- Kannada News Photo gallery Cricket photos Dharamsala Weather Report 43 per cent possibility of rain during India vs New Zealand ICC World Cup Match
Dharamsala Weather Report: ಧರ್ಮಶಾಲಾದಲ್ಲಿ ಮಳೆ-ಗುಡುಗು: ಭಾರತ-ನ್ಯೂಝಿಲೆಂಡ್ ಪಂದ್ಯ ನಡೆಯುವುದು ಅನುಮಾನ
India Vs New Zealand ICC World Cup 2023 Weather Report: MET ಇಲಾಖೆಯ ಪ್ರಕಾರ, ಭಾರತ-ನ್ಯೂಝಿಲೆಂಡ್ ವಿಶ್ವಕಪ್ ಪಂದ್ಯದಲ್ಲಿ ಮಧ್ಯಾಹ್ನ ಟಾಸ್ ಪ್ರಕ್ರಿಯೆ ವೇಳೆಗೆ, ಗುಡುಗು ಸಹಿತ ಮಳೆಯಾಗುವ ಸಾಧ್ಯತೆಗಳಿವೆ ಮತ್ತು 43 ರಷ್ಟು ಮಳೆಯಾಗಲಿದೆ ಎಂದು ಹೇಳಲಾಗಿದೆ. ಹೀಗಾಗಿ ಟಾಸ್ ಅನ್ನು ವಿಳಂಬಗೊಳಿಸಬಹುದು. ಮೊನ್ನೆಯಷ್ಟೆ ಇಲ್ಲಿ ನಡೆದ ದಕ್ಷಿಣ ಆಫ್ರಿಕಾ ಮತ್ತು ನೆದರ್ಲೆಂಡ್ಸ್ ನಡುವಣ ಪಂದ್ಯಕ್ಕೂ ಮಳೆ ಅಡ್ಡಿಪಡಿಸಿತ್ತು.
Updated on: Oct 21, 2023 | 11:16 AM

ಐಸಿಸಿ ಏಕದಿನ ವಿಶ್ವಕಪ್ 2023 ರ ಟೇಬಲ್ ಟಾಪರ್ನಲ್ಲಿರುವ ನ್ಯೂಝಿಲೆಂಡ್ ಮತ್ತು ಆತಿಥೇಯ ಭಾರತ ಪಂದ್ಯ ಭಾನುವಾರ ಧರ್ಮಶಾಲಾದ ಹಿಮಾಚಲ ಪ್ರದೇಶ ಕ್ರಿಕೆಟ್ ಅಸೋಸಿಯೇಷನ್ (HPCA) ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದೆ. ಈ ಬಾರಿಯ ಟೂರ್ನಿಯಲ್ಲಿ ಒಂದೇ ಒಂದು ಸೋಲು ಕಾಣದೆ ಮುನ್ನುಗ್ಗುತ್ತಿರುವ ಉಭಯ ತಂಡಗಳ ಕಾದಾಟ ರೋಚಕತೆ ಸೃಷ್ಟಿಸಿದೆ.

ಏಕದಿನ ವಿಶ್ವಕಪ್‌ನಲ್ಲಿ ಟೀಮ್ ಇಂಡಿಯಾ ಕೊನೆಯದಾಗಿ ಸೋಲು ಕಂಡಿದ್ದು ನ್ಯೂಝಿಲೆಂಡ್ ವಿರುದ್ಧ. ಮ್ಯಾಂಚೆಸ್ಟರ್‌ನ ಓಲ್ಡ್ ಟ್ರಾಫರ್ಡ್‌ನಲ್ಲಿ ನಡೆದ 2019 ರ ವಿಶ್ವಕಪ್ ಸೆಮಿಫೈನಲ್ ಪಂದ್ಯದಲ್ಲಿ ಟೀಮ್ ಇಂಡಿಯಾ 18 ರನ್‌ಗಳಿಂದ ಸೋಲು ಕಂಡಿತು. ಇದು ಭಾರತದ ಮಾಜಿ ನಾಯಕ ಎಂಎಸ್ ಧೋನಿ ಅವರ ಕೊನೆಯ ಅಂತರರಾಷ್ಟ್ರೀಯ ಪಂದ್ಯ ಕೂಡ ಆಯಿತು.

2019 ರ ವಿಶ್ವಕಪ್ ಸೆಮಿಫೈನಲ್ ಮಳೆಯಿಂದಾಗಿ ಮೀಸಲು ದಿನದಂದು ಪೂರ್ಣಗೊಂಡಿತು. ಈಗ ಉಭಯ ತಂಡಗಳು ಮತ್ತೊಮ್ಮೆ ಮುಖಾಮುಖಿಯಾಗಲಿದೆ. ಆದರೆ, ಈ ಪಂದ್ಯಕ್ಕೆ ಮಳೆ ಅಡ್ಡಿ ಸಾಧ್ಯತೆ ಇದೆ. ಭಾನುವಾರದ ಪಂದ್ಯಕ್ಕೆ ಗುಡುಗು ಸಹಿತ ಮಳೆಯಾಗುವ ಮುನ್ಸೂಚನೆ ಇದೆ.

