ಲಂಡನ್ನ ಲಾರ್ಡ್ ಕ್ರೀಡಾಂಗಣದಲ್ಲಿ ಸಾಗುತ್ತಿರುವ ಭಾರತ ಹಾಗೂ ಇಂಗ್ಲೆಂಡ್ (India vs Englan) ನಡುವಣ ಎರಡನೇ ಟೆಸ್ಟ್ ಪಂದ್ಯ ಕುತೂಹಲ ಘಟ್ಟದತ್ತ ಸಾಗುತ್ತಿದೆ. ಭಾರತವನ್ನು 364 ರನ್ಗೆ ಆಲೌಟ್ ಮಾಡಿ ತನ್ನ ಮೊದಲ ಇನ್ನಿಂಗ್ಸ್ ಆರಂಭಿಸಿರುವ ಇಂಗ್ಲೆಂಡ್ ತಂಡ ಎರಡನೇ ದಿನದಾಟದ ಅಂತ್ಯಕ್ಕೆ 3 ವಿಕೆಟ್ ಕಳೆದುಕೊಂಡು 119 ರನ್ ಗಳಿಸಿದೆ. ಇನ್ನೂ 245 ರನ್ಗಳ ಹಿನ್ನಡೆಯಲ್ಲಿದೆ. ಪ್ರಮುಖ 3 ವಿಕೆಟ್ ಕಳೆದುಕೊಂಡಿರುವ ಆಂಗ್ಲರಿಗೆ ನಾಯಕ ಜೋ ರೂಟ್ ಆಸರೆಯಾಗಿ ನಿಂತಿದ್ದು ಇಂದಿನ ಮೂರನೇ ದಿನದಾಟ ರೋಚಕತೆ ಸೃಷ್ಟಿಸಿದೆ.
ಭಾರತವನ್ನು ಆಲೌಟ್ ಮಾಡಿ ಇನ್ನಿಂಗ್ಸ್ ಶುರುಮಾಡಿದ ಇಂಗ್ಲೆಂಡ್ಗೆ ಆರಂಭದಲ್ಲೇ ಶಾಕ್ ನೀಡಿದ್ದು ಮೊಹಮ್ಮದ್ ಸಿರಾಜ್. ವಿಕೆಟ್ಗಾಗಿ ಕಾದು ಕುಳಿತಿದ್ದ ಭಾರತಕ್ಕೆ ಸಿರಾಜ್ ಉತ್ತಮ ಬ್ರೇಕ್ ತಂದುಕೊಟ್ಟರು. ಅದರಲ್ಲೂ ತಮ್ಮ ವೇಗದ ಬೌಲಿಂಗ್ ಮೂಲಕ ಬಂದ ಮೊದಲ ಎಸೆತದಲ್ಲೇ ಹಸೀಬ್ ಹಮೀದ್ ಅವರನ್ನು ಕ್ಲೀನ್ ಬೌಲ್ಡ್ ಮಾಡಿದ್ದು ಎಲ್ಲರ ಹುಬ್ಬೇರುವಂತೆ ಮಾಡಿತು.
14ನೇ ಓವರ್ನ ತನ್ನ ಎರಡನೇ ಎಸೆತದಲ್ಲಿ ಸಿರಾಜ್ ಅವರು 11 ರನ್ ಗಳಿಸಿದ್ದ ಡಾಮಿನಿಕ್ ಸಿಬ್ಲಿ ಅವರನ್ನು ಪೆವಿಲಿಯನ್ಗೆ ಅಟ್ಟಿದರು. ಇದಾದ ಮುಂದಿನ ಎಸೆತದಲ್ಲೇ ಹಸೀಬ್ ಹಮೀದ್ರನ್ನು ಕ್ಲೀನ್ ಬೌಲ್ಡ್ ಮಾಡಿ ಪರಾಕ್ರಮ ಮೆರೆದರು. ಆದರೆ, ಹ್ಯಾಟ್ರಿಕ್ ವಿಕೆಟ್ ಕೀಳಲು ಸಾಧ್ಯವಾಗಲಿಲ್ಲ.
