
ಭಾರತ ಮತ್ತು ಇಂಗ್ಲೆಂಡ್ (India vs England) ನಡುವಿನ ಐದು ಪಂದ್ಯಗಳ ಟೆಸ್ಟ್ ಸರಣಿಯ ನಾಲ್ಕನೇ ಪಂದ್ಯದ ಎರಡನೇ ದಿನದಾಟ ಮುಗಿದಿದ್ದು, ಟೀಂ ಇಂಡಿಯಾವನ್ನು 358 ರನ್‌ಗಳಿಗೆ ಆಲೌಟ್ ಮಾಡಿರುವ ಇಂಗ್ಲೆಂಡ್ ತಂಡ ಮೊದಲ ಇನ್ನಿಂಗ್ಸ್‌ನಲ್ಲಿ ಎರಡು ವಿಕೆಟ್‌ಗಳ ನಷ್ಟಕ್ಕೆ 225 ರನ್ ಗಳಿಸಿದೆ. ತಂಡದ ಪರ ಓಲಿ ಪೋಪ್ 20 ರನ್ ಮತ್ತು ಜೋ ರೂಟ್ 11 ರನ್ ಗಳಿಸಿ ಮೂರನೇ ದಿನದಾಟಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ. ಪ್ರಸ್ತುತ, ಇಂಗ್ಲೆಂಡ್ ಭಾರತಕ್ಕಿಂತ 133 ರನ್‌ಗಳ ಹಿಂದಿದೆ. ಆದಾಗ್ಯೂ ಇಂಗ್ಲೆಂಡ್ ತಂಡಕ್ಕೆ ಉತ್ತಮ ಆರಂಭ ಸಿಕ್ಕಿದ್ದು, ಆರಂಭಿಕರಾದ ಬೆನ್ ಡಕೆಟ್ (Ben Duckett) ಹಾಗೂ ಜ್ಯಾಕ್ ಕ್ರೌಲಿ ಕ್ರಮವಾಗಿ 94 ರನ್ ಹಾಗೂ 84 ರನ್ ಬಾರಿಸಿ ತಂಡಕ್ಕೆ ಶತಕದ ಜೊತೆಯಾಟ ನೀಡಿದರು. ಇತ್ತ ಭಾರತದ ಪರ ರವೀಂದ್ರ ಜಡೇಜಾ ಹಾಗೂ ಅಂಶುಲ್ ಕಾಂಬೋಜ್ (Anshul Kamboj) ತಲಾ 1 ವಿಕೆಟ್ ಪಡೆದರು.
ಜ್ಯಾಕ್ ಕ್ರೌಲಿ ಮತ್ತು ಬೆನ್ ಡಕೆಟ್ ಇಂಗ್ಲೆಂಡ್‌ಗೆ ಮೊದಲ ಇನ್ನಿಂಗ್ಸ್‌ನಲ್ಲಿ ಉತ್ತಮ ಆರಂಭವನ್ನು ನೀಡಿದರು. ಇಬ್ಬರ ನಡುವೆ ಮೊದಲ ವಿಕೆಟ್‌ಗೆ 166 ರನ್‌ಗಳ ಪಾಲುದಾರಿಕೆ ಇತ್ತು, ಅದನ್ನು ರವೀಂದ್ರ ಜಡೇಜಾ ಮುರಿದರು. ಕ್ರೌಲಿ 113 ಎಸೆತಗಳಲ್ಲಿ 13 ಬೌಂಡರಿ ಮತ್ತು ಒಂದು ಸಿಕ್ಸರ್ ಸಹಾಯದಿಂದ 84 ರನ್ ಗಳಿಸಿ ಜಡೇಜಾಗೆ ಬಲಿಯಾದರು. ಇದರ ನಂತರ ಆಕ್ರಮಣಕಾರಿ ಆಟ ಆಡುತ್ತಿದ್ದ ಬೆನ್ ಡಕೆಟ್ ಅವರನ್ನು ಅನ್ಶುಲ್ ಕಾಂಬೋಜ್ ಔಟ್ ಮಾಡಿದರು. 13 ಬೌಂಡರಿಗಳ ಸಹಾಯದಿಂದ 94 ರನ್ ಗಳಿಸಿ ಡಕೆಟ್ ಔಟಾದರು. ಆಟದ ಅಂತ್ಯಕ್ಕೆ, ಓಲಿ ಪೋಪ್ 42 ಎಸೆತಗಳಲ್ಲಿ 20 ರನ್ ಮತ್ತು ಜೋ ರೂಟ್ 27 ಎಸೆತಗಳಲ್ಲಿ 11 ರನ್ ಬಾರಿಸಿ ಕ್ರೀಸ್‌ನಲ್ಲಿದ್ದಾರೆ.
IND vs ENG: ಗಾಯದ ನಡುವೆಯೂ ಅರ್ಧಶತಕ ಬಾರಿಸಿದ ಪಂತ್; ವಿಡಿಯೋ ನೋಡಿ
ಇದಕ್ಕೂ ಮೊದಲು ಈ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಶುಭಮನ್ ಗಿಲ್ ನೇತೃತ್ವದ ಭಾರತ ತಂಡ ಮೊದಲ ಇನ್ನಿಂಗ್ಸ್‌ನಲ್ಲಿ 358 ರನ್‌ಗಳಿಗೆ ಆಲೌಟ್ ಆಯಿತು. ತಂಡದ ಪರ ಯಶಸ್ವಿ ಜೈಸ್ವಾಲ್ 58 ಮತ್ತು ರಿಷಭ್ ಪಂತ್ 54 ರನ್ ಗಳಿಸಿದರೆ, ಸಾಯಿ ಸುದರ್ಶನ್ 61 ರನ್‌ಗಳ ಕಾಣಿಕೆ ನೀಡಿದರು. ಇತ್ತ ಇಂಗ್ಲೆಂಡ್ ಪರ ಬೆನ್ ಸ್ಟೋಕ್ಸ್ ಐದು ವಿಕೆಟ್ ಪಡೆದರೆ, ಜೋಫ್ರಾ ಆರ್ಚರ್ ಮೂರು ವಿಕೆಟ್ ಪಡೆದರು. ಇದಲ್ಲದೆ, ಕ್ರಿಸ್ ವೋಕ್ಸ್ ಮತ್ತು ಲಿಯಾಮ್ ಡಾಸನ್ ತಲಾ ಒಂದು ವಿಕೆಟ್ ಪಡೆದರು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 11:14 pm, Thu, 24 July 25