Jasprit Bumrah: ಕ್ರಿಕೆಟ್ ದಿಗ್ಗಜ ಕಪಿಲ್ ದೇವ್ ದಾಖಲೆ ಮುರಿಯುವ ಸನಿಹದಲ್ಲಿ ಜಸ್ಪ್ರೀತ್ ಬುಮ್ರಾ
India vs England 3rd Test: ಟೆಸ್ಟ್ ಕ್ರಿಕೆಟ್ನಲ್ಲಿ ಬುಮ್ರಾ ಈವರೆಗೆ ಆಡಿರುವ 22 ಪಂದ್ಯಗಳಲ್ಲಿ ಬರೋಬ್ಬರಿ 95 ವಿಕೆಟ್ ಕಿತ್ತಿದ್ದಾರೆ. ಇನ್ನು ಕೇವಲ 5 ವಿಕೆಟ್ ಪಡೆದರೆ ಬುಮ್ರಾ 100 ವಿಕೆಟ್ ಕಿತ್ತ ಸಾಧನೆ ಮಾಡಲಿದ್ದಾರೆ.
ಇಂಗ್ಲೆಂಡ್ ವಿರುದ್ಧ ಲಾರ್ಡ್ಸ್ ಟೆಸ್ಟ್ನಲ್ಲಿ ಐತಿಹಾಸಿಕ ಗೆಲುವು ದಾಖಲಿಸಿ ಸರಣಿಯಲ್ಲಿ ಮುನ್ನಡೆ ಸಾಧಿಸಿರುವ ಭಾರತ (Team India) ತಂಡ ಸದ್ಯ ಮೂರನೇ ಟೆಸ್ಟ್ ಪಂದ್ಯಕ್ಕೆ ಸಜ್ಜಾಗುತ್ತಿದೆ. ಆಗಸ್ಟ್ 25 ಬುಧವಾರದಿಂದ ಲೀಡ್ಸ್ನ ಹೆಡಿಂಗ್ಲೆ ಕ್ರೀಡಾಂಗಣದಲ್ಲಿ ಕುತೂಹಲಕಾರಿ ಕದನ ಆರಂಭವಾಗಲಿದೆ. ಈ ಪಂದ್ಯದಲ್ಲಿ ಕೆಲವು ದಾಖಲೆಗಳು ನಿರ್ಮಾಣವಾಗುವುದರಲ್ಲಿದೆ. ಪ್ರಮುಖವಾಗಿ ಟೀಮ್ ಇಂಡಿಯಾ ವೇಗಿ ಜಸ್ಪ್ರೀತ್ ಬುಮ್ರಾ (Jasprit Bumrah) ನೂತನ ಸಾಧನೆಯ ಹೊಸ್ತಿಲಲ್ಲಿದ್ದಾರೆ. ಕ್ರಿಕೆಟ್ ದಿಗ್ಗಜ ಕಪಿಲ್ ದೇವವ್ (Kapil Dev) ಅವರ ದಾಖಲೆ ಪುಡಿಪುಡಿ ಮಾಡಲಿದ್ದಾರೆ ಯಾರ್ಕರ್ ಕಿಂಗ್.
ಟೆಸ್ಟ್ ಕ್ರಿಕೆಟ್ನಲ್ಲಿ ಬುಮ್ರಾ ಈವರೆಗೆ ಆಡಿರುವ 22 ಪಂದ್ಯಗಳಲ್ಲಿ ಬರೋಬ್ಬರಿ 95 ವಿಕೆಟ್ ಕಿತ್ತಿದ್ದಾರೆ. ಇನ್ನು ಕೇವಲ 5 ವಿಕೆಟ್ ಪಡೆದರೆ ಬುಮ್ರಾ 100 ವಿಕೆಟ್ ಕಿತ್ತ ಸಾಧನೆ ಮಾಡಲಿದ್ದಾರೆ. ಈ ಮೂಲಕ ಮೂರನೇ ಟೆಸ್ಟ್ನಲ್ಲಿ ಬುಮ್ರಾ ಈ ಸಾಧನೆ ಮಾಡಿದ್ದೇ ಆದಲ್ಲಿ ಕಪಿಲ್ ದೇವ್ ದಾಖಲೆ ಹಿಂದಿಕ್ಕಿ ಟೀಮ್ ಇಂಡಿಯಾ ಪರ ಅತಿ ವೇಗವಾಗಿ ನೂರು ವಿಕೆಟ್ ಕಿತ್ತ ವೇಗಿ ಎಂಬ ನೂತನ ದಾಖಲೆ ಮಾಡಲಿದ್ದಾರೆ.
