಲ್ಲಿ 100 ರನ್ ಪೂರೈಸಿತು. ಆದರೆ ಮುಂದಿನ ಎಸೆತದಲ್ಲಿ ಅಟ್ಕಿನ್ಸನ್ ಔಟಾದರು. ಈ ಆಟಗಾರ ಕೇವಲ 2 ರನ್ ಗಳಿಸಿ ಸ್ಟಂಪ್ ಆದರು. ಅಕ್ಷರ್ ಪಟೇಲ್ಗೆ ಎರಡನೇ ವಿಕೆಟ್
ಇಂಗ್ಲೆಂಡ್‌ಗೆ ಆರನೇ ಹೊಡೆತ, ಅಕ್ಷರ್ ಪಟೇಲ್ ಎಸೆತದಲ್ಲಿ ನಿತೀಶ್ ರೆಡ್ಡಿಗೆ ಕ್ಯಾಚ್ ನೀಡಿದ ಓವರ್‌ಟನ್ ಕೇವಲ 2 ರನ್ ಗಳಿಸಿ ಔಟಾದರು. ಇಂಗ್ಲೆಂಡ್ನ ಪ್ರಮುಖ 6 ಆಟಗಾರರು 100 ರನ್ಗೂ ಮುನ್ನ ಔಟ್.
ಹಾರ್ದಿಕ್ ಪಾಂಡ್ಯ ಕೊನೆಗೂ vವಿಕೆಟ್ ಪಡೆದರು. 12ನೇ ಓವರ್‌ನ ಐದನೇ ಎಸೆತದಲ್ಲಿ ಜೇಕಬ್ ಬೆಥಾಲ್ ಔಟಾದರು. ಬೆಥಾಲ್ 14 ಎಸೆತಗಳಲ್ಲಿ 7 ರನ್ ಗಳಿಸಲಷ್ಟೇ ಶಕ್ತರಾದರು. ಇಂಗ್ಲೆಂಡ್ ತಂಡದ ಅರ್ಧದಷ್ಟು ಮಂದಿ ಪೆವಿಲಿಯನ್‌ಗೆ ಮರಳಿದ್ದಾರೆ.
ಒಂದೆಡೆ ಇಂಗ್ಲೆಂಡ್ ತಂಡದ ಸತತ ವಿಕೆಟ್ ಪತನದ ನಡುವೆಯೂ ನಾಯಕನ ಜವಬ್ದಾರಿಯುತ ಬ್ಯಾಟಿಂಗ್ ಮಾಡುತ್ತಿರುವ ಜೋಸ್ ಬಟ್ಲರ್ 34 ಎಸೆತಗಳಲ್ಲಿ 6 ಬೌಂಡರಿ ಹಾಗೂ 1 ಸಿಕ್ಸರ್ ಸಹಾಯದಿಂದ ಅರ್ಧಶತಕ ಪೂರೈಸಿದ್ದಾರೆ.
ಇಂಗ್ಲೆಂಡ್; 83/4
ವರುಣ್ ಚಕ್ರವರ್ತಿ ಒಂದೇ ಓವರ್‌ನಲ್ಲಿ 2 ಪ್ರಮುಖ ವಿಕೆಟ್ ಉರುಳಿಸಿದ್ದಾರೆ. 8ನೇ ಓವರ್‌ನ ಮೂರನೇ ಎಸೆತದಲ್ಲಿ ಬ್ರೂಕ್ ವಿಕೆಟ್ ಉರುಳಿಸಿದ್ದ ವರುಣ್, ಅದೇ ಓವರ್‌ನ 5ನೇ ಎಸೆತದಲ್ಲಿ ಅಪಾಯಕಾರಿ ಬ್ಯಾಟ್ಸ್ಮನ್ ಲಿವಿಂಗ್ಸ್ಟನ್ರನ್ನು ಕ್ಲೀನ್ ಬೌಲ್ಡ್ ಮಾಡಿದರು.
ಇಂಗ್ಲೆಂಡ್ 3ನೇ ವಿಕೆಟ್ ಪತನವಾಗಿದೆ. ವರುಣ್ ಚಕ್ರವರ್ತಿ ಎಸೆದ 8ನೇ ಓವರ್‌ನ ಮೂರನೇ ಎಸೆತವನ್ನು ಡಿಫೆಂಡ್ ಮಾಡಲು ಯತ್ನಿಸಿದ ಬ್ರೂಕ್ ಕ್ಲೀನ್ ಬೌಲ್ಡ್ ಆದರು.
ಇಂಗ್ಲೆಂಡ್; 65/3
ಇಂಗ್ಲೆಂಡ್ ಇನ್ನಿಂಗ್ಸ್ನ 5 ಓವರ್ಗಳು ಮುಗಿದಿವೆ. ಈ ಅವಧಿಯಲ್ಲಿ ಇಂಗ್ಲೆಂಡ್ ತಂಡ ಆರಂಭಿಕರಿಬ್ಬರನ್ನು ಕಳೆದುಕೊಂಡು 38 ರನ್ ಕಲೆಹಾಕಿದೆ.