MET ಇಲಾಖೆಯ ಪ್ರಕಾರ, ಮಧ್ಯಾಹ್ನ ಟಾಸ್ ಪ್ರಕ್ರಿಯೆ ವೇಳೆಗೆ, ಗುಡುಗು ಸಹಿತ ಮಳೆಯಾಗುವ ಸಾಧ್ಯತೆಗಳಿವೆ ಮತ್ತು 43 ರಷ್ಟು ಮಳೆಯಾಗಲಿದೆ ಎಂದು ಹೇಳಲಾಗಿದೆ. ಹೀಗಾಗಿ ಟಾಸ್ ಅನ್ನು ವಿಳಂಬಗೊಳಿಸಬಹುದು. ಮೊನ್ನೆಯಷ್ಟೆ ಇಲ್ಲಿ ನಡೆದ ದಕ್ಷಿಣ ಆಫ್ರಿಕಾ ಮತ್ತು ನೆದರ್ಲೆಂಡ್ಸ್ ನಡುವಣ ಪಂದ್ಯಕ್ಕೂ ಮಳೆ ಅಡ್ಡಿಪಡಿಸಿತ್ತು.

ಶನಿವಾರದಂದು ಧರ್ಮಶಾಲಾದ HPCA ಸ್ಟೇಡಿಯಂನಲ್ಲಿ 100 ಪ್ರತಿಶತದಷ್ಟು ಮೋಡ ಕವಿದಿರುತ್ತದೆ. ಭಾರತ ಮತ್ತು ನ್ಯೂಝಿಲೆಂಡ್ ನಡುವಿನ ಲೀಗ್ ಪಂದ್ಯಕ್ಕೆ ಐಸಿಸಿ ಷರತ್ತುಗಳಲ್ಲಿ 'ರಿಸರ್ವ್ ಡೇ'ಗೆ ಯಾವುದೇ ಅವಕಾಶವಿಲ್ಲ. ಭಾನುವಾರದ ಪಂದ್ಯವು ಮಳೆಯಿಂದಾಗಿ ರದ್ದಾದರೆ, ಉಭಯ ತಂಡಗಳು ತಲಾ ಒಂದು ಅಂಕವನ್ನು ಪಡೆಯುತ್ತಾರೆ.

ಧರ್ಮಶಾಲಾದ ಹಿಮಾಚಲ ಪ್ರದೇಶ ಕ್ರಿಕೆಟ್ ಅಸೋಸಿಯೇಷನ್ ಸ್ಟೇಡಿಯಂ ಪಿಚ್ ವೇಗದ ಬೌಲರ್‌ಗಳಿಗೆ ಸಹಾಯಕವಾಗಿದೆ. ಈ ಪಿಚ್ನಲ್ಲಿ ಸರಾಸರಿ ಮೊದಲ ಇನ್ನಿಂಗ್ಸ್ ಸ್ಕೋರ್ 231 ಆಗಿದ್ದು, ಎರಡನೇ ಇನ್ನಿಂಗ್ಸ್‌ನಲ್ಲಿ 199 ರನ್ ಕಲೆಹಾಕಿರುವುದೇ ಇಲ್ಲಿನವರೆಗಿನ ದಾಖಲೆಯಾಗಿದೆ. ಮೊದಲ ಬ್ಯಾಟಿಂಗ್ ಮಾಡುವ ತಂಡಕ್ಕೆ ಹೋಲಿಸಿದರೆ ಎರಡನೇ ಬ್ಯಾಟಿಂಗ್ ಮಾಡುವ ತಂಡಗಳಿಗೆ ಹೆಚ್ಚಿನ ಯಶಸ್ಸು ಲಭಿಸಿದೆ.

ಭಾರತ ತಂಡ: ರೋಹಿತ್ ಶರ್ಮಾ (ನಾಯಕ), ಹಾರ್ದಿಕ್ ಪಾಂಡ್ಯ (ಉಪನಾಯಕ), ಶುಭ್ಮನ್ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್, ರವೀಂದ್ರ ಜಡೇಜಾ, ಶಾರ್ದೂಲ್ ಠಾಕೂರ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್, ಕುಲ್ದೀಪ್ ಯಾದವ್, ಮೊಹಮ್ಮದ್ ಶಮಿ, ರವಿಚಂದ್ರನ್ ಅಶ್ವಿನ್. , ಇಶಾನ್ ಕಿಶನ್, ಸೂರ್ಯಕುಮಾರ್ ಯಾದವ್.

ನ್ಯೂಝಿಲೆಂಡ್ ತಂಡ: ಕೇನ್ ವಿಲಿಯಮ್ಸನ್ (ನಾಯಕ), ಟ್ರೆಂಟ್ ಬೌಲ್ಟ್, ಮಾರ್ಕ್ ಚಾಪ್ಮನ್, ಡೆವೊನ್ ಕಾನ್ವೆ, ಲಾಕಿ ಫರ್ಗುಸನ್, ಮ್ಯಾಟ್ ಹೆನ್ರಿ, ಟಾಮ್ ಲ್ಯಾಥಮ್, ಡೇರಿಲ್ ಮಿಚೆಲ್, ಜಿಮ್ಮಿ ನೀಶಮ್, ಗ್ಲೆನ್ ಫಿಲಿಪ್ಸ್, ರಚಿನ್ ರವೀಂದ್ರ, ಮಿಚೆಲ್ ಸ್ಯಾಂಟ್ನರ್, ಇಶ್ ಸೋಧಿ, ಟಿಮ್ ಸೌಥಿ, ವಿಲ್ ಯಂಗ್.



















