AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

India vs England: ಇಂದಿನಿಂದ ಭಾರತ-ಇಂಗ್ಲೆಂಡ್ 4ನೇ ಟೆಸ್ಟ್: ಎಲ್ಲಿ?, ಎಷ್ಟು ಗಂಟೆಗೆ ಆರಂಭ?: ಇಲ್ಲಿದೆ ಸಂಪೂರ್ಣ ಮಾಹಿತಿ

ನಾಲ್ಕನೇ ಟೆಸ್ಟ್ ಪಂದ್ಯಕ್ಕೆ ಟೀಮ್ ಇಂಡಿಯಾದಲ್ಲಿ ಬದಲಾವಣೆ ಅನಿವಾರ್ಯವಾಗಿದೆ. ಉಪ ನಾಯಕ ಅಜಿಂಕ್ಯಾ ರಹಾನೆ ತಮ್ಮ ಘನತೆಗೆ ತಕ್ಕಂತೆ ಬ್ಯಾಟ್ ಬೀಸುತ್ತಿಲ್ಲ. ಇಶಾಂತ್ ಶರ್ಮಾ ಬೌಲಿಂಗ್ ಕೂಡ ಸದ್ದು ಮಾಡುತ್ತಿಲ್ಲ. ರವಿಚಂದ್ರನ್ ಅಶ್ವಿನ್ ತಂಡಕ್ಕೆ ಸೇರಿಸಿಕೊಳ್ಳಬೇಕು ಎಂಬ ಕೂಗು ಜೋರಾಗಿದೆ.

India vs England: ಇಂದಿನಿಂದ ಭಾರತ-ಇಂಗ್ಲೆಂಡ್ 4ನೇ ಟೆಸ್ಟ್: ಎಲ್ಲಿ?, ಎಷ್ಟು ಗಂಟೆಗೆ ಆರಂಭ?: ಇಲ್ಲಿದೆ ಸಂಪೂರ್ಣ ಮಾಹಿತಿ
India vs England
TV9 Web
| Edited By: |

Updated on:Sep 02, 2021 | 7:23 AM

Share

ಭಾರತ ಹಾಗೂ ಇಂಗ್ಲೆಂಡ್ (India vs England) ನಡುವಣ ಬಹುನಿರೀಕ್ಷಿತ ನಾಲ್ಕನೇ ಟೆಸ್ಟ್ (4th Test) ಪಂದ್ಯ ಇಂದಿನಿಂದ ಆರಂಭವಾಗಿಲಿದೆ. ಮೂರನೇ ಟೆಸ್ಟ್​ನಲ್ಲಿ 78 ರನ್​ಗೆ ಕುಸಿದು ಹೀನಾಯ ಸೋಲು ಕಂಡಿರುವ ಟೀಮ್ ಇಂಡಿಯಾಕ್ಕೆ (Team India) ಈ ಪಂದ್ಯ ಮುಖ್ಯವಾಗಿದೆ. ಅನೇಕ ತಪ್ಪುಗಳನ್ನು ಸರಿಪಡಿಸಿ ಗೆಲುವಿನ ಟ್ರ್ಯಾಕ್​ಗೆ ಮರಳಬೇಕಾದ ಅನಿವಾರ್ಯತೆ ಇದೆ. ಕಳಪೆ ಫಾರ್ಮ್​ನಿಂದ ಬಳಲುತ್ತಿರುವ ಕೊಹ್ಲಿ ಪಡೆಯ ಬ್ಯಾಟ್ಸ್​ಮನ್​ಗಳು ಲಯಕಂಡುಕೊಳ್ಳಬೇಕಿದೆ.

ಲಾರ್ಡ್ಸ್‌ನಲ್ಲಿ ಐತಿಹಾಸಿಕ ಗೆಲುವು ದಾಖಲಿಸಿದ ಬಳಿಕ ಲೀಡ್ಸ್‌ನಲ್ಲಿ ಭಾರತ ತೋರಿದ ಕೆಟ್ಟ ನಿರ್ವಹಣೆ ಸಾಕಷ್ಟು ನಿರಾಸೆ ಮೂಡಿಸಿತ್ತು. ಮೊದಲ ದಿನವೇ ಅಲ್ಪಮೊತ್ತಕ್ಕೆ ಕುಸಿದರೂ ಪಂದ್ಯದ 3ನೇ ದಿನ ಭಾರತ ದಿಟ್ಟ ಪ್ರತಿರೋಧ ತೋರಿತ್ತು. ಆದರೆ 4ನೇ ದಿನ ಮತ್ತೆ ದಿಢೀರ್ ಕುಸಿದ ಪರಿಣಾಮ ಸೋಲಿಗೆ ಶರಣಾಗಬೇಕಾಯಿತು. ಈ ಮೂಲಕ ಇಂಗ್ಲೆಂಡ್ ಸರಣಿಯಲ್ಲಿ 1-1 ಅಂತರದ ಸಮಬಲ ಸಾಧಿಸಿತು.

