IND vs ENG: ಸ್ವಾತಂತ್ರ್ಯ ದಿನದಂದೇ ಸಿಗುತ್ತಾ ಗೆಲುವು? ಪ್ರಶ್ನೆಗೆ ರೋಹಿತ್ ಶರ್ಮಾ ಕೊಟ್ಟ ಉತ್ತರವೇನು ಗೊತ್ತಾ?
Rohit Sharma: ಪತ್ರಿಕಾಗೋಷ್ಠಿಯಲ್ಲಿ ಪತ್ರಕರ್ತ ಕೇಳಿದ ಪ್ರಶ್ನೆಗೆ ರೋಹಿತ್ ಶರ್ಮಾ ನೀಡಿದ ಉತ್ತರದ ವಿಡಿಯೋ ಸಖತ್ ವೈರಲ್ ಆಗುತ್ತಿದೆ.
ಕ್ರಿಕೆಟ್ ಕಾಶಿ ಲಾರ್ಡ್ (Lords) ಮೈದಾನದಲ್ಲಿ ಸಾಗುತ್ತಿರುವ ಇಂಗ್ಲೆಂಡ್ (England) ವಿರುದ್ಧದ ಎರಡನೇ ಟೆಸ್ಟ್ ಪಂದ್ಯದಲ್ಲಿ ಭಾರತ (India) ತಂಡ ಹಿಡಿತ ಕಂಡುಕೊಂಡಿದೆ. 364 ರನ್ಗಳಿಗೆ ಆಲೌಟ್ ಆದ ಬಳಿಕ ಬೌಲಿಂಗ್ ಶುರು ಮಾಡಿರುವ ಟೀಮ್ ಇಂಡಿಯಾ ಆಂಗ್ಲರ ಮೂರು ವಿಕೆಟ್ ಕಿತ್ತು ಮೂರನೇ ದಿನದ ಸವಾಲಿಗೆ ಸಜ್ಜಾಗಿದೆ. ಇಂಗ್ಲೆಂಡ್ ತಂಡಕ್ಕೆ ನಾಯಕ ಜೋ ರೂಟ್ ಆಸರೆಯಾಗಿ ನಿಂತಿದ್ದು, ಈ ವಿಕೆಟ್ ಕೊಹ್ಲಿ ಪಡೆಗೆ ಪ್ರಮುಖವಾಗಿದೆ. ಹೀಗಾಗಿ ಶನಿವಾರದ ಆಟದ ಮೇಲೆ ಎಲ್ಲರು ಚಿತ್ತ ನೆಟ್ಟಿದೆ. ಭಾನುವಾರ ಸ್ವಾತಂತ್ರ್ಯ ದಿನವಾಗಿರುವುದರಿಂದ (Independence Day) ಆ ದಿನವೇ ಭಾರತ ಗೆಲುವನ್ನು ಎದುರುನೋಡುತ್ತಿದೆ.
ಇದರ ನಡುವೆ ಪತ್ರಿಕಾಗೋಷ್ಠಿಯಲ್ಲಿ ಪತ್ರಕರ್ತ ಕೇಳಿದ ಪ್ರಶ್ನೆಗೆ ರೋಹಿತ್ ಶರ್ಮಾ ನೀಡಿದ ಉತ್ತರದ ವಿಡಿಯೋ ಸಖತ್ ವೈರಲ್ ಆಗುತ್ತಿದೆ. ದಿನದಾಟ ಮುಗಿದ ಬಳಿಕ ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದಾಗ ಪತ್ರಕರ್ತರೊಬ್ಬರು, ಎರಡನೇ ಟೆಸ್ಟ್ ಪಂದ್ಯದಲ್ಲಿ 4ನೇ ದಿನವೇ ಫಲಿತಾಂಶ ಹೊರಬಿದ್ದು ಭಾರತ ತಂಡ ಗೆಲುವು ಸಾಧಿಸಿದ್ದೇ ಆದರೆ, ಆಗಸ್ಟ್ 15ರಂದು ಭಾರತೀಯರಿಗೆ ಸ್ವಾತಂತ್ರ್ಯ ದಿನಾಚರಣೆಯ ಸಂಭ್ರಮ ದುಪ್ಪಟ್ಟಾಗುತ್ತದೆ ಅಲ್ಲವೆ? ಎಂದು ಕೇಳಿದ್ದಾರೆ. ಇದಕ್ಕೆ ಮಂತ್ರಮುಗ್ಧರಾದ ರೋಹಿತ್, “ನಿಮಗೊಂದು ಸಲ್ಯೂಟ್” ಎಂದು ಹೇಳಿ “ಇದಕ್ಕಿಂತಲೂ ಉತ್ತಮವಾದುದ್ದನ್ನು ನಾವು ಬಯಸಲು ಸಾಧ್ಯವಿಲ್ಲ,” ಎಂದು ಹೇಳಿದ್ದಾರೆ.
????
