Jasprit Bumrah: ಕ್ರಿಕೆಟ್ ದಿಗ್ಗಜ ಕಪಿಲ್ ದೇವ್ ದಾಖಲೆ ಮುರಿಯುವ ಸನಿಹದಲ್ಲಿ ಜಸ್​ಪ್ರೀತ್ ಬುಮ್ರಾ

| Updated By: Vinay Bhat

Updated on: Aug 24, 2021 | 9:14 AM

India vs England 3rd Test: ಟೆಸ್ಟ್ ಕ್ರಿಕೆಟ್​ನಲ್ಲಿ ಬುಮ್ರಾ ಈವರೆಗೆ ಆಡಿರುವ 22 ಪಂದ್ಯಗಳಲ್ಲಿ ಬರೋಬ್ಬರಿ 95 ವಿಕೆಟ್ ಕಿತ್ತಿದ್ದಾರೆ. ಇನ್ನು ಕೇವಲ 5 ವಿಕೆಟ್ ಪಡೆದರೆ ಬುಮ್ರಾ 100 ವಿಕೆಟ್ ಕಿತ್ತ ಸಾಧನೆ ಮಾಡಲಿದ್ದಾರೆ.

Jasprit Bumrah: ಕ್ರಿಕೆಟ್ ದಿಗ್ಗಜ ಕಪಿಲ್ ದೇವ್ ದಾಖಲೆ ಮುರಿಯುವ ಸನಿಹದಲ್ಲಿ ಜಸ್​ಪ್ರೀತ್ ಬುಮ್ರಾ
jasprit bumrah
Follow us on

ಇಂಗ್ಲೆಂಡ್ ವಿರುದ್ಧ ಲಾರ್ಡ್ಸ್​ ಟೆಸ್ಟ್​ನಲ್ಲಿ ಐತಿಹಾಸಿಕ ಗೆಲುವು ದಾಖಲಿಸಿ ಸರಣಿಯಲ್ಲಿ ಮುನ್ನಡೆ ಸಾಧಿಸಿರುವ ಭಾರತ (Team India) ತಂಡ ಸದ್ಯ ಮೂರನೇ ಟೆಸ್ಟ್ ಪಂದ್ಯಕ್ಕೆ ಸಜ್ಜಾಗುತ್ತಿದೆ. ಆಗಸ್ಟ್ 25 ಬುಧವಾರದಿಂದ ಲೀಡ್ಸ್​ನ ಹೆಡಿಂಗ್ಲೆ ಕ್ರೀಡಾಂಗಣದಲ್ಲಿ ಕುತೂಹಲಕಾರಿ ಕದನ ಆರಂಭವಾಗಲಿದೆ. ಈ ಪಂದ್ಯದಲ್ಲಿ ಕೆಲವು ದಾಖಲೆಗಳು ನಿರ್ಮಾಣವಾಗುವುದರಲ್ಲಿದೆ. ಪ್ರಮುಖವಾಗಿ ಟೀಮ್ ಇಂಡಿಯಾ ವೇಗಿ ಜಸ್​ಪ್ರೀತ್ ಬುಮ್ರಾ (Jasprit Bumrah) ನೂತನ ಸಾಧನೆಯ ಹೊಸ್ತಿಲಲ್ಲಿದ್ದಾರೆ. ಕ್ರಿಕೆಟ್ ದಿಗ್ಗಜ ಕಪಿಲ್ ದೇವವ್ (Kapil Dev) ಅವರ ದಾಖಲೆ ಪುಡಿಪುಡಿ ಮಾಡಲಿದ್ದಾರೆ ಯಾರ್ಕರ್ ಕಿಂಗ್.

ಟೆಸ್ಟ್ ಕ್ರಿಕೆಟ್​ನಲ್ಲಿ ಬುಮ್ರಾ ಈವರೆಗೆ ಆಡಿರುವ 22 ಪಂದ್ಯಗಳಲ್ಲಿ ಬರೋಬ್ಬರಿ 95 ವಿಕೆಟ್ ಕಿತ್ತಿದ್ದಾರೆ. ಇನ್ನು ಕೇವಲ 5 ವಿಕೆಟ್ ಪಡೆದರೆ ಬುಮ್ರಾ 100 ವಿಕೆಟ್ ಕಿತ್ತ ಸಾಧನೆ ಮಾಡಲಿದ್ದಾರೆ. ಈ ಮೂಲಕ ಮೂರನೇ ಟೆಸ್ಟ್​ನಲ್ಲಿ ಬುಮ್ರಾ ಈ ಸಾಧನೆ ಮಾಡಿದ್ದೇ ಆದಲ್ಲಿ ಕಪಿಲ್ ದೇವ್ ದಾಖಲೆ ಹಿಂದಿಕ್ಕಿ ಟೀಮ್ ಇಂಡಿಯಾ ಪರ ಅತಿ ವೇಗವಾಗಿ ನೂರು ವಿಕೆಟ್ ಕಿತ್ತ ವೇಗಿ ಎಂಬ ನೂತನ ದಾಖಲೆ ಮಾಡಲಿದ್ದಾರೆ.

