ವೀರುವನ್ನು ನಂಬಬೇಡಿ ಎಂದ ಸೌರವ್, ನನ್ನ ಮೇಲೆ ಕರುಣೆಯಿರಲಿ ಎಂದ ಅಮಿತಾಭ್; ಅಚ್ಚರಿಗಳನ್ನು ಹೊತ್ತುತಂದ ಕೆಬಿಸಿ
Sourav Ganguly and Virendra Sehwag: ಅಮಿತಾಭ್ ಬಚ್ಚನ್ ನಡೆಸಿಕೊಡುವ ‘ಕೌನ್ ಬನೇಗಾ ಕರೋಡ್ಪತಿ’ಯಲ್ಲಿ ಸೌರವ್ ಗಂಗೂಲಿ ಹಾಗೂ ವೀರೇಂದ್ರ ಸೆಹ್ವಾಗ್ ಅತಿಥಿಯಾಗಿ ಭಾಗವಹಿಸಿದ್ದಾರೆ. ಇದರ ಹಾಸ್ಯಭರಿತ ಪ್ರೊಮೊಗಳನ್ನು ಚಾನಲ್ ಹಂಚಿಕೊಳ್ಳುತ್ತಿದ್ದು, ವೀಕ್ಷಕರು ಅವುಗಳನ್ನು ಸಖತ್ ಎಂಜಾಯ್ ಮಾಡುತ್ತಿದ್ದಾರೆ.
ಕೌನ್ ಬನೇಗಾ ಕರೋಡ್ಪತಿ(Kaun Banega Crorepathi- KBC) ಸೀಸನ್ 13 ಭರ್ಜರಿಯಾಗಿ ಪ್ರದರ್ಶನವಾಗುತ್ತಿದೆ. ಈ ಬಾರಿ ಕ್ರಿಕೆಟ್ ತಾರೆಯರಾದ ಸೌರವ್ ಗಂಗೂಲಿ(Sourav Ganguly) ಹಾಗೂ ವೀರೇಂದ್ರ ಸೆಹ್ವಾಗ್(Virendra Sehwag) ಹಾಟ್ ಸೀಟ್ನಲ್ಲಿ ಬಂದು ಕುಳಿತಿದ್ದಾರೆ. ಈ ಹಿಂದೆ ಚಾನಲ್ ಬಿಡುಗಡೆ ಮಾಡಿದ್ದ ಪ್ರೊಮೊದಲ್ಲಿ ಗಂಗೂಲಿ ಹಾಗೂ ವೀರು ಹಾಸ್ಯ ಚಟಾಕಿ ಹಾರಿಸುತ್ತಾ ಮಾತನಾಡಿದ್ದು ಸಖತ್ ಸೌಂಡ್ ಮಾಡಿತ್ತು. ಇದೀಗ ಗಂಗೂಲಿ ಅಮಿತಾಭ್ ಸೀಟಿನಲ್ಲಿ ಕುಳಿತು, ಬಿಗ್ಬಿಯನ್ನು ಹಾಟ್ ಸೀಟ್ನಲ್ಲಿ ಕುಳ್ಳಿರಿಸಿದ್ದಾರೆ. ಈ ನೂತನ ಪ್ರೊಮೊ ಅಭಿಮಾನಿಗಳ ಮನಗೆದ್ದಿದ್ದು, ಕ್ರಿಕೆಟ್- ಸಿನಿ ದಿಗ್ಗಜರ ಮಾತಿನ ವರಸೆ ಗಮನ ಸೆಳೆದಿದೆ.
ದಾದಾ ಬಿಗ್ಬಿ ಸ್ಥಾನದಲ್ಲಿ ಕುಳಿತು ಅಮಿತಾಭ್ಗೆ ಖಡಕ್ ಷರತ್ತುಗಳನ್ನು ಹಾಕಿದ್ದಾರೆ. ಅಮಿತಾಭ್ಗಿರುವ ಏಕೈಕ ಲೈಫ್ಲೈನ್ ಸೆಹ್ವಾಗ್ ಮಾತ್ರ ಎಂದಿರುವ ದಾದಾ, ಬಿಗ್ಬಿಗೆ ಸ್ಪರ್ಧೆಯ ನಿಯಮಗಳನ್ನು ವಿವರಿಸಿದ್ದಾರೆ. ಆಗ ಅಮಿತಾಭ್ ವೀರು ಕಡೆ ತಿರುಗಿ, ‘ದಯವಿಟ್ಟು ಉತ್ತರಗಳನ್ನು ಹೇಳಿಕೊಟ್ಟು ನನಗೆ ಸಹಾಯ ಮಾಡಿ’ ಎಂದು ಕೋರಿಕೊಂಡಿದ್ದಾರೆ. ಆಗ ಮಧ್ಯ ಪ್ರವೇಶಿಸಿದ ಸೌರವ್, ‘ಆತನನ್ನು (ಸೆಹ್ವಾಗ್) ನಂಬಬೇಡಿ’ ಎಂದು ಕಾಲೆಳೆದು ತಮಾಷೆ ಮಾಡಿದ್ದಾರೆ.