ಕಪಿಲ್ ದೇವ್ ಟೆಸ್ಟ್ ಕ್ರಿಕೆಟ್ನಲ್ಲಿ 100 ವಿಕೆಟ್ ಪಡೆಯಲು 25 ಪಂದ್ಯಗಳನ್ನು ತೆಗೆದುಕೊಂಡಿದ್ದರು. ಬುಮ್ರಾ ಈ ಸಾಧನೆಯನ್ನು 23ನೇ ಪಂದ್ಯದಲ್ಲಿ ಮಾಡುವ ಅವಕಾಶ ಹೊಂದಿದ್ದಾರೆ. ಇದರ ಜೊತೆಗೆ ಬುಮ್ರಾ ಅವರು ಮನೋಜ್ ಪ್ರಭಾಕರ್ (96 ವಿಕೆಟ್) ಮತ್ತು ವೆಂಕಟೇಶ್ ಪ್ರಸಾದ್ (95) ದಾಖಲೆಯನ್ನೂ ಮುರಿಯಲಿದ್ದಾರೆ.
View this post on Instagram
ಕೊಹ್ಲಿಗೆ ಬೇಕು 63 ರನ್:
ವಿರಾಟ್ ಕೊಹ್ಲಿ ಮೂರನೇ ಟೆಸ್ಟ್ನಲ್ಲಿ 63 ರನ್ ಗಳಿಸಿದರೆ 23,000 ಅಂತರರಾಷ್ಟ್ರೀಯ ರನ್‌ಗಳನ್ನು ಪೂರೈಸಿದ ಸಾಧನೆ ಮಾಡಲಿದ್ದಾರೆ. ಒಟ್ಟು 437 ಅಂತರರಾಷ್ಟ್ರೀಯ ಪಂದ್ಯಗಳನ್ನಾಡಿರುವ ಕಿಂಗ್ ಕೊಹ್ಲಿ ಈವರೆಗೆ 22,937 ಅಂತರರಾಷ್ಟ್ರೀಯ ರನ್ ಬಾರಿಸಿದ್ದಾರೆ. ಈ ಮೂಲಕ ಅಂತರರಾಷ್ಟ್ರೀಯ ಕ್ರಿಕೆಟ್ನಲ್ಲಿ ಭಾರತ ಪರ ಅತಿ ಹೆಚ್ಚು ರನ್ ಕಲೆಹಾಕಿದ ಮೂರನೇ ಬ್ಯಾಟ್ಸ್ಮನ್ ಕೊಹ್ಲಿ ಆಗಲಿದ್ದಾರೆ. ಸದ್ಯ ಈ ಸಾಲಿನಲ್ಲಿ ಮೊದಲನೆಯವರಾಗಿ ಸಚಿನ್ ತೆಂಡೂಲ್ಕರ್ (34,357) ಮತ್ತು ಎರಡನೇ ಸ್ಥಾನದಲ್ಲಿ ರಾಹುಲ್ ದ್ರಾವಿಡ್ (24,208) ಇದ್ದಾರೆ.
ಪಂತ್ ಸಿಡಿಸಬೇಕು 2 ಸಿಕ್ಸರ್:
ಇನ್ನೂ ಸ್ಫೋಟಕ ಬ್ಯಾಟ್ಸ್ಮನ್ ರಿಷಭ್ ಪಂತ್ 2018ರಲ್ಲಿ 16 ಟೆಸ್ಟ್ ಸಿಕ್ಸರ್ ಬಾರಿಸುವ ಮೂಲಕ ನೂತನ ದಾಖಲೆಯನ್ನು ನಿರ್ಮಿಸಿದ್ದರು. ವರ್ಷವೊಂದರಲ್ಲಿ ಅತಿ ಹೆಚ್ಚು ಟೆಸ್ಟ್ ಸಿಕ್ಸರ್ ಬಾರಿಸಿದ ಭಾರತದ ವಿಕೆಟ್ ಕೀಪರ್ ಎಂಬ ಹೊಸ ಮೈಲಿಗಲ್ಲನ್ನು ರಿಷಭ್ ಪಂತ್ ನಿರ್ಮಿಸಿದ್ದರು. ಸದ್ಯ ಈ ವರ್ಷ 15 ಸಿಕ್ಸರ್ ಬಾರಿಸಿರುವ ಪಂತ್ ಇನ್ನೆರಡು ಸಿಕ್ಸರ್ ಬಾರಿಸಿದರೆ 2018ರಲ್ಲಿ ತಾನು ನಿರ್ಮಿಸಿದ ತನ್ನದೇ ದಾಖಲೆಯನ್ನು ಮುರಿದು ಹಾಕಲಿದ್ದಾರೆ.
Virat Kohli: ಹೊಸ ಮೈಲಿಗಲ್ಲಿನತ್ತ ವಿರಾಟ್ ಕೊಹ್ಲಿ, ತನ್ನದೇ ದಾಖಲೆ ಅಳಿಸಿ ಹಾಕಲಿರುವ ರಿಷಭ್ ಪಂತ್
(India vs England Jasprit Bumrah can break Kapil Dev record Just five wickets away to take 100 Test wickets)