India vs England: ಭಾರತ-ಇಂಗ್ಲೆಂಡ್ 4ನೇ ಟೆಸ್ಟ್​ಗೆ ಇದೆಯಾ ಮಳೆಯ ಕಾಟ?: ಹವಾಮಾನ ವರದಿ, ಪಿಚ್ ರಿಪೋರ್ಟ್ ಇಲ್ಲಿದೆ

| Updated By: Vinay Bhat

Updated on: Sep 02, 2021 | 9:19 AM

India vs England 4th Test: ಮೊದಲ ಟೆಸ್ಟ್​ನಲ್ಲಿ ಭಾರತದ ಗೆಲುವಿಗೆ ವರುಣ ಅಡ್ಡಿಪಡಿಸಿದ್ದು ತಿಳಿದೇ ಇದೆ. ಹಾಗಾದ್ರೆ 4ನೇ ಟೆಸ್ಟ್​ಗೆ ಮಳೆಯ ಕಾಟ ಇದೆಯೇ?, ಪಿಚ್ ಯಾರಿಗೆ ಹೆಚ್ಚು ನೆರವಾಗಲಿದೆ ಎಂಬ ಕುರಿತ ಮಾಹಿತಿ ಇಲ್ಲಿದೆ.

India vs England: ಭಾರತ-ಇಂಗ್ಲೆಂಡ್ 4ನೇ ಟೆಸ್ಟ್​ಗೆ ಇದೆಯಾ ಮಳೆಯ ಕಾಟ?: ಹವಾಮಾನ ವರದಿ, ಪಿಚ್ ರಿಪೋರ್ಟ್ ಇಲ್ಲಿದೆ
IND vs ENG
Follow us on

ಲಂಡನ್​ನ ಕೆನ್ನಿಂಗ್ಟನ್ ಓವಲ್ ಮೈದಾನದಲ್ಲಿ ಇಂದಿನಿಂದ ಭಾರತ ಹಾಗೂ ಇಂಗ್ಲೆಂಡ್ (India vs England) ನಡುವೆ ನಾಲ್ಕನೇ ಟೆಸ್ಟ್ ಪಂದ್ಯ ಆರಂಭವಾಗಲಿದೆ. ಈಗಾಗಲೇ ಮುಕ್ತಾಯಗೊಂಡಿರುವ ಮೂರು ಪಂದ್ಯಗಳಲ್ಲಿ ಉಭಯ ತಂಡಗಳು ತಲಾ ಒಂದೊಂದು ಪಂದ್ಯ ಗೆದ್ದಿದ್ದರೆ, ಮೊದಲ ಟೆಸ್ಟ್ ಡ್ರಾ ಆಗಿತ್ತು. ಹೀಗಾಗಿ ಉಳಿದಿರುವ ಎರಡು ಪಂದ್ಯ ಇಬ್ಬರಿಗೂ ಮುಖ್ಯವಾಗಿದೆ. ಮೊದಲ ಟೆಸ್ಟ್​ನಲ್ಲಿ ಭಾರತದ ಗೆಲುವಿಗೆ ವರುಣ ಅಡ್ಡಿಪಡಿಸಿದ್ದು ತಿಳಿದೇ ಇದೆ. ಹಾಗಾದ್ರೆ 4ನೇ ಟೆಸ್ಟ್​ಗೆ ಮಳೆಯ ಕಾಟ ಇದೆಯೇ?, ಪಿಚ್ ಯಾರಿಗೆ ಹೆಚ್ಚು ನೆರವಾಗಲಿದೆ ಎಂಬ ಕುರಿತ ಮಾಹಿತಿ ಇಲ್ಲಿದೆ.