ಸೌರವ್ ಪ್ರಶ್ನೆ ಕೇಳುವ ಮುನ್ನ ಅವರ ಬಳಿಯೇ ತಮಾಷೆಯಾಗಿ ಕೋರಿಕೊಂಡ ಅಮಿತಾಭ್, ‘ದಯವಿಟ್ಟು ನನ್ನೆಡೆಗೆ ತುಸು ಕರುಣೆಯಿರಲಿ’ ಎಂದಿದ್ದಾರೆ. ನಂತರ ಹಾಟ್ಸೀಟ್ನ ಅನುಭವ ಹೇಳಿಕೊಂಡ ಅಮಿತಾಭ್, ‘ಇಲ್ಲಿ ಕುಳಿತಾಗ ಸ್ಪರ್ಧಿಗಳಿಗೆ ಯಾವ ಅನುಭವವಾಗುತ್ತದೆ ಎಂದು ನನಗೀಗ ಅರಿವಾಗುತ್ತಿದೆ’ ಎಂದಿದ್ದಾರೆ. ಇದಕ್ಕೆ ವೀರು ಹಾಗೂ ದಾದಾ ಮನಸಾರೆ ನಕ್ಕಿದ್ದಾರೆ.
View this post on Instagram
ಈ ಹಿಂದೆ ಹಂಚಿಕೊಳ್ಳಲಾಗಿದ್ದ ಪ್ರೊಮೊದಲ್ಲಿ ಬಹುತೇಕರಿಗೆ ಗೊತ್ತಿಲ್ಲದ ಸಂಗತಿಯೊಂದನ್ನು ತೆರೆದಿಡಲಾಗಿತ್ತು. ಅದೇನೆಂದರೆ, ಸೆಹ್ವಾಗ್ ಅವರು ಕ್ರಿಕೆಟ್ ಮೈದಾನದಲ್ಲಿ ಬಾಲಿವುಡ್ ಹಾಡುಗಳನ್ನು ಗುನುಗುತ್ತಿದ್ದರಂತೆ! ಆ ಬಗ್ಗೆ ಅಮಿತಾಭ್ ವಿಚಾರಿಸಿದಾಗ ಹಲವು ಫನ್ನಿ ಸಂಗತಿಗಳನ್ನು ಸೆಹ್ವಾಗ್ ವಿವರಿಸಿದ್ದರು. ಯಾವ ಯಾವ ಸಂದರ್ಭಕ್ಕೆ ಯಾವ ಯಾವ ಹಾಡು ಮತ್ತು ಡೈಲಾಗ್ ಸೂಕ್ತ ಆಗುತ್ತದೆ ಎಂದು ಅವರು ಅಣಕ ಮಾಡಿ ತೋರಿಸಿದ್ದರು.
ಈ ಬಾರಿಯ ಕೌನ್ ಬನೇಗಾ ಕರೋಡ್ಪತಿಯಲ್ಲಿ ಈಗಾಗಲೇ ಹಿಇಮಾನಿ ಬಂಡೇಲಾ 1 ಕೋಟಿ ರೂಗಳನ್ನು ಗೆದ್ದಿದ್ದಾರೆ. 7 ಕೋಟಿ ರೂಗಳ ಪ್ರಶ್ನೆಗೆ ಖಚಿತ ಉತ್ತರ ತಿಳಿದಿರದ ಕಾರಣ, ಅವರು ಆ ಪ್ರಶ್ನೆಯನ್ನು ಕ್ವಿಟ್ ಮಾಡಿ 1 ಕೋಟಿ ರೂ ಪಡೆದುಕೊಂಡರು. 2000ನೇ ಇಸವಿಯಲ್ಲಿ ಕೌನ್ ಬನೇಗಾ ಕರೋಡ್ಪತಿ ಪ್ರಾರಂಭವಾಗಿದ್ದು, ಅಮಿತಾಭ್ ಅದರ ನಿರೂಪಕರಾಗಿ ಕಾರ್ಯನಿರ್ವಹಿಸಿದ್ದಾರೆ. ಅಪಾರ ಯಶಸ್ಸನ್ನು ಗಳಿಸಿರುವ ಈ ಕಾರ್ಯಕ್ರಮದಲ್ಲಿ, ಎಲ್ಲಾ ಪ್ರಶ್ನೆಗಳಿಗೆ ಸರಿಯುತ್ತರ ನೀಡಿದವರು 1 ಕೋಟಿ ರೂಗಳ ಬೃಹತ್ ಮೊತ್ತವನ್ನು ಗೆಲ್ಲುತ್ತಿದ್ದರು. ಪ್ರಸ್ತುತ ಈ ಮೊತ್ತ 7 ಕೋಟಿ ರೂಗಳಿಗೆ ಏರಿಕೆಯಾಗಿದೆ.
ಇದನ್ನೂ ಓದಿ:
‘ಕರೋಡ್ಪತಿ’ ಶೋನಲ್ಲಿ ಗಂಗೂಲಿ, ಸೆಹ್ವಾಗ್; ಅಮಿತಾಭ್ ಎದುರು ಕ್ರಿಕೆಟ್ ದಿಗ್ಗಜರ ಸಖತ್ ಮಸ್ತಿ
Bheemla Nayak Song: ಖದರ್ ಲುಕ್ನಲ್ಲಿ ಪವನ್ ಕಲ್ಯಾಣ್; ‘ಭೀಮ್ಲಾ ನಾಯಕ್’ ಟೈಟಲ್ ಟ್ರಾಕ್ ಬಿಡುಗಡೆ
(Amitabh Bachchan in Hot seat and Virendra Sehwag is his life line Sourav Ganguly host the KBC in a special episode)