ಕಪಿಲ್ ದೇವ್ ಟೆಸ್ಟ್ ಕ್ರಿಕೆಟ್​ನಲ್ಲಿ 100 ವಿಕೆಟ್ ಪಡೆಯಲು 25 ಪಂದ್ಯಗಳನ್ನು ತೆಗೆದುಕೊಂಡಿದ್ದರು. ಬುಮ್ರಾ ಈ ಸಾಧನೆಯನ್ನು 23ನೇ ಪಂದ್ಯದಲ್ಲಿ ಮಾಡುವ ಅವಕಾಶ ಹೊಂದಿದ್ದಾರೆ. ಇದರ ಜೊತೆಗೆ ಬುಮ್ರಾ ಅವರು ಮನೋಜ್ ಪ್ರಭಾಕರ್ (96 ವಿಕೆಟ್) ಮತ್ತು ವೆಂಕಟೇಶ್ ಪ್ರಸಾದ್ (95) ದಾಖಲೆಯನ್ನೂ ಮುರಿಯಲಿದ್ದಾರೆ.

 

ಕೊಹ್ಲಿಗೆ ಬೇಕು 63 ರನ್:

ವಿರಾಟ್ ಕೊಹ್ಲಿ ಮೂರನೇ ಟೆಸ್ಟ್​ನಲ್ಲಿ 63 ರನ್ ಗಳಿಸಿದರೆ 23,000 ಅಂತರರಾಷ್ಟ್ರೀಯ ರನ್‌ಗಳನ್ನು ಪೂರೈಸಿದ ಸಾಧನೆ ಮಾಡಲಿದ್ದಾರೆ. ಒಟ್ಟು 437 ಅಂತರರಾಷ್ಟ್ರೀಯ ಪಂದ್ಯಗಳನ್ನಾಡಿರುವ ಕಿಂಗ್ ಕೊಹ್ಲಿ ಈವರೆಗೆ 22,937 ಅಂತರರಾಷ್ಟ್ರೀಯ ರನ್ ಬಾರಿಸಿದ್ದಾರೆ. ಈ ಮೂಲಕ ಅಂತರರಾಷ್ಟ್ರೀಯ ಕ್ರಿಕೆಟ್​ನಲ್ಲಿ ಭಾರತ ಪರ ಅತಿ ಹೆಚ್ಚು ರನ್ ಕಲೆಹಾಕಿದ ಮೂರನೇ ಬ್ಯಾಟ್ಸ್​ಮನ್​ ಕೊಹ್ಲಿ ಆಗಲಿದ್ದಾರೆ. ಸದ್ಯ ಈ ಸಾಲಿನಲ್ಲಿ ಮೊದಲನೆಯವರಾಗಿ ಸಚಿನ್ ತೆಂಡೂಲ್ಕರ್ (34,357) ಮತ್ತು ಎರಡನೇ ಸ್ಥಾನದಲ್ಲಿ ರಾಹುಲ್ ದ್ರಾವಿಡ್ (24,208) ಇದ್ದಾರೆ.

ಪಂತ್​ ಸಿಡಿಸಬೇಕು 2 ಸಿಕ್ಸರ್:

ಇನ್ನೂ ಸ್ಫೋಟಕ ಬ್ಯಾಟ್ಸ್​ಮನ್​ ರಿಷಭ್ ಪಂತ್ 2018ರಲ್ಲಿ 16 ಟೆಸ್ಟ್ ಸಿಕ್ಸರ್ ಬಾರಿಸುವ ಮೂಲಕ ನೂತನ ದಾಖಲೆಯನ್ನು ನಿರ್ಮಿಸಿದ್ದರು. ವರ್ಷವೊಂದರಲ್ಲಿ ಅತಿ ಹೆಚ್ಚು ಟೆಸ್ಟ್ ಸಿಕ್ಸರ್ ಬಾರಿಸಿದ ಭಾರತದ ವಿಕೆಟ್ ಕೀಪರ್ ಎಂಬ ಹೊಸ ಮೈಲಿಗಲ್ಲನ್ನು ರಿಷಭ್ ಪಂತ್ ನಿರ್ಮಿಸಿದ್ದರು. ಸದ್ಯ ಈ ವರ್ಷ 15 ಸಿಕ್ಸರ್ ಬಾರಿಸಿರುವ ಪಂತ್ ಇನ್ನೆರಡು ಸಿಕ್ಸರ್ ಬಾರಿಸಿದರೆ 2018ರಲ್ಲಿ ತಾನು ನಿರ್ಮಿಸಿದ ತನ್ನದೇ ದಾಖಲೆಯನ್ನು ಮುರಿದು ಹಾಕಲಿದ್ದಾರೆ.

Virat Kohli: ಹೊಸ ಮೈಲಿಗಲ್ಲಿನತ್ತ ವಿರಾಟ್ ಕೊಹ್ಲಿ, ತನ್ನದೇ ದಾಖಲೆ ಅಳಿಸಿ ಹಾಕಲಿರುವ ರಿಷಭ್ ಪಂತ್

India vs England 3rd Test: ಆಗಸ್ಟ್ 25 ರಿಂದ ಭಾರತ- ಇಂಗ್ಲೆಂಡ್ ಮೂರನೇ ಟೆಸ್ಟ್: ಎಲ್ಲಿ?, ಎಷ್ಟು ಗಂಟೆಗೆ ಆರಂಭ?, ಇಲ್ಲಿದೆ ಮಾಹಿತಿ

(India vs England Jasprit Bumrah can break Kapil Dev record Just five wickets away to take 100 Test wickets)