ಮಳೆಯ ಕಾಟ ಇದೆಯೇ?:

ಲಂಡನ್‌ನ ಕೆನ್ನಿಂಗ್ಟನ್ ಓವಲ್ ಕ್ರೀಡಾಂಗಣದಲ್ಲಿ ಭಾರತ ಹಾಗೂ ಇಂಗ್ಲೆಂಡ್ ನಡುವೆ ಸೆಪ್ಟೆಂಬರ್ 2 ರಿಂದ ಸೆಪ್ಟೆಂಬರ್ 6 ರವರೆಗೆ ನಾಲ್ಕನೇ ಟೆಸ್ಟ್ ಪಂದ್ಯ ನಡೆಯಲಿದೆ. ಇದರಲ್ಲಿ ಪಂದ್ಯ ಆರಂಭವಾದ ಮೊದಲ ಮೂರು ದಿನಗಳ ಕಾಲ ಮಳೆಯಾಗುವ ಸಂಭವ ತೀರಾ ಕಡಿಮೆ ಇದೆ ಎಂದು ಹೇಳಲಾಗಿದೆ. ಆದರೆ, ಪಂದ್ಯದ ನಾಲ್ಕನೇ ಮತ್ತು ಐದನೇ ದಿನ ಆಗಾಗ ಮಳೆಯಾಗುವ ಸಾಧ್ಯತೆಗಳಿವೆ ಎಂದು ಹವಾಮಾನ ವರದಿ ಹೇಳುತ್ತಿದೆ.

ಪಿಚ್ ಹೇಗಿದೆ?:

ಓವಲ್ ಪಿಚ್ ಬ್ಯಾಟ್ಸ್‌ಮನ್‌ಗಳಿಗೆ ನೆಚ್ಚಿನದ್ದಾಗಿದೆ. ಇಲ್ಲಿ ಟಾಸ್ ಗೆಲ್ಲುವ ತಂಡ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡು ಉತ್ತಮ ರನ್ ಕಲೆ ಹಾಕುವುದು ಒಳ್ಳೆಯ ನಿರ್ಧಾರವಾಗಿರಲಿದೆ. ಆರಂಭದ ಸಮಯದಲ್ಲಿ ವೇಗದ ಬೌಲರ್‌ಗಳಿಗೆ ಸಹಕಾರಿಯಾಗಿರಲಿರುವ ಪಿಚ್ ಸಮಯ ಕಳೆದಂತೆ ಸ್ಪಿನ್ ಬೌಲರ್‌ಗಳಿಗೂ ಒಗ್ಗಿಕೊಳ್ಳಲಿದೆ. ಈ ಮೂಲಕ ಮತ್ತೊಂದು ಸಮತೋಲನವಾದ ಟೆಸ್ಟ್ ಪಂದ್ಯಕ್ಕೆ ಓವಲ್ ಕ್ರೀಡಾಂಗಣ ಸಾಕ್ಷಿಯಾಗಲಿದೆ ಎಂದೇ ಹೇಳಬಹುದು.

ಭಾರತ ಮತ್ತು ಇಂಗ್ಲೆಂಡ್ ತಂಡಗಳು ಇದುವರೆಗೂ ಓವಲ್ ಕ್ರೀಡಾಂಗಣದಲ್ಲಿ ನಡೆದಿರುವ ಒಟ್ಟು 13 ಟೆಸ್ಟ್ ಪಂದ್ಯಗಳಲ್ಲಿ ಮುಖಾಮುಖಿಯಾಗಿವೆ. ಈ ಪೈಕಿ ಇಂಗ್ಲೆಂಡ್ ತಂಡ 5 ಪಂದ್ಯಗಳಲ್ಲಿ ಗೆಲುವು ಸಾಧಿಸಿದ್ದರೆ, ಟೀಮ್ ಇಂಡಿಯಾ ಕೇವಲ ಒಂದೇ ಒಂದು ಪಂದ್ಯದಲ್ಲಿ ಮಾತ್ರ ಜಯಗಳಿಸಿದೆ ಹಾಗೂ ಇನ್ನುಳಿದ 7 ಪಂದ್ಯಗಳು ಡ್ರಾನಲ್ಲಿ ಅಂತ್ಯಗೊಂಡಿವೆ. ಈ ಅಂಕಿ ಅಂಶಗಳನ್ನು ಗಮನಿಸಿದರೆ ಓವಲ್ ಕ್ರೀಡಾಂಗಣದಲ್ಲಿ ನಡೆದಿರುವ ಟೆಸ್ಟ್ ಪಂದ್ಯಗಳ ಇತಿಹಾಸದಲ್ಲಿ ಇಂಗ್ಲೆಂಡ್ ತಂಡ ಭಾರತದ ವಿರುದ್ಧ ಸ್ಪಷ್ಟ ಮೇಲುಗೈ ಸಾಧಿಸಿದೆ.

