IND vs IRE: ಐರ್ಲೆಂಡ್‌ ಪ್ರವಾಸಕ್ಕೂ ಮುನ್ನ ಟೀಂ ಇಂಡಿಯಾ ಆಟಗಾರರಿಗೆ ಸಿಹಿ ಸುದ್ದಿ ನೀಡಿದ ಬಿಸಿಸಿಐ

IND vs IRE: ವರದಿಗಳ ಪ್ರಕಾರ, ಐರ್ಲೆಂಡ್‌ಗೆ ಹೊರಡುವ ತಂಡವು ಜೂನ್ 23 ರಂದು ಮುಂಬೈನಲ್ಲಿ ಎನ್‌ಸಿಎ ಮುಖ್ಯಸ್ಥ ವಿವಿಎಸ್ ಲಕ್ಷ್ಮಣ್ ಮತ್ತು ಸಹಾಯಕ ಸಿಬ್ಬಂದಿಯೊಂದಿಗೆ ಸಭೆ ಸೇರುತ್ತದೆ, ನಂತರ ಡಬ್ಲಿನ್‌ಗೆ ಹೊರಡಲಿದೆ.

IND vs IRE: ಐರ್ಲೆಂಡ್‌ ಪ್ರವಾಸಕ್ಕೂ ಮುನ್ನ ಟೀಂ ಇಂಡಿಯಾ ಆಟಗಾರರಿಗೆ ಸಿಹಿ ಸುದ್ದಿ ನೀಡಿದ ಬಿಸಿಸಿಐ
Team India
Edited By:

Updated on: Jun 20, 2022 | 9:54 PM

ಭಾರತ ಮತ್ತು ದಕ್ಷಿಣ ಆಫ್ರಿಕಾ (India and South Africa) ನಡುವಿನ 5 ಟಿ20 ಪಂದ್ಯಗಳ ಸರಣಿಯನ್ನು 2-2 ರಿಂದ ಡ್ರಾ ಮಾಡಿಕೊಂಡಿದೆ . ಇಬ್ಬರ ನಡುವೆ ಬೆಂಗಳೂರಿನಲ್ಲಿ ನಡೆಯಬೇಕಿದ್ದ ಸರಣಿಯ ಅಂತಿಮ ಪಂದ್ಯ ಮಳೆಯಿಂದಾಗಿ ರದ್ದಾಗಿತ್ತು. ಮಳೆಯಿಂದಾಗಿ ಕೇವಲ 3.3 ಓವರ್‌ಗಳು ಮಾತ್ರ ಆಡಲು ಸಾಧ್ಯವಾಯಿತು. ಸರಣಿಯ ಆರಂಭಿಕ ಎರಡೂ ಪಂದ್ಯಗಳನ್ನು ದಕ್ಷಿಣ ಆಫ್ರಿಕಾ ಗೆದ್ದಿತ್ತು. ಇದಾದ ಬಳಿಕ ರಿಷಬ್ ಪಂತ್ (Rishabh Pant) ನಾಯಕತ್ವದಲ್ಲಿ ಪ್ರತಿದಾಳಿ ನಡೆಸಿದ ಭಾರತ ಮುಂದಿನ ಎರಡು ಪಂದ್ಯಗಳನ್ನು ಗೆದ್ದು ಸರಣಿ ಸಮಬಲಗೊಳಿಸಿತು. ಸರಣಿಯ 5ನೇ ಹಾಗೂ ಕೊನೆಯ ಪಂದ್ಯದ ಮೇಲೆ ಎಲ್ಲರ ಕಣ್ಣು ನೆಟ್ಟಿತ್ತು, ಆದರೆ ಹವಾಮಾನ ವೈಪರೀತ್ಯದಿಂದಾಗಿ ಅಂತಿಮ ಪಂದ್ಯ ಕೊಚ್ಚಿಕೊಂಡು ಹೋಯಿತು. ಇದರೊಂದಿಗೆ ಭಾರತ-ದಕ್ಷಿಣ ಆಫ್ರಿಕಾ ನಡುವಿನ ಸರಣಿಯೂ ಅಂತ್ಯಗೊಂಡಿದ್ದು, ಭಾರತ ತಂಡ ಈಗ ಇಂಗ್ಲೆಂಡ್ ಸವಾಲನ್ನು ಎದುರಿಸುತ್ತಿದೆ, ಆದರೆ ಇಂಗ್ಲೆಂಡ್ ಎದುರಿಸುವ ಮೊದಲು ಭಾರತ ತಂಡ ಹಾರ್ದಿಕ್ ಪಾಂಡ್ಯ (Hardik Pandya) ನಾಯಕತ್ವದಲ್ಲಿ ಐರ್ಲೆಂಡ್ ವಿರುದ್ಧ 2 ಟಿ20 ಪಂದ್ಯಗಳ ಸರಣಿಯನ್ನು ಆಡಲಿದೆ.