ಅರ್ಷದೀಪ್ಗೆ 2ನೇ ವಿಕೆಟ್ ಸಿಕ್ಕಿದೆ; ಮೂರನೇ ಓವರ್‌ನ ಐದನೇ ಎಸೆತದಲ್ಲಿ ಬಿಗ್ ಶಾಟ್ ಆಡಲು ಯತ್ನಿಸಿದ ಡಕೆಟ್ ರಿಂಕು ಸಿಂಗ್ ಹಿಡಿದ ಅದ್ಭುತ ಕ್ಯಾಚ್ಗೆ ಪೆವಿಲಿಯನ್ ಸೇರಬೇಕಾಯಿತು.
ಮೊದಲ ಓವರ್‌ನ 3ನೇ ಎಸೆತದಲ್ಲಿ ಫಿಲ್ ಸಾಲ್ಟ್ ಶೂನ್ಯಕ್ಕೆ ಔಟಾಗಿದ್ದಾರೆ.
ಇಂಗ್ಲೆಂಡ್ ಬ್ಯಾಟಿಂಗ್ ಆರಂಭವಾಗಿದ್ದು, ಆರಂಭಿಕರಾಗಿ ಸಾಲ್ಟ್ ಹಾಗೂ ಡಕೆಟ್ ಅಖಾಡಕ್ಕಿಳಿದಿದ್ದಾರೆ. ಅರ್ಷದೀಪ್ ಬೌಲಿಂಗ್ ಆರಂಭಿಸಿದ್ದಾರೆ.
ಬೆನ್ ಡಕೆಟ್, ಫಿಲ್ ಸಾಲ್ಟ್ (ವಿಕೆಟ್ ಕೀಪರ್), ಜೋಸ್ ಬಟ್ಲರ್ (ನಾಯಕ), ಹ್ಯಾರಿ ಬ್ರೂಕ್ (ಉಪನಾಯಕ), ಲಿಯಾಮ್ ಲಿವಿಂಗ್‌ಸ್ಟೋನ್, ಜಾಕೋಬ್ ಬೆಥೆಲ್, ಜೇಮೀ ಓವರ್ಟನ್, ಗಸ್ ಅಟ್ಕಿನ್ಸನ್, ಜೋಫ್ರಾ ಆರ್ಚರ್, ಆದಿಲ್ ರಶೀದ್, ಮಾರ್ಕ್ ವುಡ್.
ಅಭಿಷೇಕ್ ಶರ್ಮಾ, ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ಸೂರ್ಯಕುಮಾರ್ ಯಾದವ್ (ನಾಯಕ), ತಿಲಕ್ ವರ್ಮಾ, ಹಾರ್ದಿಕ್ ಪಾಂಡ್ಯ, ರಿಂಕು ಸಿಂಗ್, ನಿತೀಶ್ ಕುಮಾರ್ ರೆಡ್ಡಿ, ಅಕ್ಷರ್ ಪಟೇಲ್, ರವಿ ಬಿಷ್ಣೋಯ್, ಅರ್ಷದೀಪ್ ಸಿಂಗ್, ವರುಣ್ ಚಕ್ರವರ್ತಿ.
ಟಾಸ್ ಗೆದ್ದ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿದ್ದಾರೆ.
ಬೆನ್ ಡಕೆಟ್, ಫಿಲ್ ಸಾಲ್ಟ್, ಜೋಸ್ ಬಟ್ಲರ್, ಹ್ಯಾರಿ ಬ್ರೂಕ್, ಲಿಯಾಮ್ ಲಿವಿಂಗ್ಸ್ಟನ್, ಜಾಕೋಬ್ ಬ್ಯಾಟ್ಚೆಲರ್, ಜೇಮೀ ಓವರ್ಟನ್, ಗಸ್ ಅಟ್ಕಿನ್ಸನ್, ಜೋಫ್ರಾ ಆರ್ಚರ್, ಆದಿಲ್ ರಶೀದ್, ಮಾರ್ಕ್ ವುಡ್
ಕೋಲ್ಕತ್ತಾದಲ್ಲಿ ಟೀಂ ಇಂಡಿಯಾದ ದಾಖಲೆ ಅದ್ಭುತವಾಗಿದೆ. ಇಲ್ಲಿ ಆಡಿದ 7 ಪಂದ್ಯಗಳಲ್ಲಿ 6ರಲ್ಲಿ ಗೆಲುವು ಸಾಧಿಸಿದೆ. ಕುತೂಹಲಕಾರಿ ಸಂಗತಿಯೆಂದರೆ, ಈ ನೆಲದಲ್ಲಿ ತಂಡ ಅನುಭವಿಸಿದ ಏಕೈಕ ಸೋಲು ಇಂಗ್ಲೆಂಡ್ ವಿರುದ್ಧ ಮಾತ್ರ.
Published On - 6:12 pm, Wed, 22 January 25