ಲಂಡನ್ನ ಕೆನ್ನಿಂಗ್ಟನ್ ಓವಲ್ ಮೈದಾನಲದಲ್ಲಿ ನಡೆಯುತ್ತಿರುವ ಭಾರತ ಹಾಗೂ ಇಂಗ್ಲೆಂಡ್ (India vs England) ನಡುವಣ ನಾಲ್ಕನೇ ಟೆಸ್ಟ್ (4th Test) ಪಂದ್ಯ ಕುತೂಹಲ ಘಟ್ಟದತ್ತ ಸಾಗುತ್ತಿದೆ. ಪಂದ್ಯ ಆರಂಭವಾದ ಮೊದಲ ದಿನ ಆಂಗ್ಲರು ಮೇಲುಗೈ ಸಾಧಿಸಿದರೆ, ಎರಡನೇ ದಿನದ ಅಂತ್ಯದ ಹೊತ್ತಿಗೆ ಭಾರತ ಕಮ್ಬ್ಯಾಕ್ ಮಾಡಿದ್ದು, ಅಪಾಯಕಾರಿಯಾಗಿ ಗೋಚರಿಸಿದೆ. ಹೀಗೆ ಉಭಯ ತಂಡಗಳು ಸಮಬಲದ ಹೋರಾಟ ನಡೆಸುತ್ತಿದೆ. ಇಂಗ್ಲೆಂಡ್ 290 ರನ್‌ಗಳಿಗೆ ಆಲ್‌ಔಟ್ ಆದರೂ 99 ರನ್‌ಗಳ ಮುನ್ನಡೆ ದಕ್ಕಿಸಿಕೊಂಡಿದೆ. ಬಳಿಕ ಎರಡನೇ ಇನಿಂಗ್ಸ್ ಆರಂಭಿಸಿದ ಭಾರತ ತಂಡ ದಿನದಾಟದ ಅಂತ್ಯಕ್ಕೆ ವಿಕೆಟ್ ನಷ್ಟವಿಲ್ಲದೆ 43 ರನ್ ಗಳಿಸಿದೆ.
ಪಂದ್ಯದ ಮೊದಲ ದಿನದ ಅಂತಿಮ ಅವಧಿಯಲ್ಲಿ ಇಂಗ್ಲೆಂಡ್ 53ಕ್ಕೆ 3 ವಿಕೆಟ್ ಕಳೆದುಕೊಂಡಿತ್ತು. ಎರಡನೇ ದಿನದ ಆರಂಭದಲ್ಲೇ ನೈಟ್ ವಾಚ್‌ಮನ್ ಕ್ರೇಗ್ ಓವರ್ಟರ್ನ್ (1) ಮತ್ತು ಡೇವಿಡ್ ಮಲಾನ್ (31) ಬಹುಬೇಗನೆ ಉಮೇಶ್ ಯಾದವ್‌ಗೆ ವಿಕೆಟ್ ಒಪ್ಪಿಸಿಬಿಟ್ಟರು. ಆದರೆ, 6ನೇ ವಿಕೆಟ್‌ಗೆ ಜೊತೆಯಾದ ಓಲ್ಲೀ ಪೋಪ್ ಮತ್ತು ಜಾನಿ ಬೈರ್‌ಸ್ಟೋ ಉತ್ತಮ ಜೊತೆಯಾಟ ಆಡಿದರು. ಭಾರತೀಯ ಬೌಲರ್ಗಳನ್ನು ಕಾಡಿದ ಈ ಜೋಡಿ 89 ರನ್‌ಗಳ ಕಾಣಿಕೆ ನೀಡಿತು.
ಬೈರ್‌ಸ್ಟೋ 77 ಎಸೆತಗಳಲ್ಲಿ 37 ರನ್ ಗಳಿಸಿ ಔಟ್ ಆದರು. ನಂತರ ಪೋಪ್ ಜೊತೆಯಾದ ಮೊಯೀನ್ ಅಲಿ ಮತ್ತೊಂದು ಅತ್ಯುತ್ತಮ ಇನ್ನಿಂಗ್ಸ್ ಕಟ್ಟಿದರು. ಈ ಜೋಡಿ ಅರ್ಧಶತಕದ ಜೊತೆಯಾಟ ಆಡಿತು. ಅಲಿ 71 ಎಸೆತಗಳಲ್ಲಿ 35 ರನ್ಗೆ ಔಟ್ ಆದರೆ, ಪೋಪ್ 159 ಎಸೆತಗಳಲ್ಲಿ 81 ರನ್ ಸಿಡಿಸಿ ಶಾರ್ದೂಲ್ಗೆ ವಿಕೆಟ್ ಒಪ್ಪಿಸಿದರು. ರಾಬಿನ್ಸನ್ 5 ರನ್ಗೆ ಬೌಲ್ಡ್ ಆದರು.
