AFG vs PAK: ಪ್ರಯಾಣದ ಸಮಸ್ಯೆ: ಅಫ್ಘಾನಿಸ್ತಾನ-ಪಾಕಿಸ್ತಾನ ಏಕದಿನ ಸರಣಿ ಶ್ರೀಲಂಕಾದಿಂದ ಸ್ಥಳಾಂತರ

ಪಾಕಿಸ್ತಾನ ವಿರುದ್ಧ ಅಫ್ಘಾನಿಸ್ತಾನ್‌ ಕ್ರಿಕೆಟ್ ತಂಡ ಮೂರು ಪಂದ್ಯಗಳ ಏಕದಿನ ಸರಣಿಯನ್ನು ಶ್ರೀಲಂಕಾದ ಹಂಬನ್‌ತೋಟದಲ್ಲಿ ಆಯೋಜಿಸಲಾಗಿತ್ತು. ಆದರೆ, ಈ ಏಕದಿನ ಸರಣಿಯನ್ನು ಸದ್ಯ ಲಂಕಾದಿಂದ ಪಾಕಿಸ್ತಾನಕ್ಕೆ ಸ್ಥಳಾಂತರವಾಗಿದೆ.

AFG vs PAK: ಪ್ರಯಾಣದ ಸಮಸ್ಯೆ: ಅಫ್ಘಾನಿಸ್ತಾನ-ಪಾಕಿಸ್ತಾನ ಏಕದಿನ ಸರಣಿ ಶ್ರೀಲಂಕಾದಿಂದ ಸ್ಥಳಾಂತರ
AFG vs PAK
Follow us
TV9 Web
| Updated By: Vinay Bhat

Updated on: Aug 24, 2021 | 10:57 AM

ಸಿಂಹಳೀಯರ ನಾಡು ಶ್ರೀಲಂಕಾದ (Sri Lanka) ಹಂಬನ್ ತೋಟ ಮೈದಾನದಲ್ಲಿ ನಡೆಯಬೇಕಿದ್ದ ಅಫ್ಘಾನಿಸ್ತಾನ ಮತ್ತು ಪಾಕಿಸ್ತಾನ (Afghanistan vs Pakistan) ನಡುವಿನ ಏಕದಿನ ಸರಣಿ ಇದೀಗ ದಿಢೀರ್ ಪಾಕಿಸ್ಥಾನಕ್ಕೆ ಸ್ಥಳಾಂತರವಾಗಿದೆ. ಈ ಬಗ್ಗೆ ಅಫ್ಘಾನಿಸ್ತಾನ ಕ್ರಿಕೆಟ್ ಮಂಡಳಿ (ACB) ಸಿಇಒ ಹಮೀದ್ ಶಿನ್ವಾರಿ ಖಚಿತ ಪಡಿಸಿದ್ದು, ಈರೀತಿ ಆಗಲು ಅಫ್ಘಾನಿಸ್ತಾನ ತಂಡದ ಪ್ರಯಾಣ ಸಮಸ್ಯೆಯೇ ಕಾರಣ ಎಂದು ಹೇಳಲಾಗಿದೆ.

ಪಾಕಿಸ್ತಾನ ವಿರುದ್ಧ ಅಫ್ಘಾನಿಸ್ತಾನ್‌ ಕ್ರಿಕೆಟ್ ತಂಡ ಮೂರು ಪಂದ್ಯಗಳ ಏಕದಿನ ಸರಣಿಯನ್ನು ಶ್ರೀಲಂಕಾದ ಹಂಬನ್‌ತೋಟದಲ್ಲಿ ಆಯೋಜಿಸಲಾಗಿತ್ತು. ಆದರೆ, ಈ ಏಕದಿನ ಸರಣಿಯನ್ನು ಸದ್ಯ ಲಂಕಾದಿಂದ ಪಾಕಿಸ್ತಾನಕ್ಕೆ ಸ್ಥಳಾಂತರವಾಗಿದೆ. ಅಫ್ಘಾನಿಸ್ತಾನ ತಂಡ ಶ್ರೀಲಂಕಾಕ್ಕೆ ತೆರಳುವುದು ಪ್ರಯಾಣದ ದೃಷ್ಟಿಯಲ್ಲಿ ಸವಾಲಿನದ್ದಾಗಿರುವುದರಿಂದ ಏಕದಿನ ಸರಣಿ ಸ್ಥಳಾಂತರವಾಗಿದೆ ಎಂದು ತಿಳಿದು ಬಂದಿದೆ.

