IPL 2021: ಅಭ್ಯಾಸದ ವೇಳೆ ಎಂ. ಎಸ್. ಧೋನಿಯಿಂದ ಸಿಕ್ಸರ್​ಗಳ ಸುರಿಮಳೆ: ಇಲ್ಲಿದೆ ವಿಡಿಯೋ

CSK 2021: ಧೋನಿ ಜೊತೆ ಸುರೇಶ್ ರೈನಾ ಕೂಡ ಭರ್ಜರಿ ಬ್ಯಾಟಿಂಗ್ ಅಭ್ಯಾಸ ನಡೆಸುತ್ತಿದ್ದು ಹೈವೋಲ್ಟೇಜ್ ಟೂರ್ನಿಗೆ ಸಂಪೂರ್ಣ ಸಜ್ಜಾಗುತ್ತಿದ್ದಾರೆ.

IPL 2021: ಅಭ್ಯಾಸದ ವೇಳೆ ಎಂ. ಎಸ್. ಧೋನಿಯಿಂದ ಸಿಕ್ಸರ್​ಗಳ ಸುರಿಮಳೆ: ಇಲ್ಲಿದೆ ವಿಡಿಯೋ
MS Dhoni
Follow us
TV9 Web
| Updated By: Vinay Bhat

Updated on: Aug 24, 2021 | 10:01 AM

ಮುಂದಿನ ತಿಂಗಳು ಸೆಪ್ಟೆಂಬರ್ 19 ರಿಂದ ಯುಎಇ ()UAEನಲ್ಲಿ ಆರಂಭವಾಗಲಿರುವ ಇಂಡಿಯನ್ ಪ್ರೀಮಿಯರ್ ಲೀಗ್ (IPL 2021) ಎರಡನೇ ಚರಣಕ್ಕೆ ಚೆನ್ನೈ ಸೂಪರ್ ಕಿಂಗ್ಸ್ (CSK) ತಂಡದ ಆಟಗಾರರು ಭರ್ಜರಿ ಅಭ್ಯಾಸದಲ್ಲಿ ನಿರತರಾಗಿದ್ದಾರೆ. ಅದರಲ್ಲೂ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ (MS Dhoni) ನೆಟ್​ನಲ್ಲಿ ಬೆವರು ಹರಿಸುತ್ತಿದ್ದು, ಬೌಂಡರಿ-ಸಿಕ್ಸರ್​ಗಳ ಮಳೆ ಸುರಿಸುತ್ತಿದ್ದಾರೆ. ಸಿಎಸ್​ಕೆ ತನ್ನ ಟ್ವಿಟ್ಟರ್ ಖಾತೆಯಲ್ಲಿ ಧೋನಿಯ ಅಬ್ಬರದ ಬ್ಯಾಟಿಂಗ್ ವಿಡಿಯೋವನ್ನು ಹಂಚಿಕೊಂಡಿದ್ದು, ವೈರಲ್ ಆಗುತ್ತಿದೆ.

ಎಲ್ಲರಿಗಿಂತ ಮೊದಲೇ ಐಪಿಎಲ್‌ ಭಾಗ-2ಕ್ಕೆ ಸಿದ್ದತೆ ನಡೆಸುತ್ತಿರುವ ಧೋನಿ ತಂಡವು ಒಟ್ಟಾಗಿ ಮೈದಾನಕ್ಕಿಳಿದಿದೆ. ಧೋನಿ ಬ್ಯಾಟ್‌ ಹಿಡಿದು ಮೈದಾನಕ್ಕಿಳಿದ ಫೋಟೋಗಳು ಹಾಗೂ ಇತರ ಆಟಗಾರರೊಂದಿಗೆ ಸಮಾಲೋಚಿಸುತ್ತಿರುವ ಫೋಟೋಗಳು ಇತ್ತೀಚೆಗಷ್ಟೆ ವೈರಲ್ ಆಗಿತ್ತು. ಅಲ್ಲದೆ ಯುವ ಆಟಗಾರರಿಗೆ ಧೋನಿ ಬ್ಯಾಟಿಂಗ್ ಟ್ರಿಕ್ಸ್ ಹೇಳಿಕೊಡುತ್ತಿದ್ದಾರೆ.

