IND vs NZ, ICC World Cup: ಇಂದಿನ ಭಾರತ-ನ್ಯೂಝಿಲೆಂಡ್ ವಿಶ್ವಕಪ್ ಪಂದ್ಯ ರದ್ದಾಗುವ ಸಾಧ್ಯತೆ: ಯಾಕೆ ನೋಡಿ

India Vs New Zealand Cricket World Cup 2023 Dharamsala Weather Update: ಭಾರತ ಹಾಗೂ ನ್ಯೂಝಿಲೆಂಡ್ ನಡುವಣ 2013 ರ ವಿಶ್ವಕಪ್ ಪಂದ್ಯಕ್ಕೆ ಗುಡುಗು ಸಹಿತ ಮಳೆಯಾಗುವ ಮುನ್ಸೂಚನೆ ಇದೆ. MET ಇಲಾಖೆಯ ಪ್ರಕಾರ, ಮಧ್ಯಾಹ್ನ ಟಾಸ್ ಪ್ರಕ್ರಿಯೆ ವೇಳೆಗೆ, ಗುಡುಗು ಸಹಿತ ಮಳೆಯಾಗುವ ಸಾಧ್ಯತೆಗಳಿವೆ. ಮಧ್ಯಾಹ್ನ 1 ಗಂಟೆಯ ನಂತರ ಶೇ. 51ರಷ್ಟು ಮಳೆಯಾಗಲಿದೆ.

IND vs NZ, ICC World Cup: ಇಂದಿನ ಭಾರತ-ನ್ಯೂಝಿಲೆಂಡ್ ವಿಶ್ವಕಪ್ ಪಂದ್ಯ ರದ್ದಾಗುವ ಸಾಧ್ಯತೆ: ಯಾಕೆ ನೋಡಿ
IND vs NZ Weather

Updated on: Oct 22, 2023 | 10:34 AM

ಐಸಿಸಿ ಏಕದಿನ ವಿಶ್ವಕಪ್ 2023 ರ ಟೇಬಲ್ ಟಾಪರ್​ನಲ್ಲಿರುವ ನ್ಯೂಝಿಲೆಂಡ್ ಮತ್ತು ಆತಿಥೇಯ ಭಾರತ (India vs New Zealand) ಪಂದ್ಯ ಇಂದು ಧರ್ಮಶಾಲಾದ ಹಿಮಾಚಲ ಪ್ರದೇಶ ಕ್ರಿಕೆಟ್ ಅಸೋಸಿಯೇಷನ್ ​​(HPCA) ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದೆ. ಈ ಬಾರಿಯ ಟೂರ್ನಿಯಲ್ಲಿ ಒಂದೇ ಒಂದು ಸೋಲು ಕಾಣದೆ ಮುನ್ನುಗ್ಗುತ್ತಿರುವ ಉಭಯ ತಂಡಗಳ ಕಾದಾಟ ರೋಚಕತೆ ಸೃಷ್ಟಿಸಿದೆ. ಆದರೆ, ಈ ಮ್ಯಾಚ್ ನಡೆಯುವುದೇ ಅನುಮಾನ ಎನ್ನಲಾಗುತ್ತಿದೆ. ಇದಕ್ಕೆ ಕಾರಣ ಧರ್ಮಶಾಲಾ ಹವಾಮಾನ.

ಭಾರತ ಹಾಗೂ ನ್ಯೂಝಿಲೆಂಡ್ ನಡುವಣ 2019 ರ ವಿಶ್ವಕಪ್ ಸೆಮಿಫೈನಲ್ ಪಂದ್ಯ ಮಳೆಯಿಂದಾಗಿ ಮೀಸಲು ದಿನದಂದು ಪೂರ್ಣಗೊಂಡಿತು. ಈಗ ಉಭಯ ತಂಡಗಳು ಮತ್ತೊಮ್ಮೆ ಮುಖಾಮುಖಿಯಾಗಲಿದೆ. ಆದರೆ, ಈ ಪಂದ್ಯಕ್ಕೆ ಕೂಡ ಮಳೆ ಅಡ್ಡಿಪಡಿಸಲುದೆ. ಭಾನುವಾರದ ಪಂದ್ಯಕ್ಕೆ ಗುಡುಗು ಸಹಿತ ಮಳೆಯಾಗುವ ಮುನ್ಸೂಚನೆ ಇದೆ. MET ಇಲಾಖೆಯ ಪ್ರಕಾರ, ಮಧ್ಯಾಹ್ನ ಟಾಸ್ ಪ್ರಕ್ರಿಯೆ ವೇಳೆಗೆ, ಗುಡುಗು ಸಹಿತ ಮಳೆಯಾಗುವ ಸಾಧ್ಯತೆಗಳಿವೆ.