ಟೀಂ ಇಂಡಿಯಾಗೆ ಮೂರು ದಿನಗಳ ವಿರಾಮ

ಈ ಹಿಂದೆ ಹಾರ್ದಿಕ್ ಪಾಂಡ್ಯ ರಜೆ ಪಡೆದಿದ್ದರು. ವಾಸ್ತವವಾಗಿ, ಹೊರಡುವ ಮೊದಲು ಐರ್ಲೆಂಡ್‌ಗೆ ಹೋಗುವ ತಂಡಕ್ಕೆ 3 ದಿನಗಳ ವಿರಾಮ ನೀಡಲು ಬಿಸಿಸಿಐ ನಿರ್ಧರಿಸಿದೆ. ರಾಹುಲ್ ದ್ರಾವಿಡ್, ಶ್ರೇಯಸ್ ಅಯ್ಯರ್ ಮತ್ತು ರಿಷಬ್ ಪಂತ್ ಸೋಮವಾರ ಲಂಡನ್‌ಗೆ ತೆರಳಲಿದ್ದು, ಟಿ20 ತಂಡದಲ್ಲಿರುವವರಿಗೆ ಸ್ವಲ್ಪ ವಿರಾಮ ನೀಡಬೇಕೆಂದು ಬಿಸಿಸಿಐ ಬಯಸಿದೆ. ಐರ್ಲೆಂಡ್ ವಿರುದ್ಧ ಮೈದಾನಕ್ಕಿಳಿದಿರುವ ಭಾರತ ಟಿ20 ತಂಡಕ್ಕೆ 3 ದಿನಗಳ ವಿರಾಮ ನೀಡಲಾಗಿದೆ ಎಂದು ಬಿಸಿಸಿಐ ಮೂಲಗಳು ಪಿಟಿಐಗೆ ತಿಳಿಸಿವೆ. ಕೆಲವು ಆಟಗಾರರು ಐಪಿಎಲ್‌ನಿಂದ ನಿರಂತರವಾಗಿ ಕ್ರಿಕೆಟ್ ಆಡುತ್ತಿದ್ದಾರೆ. ಹೀಗಾಗಿ ಅವರು ಮನೆಯವರೊಂದಿಗೆ ಸ್ವಲ್ಪ ಸಮಯ ಕಳೆಯಲಿದ್ದಾರೆ. ಈ ಸರಣಿಯಲ್ಲಿ ಬಯೋ ಬಬಲ್ ನಿಯಮ ಇರುವುದಿಲ್ಲ, ಆದರೆ ಆಟಗಾರರ ಕುಟುಂಬದವರು ಆಟಗಾರರ ಜೊತೆಯಲ್ಲಿ ಇರುವುಂತಿಲ್ಲ.

ಇದನ್ನೂ ಓದಿ
Shabaash Mithu Trailer: ಶಭಾಷ್ ಮಿಥು ಸಿನಿಮಾದ ಟ್ರೇಲರ್ ಬಿಡುಗಡೆ; ಮಿಥಾಲಿ ರಾಜ್ ಬಯೋಪಿಕ್​ನಲ್ಲಿ ಮಿಂಚಿದ ತಾಪ್ಸಿ
Virat Test Debut: ವಿರಾಟ್ ಟೆಸ್ಟ್ ಬದುಕಿಗೆ ಭರ್ತಿ 11 ವರ್ಷ! ಟೆಸ್ಟ್ ಕ್ರಿಕೆಟ್​ನಲ್ಲಿ ಕೊಹ್ಲಿಯ ಅವಿಸ್ಮರಣೀಯ ಇನ್ನಿಂಗ್ಸ್​ಗಳಿವು
ವಿಶ್ವಕಪ್​ನಲ್ಲಿ ಸಚಿನ್- ಸೆಹ್ವಾಗ್ ವಿಕೆಟ್ ಕಬಳಿಸಿದ್ದ ಸ್ಟಾರ್ ಬೌಲರ್​ ಕ್ರಿಕೆಟ್​ಗೆ ಹಠಾತ್ ವಿದಾಯ..!

ಇದನ್ನೂ ಓದಿ:ವಿಶ್ವಕಪ್​ನಲ್ಲಿ ಸಚಿನ್- ಸೆಹ್ವಾಗ್ ವಿಕೆಟ್ ಕಬಳಿಸಿದ್ದ ಸ್ಟಾರ್ ಬೌಲರ್​ ಕ್ರಿಕೆಟ್​ಗೆ ಹಠಾತ್ ವಿದಾಯ..!

ಮುಂಬೈನಿಂದ ತಂಡ ಹೊರಡಲಿದೆ

ವರದಿಗಳ ಪ್ರಕಾರ, ಐರ್ಲೆಂಡ್‌ಗೆ ಹೊರಡುವ ತಂಡವು ಜೂನ್ 23 ರಂದು ಮುಂಬೈನಲ್ಲಿ ಎನ್‌ಸಿಎ ಮುಖ್ಯಸ್ಥ ವಿವಿಎಸ್ ಲಕ್ಷ್ಮಣ್ ಮತ್ತು ಸಹಾಯಕ ಸಿಬ್ಬಂದಿಯೊಂದಿಗೆ ಸಭೆ ಸೇರುತ್ತದೆ, ನಂತರ ಡಬ್ಲಿನ್‌ಗೆ ಹೊರಡಲಿದೆ. ಐರ್ಲೆಂಡ್ ವಿರುದ್ಧ ಮೊದಲ ಟಿ20 ಪಂದ್ಯ ಜೂನ್ 26 ರಂದು ಮತ್ತು ಎರಡನೇ ಟಿ20 ಪಂದ್ಯ ಜೂನ್ 28 ರಂದು ನಡೆಯಲಿದೆ. ಇದಾದ ನಂತರ ಕೆಲವು ಆಟಗಾರರು ಇಂಗ್ಲೆಂಡ್‌ನಲ್ಲಿ ತಂಡವನ್ನು ಸೇರಿಕೊಳ್ಳಲಿದ್ದಾರೆ.