ಧೋನಿ ಜೊತೆ ಸುರೇಶ್ ರೈನಾ ಕೂಡ ಭರ್ಜರಿ ಬ್ಯಾಟಿಂಗ್ ಅಭ್ಯಾಸ ನಡೆಸುತ್ತಿದ್ದು ಹೈವೋಲ್ಟೇಜ್ ಟೂರ್ನಿಗೆ ಸಂಪೂರ್ಣ ಸಜ್ಜಾಗುತ್ತಿದ್ದಾರೆ. ಇವರ ಜೊತೆ ರಾಬಿನ್ ಉತ್ತಪ್ಪ, ದೀಪಕ್ ಚಾಹರ್, ಋತುರಾಜ್ ಗಾಯಕ್ವಾಡ್ ಮುಂತಾದವರು ದುಬೈನ ಐಸಿಸಿ ಕ್ರಿಕೆಟ್ ಅಕಾಡಮೆ ಮೈದಾನದಲ್ಲಿ ಅಭ್ಯಾಸದಲ್ಲಿ ತೊಡಗಿದರು.

ಈ ಬಾರಿ ಚೆನ್ನೈ ಸೂಪರ್ ಕಿಂಗ್ಸ್‌ 7 ಪಂದ್ಯಗಳನ್ನಾಡಿ 5 ಗೆಲುವು ಹಾಗೂ 2 ಸೋಲಿನೊಂದಿಗೆ 10 ಅಂಕಗಳ ಸಹಿತ ಅಂಕಪಟ್ಟಿಯಲ್ಲಿ 2ನೇ ಸ್ಥಾನದಲ್ಲಿದ್ದು, ಐಪಿಎಲ್‌ ಟ್ರೋಫಿ ಮೇಲೆ ಕಣ್ಣಿಟ್ಟಿದೆ. ಕಳೆದ ಮೇ ತಿಂಗಳಿನಲ್ಲಿ ಟೂರ್ನಿಯ ಮಧ್ಯ ಭಾಗದಲ್ಲಿದ್ದಾಗ ಕೊರೊನಾ ವೈರಸ್‌ನ ಕಾರಣದಿಂದಾಗಿ ಮುಂದೂಡಲ್ಪಟ್ಟಿತ್ತು. ಹೀಗಾಗಿ ಟೂರ್ನಮೆಂಟ್‌ನ ಉಳಿದ ಪಂದ್ಯಗಳನ್ನು ಯುಎಇನಲ್ಲಿ ಸೆಪ್ಟೆಂಬರ್ 19ರಿಂದ ಆಯೋಜನೆ ಮಾಡಲು ನಿರ್ಧರಿಸಲಾಗಿದೆ. ಎರಡನೇ ಚರಣದ ಈ ಪಂದ್ಯಾವಳಿ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಮುಂಬೈ ಇಂಡಿಯನ್ಸ್ ನಡುವಿನ ಕದನದ ಮೂಲಕ ಆರಂಭವಾಗಲಿದೆ.

ಒಟ್ಟು ಮೂರು ತಾಣಗಳಲ್ಲಿ ಇನ್ನುಳಿದ ಪಂದ್ಯಗಳು ನಡೆಯಲಿದೆ. ದುಬೈ, ಅಬುದಾಬಿ ಹಾಗೂ ಶಾರ್ಜಾ ಕ್ರೀಡಾಂಗಣದಲ್ಲಿ ಪಂದ್ಯಗಳು ನಡೆಯುತ್ತವೆ. ಅಬುದಾಬಿಯಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ ಹಾಗೂ ರಾಯಲ್ಸ್ ಚಾಲೆಂಜರ್ಸ್ ಬೆಂಗಳೂರು ತಂಡಗಳು ಪಂದ್ಯಗಳಿಗೆ ಚಾಲನೆ ನೀಡಲಿದೆ. 13 ಪಂದ್ಯಗಳು ದುಬೈ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ಆಯೋಜನೆಯಾದರೆ ಶಾರ್ಜಾ ಕ್ರೀಡಾಂಗಣದಲ್ಲಿ 10 ಪಂದ್ಯಗಳು ನಡೆಯುತ್ತವೆ. 8 ಪಂದ್ಯಗಳಿಗೆ ಅಬುದಾಬಿ ಆತಿಥ್ಯ ವಹಿಸಲಿದೆ.

Jasprit Bumrah: ಕ್ರಿಕೆಟ್ ದಿಗ್ಗಜ ಕಪಿಲ್ ದೇವ್ ದಾಖಲೆ ಮುರಿಯುವ ಸನಿಹದಲ್ಲಿ ಜಸ್​ಪ್ರೀತ್ ಬುಮ್ರಾ

Virat Kohli: ಹೊಸ ಮೈಲಿಗಲ್ಲಿನತ್ತ ವಿರಾಟ್ ಕೊಹ್ಲಿ, ತನ್ನದೇ ದಾಖಲೆ ಅಳಿಸಿ ಹಾಕಲಿರುವ ರಿಷಭ್ ಪಂತ್

(Viral Video IPL 2021 CSK MS Dhoni hits different type of sixes during Net Practice in UAE)