— Amey Pethkar ???? (@ameyp9) August 13, 2021
ಈರೀತಿ ಆಗಿದ್ದೇ ಆದಲ್ಲಿ ಇದು ಭಾರತೀಯರಿಗೆ ದೊಡ್ಡ ಮಟ್ಟದ ಗೆಲುವಾಗಲಿದೆ. ಈ ಗೆಲುವು ಭಾರತೀಯರ ಮನದಲ್ಲಿ ಸದಾ ನೆನಪಿನಲ್ಲಿ ಉಳಿಯುವಂತೆ ಮಾಡುತ್ತದೆ.
ಎರಡನೇ ಟೆಸ್ಟ್ನ ಮೊದಲ ಇನ್ನಿಂಗ್ಸ್ನಲ್ಲಿ ಭಾರತ ಉತ್ತಮ ಮೊತ್ತ ಕಲೆಹಾಕಲು ಓಪನರ್ಗಳು ಪ್ರಮುಖ ಪಾತ್ರವಹಿಸಿದರು. ರೋಹಿತ್ ಶರ್ಮಾ (83) ಮತ್ತು ಕೆಎಲ್ ರಾಹುಲ್ (129) ಮೊದಲ ವಿಕೆಟ್‌ಗೆ ಶತಕದ (126) ಜೊತೆಯಾಟವಾಡಿ ಭಾರತ ತಂಡದ ಬೃಹತ್ ಮೊತ್ತಕ್ಕೆ ಬೇಕಿರುವ ಭದ್ರ ಅಡಿಪಾಯ ಹಾಕಿಕೊಟ್ಟರು. ಆದರೆ, ಮಧ್ಯಮ ಕ್ರಮಾಂಕದ ಬ್ಯಾಟ್ಸ್ಮನ್ಗಳು ಮತ್ತೆ ವೈಫಲ್ಯ ಅನುಭವಿಸಿದ ಕಾರಣ ಎರಡನೇ ದಿನದ ಆರಂಭದಲ್ಲಿ ಆಲೌಟ್ ಆಯಿತು.
An Anderson special was needed to get rid of Rohit today! ☝? He departs for a well-made 83 off 145 ??
Tune into Sony Six (ENG), Sony Ten 3 (HIN), Sony Ten 4 (TAM, TEL) & SonyLIV (https://t.co/AwcwLCPFGm ) now! ?#ENGvINDOnlyOnSonyTen #BackOurBoys #RohitSharma pic.twitter.com/TIsjVIhiSd
— Sony Sports (@SonySportsIndia) August 12, 2021
ರವೀಂದ್ರ ಜಡೇಜಾ 40 ರನ್ ಹಾಗೂ ರಿಷಭ್ ಪಂತ್ 37 ರನ್ ಗಳಿಸಿ ತಂಡಕ್ಕೆ ಕೆಲ ಸಮಯ ಆಸರೆಯಾದರು. ಇಶಾಂತ್ ಶರ್ಮಾ 8, ಮೊಹಮ್ಮದ್ ಶಮಿ ಮತ್ತು ಜಸ್ಪ್ರೀತ್ ಬುಮ್ರಾ ಸೊನ್ನೆ ಸುತ್ತುವ ಮೂಲಕ ಭಾರತ 364 ರನ್ಗೆ ಆಲೌಟ್ ಆಯಿತು. ಇಂಗ್ಲೆಂಡ್ ಪರ ಜೇಮ್ಸ್ ಆಂಡರ್ಸನ್ 5 ವಿಕೆಟ್ ಕಿತ್ತು ಮಿಂಚಿದರು.
ಇತ್ತ ತನ್ನ ಮೊದಲ ಇನ್ನಿಂಗ್ಸ್ ಆರಂಭಿಸಿರುವ ಇಂಗ್ಲೆಂಡ್ ಎರಡನೇ ದಿನದಾಟದ ಅಂತ್ಯಕ್ಕೆ 3 ವಿಕೆಟ್ ಕಳೆದುಕೊಂಡು 119 ರನ್ ಗಳಿಸಿದೆ. ಇಂಗ್ಲೆಂಡ್ಗೆ 48 ರನ್ ಗಳಿಸಿ ನಾಯಕ ಜೋ ರೂಟ್ ಆಸರೆಯಾಗಿ ನಿಂತಿದ್ದಾರೆ.
India vs England: 88 ರನ್ಗೆ 7 ವಿಕೆಟ್: ಭಾರತದ ಮಧ್ಯಮ ಕ್ರಮಾಂಕದಿಂದ ತೀರಾ ಕಳಪೆ ಪ್ರದರ್ಶನ!
IPL 2021: ಐಪಿಎಲ್ ಫೀವರ್ ಶುರು: ದುಬೈ ತಲುಪಿದ ಧೋನಿ ಸೈನ್ಯ: ಇಲ್ಲಿದೆ ಫೋಟೋಗಳು
(India vs England Rohit Sharma Salutes To Reporter During Press Conference goes viral)