Siraj takes 2 in 2 and it brings our captain to the crease.
Scorecard/Clips: https://t.co/GW3VJ3wfDv
??????? #ENGvIND ?? | #RedForRuth pic.twitter.com/Qeo8wjGrsC
— England Cricket (@englandcricket) August 13, 2021
ಸದ್ಯ ಇಂಗ್ಲೆಂಡ್ ಎರಡನೇ ದಿನದಾಟದ ಅಂತ್ಯಕ್ಕೆ 3 ವಿಕೆಟ್ ಕಳೆದುಕೊಂಡು 119 ರನ್ ಗಳಿಸಿದೆ. ನಾಯಕ ಜೋ ರೂಟ್ 48 ರನ್ ಹಾಗೂ ಜಾನಿ ಬೈರ್ಸ್ಟೋ 6 ರನ್ ಗಳಿಸಿ ಕ್ರೀಸ್ನಲ್ಲಿದ್ದಾರೆ.
ಇದಕ್ಕೂ ಮುನ್ನ ಭಾರತಕ್ಕೆ ಆರಂಭಿಕರಾದ ರೋಹಿತ್ ಶರ್ಮಾ (83) ಮತ್ತು ಕೆ. ಎಲ್ ರಾಹುಲ್ 126 ರನ್ಗಳ ಜೊತೆಯಾಟದ ಕಾಣಿಕೆ ನೀಡಿದ್ದು ಬಿಟ್ಟರೆ ಮತ್ಯಾವ ಬ್ಯಾಟ್ಸ್ಮನ್ಗಳಿಂದ ಹೇಳಿಕೊಳ್ಳುವಂತಹ ಪ್ರದರ್ಶನ ಬರಲೇಯಿಲ್ಲ. ರಾಹುಲ್ 250 ಎಸೆತಗಳಲ್ಲಿ 12 ಬೌಂಡರಿ, 1 ಸಿಕ್ಸರ್ ಮೂಲಕ 129 ರನ್ಗೆ ಇನ್ನಿಂಗ್ಸ್ ಅಂತ್ಯಗೊಳಿಸಿದರೆ, ರಹಾನೆ ಆಟ 1 ರನ್ಗೆ ಸೀಮಿತವಾಯಿತು. ರವೀಂದ್ರ ಜಡೇಜಾ 40 ರನ್ ಹಾಗೂ ರಿಷಭ್ ಪಂತ್ 37 ರನ್ ಗಳಿಸಿ ತಂಡಕ್ಕೆ ಕೆಲ ಸಮಯ ಆಸರೆಯಾದರು.
ಇಶಾಂತ್ ಶರ್ಮಾ 8, ಮೊಹಮ್ಮದ್ ಶಮಿ ಮತ್ತು ಜಸ್ಪ್ರೀತ್ ಬುಮ್ರಾ ಸೊನ್ನೆ ಸುತ್ತುವ ಮೂಲಕ ಭಾರತ 364 ರನ್ಗೆ ಆಲೌಟ್ ಆಯಿತು. ಇಂಗ್ಲೆಂಡ್ ಪರ ಜೇಮ್ಸ್ ಆಂಡರ್ಸನ್ 5 ವಿಕೆಟ್ ಕಿತ್ತು ಮಿಂಚಿದರು.
IND vs ENG: ಸ್ವಾತಂತ್ರ್ಯ ದಿನದಂದೇ ಸಿಗುತ್ತಾ ಗೆಲುವು? ಪ್ರಶ್ನೆಗೆ ರೋಹಿತ್ ಶರ್ಮಾ ಕೊಟ್ಟ ಉತ್ತರವೇನು ಗೊತ್ತಾ?
IPL 2021: ಐಪಿಎಲ್ ಫೀವರ್ ಶುರು: ದುಬೈ ತಲುಪಿದ ಧೋನಿ ಸೈನ್ಯ: ಇಲ್ಲಿದೆ ಫೋಟೋಗಳು
(Mohammed Siraj sends Haseeb Hameed back to the pavilion misses hat-trick Watch Video)