ನಾಲ್ಕನೇ ಟೆಸ್ಟ್ ಪಂದ್ಯಕ್ಕೆ ಟೀಮ್ ಇಂಡಿಯಾದಲ್ಲಿ ಬದಲಾವಣೆ ಅನಿವಾರ್ಯವಾಗಿದೆ. ಉಪ ನಾಯಕ ಅಜಿಂಕ್ಯಾ ರಹಾನೆ ತಮ್ಮ ಘನತೆಗೆ ತಕ್ಕಂತೆ ಬ್ಯಾಟ್ ಬೀಸುತ್ತಿಲ್ಲ. ಇಶಾಂತ್ ಶರ್ಮಾ ಬೌಲಿಂಗ್ ಕೂಡ ಸದ್ದು ಮಾಡುತ್ತಿಲ್ಲ. ರವಿಚಂದ್ರನ್ ಅಶ್ವಿನ್ ತಂಡಕ್ಕೆ ಸೇರಿಸಿಕೊಳ್ಳಬೇಕು ಎಂಬ ಕೂಗು ಜೋರಾಗಿದೆ. ಇದರ ನಡುವೆ ಇಂಜುರಿಯಿಂದ ಬಳಲುತ್ತಿದ್ದ ರವೀಂದ್ರ ಜಡೇಜಾ ಗುಣಮುಖರಾಗಿದ್ದಾರೆ. ಹೀಗೆ ಭಾರತಕ್ಕೆ ಪ್ಲೇಯಿಂಗ್ 11 ಆಡಿಸುವುದೇ ಬಹುದೊಡ್ಡ ಚಾಜೆಂಜ್ ಆಗಿದೆ.

ಇದರ ನಡುವೆ ಮೀಸಲು ಆಟಗಾರರಾಗಿ ಕಳೆದ 3 ತಿಂಗಳಿನಿಂದ ಭಾರತ ತಂಡದ ಜತೆಗಿರುವ ಕರ್ನಾಟಕದ ವೇಗಿ ಪ್ರಸಿದ್ಧಕೃಷ್ಣ ಪ್ರಧಾನ ಟೆಸ್ಟ್ ತಂಡಕ್ಕೆ ಸೇರ್ಪಡೆಗೊಂಡಿದ್ದಾರೆ. ಕಾರ್ಯದೊತ್ತಡ ತಗ್ಗಿಸಲು ಬುಮ್ರಾ, ಶಮಿ ಅಥವಾ ಸಿರಾಜ್‌ಗೆ ವಿಶ್ರಾಂತಿ ನೀಡಿದರೆ ನಾಲ್ಕನೇ ಅಥವಾ ಐದನೇ ಟೆಸ್ಟ್‌ನಲ್ಲಿ ಪ್ರಸಿದ್ಧಕೃಷ್ಣ ಆಡುವ ಬಳಗದಲ್ಲೂ ಕಾಣಿಸಿಕೊಳ್ಳುವ ನಿರೀಕ್ಷೆ ಇದೆ.

ಇತ್ತ ಇಂಗ್ಲೆಂಡ್ ಮೊದಲ ಮೂರು ಟೆಸ್ಟ್​ಗಿಂತ ಈಗ ಮತ್ತಷ್ಟು ಬಲಿಷ್ಠವಾಗಿದೆ. ತಂಡದಲ್ಲಿ ಸಾಕಷ್ಟು ಬದಲಾವಣೆ ಮಾಡಿದ್ದು, ಹೊಸ ಆಟಗಾರರನ್ನು ಸೇರಿಸಿಕೊಂಡಿದೆ. ಹ್ಯಾಟ್ರಿಕ್ ಸೆಂಚುರಿ ಬಾರಿಸಿ ಭರ್ಜರಿ ಫಾರ್ಮ್​ನಲ್ಲಿರುವ ನಾಯಕ ಜೋ ರೂಟ್ ಅವರೇ ಆಂಗ್ಲರ ಬಹುದೊಡ್ಡ ಆಸ್ತಿ. ಈಗಾಗಲೇ 500 ರನ್‌ ಗಡಿ ದಾಟಿರುವ ರೂಟ್‌ ಏಕಾಂಗಿಯಾಗಿ ತಂಡವನ್ನು ಮೇಲೆತ್ತಬಲ್ಲ ಸಾಹಸಿ. ರೂಟ್‌ ಸ್ಪಿನ್‌ ನಿಭಾಯಿಸುವಲ್ಲಿ ತುಸು ಹಿಂದೆ ಎಂಬುದು ರಹಸ್ಯವೇನಲ್ಲ. ಆಗ ಅಶ್ವಿ‌ನ್‌ ಸೇರ್ಪಡೆ ಹೆಚ್ಚು ಅರ್ಥಪೂರ್ಣವೆನಿಸಲಿದೆ.