ಹೀಗಿರುವಾಗ ಆಲ್ರೌಂಡರ್ ಕ್ರಿಸ್ ವೋಕ್ಸ್ ಭರ್ಜರಿ ಬ್ಯಾಟಿಂಗ್ ನಡೆಸಿದರು. 250ರೊಳಗೆ ಆಲೌಟ್ ಆಗಬೇಕಿದ್ದ ಇಂಗ್ಲೆಂಡ್ಗೆ ವೋಕ್ಸ್ ಆಸರೆಯಾಗಿ ನಿಂತರು. 60 ಎಸೆತಗಳಲ್ಲಿ 11 ಬೌಂಡರಿ ಬಾರಿಸಿ ವೋಕ್ಸ್ 50 ರನ್ ಬಾರಿಸಿದರು. ಅಂತಿಮವಾಗಿ ಇಂಗ್ಲೆಂಡ್ 99 ರನ್‌ಗಳ ಮುನ್ನಡೆ ಸಾಧಿಸಿ 84 ಓವರ್ನಲ್ಲಿ 290 ರನ್ ಕಲೆಹಾಕಿತು. ಭಾರತ ಪರ ಉಮೇಶ್ ಯಾದವ್ 3, ಬುಮ್ರಾ ಹಾಗೂ ಜಡೇಜಾ ತಲಾ 2 ಮತ್ತು ಠಾಕೂರ್, ಸಿರಾಜ್ ತಲಾ 1 ವಿಕೆಟ್ ಪಡೆದರು.
That’s Stumps on Day 2 of the fourth Test at The Oval! #TeamIndia move to 43/0. @klrahul11 2⃣2⃣*@ImRo45 2⃣0⃣*
We will see you tomorrow for Day 3⃣ action. #ENGvIND
Scorecard ? https://t.co/OOZebP60Bk pic.twitter.com/FyGHxd2SNW
— BCCI (@BCCI) September 3, 2021
ಹಿನ್ನಡೆಯೊಂದಿಗೆ ಎರಡನೇ ಇನ್ನಿಂಗ್ಸ್ ಆರಂಭಿಸಿರುವ ಭಾರತ ಉತ್ತಮ ಲಯದಲ್ಲಿ ಕಾಣಿಸಿಕೊಂಡಿದೆ. ಓಪನರ್ಗಳಾದ ರೋಹಿತ್ ಶರ್ಮಾ (20*) ಮತ್ತು ಕೆ ಎಲ್ ರಾಹುಲ್ (22*) ಅಜೇಯರಾಗಿ ಉಳಿದಿದ್ದು ಎರಡನೇ ದಿನದಾಟದ ಅಂತ್ಯಕ್ಕೆ 43 ರನ್ ಗಳಿಸಿದೆ. 56 ರನ್‌ಗಳ ಹಿನ್ನಡೆಯಲ್ಲಿದೆ. ಇಂದು ಮೂರನೇ ದಿನ ಉಭಯ ತಂಡಗಳಿಗೆ ಮುಖ್ಯವಾಗಿದೆ. ಬ್ಯಾಟಿಂಗ್ನಲ್ಲಿ ಎಡವುತ್ತಿರುವ ಭಾರತಕ್ಕೆ ಕಮ್ಬ್ಯಾಕ್ ಮಾಡಲು ಇದು ಸೂಕ್ತ ಸಮಯವಾಗಿದೆ.
7 ಸಿಕ್ಸರ್, 6 ಬೌಂಡರಿ, 13 ಎಸೆತಗಳಲ್ಲಿ 66 ರನ್; ಕೆರಿಬಿಯನ್ ಲೀಗ್‌ನಲ್ಲಿ ಸುನಾಮಿ ಸೃಷ್ಟಿಸಿದ ರೋಸ್ಟನ್ ಚೇಸ್
(India vs England Day 2 Stumps Rohit Sharma and KL Rahul give India solid start trail by 56 runs)