ತಾಲಿಬಾನ್ ದೇಶವನ್ನು ಸ್ವಾಧೀನಪಡಿಸಿಕೊಂಡ ನಂತರ ಕಾಬೂಲ್‌ನಿಂದ ಯಾವುದೇ ವಾಣಿಜ್ಯ ವಿಮಾನಗಳು ಹಾರಡುತ್ತಿಲ್ಲ. ಅದಲ್ಲದೆ ಶ್ರೀಲಂಕಾ ಶುಕ್ರವಾರ 10 ದಿನಗಳ ಲಾಕ್‌ಡೌನ್ ಘೋಷಿಸಿದೆ. ಆಗಸ್ಟ್ 20 ಶ್ರೀಲಂಕಾದಲ್ಲಿ ಒಂದೇ ದಿನ 3,793 ಹೊಸ ಕೋವಿಡ್ ಪ್ರಕರಣಗಳು ಕಾಣಿಸಿಕೊಂಡಿದ್ದವು. ಒಂದೇ ದಿನದಲ್ಲಿ ಲಂಕಾದಲ್ಲಿ ದಾಖಲಾದ ದೊಡ್ಡ ಸಂಖ್ಯೆಯ ಕೋವಿಡ್ ಪ್ರಕರಣಗಳಿವು. ಅಲ್ಲದೆ ಒಂದೇ ದಿನ 187 ಜನ ಸಾವನ್ನಪ್ಪಿದ್ದರು.

ಈ ಎಲ್ಲ ಕಾರಣಕ್ಕೆ ಪಾಕಿಸ್ತಾನ – ಅಫ್ಘಾನಿಸ್ತಾನ ಎರಡೂ ತಂಡಗಳ ಮೂರು ಏಕದಿನ ಸರಣಿಯನ್ನು ಪಾಕ್​ಗೆ ಸ್ಥಳಾಂತರಿಸಲಾಗಿದೆ. ಹೀಗಾಗಿ ಅಫ್ಘಾನಿಸ್ತಾನ ತಂಡವು ಈ ವಾರದ ಕೊನೆಯಲ್ಲಿ ಪಾಕಿಸ್ತಾನಕ್ಕೆ ಪ್ರಯಾಣ ಬೆಳೆಸಲಿದೆ. ಆದರೆ, ಸೆಪ್ಟೆಂಬರ್ 3 ರಿಂದ ಆರಂಭವಾಗಲಿರುವ ಏಕದಿನ ಪಂದ್ಯಗಳು ಸ್ಥಳವನ್ನು ಇನ್ನೂ ಘೋಷಿಸಿಲ್ಲ.

ಎರಡು ದಿನಗಳ ಹಿಂದೆಯಷ್ಟೆ ಮಹತ್ವದ ಬೆಳವಣಿಗೆಯಲ್ಲಿ ಅಜೀಜುಲ್ಲಾ ಫಜ್ಲಿಯನ್ನು ಅಫ್ಘಾನಿಸ್ತಾನ ಕ್ರಿಕೆಟ್ ಮಂಡಳಿಯ (ಎಸಿಬಿ) ಹೊಸ ಅಧ್ಯಕ್ಷರನ್ನಾಗಿ ಮರು ನೇಮಿಸಲಾಯಿತು. ಫಜ್ಲಿ ಈಗಾಗಲೇ ಎಸಿಬಿ ಅಧ್ಯಕ್ಷರಾಗಿ ಒಂದು ಅವಧಿಗೆ ಸೇವೆ ಸಲ್ಲಿಸಿದ್ದಾರೆ. ಇಂಗ್ಲೆಂಡ್‌ನಲ್ಲಿ 2019 ರ ವಿಶ್ವಕಪ್‌ನಲ್ಲಿ ಅಫ್ಘಾನಿಸ್ತಾನದ ಕೊನೆಯ ಸ್ಥಾನವನ್ನು ಪಡೆದ ನಂತರ ಫಜ್ಲಿ ಬದಲಿಗೆ ಫರ್ಹಾನ್ ಯೂಸುಫ್‌ಜೈ ನೇಮಕ ಮಾಡಲಾಗಿತ್ತು.

IPL 2021: ಅಭ್ಯಾಸದ ವೇಳೆ ಎಂ. ಎಸ್. ಧೋನಿಯಿಂದ ಸಿಕ್ಸರ್​ಗಳ ಸುರಿಮಳೆ: ಇಲ್ಲಿದೆ ವಿಡಿಯೋ

Jasprit Bumrah: ಕ್ರಿಕೆಟ್ ದಿಗ್ಗಜ ಕಪಿಲ್ ದೇವ್ ದಾಖಲೆ ಮುರಿಯುವ ಸನಿಹದಲ್ಲಿ ಜಸ್​ಪ್ರೀತ್ ಬುಮ್ರಾ

(Afghanistan vs Pakistan ODI series postponed due to disruption of flight operations in Kabul)