IND vs NZ: ಕಿವೀಸ್ ವಿರುದ್ಧ ಟೀಂ ಇಂಡಿಯಾದಲ್ಲಿ 2 ಬದಲಾವಣೆ? ಇಲ್ಲಿದೆ ಸಂಭಾವ್ಯ ತಂಡ

ಇದನ್ನೂ ಓದಿ
ಮತ್ತಿಬ್ಬರು ಆಟಗಾರರು ಇಂಜುರಿ: ಮಹತ್ವದ ಪಂದ್ಯಕ್ಕೂ ಮುನ್ನ ಭಾರತಕ್ಕೆ ಶಾಕ್
ವಿಶ್ವಕಪ್​ನಲ್ಲಿಂದು ಭಾರತ-ನ್ಯೂಝಿಲೆಂಡ್ ಹೈವೋಲ್ಟೇಜ್ ಪಂದ್ಯ
ENG vs RSA: ಇಂಗ್ಲೆಂಡ್ ತಂಡವನ್ನು ಬಗ್ಗು ಬಡಿದ ಸೌತ್ ಆಫ್ರಿಕಾ
ವಿಶ್ವ ದಾಖಲೆಯ ಶತಕ ಸಿಡಿಸಿದ ಹೆನ್ರಿಕ್ ಕ್ಲಾಸೆನ್

ಮಧ್ಯಾಹ್ನ 1 ಗಂಟೆಯ ನಂತರ ಶೇ. 51ರಷ್ಟು ಮಳೆಯಾಗುವ ಮುನ್ಸೂಚನೆ ಇದೆ. ಆದಾಗ್ಯೂ, ಮಳೆಯ ತೀವ್ರತೆಯು ಪ್ರತಿ ಗಂಟೆಗೆ ಕ್ರಮೇಣ ಕಡಿಮೆಯಾಗುತ್ತದೆ. ಹಿಮಾಚಲ ಪ್ರದೇಶದ ಕೆಲವು ಭಾಗಗಳಲ್ಲಿ ಗುಡುಗು ಸಹಿತ ಮಳೆಯಾಗುವ ಬಗ್ಗೆ ವರದಿಯಾಗಿದೆ. ಹೀಗಾಗಿ ಇಂಡೋ-ಕಿವೀಸ್ ಪಂದ್ಯದ ಟಾಸ್ ವಿಳಂಬಗೊಳ್ಳಬಹುದು. ಮೊನ್ನೆಯಷ್ಟೆ ಇಲ್ಲಿ ನಡೆದ ದಕ್ಷಿಣ ಆಫ್ರಿಕಾ ಮತ್ತು ನೆದರ್ಲೆಂಡ್ಸ್ ನಡುವಣ ಪಂದ್ಯಕ್ಕೂ ಮಳೆ ಅಡ್ಡಿಪಡಿಸಿತ್ತು.

ಶನಿವಾರದಂದು ಧರ್ಮಶಾಲಾದ HPCA ಸ್ಟೇಡಿಯಂನಲ್ಲಿ 100 ಪ್ರತಿಶತದಷ್ಟು ಮೋಡ ಕವಿದಿತ್ತು. ಭಾರತ ಮತ್ತು ನ್ಯೂಝಿಲೆಂಡ್ ನಡುವಿನ ಲೀಗ್ ಪಂದ್ಯಕ್ಕೆ ಐಸಿಸಿ ಷರತ್ತುಗಳಲ್ಲಿ ‘ರಿಸರ್ವ್ ಡೇ’ಗೆ ಯಾವುದೇ ಅವಕಾಶವಿಲ್ಲ. ಇಂದಿನ ಪಂದ್ಯವು ಮಳೆಯಿಂದಾಗಿ ರದ್ದಾದರೆ, ಉಭಯ ತಂಡಗಳು ತಲಾ ಒಂದು ಅಂಕವನ್ನು ಪಡೆಯುತ್ತಾರೆ.

ಧರ್ಮಶಾಲಾದ ಹಿಮಾಚಲ ಪ್ರದೇಶ ಕ್ರಿಕೆಟ್ ಅಸೋಸಿಯೇಷನ್ ​​ಸ್ಟೇಡಿಯಂ ಪಿಚ್ ವೇಗದ ಬೌಲರ್‌ಗಳಿಗೆ ಸಹಾಯಕವಾಗಿದೆ. ಈ ಪಿಚ್​ನಲ್ಲಿ ಸರಾಸರಿ ಮೊದಲ ಇನ್ನಿಂಗ್ಸ್ ಸ್ಕೋರ್ 231 ಆಗಿದ್ದು, ಎರಡನೇ ಇನ್ನಿಂಗ್ಸ್‌ನಲ್ಲಿ 199 ರನ್ ಕಲೆಹಾಕಿರುವುದೇ ಇಲ್ಲಿನವರೆಗಿನ ದಾಖಲೆಯಾಗಿದೆ. ಮೊದಲ ಬ್ಯಾಟಿಂಗ್‌ ಮಾಡುವ ತಂಡಕ್ಕೆ ಹೋಲಿಸಿದರೆ ಎರಡನೇ ಬ್ಯಾಟಿಂಗ್ ಮಾಡುವ ತಂಡಗಳಿಗೆ ಹೆಚ್ಚಿನ ಯಶಸ್ಸು ಲಭಿಸಿದೆ.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 10:32 am, Sun, 22 October 23