ಭಾರತ – ಇಂಗ್ಲೆಂಡ್ 4ನೇ ಟೆಸ್ಟ್ ಪಂದ್ಯ ಎಲ್ಲಿ?:

ಭಾರತ ಹಾಗೂ ಇಂಗ್ಲೆಂಡ್ ನಡುವಣ ನಾಲ್ಕನೇ ಟೆಸ್ಟ್ ಪಂದ್ಯ ಲಂಡನ್​ನ ಕೆನ್ನಿಂಗಸ್ಟನ್ ಓವಲ್​ ಮೈದಾನದಲ್ಲಿ ನಡೆಯಲಿದೆ.

ಎಷ್ಟು ಗಂಟೆಗೆ ಆರಂಭ?:

ಭಾರತದ ಕಾಲಮಾನದ ಪ್ರಕಾರ ಪಂದ್ಯ ಮಧ್ಯಾಹ್ನ 3:30ಕ್ಕೆ ಆರಂಭವಾಗಲಿದೆ.

ಓವಲ್‌ನಲ್ಲಿ ಭಾರತ ಇದುವರೆಗೆ 13 ಟೆಸ್ಟ್ ಪಂದ್ಯಗಳನ್ನು ಆಡಿದ್ದು 1ರಲ್ಲಿ ಮಾತ್ರ ಗೆದ್ದು, 5ರಲ್ಲಿ ಸೋತಿದೆ. 7 ಟೆಸ್ಟ್ ಡ್ರಾಗೊಂಡಿದೆ. 1971ರಲ್ಲಿ ಆಡಿದ ಓವಲ್ ಟೆಸ್ಟ್‌ನಲ್ಲಿ ಜಯಿಸಿದ್ದ ಭಾರತ, ಇಲ್ಲಿ ಆಡಿದ ಕೊನೇ ಮೂರೂ (2011, 2014, 2018) ಟೆಸ್ಟ್‌ಗಳಲ್ಲಿ ಸೋಲು ಅನುಭವಿಸಿದೆ.

IPL 2022: ಐಪಿಎಲ್‌ನಲ್ಲಿ 2 ಹೊಸ ತಂಡಗಳ ಖರೀದಿಗಾಗಿ ಅರ್ಜಿ ಆಹ್ವಾನಿಸಿದ ಬಿಸಿಸಿಐ; ಮೂಲ ಬೆಲೆ ಎಷ್ಟು ಸಾವಿರ ಕೋಟಿ ಗೊತ್ತಾ?

ರಾಹುಲ್ ದ್ರಾವಿಡ್ ಗರಡಿ ಹುಡುಗನ ಆರ್ಭಟ: ಎದುರಾಳಿ ತಂಡ 69 ರನ್​ಗೆ ಆಲೌಟ್

(India vs England 4th Test Preview Virat Kohli India Look To Fight Back After Big Defeat In Leeds)