1971 ರ ಸಮಯದಲ್ಲಿ ಓವಲ್ ಕ್ರೀಡಾಂಗಣದಲ್ಲಿ ನಡೆದಿದ್ದ ಭಾರತ ಮತ್ತು ಇಂಗ್ಲೆಂಡ್ ನಡುವಿನ ಟೆಸ್ಟ್ ಪಂದ್ಯದಲ್ಲಿ ಟೀಮ್ ಇಂಡಿಯಾ ಜಯ ಸಾಧಿಸಿತ್ತು. ಈ ಪಂದ್ಯದ ಬಳಿಕ ನಡೆದ ಯಾವುದೇ ಟೆಸ್ಟ್ ಪಂದ್ಯದಲ್ಲಿಯೂ ಸಹ ಭಾರತ ಗೆಲುವನ್ನು ಸಾಧಿಸಲಿಲ್ಲ. ಹೀಗಾಗಿ ಓವಲ್ ಕ್ರೀಡಾಂಗಣದಲ್ಲಿ ಭಾರತ ಟೆಸ್ಟ್ ಪಂದ್ಯವನ್ನು ಗೆದ್ದು 50 ವರ್ಷಗಳೇ ಕಳೆದಿವೆ.

4ನೇ ಟೆಸ್ಟ್​ಗೆ ಭಾರತದ ಸಂಭಾವ್ಯ ಪ್ಲೇಯಿಂಗ್ XI:

ರೋಹಿತ್ ಶರ್ಮಾ (ಉಪ ನಾಯಕ), ಕೆ. ಎಲ್ ರಾಹುಲ್, ಚೇತೇಶ್ವರ್ ಪೂಜಾರ, ವಿರಾಟ್ ಕೊಹ್ಲಿ (ನಾಯಕ), ಹನುಮಾ ವಿಹಾರಿ, ರಿಷಭ್ ಪಂತ್, ರವಿಚಂದ್ರನ್ ಅಶ್ವಿನ್, ಶಾರ್ದೂಲ್ ಠಾಕೂರ್, ಮೊಹಮ್ಮದ್ ಶಮಿ, ಜಸ್​ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್.

India vs England: 4ನೇ ಟೆಸ್ಟ್​ಗೆ ಟೀಮ್ ಇಂಡಿಯಾದಲ್ಲಿ 3 ಬದಲಾವಣೆ?: ಇಲ್ಲಿದೆ ಕೊಹ್ಲಿ ಪಡೆಯ ಸಂಭಾವ್ಯ ಪ್ಲೇಯಿಂಗ್ XI

India vs England: ಇಂದಿನಿಂದ ಭಾರತ-ಇಂಗ್ಲೆಂಡ್ 4ನೇ ಟೆಸ್ಟ್: ಎಲ್ಲಿ?, ಎಷ್ಟು ಗಂಟೆಗೆ ಆರಂಭ?: ಇಲ್ಲಿದೆ ಸಂಪೂರ್ಣ ಮಾಹಿತಿ

(India vs England 4th Test Oval Weather Forecast Pitch Report India Playing XI)