Published On - 7:22 am, Thu, 2 September 21

Follow Us
TV9 Web
TV9 Web

TV9 Kannada

Read More
ಹೀರೋಗಳೇ ವಿಲನ್ ಆಗಿದ್ದಕ್ಕೆ ಕನ್ನಡ ಚಿತ್ರರಂಗಕ್ಕೆ ಸಮಸ್ಯೆ ಆಯ್ತಾ?
ಹೀರೋಗಳೇ ವಿಲನ್ ಆಗಿದ್ದಕ್ಕೆ ಕನ್ನಡ ಚಿತ್ರರಂಗಕ್ಕೆ ಸಮಸ್ಯೆ ಆಯ್ತಾ?
ಪ್ರೀತಿಸಿ ಮದುವೆಯಾದ 3 ತಿಂಗಳಲ್ಲೇ ನವಜೋಡಿಗೆ ಗಂಡಾಂತರ: ಆಗಿದ್ದೇನು?
ಪ್ರೀತಿಸಿ ಮದುವೆಯಾದ 3 ತಿಂಗಳಲ್ಲೇ ನವಜೋಡಿಗೆ ಗಂಡಾಂತರ: ಆಗಿದ್ದೇನು?
ಬರ ಮಧ್ಯೆ ಸಚಿವರು, ಲೋಕಸಭಾ, ರಾಜ್ಯಸಭಾ ಸದಸ್ಯರ ಕಾರು ಖರೀದಿ ಮೊತ್ತ ಏರಿಕೆ
ಬರ ಮಧ್ಯೆ ಸಚಿವರು, ಲೋಕಸಭಾ, ರಾಜ್ಯಸಭಾ ಸದಸ್ಯರ ಕಾರು ಖರೀದಿ ಮೊತ್ತ ಏರಿಕೆ
‘ಪ್ರೇಮದ ಊರಲಿ’ ಗೆಲುವನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ತರುಣ್ ಸುಧೀರ್
‘ಪ್ರೇಮದ ಊರಲಿ’ ಗೆಲುವನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ತರುಣ್ ಸುಧೀರ್
ರಾಷ್ಟ್ರಪತಿ ಭವನದತ್ತ ಮೆರವಣಿಗೆಯಲ್ಲಿ ಸಿಎಂ ಡಿಕೆ ಶಿವಕುಮಾರ್ ಕೂಡ ಭಾಗಿ
ರಾಷ್ಟ್ರಪತಿ ಭವನದತ್ತ ಮೆರವಣಿಗೆಯಲ್ಲಿ ಸಿಎಂ ಡಿಕೆ ಶಿವಕುಮಾರ್ ಕೂಡ ಭಾಗಿ
ಪ್ರತಿಭಟನೆಯಲ್ಲಿ ಭಾಗವಹಿಸದಂತೆ ಮುಸ್ಲಿಮರಿಗೆ ಇಮಾಮ್ ಉಮರ್ ಇಲ್ಯಾಸಿ ಮನವಿ
ಪ್ರತಿಭಟನೆಯಲ್ಲಿ ಭಾಗವಹಿಸದಂತೆ ಮುಸ್ಲಿಮರಿಗೆ ಇಮಾಮ್ ಉಮರ್ ಇಲ್ಯಾಸಿ ಮನವಿ
ಬೇಡ್ತಿ ನದಿ ತಿರುವಿನಿಂದಾಗುವ ಪರಿಣಾಮಗಳೇನು? ಯೋಜನೆಗೆ ವಿರೋಧವೇಕೆ?
ಬೇಡ್ತಿ ನದಿ ತಿರುವಿನಿಂದಾಗುವ ಪರಿಣಾಮಗಳೇನು? ಯೋಜನೆಗೆ ವಿರೋಧವೇಕೆ?
ಬರಿದಾಗ್ತಿದೆ KRS: CWMA ಆದೇಶದಿಂದ ಕುಡಿಯುವ ನೀರಿಗೂ ಹಾಹಾಕಾರದ ಭೀತಿ
ಬರಿದಾಗ್ತಿದೆ KRS: CWMA ಆದೇಶದಿಂದ ಕುಡಿಯುವ ನೀರಿಗೂ ಹಾಹಾಕಾರದ ಭೀತಿ
‘ಆ ಸಿನಿಮಾ ದರ್ಶನ್​​​ಗೆ ಮಾತ್ರ’: ತರುಣ್ ಸುಧೀರ್ ಹೇಳಿದ್ದು ಯಾವ ಕತೆ?
‘ಆ ಸಿನಿಮಾ ದರ್ಶನ್​​​ಗೆ ಮಾತ್ರ’: ತರುಣ್ ಸುಧೀರ್ ಹೇಳಿದ್ದು ಯಾವ ಕತೆ?
ಭಾರತೀಯ ಕಂಪನಿಗಳನ್ನ ಅಮೆರಿಕ ಟಾರ್ಗೆಟ್ ಮಾಡಿರೋ ಕಾರಣ ಬಿಚ್ಚಿಟ್ಟ ಪೈ!
ಭಾರತೀಯ ಕಂಪನಿಗಳನ್ನ ಅಮೆರಿಕ ಟಾರ್ಗೆಟ್ ಮಾಡಿರೋ ಕಾರಣ ಬಿಚ್ಚಿಟ್ಟ ಪೈ!